2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ವಿನೂತನ ಕಾರುಗಳು

ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ 2018ರ ಆಟೋ ಎಕ್ಸ್‌ಪೋ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದು, ಟಾಟಾ ಮೋಟಾರ್ಸ್ ನಿರ್ಮಾಣದ ಹೊಸ ಹೊಸ ಕಾರುಗಳು ಪ್ರದರ್ಶನಗೊಳ್ಳುವ ಮೂಲಕ ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

By Praveen

ಹೆಚ್5ಎಕ್ಸ್ ಕಾನ್ಸೆಪ್ಟ್

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹೆಚ್5ಎಕ್ಸ್ ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ವಿನೂತನ ಕಾರುಗಳು

ಇನ್ನೊಂದು ವಿಶೇಷ ಅಂದ್ರೆ ಭಾರತದಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ (ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಮಾದರಿಯಲ್ಲೇ ನಿರ್ಮಾಣವಾಗಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಲಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ವಿನೂತನ ಕಾರುಗಳು

ಕಾರಿನ ವೈಶಿಷ್ಟ್ಯತೆಗಳು

ಹೆಚ್5ಎಕ್ಸ್ ಮಾದರಿಗಳು ಸ್ಲಿಕ್ ಆ್ಯಂಗರಲ್ ಎಲ್‌ಇಡಿ ಹೆಡ್ ಲೈಟ್ಸ್‌ಗಳನ್ನು ಹೊಂದಿದ್ದು, ಇಂಪ್ಯಾಕ್ಟ್ ಡಿಸೈನ್ ಗ್ರೀಲ್‌ಗಳು ಕಾರಿನ ಲುಕ್ ಹೆಚ್ಚಿಸಿವೆ. ಜೊತೆಗೆ ಪರಿಕಲ್ಪನೆ ಮಾದರಿಯನ್ನು ಗ್ರೇ ಪೇಟಿಂಗ್ ವಿನ್ಯಾಸಗಳು ಗಮನಸೆಳೆಯುತ್ತಿದ್ದು, ದೊಡ್ಡದಾದ ಚಕ್ರಗಳು, ವಿಸ್ತರಿತ ಬೂಟ್ ಸ್ಪೆಸ್ ಬಳಕೆ ಮಾಡಲಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ವಿನೂತನ ಕಾರುಗಳು

ಪ್ರಿಮಿಯಂ ಹ್ಯಾಚ್‌ಬ್ಯಾಕ್ 45ಎಕ್ಸ್ ಕಾನ್ಸೆಪ್ಟ್

2018ರ ಆಟೋ ಎಕ್ಸ್ ಪೋದಲ್ಲಿ ವಿನೂತನ 45ಎಕ್ಸ್ ಮಾದರಿಯನ್ನು ಪ್ರದರ್ಶನ ಮಾಡಿರುವ ಟಾಟಾ ಮೋಟಾರ್ಸ್, ಇಂಪ್ಯಾಕ್ಟ್ ಡಿಸೈನ್ 2.0 ಸಿದ್ದಾಂತ ಆಧರಿತ ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸಗಳನ್ನು ಹೊಸ ಕಾರಿನಲ್ಲಿ ನೀಡಲಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ವಿನೂತನ ಕಾರುಗಳು

ಹೀಗಾಗಿ ಸದ್ಯ ಮಾರಾಟವಾಗುತ್ತಿರುವ ನೆಕ್ಸಾನ್ ಮಾದರಿಗಳಿಂತಲೂ ವಿಶೇಷ ಹೊರ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಶಾರ್ಪ್ ಎಡ್ಜ್‌ಗಳು ಮತ್ತು ಸ್ಪೋರ್ಟಿ ಲುಕ್ ಕಾರಿನ ಹೊರ ನೋಟವನ್ನು ಮತ್ತಷ್ಟು ಹೆಚ್ಚಿಸಿವೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ವಿನೂತನ ಕಾರುಗಳು

ಆದರೇ, ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳನ್ನು ಹೊರತರುವ ಯೋಜನೆ ಹೊಂದಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ವಿನೂತನ ಕಾರುಗಳು

ಎಸ್‌ಯುವಿ ನೆಕ್ಸಾನ್ ಏರೊ

ಟಾಟಾ ಸಂಸ್ಥೆಯು ಎರಡು ಮಾದರಿಯ 'ಏರೊ' ಸ್ಟೈಲಿಂಗ್ ಮತ್ತು 'ಆಕ್ಟಿವ್' ಸ್ಟೈಲಿಂಗ್ ಕಿಟ್ ರೂಪದಲ್ಲಿ ನೆಕ್ಸಾನ್ ಕಾರನ್ನು ಪ್ರದ್ರರ್ಶನಗೊಳಿಸಲಾಗಿದ್ದು, ನೆಕ್ಸಾನ್ 'ಏರೊ' ಕಾರು ಸೈಡ್ ಸ್ಕರ್ಟ್ಸ್, ವಾಹನದ ಮುಂದೆ ಹಾಗು ಹಿಂದೆ ಬಂಪರ್, ರೆಡ್ ಆಸ್ಸೆಂಟ್ಸ್, ಲಿಕ್ವಿಡ್ ಸಿಲ್ವರ್ ಬಣ್ಣ ಮತ್ತು ಪಿಯಾನೊ ಬ್ಲಾಕ್ ಫಿನಿಶ್ ರೂಫ್ ಕಾಂಬಿನೇಶನ್ ಅನ್ನು ಹೊಂದಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ವಿನೂತನ ಕಾರುಗಳು

ಟಾಟಾ ನೆಕ್ಸಾನ್ ಏರೊ ಕಾರಿನ ಒಳಗೆ ಮತ್ತು ಮಧ್ಯದಲ್ಲಿ ಗ್ಲೋಸಿ ಪ್ಲಾಸ್ಟಿಕ್ಸ್, ಸ್ಟೀರಿಂಗ್ ವೀಲ್ ಮತ್ತು ಡ್ಯಾಶ್ ಬೋರ್ಡ್ ಅನ್ನು ಹೊಂದಿದ್ದು, ನೆಕ್ಸಾನ್ ಆಕ್ಟಿವ್ ಪ್ಯಾಕೇಜ್ ಏರೊಗಿಂತ ವಿಭಿನ್ನವಾದ ರೂಪವನ್ನು ಹೊಂದಿರಲಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ವಿನೂತನ ಕಾರುಗಳು

ನೆಕ್ಸಾನ್ ಏರೊ ಕಾರು ಪೆಟೋಲ್ ಹಾಗು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದ್ದು, ಪೆಟ್ರೋಲ್ ಆವೃತ್ತಿಯು 1.2 ಲೀಟರಿನ ಟರ್ಬೋಚಾರ್ಜ್ಡ್ ಎಂಜಿನ್ 108.5 ಬಿಹೆಚ್ ಪಿ ಮತ್ತು 170ಎನ್ಎಂ ಟಾರ್ಕನ್ನು ಉತ್ಪಾದಿಸುತ್ತದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ವಿನೂತನ ಕಾರುಗಳು

ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಟಾಟಾ ನಿರ್ಮಾಣದ ಈ ಎರಡು ಹೊಸ ಕಾರುಗಳು ಜಾಯೇಮ್ ಆಟೋ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಜಯೇಮ್ ಟಾಟಾ ಕಾರ್ಯಕ್ಷಮತೆಯನ್ನು ಸೂಚಿಸುವ 'ಜೆಟಿಪಿ' ಬ್ಯಾಡ್ಜ್ ಅನ್ನು ಪಡೆದುಕೊಂಡಿವೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ವಿನೂತನ ಕಾರುಗಳು

ಇನ್ನು ಈ ಕಾರುಗಳು ನೆಕ್ಸಾನ್ ಎಸ್‌ಯುವಿ ಕಾರಿನ 1.2-ಲೀಟರ್ ಟರ್ಬೋಚಾರ್ಜ್ಡ್ 3 ಸಿಲೆಂಡರ್ ಎಂಜಿನ್‌ನ್ನು ಹೋಲುತ್ತಿದ್ದು, 109-ಬಿಹೆಚ್‌ಪಿ ಮತ್ತು 150-ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಟಾಟಾ ವಿನೂತನ ಕಾರುಗಳು

ಇನ್ನು ಈ ಕಾರುಗಳ ಎಂಜಿನ್‌ನ್ನು 5-ಸ್ಪೀಡ್ ಗೇರ್ ಬಾಕ್ಸಿನೊಂದಿಗೆ ಜೋಡಿಸಲಾಗಿದ್ದು, ಟಾಟಾ ಸಂಸ್ಥೆಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.

Most Read Articles

Kannada
English summary
Auto Expo 2018: Tata Cars At Auto Expo.
Story first published: Wednesday, February 14, 2018, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X