ಹೊಸ ಕಾರುಗಳ ಖರೀದಿದಾರರಿಗೆ ಶಾಕ್ ಕೊಟ್ಟ ಟಾಟಾ ಮೋಟಾರ್ಸ್
ಕಾರುಗಳು ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆ ಕಾರುಗಳ ಬೆಲೆ ಏರಿಕೆ ಮಾಡುವ ಕುರಿತು ಟಾಟಾ ಮೋಟಾರ್ಸ್ ಸುಳಿವು ನೀಡಿದ್ದು, ಪ್ರತಿ ಕಾರಿನ ಬೆಲೆಯು ರೂ. 40 ಸಾವಿರದಿಂದ ರೂ. 70 ಸಾವಿರ ತನಕ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ.
ಕಾರುಗಳು ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆ ಕಾರುಗಳ ಬೆಲೆ ಏರಿಕೆ ಮಾಡುವ ಕುರಿತು ಟಾಟಾ ಮೋಟಾರ್ಸ್ ಸುಳಿವು ನೀಡಿದ್ದು, ಪ್ರತಿ ಕಾರಿನ ಬೆಲೆಯು ರೂ. 40 ಸಾವಿರದಿಂದ ರೂ. 70 ಸಾವಿರ ತನಕ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಆಗಸ್ಟ್ 1ರಿಂದಲೇ ಟಾಟಾ ಕಾರುಗಳ ಹೊಸ ಬೆಲೆ ಪಟ್ಟಿಗಳು ಪರಿಷ್ಕಣೆಗೊಳ್ಳಲಿದ್ದು, ಪ್ರವೇಶ ಮಟ್ಟದ ಕಾರುಗಳು ರೂ.40 ಸಾವಿರದಿಂದ ಹಾಗೂ ಉನ್ನತ ಮಟ್ಟದ ಕಾರುಗಳು ರೂ.70 ಸಾವಿರ ತನಕ ಹೆಚ್ಚುವರಿ ಬೆಲೆಯನ್ನು ಪಡೆದುಕೊಳ್ಳಲಿವೆ ಎಂಬ ಮಾಹಿತಿಗಳು ಲಭ್ಯವಾಗಲಿವೆ.

ಟಾಟಾ ಸಂಸ್ಥೆಯು ಪ್ರತಿಶತ 2.2 ರಷ್ಟು ಪ್ರತಿ ಕಾರಿನ ಬೆಲೆಯಲ್ಲೂ ಹೆಚ್ಚಳ ಮಾಡುತ್ತಿದ್ದು, ಕಳೆದ ಏಪ್ರಿಲ್ ತಿಂಗಳಿನಲ್ಲೂ ಸಹ ಪ್ರತಿ ಕಾರಿನ ಬೆಲೆಯನ್ನ ರೂ.30 ಸಾವಿರದಿಂದ ರೂ. 60 ಸಾವಿರ ತನಕ ಬೆಲೆ ಹೆಚ್ಚಳ ಮಾಡಿತ್ತು. ಇದೀಗ ಮತ್ತೊಮ್ಮೆ ಬೆಲೆ ಹೆಚ್ಚಳ ಮಾಡಿರುವುದು ಹೊಸ ಕಾರು ಖರೀದಿಯ ಹುಮ್ಮಸಿನಲ್ಲಿರುವ ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಟಾಟಾ ಮೋಟಾರ್ಸ್ ಉತ್ಪಾದಿತ ನ್ಯಾನೋ, ಟಿಗೋರ್, ಟಿಯಾಗೋ, ಇಂಡಿಕಾ, ಬೊಲ್ಟ್, ಇಂಡಿಗೋ, ಜೆಸ್ಟ್, ಸುಮೊ ಗೊಲ್ಡ್, ಸಫಾರಿ ಸ್ಟಾರ್ಮ್, ನೆಕ್ಸಾನ್ ಮತ್ತು ಹೆಕ್ಸಾ ಕಾರುಗಳ ಬೆಲೆಗಳು ದುಬಾರಿಯಾಗಲಿದ್ದು, ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಟಾಟಾ ಹೇಳಿಕೊಂಡಿದೆ.

ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್ ಪ್ರಯಾಣಿಕ ಕಾರುಗಳ ವಿಭಾಗದ ಅಧ್ಯಕ್ಷ ಮಾಯಾಂಕ್ ಪರೀಕ್ "ಬದಲಾದ ಮಾರುಕಟ್ಟೆ ಸನ್ನಿವೇಶ ಮತ್ತು ಹೆಚ್ಚುತ್ತಿರುವ ಬಿಡಿಭಾಗಗಳ ಉಪಯೋಗ ಮತ್ತು ಸರಕು ವೆಚ್ಚವನ್ನು ಆಧರಿಸಿ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯ' ಎಂದಿದ್ದಾರೆ.

ಆದ್ರೆ ಟಾಟಾ ಉತ್ಪಾದಿತ ಹೊಸ ಉತ್ಪನ್ನಗಳಾದ ಟಿಯಾಗೋ ಮತ್ತು ನೆಕ್ಸಾನ್ ಕಾರುಗಳ ಬೆಲೆಯಲ್ಲಿ ಮಹತ್ವದ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಗಳಿದ್ದು, ಪ್ರತಿಸ್ಪರ್ಧಿ ಮಾದರಿಗಳಾದ ಹ್ಯುಂಡೈ ಕ್ರೇಟಾ ಮತ್ತು ಫೋರ್ಡ್ ಇಕೋ ಸ್ಪೋರ್ಟ್ ಬೆಲೆಗಳಿಂತಲೂ ಆಕರ್ಷಕ ಬೆಲೆಗಳನ್ನ ನಿಗದಿ ಮಾಡಲಿದೆ.

ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಬಿಡಿಭಾಗಗಳ ಬಳಕೆ ಹೆಚ್ಚಳ ಹಿನ್ನೆಲೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಾದ ಹೋಂಡಾ, ಆಡಿ, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಗಳು ಸಹ ಆಗಸ್ಟ್ 1ರಿಂದ ಕಾರುಗಳ ಬೆಲೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿವೆ.

ಕೇಂದ್ರ ಸರ್ಕಾರ ಜಾರಿ ಮಾಡಿರುವ ಆಮದು ಶುಂಕ ಹೆಚ್ಚಳವೇ ಕಾರುಗಳ ಉತ್ಪಾದನಾ ವೆಚ್ಚ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದ್ದು, ಇದರ ಜೊತೆಗೆ ಆಯಾ ರಾಜ್ಯಗಳ ತೆರಿಗೆ ಪಟ್ಟಿಗಳು ಗಗನಮುಖಿಯಾಗಿರುವುದು ವಾಹನ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.


Click it and Unblock the Notifications








