ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾದ ಟಾಟಾ ಹೊಸ ಕಾರಿನ ಹೆಸರು..

ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳ ಉತ್ಪಾದನೆಯಲ್ಲಿ ಸ್ವಾಯತ್ತತೆ ಕಾಯ್ದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಗೇಮ್ ಚೇಂಜರ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳ ಉತ್ಪಾದನೆಯಲ್ಲಿ ಸ್ವಾಯತ್ತತೆ ಕಾಯ್ದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಗೇಮ್ ಚೇಂಜರ್ ಕಾರುಗಳನ್ನು ಬಿಡುಗಡೆಗೊಳಿಸಲಿದ್ದು, ಹೊಸ ಬಗೆಯ ವಿನ್ಯಾಸ ಮತ್ತು ಅದ್ಭುತ ಲುಕ್ ಹೊಂದಿರುವ ಹೆಚ್5ಎಕ್ಸ್ ಕಾರು ಟಾಟಾ ಸಂಸ್ಥೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾದ ಟಾಟಾ ಹೊಸ ಕಾರಿನ ಹೆಸರು..

ಎಸ್‌ಯುವಿ ವಿಭಾಗಕ್ಕೆ ವಿನೂತನ ಕಾರು ಮಾದರಿಯನ್ನು ಪರಿಚಯಿಸಲು ಸಿದ್ದವಾಗುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕಾರನ್ನು ಹೆಚ್5ಎಕ್ಸ್ ಎಂಬ ಕೋಡ್ ಆಧಾರದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಇದೀಗ ಹೊಸ ಕಾರಿನ ಅಧಿಕೃತ ಹೆಸರನ್ನು ಬಹಿರಂಗ ಮಾಡಲು ಮುಂದಾಗಿದೆ.

ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾದ ಟಾಟಾ ಹೊಸ ಕಾರಿನ ಹೆಸರು..

ಸುದ್ದಿ ಮೂಲಗಳ ಪ್ರಕಾರ ಟಾಟಾ ಹೆಚ್‌5ಎಕ್ಸ್ ಕಾರಿನ ಹೆಸರನ್ನು 'ಹ್ಯಾರಿಯರ್' ಎಂದು ನಾಮಕರಣ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಕಾರಿನ ಎಂಜಿನ್ ವೈಶಿಷ್ಟ್ಯತೆ, ಕಾರಿನ ವಿನ್ಯಾಸಗಳ ಆಧಾರದ ಮೇಲೆ ಹ್ಯಾರಿಯರ್ ಎಂದು ನಾಮಕರಣ ಮಾಡಲಾಗುತ್ತಿದೆಯೆಂತೆ.

ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾದ ಟಾಟಾ ಹೊಸ ಕಾರಿನ ಹೆಸರು..

ಈ ಬಗ್ಗೆ ಟಾಟಾ ಸಂಸ್ಥೆಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಹ್ಯಾರಿಯರ್ ಹೆಸರೇ ಅಂತಿಮಗೊಳಿಸುವ ಬಗ್ಗೆ ಟಾಟಾ ಸಂಸ್ಥೆಯು ಒಲವು ತೊರಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರಿನ ಬಗೆಗೆ ಮತ್ತಷ್ಟು ಎಕ್ಸ್‌ಕ್ಲೂಸಿವ್ ಮಾಹಿತಿಗಳನ್ನು ಹೊರಹಾಕಲಿದೆ.

ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾದ ಟಾಟಾ ಹೊಸ ಕಾರಿನ ಹೆಸರು..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಟಾಟಾ ಹೊಸ ಕಾರಿಗೆ ನಾಮಕರಣ ಮಾಡಲಾಗುತ್ತಿರುವ ಹ್ಯಾರಿಯರ್ ಹೆಸರಿನ ಟೊಯೊಟಾ ಕಾರು ಮಾದರಿಯೊಂದು ಈಗಾಗಲೇ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಹೀಗಿದ್ದರೂ ಟಾಟಾ ಸಂಸ್ಥೆಯು ತನ್ನ ಹೊಸ ಕಾರಿಗೆ ಹ್ಯಾರಿಯರ್ ಹೆಸರನ್ನೇ ನಿಗದಿ ಮಾಡಲು ಮುಂದಾಗಿದೆ.

ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾದ ಟಾಟಾ ಹೊಸ ಕಾರಿನ ಹೆಸರು..

ಜೊತೆಗೆ ಹ್ಯಾರಿಯರ್ ಹೆಸರನ್ನು ಟಾಟಾ ಸಂಸ್ಥೆಯು ಭಾರತದಲ್ಲಿ ಬಳಕೆ ಮಾಡಲು ಯಾವುದೇ ಕಾನೂನು ಅಡೆತಡೆ ಇಲ್ಲ ಎನ್ನಲಾಗಿದ್ದು, ಭಾರತವನ್ನು ಹೊರತುಪಡಿಸಿ ವಿದೇಶಿ ಮಾರುಕಟ್ಟೆಗಳಲ್ಲಿ ಹೊಸ ಕಾರು ಮಾರಾಟ ಮಾಡುವುದಾದರೇ ಮಾತ್ರ ಬದಲಿ ನಾಮಕರಣ ಮಾಡಲೇಬೇಕಾಗುತ್ತದೆ.

ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾದ ಟಾಟಾ ಹೊಸ ಕಾರಿನ ಹೆಸರು..

ಇನ್ನು ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹೆಚ್5ಎಕ್ಸ್ ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾದ ಟಾಟಾ ಹೊಸ ಕಾರಿನ ಹೆಸರು..

ಇದರಲ್ಲಿ ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ (ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ತಂತ್ರವನ್ನು ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಲಾಗಿದೆ.

ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾದ ಟಾಟಾ ಹೊಸ ಕಾರಿನ ಹೆಸರು..

ಕಾರಿನ ವೈಶಿಷ್ಟ್ಯತೆಗಳು

ಹೆಚ್5ಎಕ್ಸ್ ಮಾದರಿಗಳು ಸ್ಲಿಕ್ ಆ್ಯಂಗರಲ್ ಎಲ್‌ಇಡಿ ಹೆಡ್ ಲೈಟ್ಸ್‌ಗಳನ್ನು ಹೊಂದಿದ್ದು, ಇಂಪ್ಯಾಕ್ಟ್ ಡಿಸೈನ್ ಗ್ರೀಲ್‌ಗಳು ಕಾರಿನ ಲುಕ್ ಹೆಚ್ಚಿಸಿವೆ. ಜೊತೆಗೆ ಪರಿಕಲ್ಪನೆ ಮಾದರಿಯನ್ನು ಗ್ರೇ ಪೇಟಿಂಗ್ ವಿನ್ಯಾಸಗಳು ಗಮನಸೆಳೆಯುತ್ತಿದ್ದು, ದೊಡ್ಡದಾದ ಚಕ್ರಗಳು, ವಿಸ್ತರಿತ ಬೂಟ್ ಸ್ಪೆಸ್ ಬಳಕೆ ಮಾಡಲಾಗಿದೆ.

ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾದ ಟಾಟಾ ಹೊಸ ಕಾರಿನ ಹೆಸರು..

ಜೊತೆಗೆ ರೂಫ್ ಮೌಟೆಂಡ್ ಸ್ಪಾಯ್ಲರ್ ಮತ್ತು ಶಾರ್ಪ್ ಮಾದರಿಯ ರಿರ್ ವೀಂಡ್ ಸ್ಕ್ರೀನ್‌ಗಳನ್ನು ಅದ್ಭುತವಾಗಿ ಡಿಸೈನ್ ಮಾಡಲಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಆವೃತ್ತಿಗಿಂತ ಹೆಚ್ಚಿನ ಗುಣ ವಿನ್ಯಾಸ ಹೊಂದಿರುವ ಹೆಚ್5ಎಕ್ಸ್ ಕಾರುಗಳು ಎಸ್‌ಯುವಿ ಪ್ರಿಯರ ಹಾಟ್ ಫೆವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾದ ಟಾಟಾ ಹೊಸ ಕಾರಿನ ಹೆಸರು..

ಎಂಜಿನ್ ಸಾಮರ್ಥ್ಯ

ಹೆಚ್5ಎಕ್ಸ್ ಕಾನ್ಸೆಪ್ಟ್ ಮಾದರಿಗಳ ಎಂಜಿನ್ ಬಗ್ಗೆ ಟಾಟಾ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕೆಲವು ವರದಿಗಳ ಪ್ರಕಾರ 2.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 2.0-ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳು ಅಭಿವೃದ್ಧಿಯಾಗಲಿವೆ.

ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾದ ಟಾಟಾ ಹೊಸ ಕಾರಿನ ಹೆಸರು..

ಕಾರಿನ ಬೆಲೆಗಳು (ಅಂದಾಜು)

ಟಾಟಾ ಹೆಚ್5ಎಕ್ಸ್ ಕಾರುಗಳು 2018ರ ಕೊನೆಯಲ್ಲಿ ಇಲ್ಲವೇ 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಹೊಸ ಕಾರಿನ ಬೆಲೆಗಳು ರೂ. 12 ಲಕ್ಷದಿಂದ ರೂ. 15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Article Published On: Tuesday, July 10, 2018, 15:53 [IST]
English summary
Tata H5X To Be Named As Tata Harrier.
Read more on tata motors suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+