ಆಫ್-ರೋಡ್ ಚಾಲನೆಯಲ್ಲೂ ಮಿಂಚಲಿರುವ ಟಾಟಾ ಹ್ಯಾರಿಯರ್ ಹೊಸ ಟೀಸರ್ ಬಿಡುಗಡೆ
ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ 2019ರ ಆರಂಭದಲ್ಲಿ ತನ್ನ ಬಹುನೀರಿಕ್ಷಿತ ಪ್ರೀಮಿಯಂ ಕಂಪ್ಯಾಕ್ಟ್ ಎಸ್‍ಯುವಿ ಮಾದರಿಯಾದ ಹ್ಯಾರಿಯರ್ ಕಾರನ್ನು ಬಿಡುಗಡೆಗೊಳಿಸುತ್ತಿದ್ದು, ಇದೀಗ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಒಂದೊಂದೇ ಮಾಹಿತಿಗಳು ಬಹಿರಂಗವಾಗುತ್ತಿವೆ.

ಟಾಟಾ ಹ್ಯಾರಿಯರ್ ಕಾರು ವಿಸ್ಟಿಯೋನ್ ಸಂಸ್ಥೆಯ 8.8 ಇಂಚಿನ ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಆಫ್-ರೋಡ್ ಚಾಲನಾ ಸೌಲಭ್ಯಗಳನ್ನು ಹೊತ್ತು ಬರುತ್ತಿರುವುದು ಖಚಿತವಾಗಿದ್ದು, ಇಷ್ಟು ದಿನ ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಕಂಡುಬರುತ್ತಿದ್ದ ವಿಸ್ಟಿಯೋನ್ ಇನ್ಪೋಟೈನ್‌ಮೆಂಟ್ ಇದೀಗ ಟಾಟಾ ಹ್ಯಾರಿಯರ್ ಕಾರಿನಲ್ಲೂ ಬಳಕೆಯಾಗುತ್ತಿರುವುದು ಕಾರಿನ ಮೌಲ್ಯವನ್ನು ಹೆಚ್ಚಿಸಿದೆ.

ವಿಸ್ಟಿಯೋನ್ ಸಂಸ್ಥೆಯು ಸದ್ಯ ಮಜ್ದಾ ಮತ್ತು ಫೋರ್ಡ್ ಸಂಸ್ಥೆಗಳಿಗೆ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒದಗಿಸುತ್ತಿದ್ದು, ಇದಲ್ಲದೇ ರೇಂಜ್ ರೋವರ್ ಸಂಸ್ಥೆಯ ವೆಲಾರ್ ಎಸ್‍ಯುವಿ ಕಾರಿಗೂ ಕೂಡಾ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ನೀಡುತ್ತಿದೆ. ಇದೀಗ ಟಾಟಾ ಹ್ಯಾರಿಯರ್ ಕಾರು ಕೂಡಾ ವಿಸ್ಟಿಯೋನ್ ಸಂಸ್ಥೆಯ ಉಪಕರಣವನ್ನು ಪಡೆದುಕೊಂಡಿದೆ.

ಟಾಟಾ ಹ್ಯಾರಿಯರ್ ಕಾರು ಪಡೆಯಲಿರುವ ಇನ್ಪೋಟೈನ್‌ಮೆಂಟ್ ಸಿಸ್ಟಂ ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್‍ಪ್ಲೇ, ಮಿರ್ರರ್ ಲಿಂಕ್ ಮತ್ತು ಸ್ಯಾಟ್‌ಲೈಟ್ ನ್ಯಾವಿಗೇಷನ್ ಕನೆಕ್ಟಿವಿಟಿ ಎಂಬ ವೈಶಿಷ್ಟ್ಯತೆಗಳನ್ನು ಸಪೋರ್ಟ್ ಮಾಡಲಿದ್ದು, ಡಬಲ್ ಟ್ಯಾಪ್ ಮಾಡಿದರೆ ರಿವರ್ಸ್ ಕ್ಯಾಮೆರಾ ಸೌಲಭ್ಯ ಜೋಡಣೆ ಮಾಡಿದೆ.

ಜೊತೆಗೆ ಕಾರು ಚಾಲನೆಗೆ ಸಹಕಾರಿಯಾಗುವಂತೆ ರೋಡ್, ಆಫ್-ರೋಡ್ ಮತ್ತು ರೈನ್ ಎನ್ನುವ ಚಾಲನಾ ಸೌಲಭ್ಯಗಳನ್ನ ನೀಡಲಾಗಿದ್ದು, ಇವುಗಳು ಸಾಮಾನ್ಯ ಮಾದರಿಯ ರಸ್ತೆಗಳಲ್ಲಿ ಅಷ್ಟೇ ಅಲ್ಲದೆ ಆಫ್-ರೋಡ್‌ನಲ್ಲೂ ಉತ್ತಮ ಚಾಲನಾ ಕೌಶಲ್ಯ ಪ್ರದರ್ಶನ ಮಾಡಲಿವೆ.

ಇನ್ನು ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಇದರಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ (ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಲಾಗಿದೆ.

ಕಾರಿನ ವೈಶಿಷ್ಟ್ಯತೆಗಳು
ಹ್ಯಾರಿಯರ್ ಕಾರುಗಳು ಸ್ಲಿಕ್ ಆ್ಯಂಗರಲ್ ಎಲ್‌ಇಡಿ ಹೆಡ್ ಲೈಟ್ಸ್‌ಗಳನ್ನು ಹೊಂದಿದ್ದು, ಇಂಪ್ಯಾಕ್ಟ್ ಡಿಸೈನ್ ಗ್ರೀಲ್‌ಗಳು ಕಾರಿನ ಲುಕ್ ಹೆಚ್ಚಿಸಿವೆ. ಜೊತೆಗೆ ಪರಿಕಲ್ಪನೆ ಮಾದರಿಯನ್ನು ಗ್ರೇ ಪೇಟಿಂಗ್ ವಿನ್ಯಾಸಗಳು ಗಮನಸೆಳೆಯುತ್ತಿದ್ದು, ದೊಡ್ಡದಾದ ಚಕ್ರಗಳು, ವಿಸ್ತರಿತ ಬೂಟ್ ಸ್ಪೆಸ್ ಬಳಕೆ ಮಾಡಲಾಗಿದೆ.

ಇದರಲ್ಲಿ ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ಶಾರ್ಪ್ ಮಾದರಿಯ ರಿರ್ ವೀಂಡ್ ಸ್ಕ್ರೀನ್‌ಗಳನ್ನು ಅದ್ಭುತವಾಗಿ ಡಿಸೈನ್ ಮಾಡಲಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಆವೃತ್ತಿಗಿಂತ ಹೆಚ್ಚಿನ ಗುಣ ವಿನ್ಯಾಸ ಹೊಂದಿರುವ ಹ್ಯಾರಿಯರ್ ಕಾರುಗಳು ಎಸ್‌ಯುವಿ ಪ್ರಿಯರ ಹಾಟ್ ಫೆವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಹೊಸ ಎರ್ಟಿಗಾ ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್..!

ಎಂಜಿನ್ ಸಾಮರ್ಥ್ಯ
ಹ್ಯಾರಿಯರ್ ಎಸ್‌ಯುವಿ ಕಾರು 2 ಲೀಟರ್ 4 ಸಿಲೆಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಹ್ಯುಂಡೈನಿಂದ ಪಡೆದ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಸಹ ನೀಡಲಿದೆ ಎನ್ನಲಾಗಿದೆ.

ಕಾರಿನ ಬೆಲೆಗಳು (ಅಂದಾಜು)
ಟಾಟಾ ಸಂಸ್ಥೆಯು ಈಗಾಗಲೇ ಹೊಸ ಹ್ಯಾರಿಯರ್ ಕಾರುಗಳ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ಕೂಡಾ ನೀಡಿದ್ದು, ರೂ.30 ಸಾವಿರ ಮುಂಗಡ ಪಾವತಿಸಿ ಹೊಸ ಕಾರು ಖರೀದಿಗಾಗಿ ಬುಕ್ ಮಾಡಬಹುದಾಗಿದೆ. ಹೀಗಾಗಿ ಹೊಸ ಕಾರಿನ ಬೆಲೆಗಳು ರೂ. 12 ಲಕ್ಷದಿಂದ ರೂ. 15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications