ಸ್ಪಾಟ್ ಟೆಸ್ಟಿಂಗ್ ಮೂಲಕವೇ 22 ಲಕ್ಷ ಕಿ.ಮೀ ಸಾಗಿದ ಹ್ಯಾರಿಯರ್ ಪಯಣ

ಟಾಟಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಎರಡು ಪ್ರಮುಖ ಗೇಮ್ ಚೆಂಜರ್ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಹ್ಯಾರಿಯರ್ ಹೆಸರಿನ ಕಂಪ್ಯಾಕ್ಟ್ ಎಸ್‌ಯುವಿ ಕಾರು ಭಾರತದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದೆ. ಸದ್ಯ ಬಿಡುಗಡೆಯ ಹೊಸ್ತಿನಲ್ಲಿರುವ ಹ್ಯಾರಿಯರ್ ಸದ್ಯ ದೇಶಾದ್ಯಂತ ವಿವಿಧ ಮಾದರಿಯ ಸ್ವಾಟ್ ಟೆಸ್ಟಿಂಗ್ ನಡೆಸಿದ್ದು, ಬರೋಬ್ಬರಿ 22 ಲಕ್ಷ ಕಿ.ಮೀ ನಷ್ಟು ದೂರ ಕ್ರಮಿಸುವ ಮೂಲಕ ಹೊಸ ದಾಖಲೆ ಸೃಷ್ಠಿಸಿದೆ.

ಸ್ಪಾಟ್ ಟೆಸ್ಟಿಂಗ್ ಮೂಲಕವೇ 22 ಲಕ್ಷ ಕಿ.ಮೀ ಸಾಗಿದ ಹ್ಯಾರಿಯರ್ ಪಯಣ

ಟಾಟಾ ಸಂಸ್ಥೆಯು ಹ್ಯಾರಿಯರ್ ಬಿಡುಗಡೆಗೂ ಮುನ್ನ ಹೊಸ ಕಾರಿನ ಎಂಜಿನ್ ದಕ್ಷತೆ ಮತ್ತು ಇಂಧನ ಕಾರ್ಯಕ್ಷಮತೆ ಕುರಿತಂತೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳು ಮತ್ತು ಕಠಿಣ ಭೂಪ್ರದೇಶಗಳಲ್ಲಿ ಸ್ಪಾರ್ಟ್ ಟೆಸ್ಟಿಂಗ್ ನಡೆಸುವ ಮೂಲಕ ಹೊಸ ಕಾರಿನ ಬಿಡುಗಡೆಯಾಗಿ ಕೊನೆಯ ಹಂತದ ಸಿದ್ದತೆ ಮಾಡಿಕೊಳ್ಳುತ್ತಿದೆ.

ಸ್ಪಾಟ್ ಟೆಸ್ಟಿಂಗ್ ಮೂಲಕವೇ 22 ಲಕ್ಷ ಕಿ.ಮೀ ಸಾಗಿದ ಹ್ಯಾರಿಯರ್ ಪಯಣ

ಹೀಗಾಗಿ ಕಾರಿನ ಎಂಜಿನ್ ವೈಶಿಷ್ಟ್ಯತೆ, ಕಾರಿನ ವಿನ್ಯಾಸಗಳ ಆಧಾರದ ಮೇಲೆ ಟಾಟಾ ಹೊಸ ಕಾರಿಗೆ ಹ್ಯಾರಿಯರ್ ಎಂದು ನಾಮಕರಣ ಮಾಡಲಾಗಿದ್ದು, ಹೆಸರಿಗೆ ತಕ್ಕಂತೆ ಹೊಸ ಕಾರುಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನ ಒದಗಿಸುವ ಬಗ್ಗೆ ಟಾಟಾ ಸುಳಿವು ನೀಡಿದೆ.

ಸ್ಪಾಟ್ ಟೆಸ್ಟಿಂಗ್ ಮೂಲಕವೇ 22 ಲಕ್ಷ ಕಿ.ಮೀ ಸಾಗಿದ ಹ್ಯಾರಿಯರ್ ಪಯಣ

ಜೊತೆಗೆ ಎಂಜಿನ್ ಕಾರ್ಯಕ್ಷಮತೆ ಕುರಿತು ಸ್ಪಾಟ್‌ ಟೆಸ್ಟಿಂಗ್ ನಡೆಸುತ್ತಿರುವಾಗ ಹೊಸ ಹ್ಯಾರಿಯರ್ ಕಾರುಗಳು ಅಲಾಯ್ ಚಕ್ರಗಳ ಜೊತೆಗೆ ಗುಣಮಟ್ಟದ ಬ್ರಿಡ್ಜ್ ಸ್ಟೋನ್ ಟೈರ್ ಮಾದರಿಯನ್ನ ಪಡೆದುಕೊಂಡಿರುವುದು ಕಂಡುಬಂದಿದೆ.

ಸ್ಪಾಟ್ ಟೆಸ್ಟಿಂಗ್ ಮೂಲಕವೇ 22 ಲಕ್ಷ ಕಿ.ಮೀ ಸಾಗಿದ ಹ್ಯಾರಿಯರ್ ಪಯಣ

ಇನ್ನು ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಸ್ಪಾಟ್ ಟೆಸ್ಟಿಂಗ್ ಮೂಲಕವೇ 22 ಲಕ್ಷ ಕಿ.ಮೀ ಸಾಗಿದ ಹ್ಯಾರಿಯರ್ ಪಯಣ

ಇದರಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ (ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಲಾಗಿದೆ.

ಸ್ಪಾಟ್ ಟೆಸ್ಟಿಂಗ್ ಮೂಲಕವೇ 22 ಲಕ್ಷ ಕಿ.ಮೀ ಸಾಗಿದ ಹ್ಯಾರಿಯರ್ ಪಯಣ

ಕಾರಿನ ವೈಶಿಷ್ಟ್ಯತೆಗಳು

ಹ್ಯಾರಿಯರ್ ಕಾರುಗಳು ಸ್ಲಿಕ್ ಆ್ಯಂಗರಲ್ ಎಲ್‌ಇಡಿ ಹೆಡ್ ಲೈಟ್ಸ್‌ಗಳನ್ನು ಹೊಂದಿದ್ದು, ಇಂಪ್ಯಾಕ್ಟ್ ಡಿಸೈನ್ ಗ್ರೀಲ್‌ಗಳು ಕಾರಿನ ಲುಕ್ ಹೆಚ್ಚಿಸಿವೆ. ಜೊತೆಗೆ ಪರಿಕಲ್ಪನೆ ಮಾದರಿಯನ್ನು ಗ್ರೇ ಪೇಟಿಂಗ್ ವಿನ್ಯಾಸಗಳು ಗಮನಸೆಳೆಯುತ್ತಿದ್ದು, ದೊಡ್ಡದಾದ ಚಕ್ರಗಳು, ವಿಸ್ತರಿತ ಬೂಟ್ ಸ್ಪೆಸ್ ಬಳಕೆ ಮಾಡಲಾಗಿದೆ.

ಸ್ಪಾಟ್ ಟೆಸ್ಟಿಂಗ್ ಮೂಲಕವೇ 22 ಲಕ್ಷ ಕಿ.ಮೀ ಸಾಗಿದ ಹ್ಯಾರಿಯರ್ ಪಯಣ

ಜೊತೆಗೆ ರೂಫ್ ಮೌಟೆಂಡ್ ಸ್ಪಾಯ್ಲರ್ ಮತ್ತು ಶಾರ್ಪ್ ಮಾದರಿಯ ರಿರ್ ವೀಂಡ್ ಸ್ಕ್ರೀನ್‌ಗಳನ್ನು ಅದ್ಭುತವಾಗಿ ಡಿಸೈನ್ ಮಾಡಲಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಆವೃತ್ತಿಗಿಂತ ಹೆಚ್ಚಿನ ಗುಣ ವಿನ್ಯಾಸ ಹೊಂದಿರುವ ಹ್ಯಾರಿಯರ್ ಕಾರುಗಳು ಎಸ್‌ಯುವಿ ಪ್ರಿಯರ ಹಾಟ್ ಫೆವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸ್ಪಾಟ್ ಟೆಸ್ಟಿಂಗ್ ಮೂಲಕವೇ 22 ಲಕ್ಷ ಕಿ.ಮೀ ಸಾಗಿದ ಹ್ಯಾರಿಯರ್ ಪಯಣ

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಮಾದರಿಗಳ ಎಂಜಿನ್ ಬಗೆಗೆ ಟಾಟಾ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕೆಲವು ವರದಿಗಳ ಪ್ರಕಾರ 2.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 2.0-ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳು ಅಭಿವೃದ್ಧಿಯಾಗಲಿವೆ.

ಸ್ಪಾಟ್ ಟೆಸ್ಟಿಂಗ್ ಮೂಲಕವೇ 22 ಲಕ್ಷ ಕಿ.ಮೀ ಸಾಗಿದ ಹ್ಯಾರಿಯರ್ ಪಯಣ

ಕಾರಿನ ಬೆಲೆಗಳು (ಅಂದಾಜು)

ಟಾಟಾ ಹ್ಯಾರಿಯರ್ ಕಾರುಗಳು 2018ರ ಕೊನೆಯಲ್ಲಿ ಇಲ್ಲವೇ 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಹೊಸ ಕಾರಿನ ಬೆಲೆಗಳು ರೂ. 12 ಲಕ್ಷದಿಂದ ರೂ. 15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

More from DriveSpark

ಟಾಟಾ ಹ್ಯಾರಿಯರ್ ಕಾರಿನ ಫೋಟೋ ಗ್ಯಾಲರಿ..!

Article Published On: Wednesday, October 3, 2018, 19:10 [IST]
English summary
Tata Harrier SUV Tested For 22 Lakh Kilometres — New Durability Test Video.
Read more on tata motors suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+