ಟಾಟಾ ಹ್ಯಾರಿಯರ್ ಕಾರಿನ ಇಂಟೀರಿಯರ್ ಚಿತ್ರಗಳು ಸೋರಿಕೆ..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್ ತಮ್ಮ ಹ್ಯಾರಿಯರ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸುವ ತವಕದಲಿದ್ದು, ಈಗಾಗಲೆ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್ ತಮ್ಮ ಹ್ಯಾರಿಯರ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸುವ ತವಕದಲಿದ್ದು, ಈಗಾಗಲೆ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಆದರೆ ಇದೇ ಮೊದಲ ಬಾರಿಗೆ ಟಾಟಾ ಹ್ಯಾರಿಯರ್ ಕಾರಿನ ಇಂಟೀರಿಯರ್ ಚಿತ್ರಗಳು ಸೋರಿಕೆಯಾಗಿದೆ.

ಟಾಟಾ ಹ್ಯಾರಿಯರ್ ಕಾರಿನ ಇಂಟೀರಿಯರ್ ಚಿತ್ರಗಳು ಸೋರಿಕೆ..

ಸೋರಿಕೆಯಾದ ಹ್ಯಾರಿಯರ್ ಇಂಟೀರಿಯರ್ ಚಿತ್ರಗಳಲ್ಲಿ ಕಾರಿನ ಸ್ಟೀರಿಂಗ್ ವ್ಹೀಲ್, ಡ್ಯಾಶ್‍‍ಬೋರ್ಡ್ ಮತ್ತು ಇಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಂಪೂರ್ಣವಾಗಿ ಕಾಣಬಹುದಾಗಿದೆ. ಕಾರಿನಲ್ಲಿರುವ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಬಹಳ ಸರಳವಾಗಿದ್ದು, ಮೊನೊಟೋನ್ ಲೈಟ್ ಅನ್ನು ಪಡೆದುಕೊಂಡಿದೆ. ಕಾರಿನ ಸ್ಪೀಡೊ ಮತ್ತು ಆರ್‍‍ಪಿಎಮ್ ಅನ್ನು ಕ್ರೋಮ್ ಡೀಟೈಲಿಂಗ್‍‍ನಿಂದ ಸಜ್ಜುಗೊಳಿಸಲಾಗಿದೆ.

ಟಾಟಾ ಹ್ಯಾರಿಯರ್ ಕಾರಿನ ಇಂಟೀರಿಯರ್ ಚಿತ್ರಗಳು ಸೋರಿಕೆ..

ಇದಲ್ಲದೇ ಟಾಟಾ ಹ್ಯಾರಿಯರ್ ಕಾರು ಫ್ಯುಯಲ್ ಲೆವೆಲ್, ಫ್ಯುಯಲ್ ಕಂಸಂಪ್ಷನ್, ಒಡೊಮೀಟರ್, ಟ್ರಿಪ್ ಮೀಟರ್ ಮತ್ತು ಇನ್ನಿತರೆ ಮಾಹಿತಿಗಳನ್ನು ತೋರಿಸಬಲ್ಲ ಎಮ್ಐಡಿ (ಮಲ್ಟಿ ಇನ್ಫರ್ಮೆಷನ್ ಡಿಸ್ಪ್ಲೇ) ಅನ್ನು ಪಡೆದುಕೊಂಡಿದೆ. ಅಲ್ಲದೇ ಎಮ್ಐಡಿಯಲ್ಲಿನ ಆಯ್ಕೆಗಳನ್ನು ಆಕ್ಸಿಸ್ ಮಾಡಲು ಇನ್ಸ್ಟ್ರೂಮೆಂಟ್ ಕ್ಲಸ್ಟರ್‍‍ನಲ್ಲಿ ಬಟನ್‍‍ಗಳನ್ನು ನೀಡಲಾಗಿದೆ.

ಟಾಟಾ ಹ್ಯಾರಿಯರ್ ಕಾರಿನ ಇಂಟೀರಿಯರ್ ಚಿತ್ರಗಳು ಸೋರಿಕೆ..

ಟಾಟಾ ಹ್ಯಾರಿಯರ್ ಕಾರಿನ ಸ್ಟೀರಿಂಗ್ ವ್ಹೀಲ್ ಆಧುನಿಕ ವಿನ್ಯಾಸವನ್ನು ಪಡೆದಿದ್ದು, ಎರಡು ಸೈಡ್‍‍ನಿಂದ ಕಂಟ್ರೋಲ್ ಮಾಡಬಹುದಾಗಿದೆ. ಸ್ಟೀರಿಂಗ್ ವ್ಹೀಲ್‍‍ನ ಎಡಭಾಗದಲ್ಲಿ ಮ್ಯೂಸಿಕ್, ಬ್ಲೂಟೂತ್ ಮತ್ತು ಕರೆಗಳನ್ನು ಸ್ವೀಕರಿಸಬಹುದಾಗಿದ್ದು, ಸ್ಟೀರಿಂಗ್ ವ್ಹೀಲ್‍‍ನ ಬಲ ಭಾಗದಲ್ಲಿ ಕ್ರೂಸ್ ಕಂಟ್ರೋಲ್ ಬಟನ್‍‍ಗಳನ್ನು ಪಡೆದುಕೊಂಡಿದೆ.

ಟಾಟಾ ಹ್ಯಾರಿಯರ್ ಕಾರಿನ ಇಂಟೀರಿಯರ್ ಚಿತ್ರಗಳು ಸೋರಿಕೆ..

ಇನ್ನು ಕಾರಿನ ಇಂಡೀಕೇಟರ್ ಸ್ಟಾಲ್ಕ್ ಟಿಯಾಗೊ ಕಾರಿನಲ್ಲಿ ಕಂಡ ಹಾಗೆಯೆ ಇಂಟಿಗ್ರೇಟೆಡ್ ಲೈಟ್ ಕಂಟ್ರೋಲ್ ಬಟನ್‍‍ಗಳನ್ನು ಪಡೆದಿದ್ದು, ಕಾರಿನ ಸೆಂಟ್ರಲ್ ಕಂಸೋಲ್ ಅನ್ನು ಕನೆಕ್ಟಿವಿಟಿ ಆಯ್ಕೆಯೊಂದಿಗೆ ಹೊಸ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದಿರಲಿದೆ.

ಟಾಟಾ ಹ್ಯಾರಿಯರ್ ಕಾರಿನ ಇಂಟೀರಿಯರ್ ಚಿತ್ರಗಳು ಸೋರಿಕೆ..

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಟಾಟಾ ಹ್ಯಾರಿಯರ್ ಕಾರಿನ ಇಂಟೀರಿಯರ್ ಚಿತ್ರಗಳು ಸೋರಿಕೆ..

ಜೊತೆಗೆ ರೂಫ್ ಮೌಟೆಂಡ್ ಸ್ಪಾಯ್ಲರ್ ಮತ್ತು ಶಾರ್ಪ್ ಮಾದರಿಯ ರಿಯರ್ ವೀಂಡ್ ಸ್ಕ್ರೀನ್‌ಗಳನ್ನು ಅದ್ಭುತವಾಗಿ ಡಿಸೈನ್ ಮಾಡಲಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಆವೃತ್ತಿಗಿಂತ ಹೆಚ್ಚಿನ ಗುಣ ವಿನ್ಯಾಸ ಹೊಂದಿರುವ ಹ್ಯಾರಿಯರ್ ಕಾರುಗಳು ಎಸ್‌ಯುವಿ ಪ್ರಿಯರ ಹಾಟ್ ಫೆವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಟಾಟಾ ಹ್ಯಾರಿಯರ್ ಕಾರಿನ ಇಂಟೀರಿಯರ್ ಚಿತ್ರಗಳು ಸೋರಿಕೆ..

ಹ್ಯಾರಿಯರ್ ಎಸ್‌ಯುವಿ ಮಾದರಿಗಳ ಎಂಜಿನ್ ಬಗೆಗೆ ಟಾಟಾ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕೆಲವು ವರದಿಗಳ ಪ್ರಕಾರ 2.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 2.0-ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳು ಅಭಿವೃದ್ಧಿಯಾಗಲಿವೆ.

ಟಾಟಾ ಹ್ಯಾರಿಯರ್ ಕಾರಿನ ಇಂಟೀರಿಯರ್ ಚಿತ್ರಗಳು ಸೋರಿಕೆ..

ಕಾರಿನ ಬೆಲೆಗಳು (ಅಂದಾಜು)

ಟಾಟಾ ಹ್ಯಾರಿಯರ್ ಕಾರುಗಳು 2018ರ ಕೊನೆಯಲ್ಲಿ ಇಲ್ಲವೇ 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಹೊಸ ಕಾರಿನ ಬೆಲೆಗಳು ರೂ. 12 ಲಕ್ಷದಿಂದ ರೂ. 15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಟಾಟಾ ಹ್ಯಾರಿಯರ್ ಕಾರಿನ ಇಂಟೀರಿಯರ್ ಚಿತ್ರಗಳು ಸೋರಿಕೆ..

ಟಾಟಾ ಸಂಸ್ಥೆಯು ತಮ್ಮ ಎಸ್‍ಯುವಿ ಕಾರುಗಳ ಹೆಚ್ಚು ಮಾರಾಟಕ್ಕಾಗಿ ಹೆಚ್5ಎಕ್ಸ್ ಫ್ಲ್ಯಾಗ್‍ಶಿಫ್ ಎಸ್‍ಯುವಿ ಕಾರನ್ನು ಪರಿಚಯಿಸಲಾಗುತ್ತಿದ್ದು, ಬಿಡುಗಡೆಗೊಂಡ ನಂತರ ಜೀಪ್ ಕಂಪಸ್ ಮತ್ತು ಹ್ಯುಂಡೈ ಟಕ್ಸನ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Article Published On: Thursday, August 2, 2018, 10:05 [IST]
English summary
Tata Harrier Interior Spied.
Read more on tata motors suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+