ಹ್ಯಾರಿಯರ್ ಕಾರುಗಳ ಆಯ್ಕೆಗೆ ವಿನೂತನ ವ್ಯವಸ್ಥೆ ತೆರೆಯಲಿದೆ ಟಾಟಾ ಮೋಟಾರ್ಸ್
ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಟಾಟಾ ಹ್ಯಾರಿಯರ್ ಕಾರುಗಳು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಹ್ಯಾರಿಯರ್ ಕಾರುಗಳ ಆಯ್ಕೆಯಲ್ಲಿ ಗ್ರಾಹಕರಿಗೆ ವಿನೂತನ ಅವಕಾಶ ಒದಗಿಸಲು ಟಾಟಾ ಸಂಸ್ಥೆಯು ಸಿದ್ದತೆ ನಡೆಸಿದೆ.

ಹೌದು, ಇಷ್ಟು ದಿನಗಳ ಕಾಲ ಐಷಾರಾಮಿ ಕಾರುಗಳ ಆಯ್ಕೆಯಲ್ಲಿ ಮಾತ್ರ ಲಭ್ಯವಿರುವ ಆನ್‌ಲೈನ್ ಮೂಲಕ ಕಾರಿನಲ್ಲಿರಬೇಕಾದ ಸೌಲಭ್ಯಗಳ ಆಯ್ಕೆ ಸೌಲಭ್ಯವನ್ನ ಟಾಟಾ ಸಂಸ್ಥೆಯು ಸಹ ಹ್ಯಾರಿಯರ್ ಕಾರುಗಳ ಆಯ್ಕೆಯಲ್ಲೂ ನೀಡಲು ಮುಂದಾಗಿದ್ದು, ಆನ್‌ಲೈನ್ ಮೂಲಕ ಹೊಸ ಕಾರನ್ನು ನಿಮ್ಮ ಇಷ್ಟದಂತೆ ಸಿದ್ದಪಡಿಸಿ ಬುಕ್ಕಿಂಗ್ ಮಾಡಬಹುದಾಗಿದೆ.

ಅಂದರೇ, ಹೊಸ ಕಾರು ಖರೀದಿಗೂ ಮುನ್ನ ಕಾರಿನಲ್ಲಿ ಕೆಲವು ಕಡ್ಡಾಯ ಸೌಲಭ್ಯಗಳನ್ನು ಹೊರತುಪಡಿಸಿ ಕಾರಿನ ಅಂದವನ್ನು ಹೆಚ್ಚಿಸಲು ಹೆಚ್ಚುವರಿ ಸೌಲಭ್ಯಗಳನ್ನ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡುವುದಲ್ಲದೇ ಕಾರಿನ ಬಣ್ಣ, ಗ್ರಾಫಿಕ್ಸ್, ಇಂಟಿರಿಯರ್ ವಿಭಾಗದಲ್ಲಿ ನಿಮ್ಮ ಬೇಡಿಕೆ ತಕ್ಕಂತೆ ಸಿದ್ದಪಡಿಸಿಕೊಳ್ಳಬಹುದು.

ಹೊಸ ಸೌಲಭ್ಯದಿಂದ ಗ್ರಾಹಕರಿಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ಕಾರಿನ ಸೌಲಭ್ಯಗಳನ್ನ ನಿಗದಿಪಡಿಸಿಕೊಳ್ಳಬಹುದಾಗಿದ್ದು, ಗ್ರಾಹಕರು ಆಯ್ಕೆ ಮಾಡುವ ಸೌಲಭ್ಯಗಳ ಮೇಲೆ ಕಾರಿನ ಬೆಲೆ ನಿಗದಿಯಾಗುತ್ತೆ. ಜೊತೆಗೆ ಅನವಶ್ಯಕ ಸೌಲಭ್ಯಗಳ ಕೈಬಿಡುವುದರಿಂದ ಆರ್ಥಿಕವಾಗಿಯೂ ಗ್ರಾಹಕರಿಗೆ ಸಹಕಾರಿಯಾಗುತ್ತೆ ಎನ್ನಬಹುದು.

ಇನ್ನು ಕಾರಿನ ಎಂಜಿನ್ ವೈಶಿಷ್ಟ್ಯತೆ, ಕಾರಿನ ವಿನ್ಯಾಸಗಳ ಆಧಾರದ ಮೇಲೆ ಟಾಟಾ ಹೊಸ ಕಾರಿಗೆ ಹ್ಯಾರಿಯರ್ ಎಂದು ನಾಮಕರಣ ಮಾಡಲಾಗಿದ್ದು, ಹೆಸರಿಗೆ ತಕ್ಕಂತೆ ಹೊಸ ಕಾರುಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನ ಒದಗಿಸುವ ಬಗ್ಗೆ ಟಾಟಾ ಸುಳಿವು ನೀಡಿದೆ.

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಇದರಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ (ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಲಾಗಿದೆ.

ಕಾರಿನ ವೈಶಿಷ್ಟ್ಯತೆಗಳು
ಹ್ಯಾರಿಯರ್ ಕಾರುಗಳು ಸ್ಲಿಕ್ ಆ್ಯಂಗರಲ್ ಎಲ್‌ಇಡಿ ಹೆಡ್ ಲೈಟ್ಸ್‌ಗಳನ್ನು ಹೊಂದಿದ್ದು, ಇಂಪ್ಯಾಕ್ಟ್ ಡಿಸೈನ್ ಗ್ರೀಲ್‌ಗಳು ಕಾರಿನ ಲುಕ್ ಹೆಚ್ಚಿಸಿವೆ. ಜೊತೆಗೆ ಪರಿಕಲ್ಪನೆ ಮಾದರಿಯನ್ನು ಗ್ರೇ ಪೇಟಿಂಗ್ ವಿನ್ಯಾಸಗಳು ಗಮನಸೆಳೆಯುತ್ತಿದ್ದು, ದೊಡ್ಡದಾದ ಚಕ್ರಗಳು, ವಿಸ್ತರಿತ ಬೂಟ್ ಸ್ಪೆಸ್ ಬಳಕೆ ಮಾಡಲಾಗಿದೆ.

ಜೊತೆಗೆ ರೂಫ್ ಮೌಟೆಂಡ್ ಸ್ಪಾಯ್ಲರ್ ಮತ್ತು ಶಾರ್ಪ್ ಮಾದರಿಯ ರಿರ್ ವೀಂಡ್ ಸ್ಕ್ರೀನ್‌ಗಳನ್ನು ಅದ್ಭುತವಾಗಿ ಡಿಸೈನ್ ಮಾಡಲಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಆವೃತ್ತಿಗಿಂತ ಹೆಚ್ಚಿನ ಗುಣ ವಿನ್ಯಾಸ ಹೊಂದಿರುವ ಹ್ಯಾರಿಯರ್ ಕಾರುಗಳು ಎಸ್‌ಯುವಿ ಪ್ರಿಯರ ಹಾಟ್ ಫೆವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಂಜಿನ್ ಸಾಮರ್ಥ್ಯ
ಹ್ಯಾರಿಯರ್ ಎಸ್‌ಯುವಿ ಮಾದರಿಗಳ ಎಂಜಿನ್ ಬಗೆಗೆ ಟಾಟಾ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕೆಲವು ವರದಿಗಳ ಪ್ರಕಾರ 2.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 2.0-ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳು ಅಭಿವೃದ್ಧಿಯಾಗಲಿವೆ.

ಕಾರಿನ ಬೆಲೆಗಳು (ಅಂದಾಜು)
ಟಾಟಾ ಹ್ಯಾರಿಯರ್ ಕಾರುಗಳು 2018ರ ಕೊನೆಯಲ್ಲಿ ಇಲ್ಲವೇ 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಹೊಸ ಕಾರಿನ ಬೆಲೆಗಳು ರೂ. 12 ಲಕ್ಷದಿಂದ ರೂ. 15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications