ಕಾರುಗಳ ಬೆಲೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆ ಕಾರುಗಳ ಬೆಲೆಯನ್ನು ಏರಿಕೆ ಮಾಡುವ ಕುರಿತು ಟಾಟಾ ಮೋಟಾರ್ಸ್ ಸುಳಿವು ನೀಡಿದ್ದು, ಪ್ರತಿ ಕಾರಿನ ಬೆಲೆಯು 30 ಸಾವಿರದಿಂದ 60 ಸಾವಿರ ತನಕ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

By Praveen Sannamani

ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆ ಕಾರುಗಳ ಬೆಲೆಯನ್ನು ಏರಿಕೆ ಮಾಡುವ ಕುರಿತು ಟಾಟಾ ಮೋಟಾರ್ಸ್ ಸುಳಿವು ನೀಡಿದ್ದು, ಪ್ರತಿ ಕಾರಿನ ಬೆಲೆಯು 30 ಸಾವಿರದಿಂದ 60 ಸಾವಿರ ತನಕ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಕಾರುಗಳ ಬೆಲೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಏಪ್ರಿಲ್ 1ರಿಂದಲೇ ಟಾಟಾ ಕಾರುಗಳ ಹೊಸ ಬೆಲೆಗಳನ್ನು ಪರಿಷ್ಕಣೆಗೊಳ್ಳಲಿದ್ದು, ಪ್ರವೇಶ ಮಟ್ಟದ ಕಾರುಗಳು ರೂ.30 ಸಾವಿರದಿಂದ ಹಾಗೂ ಉನ್ನತ ಮಟ್ಟದ ಕಾರುಗಳು ರೂ.60 ಸಾವಿರ ತನಕ ಹೆಚ್ಚುವರಿ ಬೆಲೆಯನ್ನು ಪಡೆದುಕೊಳ್ಳಲಿವೆ ಎನ್ನಲಾಗಿದೆ.

ಕಾರುಗಳ ಬೆಲೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಹೀಗಾಗಿ ಟಾಟಾ ಮೋಟಾರ್ಸ್ ಉತ್ಪಾದಿತ ನ್ಯಾನೋ, ಟಿಗೋರ್, ಟಿಯಾಗೋ, ಇಂಡಿಕಾ, ಬೊಲ್ಟ್, ಇಂಡಿಗೋ, ಜೆಸ್ಟ್, ಸುಮೊ ಗೊಲ್ಡ್, ಸಫಾರಿ ಸ್ಟಾರ್ಮ್, ನೆಕ್ಸಾನ್ ಮತ್ತು ಹೆಕ್ಸಾ ಕಾರುಗಳ ಬೆಲೆಗಳು ದುಬಾರಿಯಾಗಲಿದ್ದು, ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಟಾಟಾ ಹೇಳಿಕೊಂಡಿದೆ.

ಕಾರುಗಳ ಬೆಲೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್ ಪ್ರಯಾಣಿಕ ಕಾರುಗಳ ವಿಭಾಗದ ಅಧ್ಯಕ್ಷ ಮಾಯಾಂಕ್ ಪರೀಕ್ "ಬದಲಾದ ಮಾರುಕಟ್ಟೆ ಸನ್ನಿವೇಶ ಮತ್ತು ಹೆಚ್ಚುತ್ತಿರುವ ಬಿಡಿಭಾಗಗಳ ಉಪಯೋಗ ಮತ್ತು ಸರಕು ವೆಚ್ಚವನ್ನು ಆಧರಿಸಿ ಬೆಲೆ ಹೆಚ್ಚಳ ಮಾಡುತ್ತಿದ್ದೇವೆ" ಎಂದಿದ್ದಾರೆ.

ಕಾರುಗಳ ಬೆಲೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಆದ್ರೆ ಟಾಟಾ ಉತ್ಪಾದಿತ ಹೊಸ ಉತ್ಪನ್ನಗಳಾದ ಟಿಯಾಗೋ ಮತ್ತು ನೆಕ್ಸಾನ್ ಕಾರುಗಳ ಬೆಲೆಯಲ್ಲಿ ಮಹತ್ವದ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಗಳಿದ್ದು, ಪ್ರತಿಸ್ಪರ್ಧಿ ಮಾದರಿಗಳಾದ ಹ್ಯುಂಡೈ ಕ್ರೇಟಾ ಮತ್ತು ಫೋರ್ಡ್ ಇಕೋ ಸ್ಪೋರ್ಟ್ ಬೆಲೆಗಳಿಂತಲೂ ಆಕರ್ಷಕ ಬೆಲೆಗಳನ್ನ ನಿಗದಿ ಮಾಡಲಿದೆ.

ಕಾರುಗಳ ಬೆಲೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಬಿಡಿಭಾಗಗಳ ಬಳಕೆ ಹೆಚ್ಚಳ ಹಿನ್ನೆಲೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಾದ ಹೋಂಡಾ ಮತ್ತು ಟೊಯೊಟೊ ಸಂಸ್ಥೆಗಳು ಈಗಾಗಲೇ ಬೆಲೆ ಹೆಚ್ಚಳ ಮಾಡಿದ್ದು, ಇದೀಗ ಟಾಟಾ ಮೋಟಾರ್ಸ್ ಸಂಸ್ಥೆ ಕೂಡಾ ಇದೇ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎನ್ನಬಹುದು.

ಕಾರುಗಳ ಬೆಲೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ವಿ.ಸೂ- ಟಾಟಾ ಮೋಟಾರ್ಸ್ ಕಾರುಗಳ ಬೆಲೆ ಹೆಚ್ಚಳಕ್ಕೂ ಮತ್ತು ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ಆಮದು ಶುಂಕ ಹೆಚ್ಚಳಕ್ಕೂ ಯಾವುದೇ ಸಂಬಂಧವಿಲ್ಲ ಎನ್ನಲಾಗಿದ್ದು, ಕಾರುಗಳ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಈ ನಿರ್ಧಾರ ಪ್ರಕಟಿಸಿದೆ.

Article Published On: Tuesday, March 20, 2018, 16:25 [IST]
English summary
Tata Motors Hike Prices Of its Entire Passenger Vehicle Lineup.
Read more on tata motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+