ಟಾಟಾ ಡೀಲರ್ಸ್ ಗೋಲ್‌ಮಾಲ್- ಪರಿಹಾರ ನೀಡಲು ಇಷ್ಟು ವರ್ಷ ಆಗಬೇಕಿತ್ತಾ?

ಹಣ ಇದ್ದವರಿಗೆ ಕಾರು ಕೊಳ್ಳುವುದು ಸುಲಭದ ವಿಚಾರ. ಆದ್ರೆ ಮಧ್ಯವರ್ಗದವರಿಗೆ ಕಾರು ಖರೀದಿಸುವಾಗ ಆಗುವ ಹಣಕಾಸಿನ ಅಡಚಣೆ ಅಷ್ಟಿಷ್ಟಲ್ಲ. ಸರಿ, ಹೇಗೋ ಮಾಡಿ ಹಣ ಹೊಂದಿಸಿ ತಮ್ಮ ಕನಸಿನ ಕಾರು ಖರೀದಿ ಮಾಡಿದ್ರು ಅದಕ್ಕೂ ನೆಮ್ಮದಿ ಇಲ್ಲ. ಯಾಕೆಂದ್ರೆ ಡೀಲರ್ಸ್‌ಗಳ ಮೋಸದ ವ್ಯಾಪರವು ಕಾರು ಖರೀದಿಸುವುದೇ ತಪ್ಪು ಎನ್ನುವಂತೆ ಮಾಡಿ ಬಿಡುತ್ತೆ. ಇಲ್ಲೂ ಕೂಡಾ ನಡೆದಿದ್ದು ಅದೇ.

ಟಾಟಾ ಡೀಲರ್ಸ್ ಗೋಲ್‌ಮಾಲ್- ಪರಿಹಾರ ನೀಡಲು ಇಷ್ಟು ವರ್ಷ ಆಗಬೇಕಿತ್ತಾ?

ಹೊಸ ಕಾರು ಖರೀದಿಸುವಾಗ ಇನ್ಮುಂದೆ ನೀವು ಹತ್ತು ಬಾರಿ ಯೋಚಿಸಿ ವ್ಯವಹಾರ ಮಾಡುವುದು ಒಳಿತು. ಇಲ್ಲವಾದ್ರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸ ಕಾರು ಖರೀದಿ ಮಾಡಿ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನೆಲ್ಲಾ ಯಾಕೆ ಹೇಳ್ತಾ ಇದೀವಿ ಅಂದ್ರೆ, ಟಾಟಾ ಮೋಟಾರ್ಸ್ ಡೀಲರ್ಸ್ ಒಬ್ಬ ಇಂಡಿಕಾ ಕಾರು ಮಾಲೀಕರನಿಗೆ ಮೋಸ ಮಾಡಿದ ಪರಿ ಎಂತವರಿಗೂ ಕೋಪ ತರಿಸದೆ ಇರಲಾರದು.

ಟಾಟಾ ಡೀಲರ್ಸ್ ಗೋಲ್‌ಮಾಲ್- ಪರಿಹಾರ ನೀಡಲು ಇಷ್ಟು ವರ್ಷ ಆಗಬೇಕಿತ್ತಾ?

ಹೌದು, ಇದು ನಡೆದಿರುವುದು ಮುಂಬೈನಲ್ಲಿ ಆದರೂ ಕಾರು ಖರೀದಿಯ ವೇಳೆ ಗ್ರಾಹಕರು ಎಚ್ಚರ ವಹಿಸದೆ ವ್ಯವಹಾರ ಮಾಡಿದ್ದಲ್ಲಿ ಸಂಕಷ್ಟಕ್ಕೆ ಸಿಲುಕುವುದು ಖಚಿತ ಎನ್ನವುದಕ್ಕೆ ಈ ಪ್ರರಕಣವೇ ಸ್ಪಷ್ಟ ಉದಾಹರಣೆ ಎನ್ನಬಹುದು.

ಟಾಟಾ ಡೀಲರ್ಸ್ ಗೋಲ್‌ಮಾಲ್- ಪರಿಹಾರ ನೀಡಲು ಇಷ್ಟು ವರ್ಷ ಆಗಬೇಕಿತ್ತಾ?

ಅಂದಹಾಗೆ, ಟಾಟಾ ಡೀಲರ್ಸ್‌ನಿಂದ ಮೋಸಕ್ಕೆ ಒಳಗಾಗಿದ್ದ ಇಂಡಿಕಾ ಕಾರು ಮಾಲೀಕರಾದ ಅಭಯ್ ಆರ್ ಭಾಟ್ವಾಡಕರ್ ಎಂಬುವವರು 2001ರಲ್ಲಿ ತಮ್ಮ ಕನಸಿನ ಕಾರನ್ನು ಖರೀದಿ ಮಾಡಿದ್ದರು. ಆದ್ರೆ ದುರಂತ ಅಂದ್ರೆ ಖರೀದಿ ಮಾಡಿದ ದಿನದಿಂದಲೂ ಕಾರಿನ ರಿಪೇರಿಗಾಗಿ ಅವರು ಮಾಡಿದ ಖರ್ಚು ಮಾತ್ರ ಅಷ್ಟಿಷ್ಟಲ್ಲ.

ಟಾಟಾ ಡೀಲರ್ಸ್ ಗೋಲ್‌ಮಾಲ್- ಪರಿಹಾರ ನೀಡಲು ಇಷ್ಟು ವರ್ಷ ಆಗಬೇಕಿತ್ತಾ?

ಫ್ರೀ ಸರ್ವಿಸ್ ವೇಳೆಯೂ ನೆಟ್ಟಗೆ ರಿಪೇರಿ ಮಾಡದೆ ಹಾಗೆಯೇ ಕಳುಹಿಸುತ್ತಿದ್ದ ಟಾಟಾ ಡೀಲರ್ಸ್, ಕಾರಿನಲ್ಲಿರುವ ತೊಂದರೆಗಳನ್ನು ಪರಿಹರಿಸಲು ಬದಲು ಕಾರು ಮಾಲೀಕ ಅಭಯ್ ಅವರೊಂದಿಗೆ ಕಿರಿಕ್ ಮಾಡಿಕೊಂಡಿದ್ದ. ಇದಕ್ಕಾಗಿಯೇ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದ ಅಭಯ್ ಅವರು ತನಗಾದ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು.

ಟಾಟಾ ಡೀಲರ್ಸ್ ಗೋಲ್‌ಮಾಲ್- ಪರಿಹಾರ ನೀಡಲು ಇಷ್ಟು ವರ್ಷ ಆಗಬೇಕಿತ್ತಾ?

ಸತ್ತ ಮೇಲೆ ನ್ಯಾಯ ಸಿಕ್ತು.!

ಇಂಡಿಕಾ ಕಾರು ಮಾಲೀಕರಾದ ಅಭಯ್ ಅವರು ಹೊಸ ಕಾರು ಖರೀದಿ ಮಾಡಿದ ನಂತರ ರಿಪೇರಿಗಾಗಿ ಡೀಲರ್ಸ್ ಬಳಿ ಅಳೆದು ಅಳೆದು ಸಾಕಾಗಿ ಹೋಗಿತ್ತು. ಡೀಲರ್ಸ್ ವಿರುದ್ಧ ಕಾನೂನು ಸಮರ ನಡೆಸುತ್ತಿರುವಾಗಲೇ ಅಭಯ್ ಅಕಾಲಿಕ ನಿಧನ ಹೊಂದಿದ್ದರು.

ಟಾಟಾ ಡೀಲರ್ಸ್ ಗೋಲ್‌ಮಾಲ್- ಪರಿಹಾರ ನೀಡಲು ಇಷ್ಟು ವರ್ಷ ಆಗಬೇಕಿತ್ತಾ?

ತದನಂತರ ಈ ಪ್ರಕರಣವನ್ನು ಇಷ್ಟಕ್ಕೆ ಬಿಡದ ಅಭಯ್ ಅವರ ಪುತ್ರ ತಮ್ಮ ತಂದೆಗೆ ಆದ ಅನ್ಯಾಯವನ್ನು ಸರಿಪಡಿಸುವಂತೆ ಕಾನೂನು ಹೋರಾಟವನ್ನು ಮುಂದುವರಿಸಿದ್ದಲ್ಲದೆ ಟಾಟಾ ಡೀಲರ್ಸ್‌ನಿಂದಾದ ಮೋಸದ ವ್ಯವಹಾರದ ವಿರುದ್ದ ಇದೀಗ ನ್ಯಾಯಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಟಾ ಡೀಲರ್ಸ್ ಮೋಸದ ವ್ಯಾಪಾರ

ಬರೋಬ್ಬರಿ 17 ವರ್ಷಗಳ ಬಳಿಕ ಟಾಟಾ ಡೀಲರ್ಸ್ ವಿರುದ್ದದ ಪ್ರಕರಣವನ್ನು ಇತ್ಯರ್ಥಗೊಳಿಸಿರುವ ರಾಷ್ಟ್ರೀಯ ಗ್ರಾಹಕರ ವಿವಾದಗಳ ಪರಿಹಾರ ಸಂಸ್ಥೆಯು, ಇಂಡಿಕಾ ಕಾರು ಮಾಲೀಕರಿಗೆ ರೂ. 4,58,853 ಪರಿಹಾರ ನೀಡುವಂತೆ ಆದೇಶ ನೀಡಿದೆ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಟಾಟಾ ಡೀಲರ್ಸ್ ಮೋಸದ ವ್ಯಾಪಾರ

ಜೊತೆಗೆ ಇದುವರೆಗೆ ಕಾರು ರಿಪೇರಿಗಾಗಿ ತಗುಲಿರುವ ವೆಚ್ಚ ಸೇರಿದಂತೆ ಕಾನೂನು ಹೋರಾಟಕ್ಕಾಗಿ ಮಾಡಲಾದ ಖರ್ಚುನ್ನು ಸಹ ಮರಳಿಸುವಂತೆ ತಾಕೀತು ಮಾಡಿದ್ದು, ಮುಂಬೈನಲ್ಲಿರುವ ಪ್ರತಿಷ್ಠಿತ ಕಾನ್‌ಕೋರ್ಡ್ ಮೋಟಾರ್ಸ್‌ನಿಂದಲೇ ಈ ಮೋಸದ ವ್ಯವಹಾರ ನಡೆದಿರುವುದು.

ಟಾಟಾ ಡೀಲರ್ಸ್ ಮೋಸದ ವ್ಯಾಪಾರ

ಹೊಸ ಕಾರು ಖರೀದಿ ಮಾಡಿ ವಾರದೊಳಗೆ ಕಾರಿನ ಎಂಜಿನ್ ವಿಭಾಗದಲ್ಲಿ ದೋಷ ಕಂಡುಬಂದಿದ್ದಲ್ಲದೆ ಕಾರಿನ ಎಲೆಕ್ಟ್ರಿಕ್ ವಿಭಾಗದಲ್ಲೂ ಪದೇ ಪದೇ ತೊಂದರೆ ಕಾಣಿಸಿಕೊಳ್ಳುತ್ತಲೇ ಇತ್ತು. ಈ ಬಗ್ಗೆ ಡೀಲರ್ಸ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದಾಗ ಅನಿವಾರ್ಯವಾಗಿ ಕೋರ್ಟ್ ಮೊರೆ ಹೋಗಬೇಕಾಯ್ತು.

ಟಾಟಾ ಡೀಲರ್ಸ್ ಮೋಸದ ವ್ಯಾಪಾರ

ಕೊನೆಗೂ ಡೀಲರ್ಸ್ ವಿರುದ್ಧದ ಹೋರಾಟದಲ್ಲಿ ಗ್ರಾಹಕ ನ್ಯಾಯಾಲಯದಿಂದ ಮಹತ್ವದ ತೀರ್ಪು ಬಂದಿದ್ದು, ನ್ಯಾಯಕ್ಕಾಗಿ ವರ್ಷಾನುಗಟ್ಟಲೇ ಅಲೆದಾಡಿದ್ದ ಅಭಯ್ ಅವರೇ ಇದೀಗ ಇಲ್ಲ ಎನ್ನುವುದೇ ಬೇಸರದ ಸಂಗತಿ.

ಟಾಟಾ ಡೀಲರ್ಸ್ ಮೋಸದ ವ್ಯಾಪಾರ

ಡೀಲರ್ಸ್ ಬಗ್ಗೆ ಎಚ್ಚರ ಇರಲಿ.!

ನಾವು ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಲೇಬೇಕು. ವಾಹನ ಉತ್ಪಾದನಾ ಸಂಸ್ಥೆಗಳಿಗೂ ಡೀಲರ್ಸ್‌ಗಳು ಮಾಡುವ ಮೋಸದ ವ್ಯವಹಾರಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಹೀಗಾಗಿ ನೀವು ಎಷ್ಟೇ ಜನಪ್ರಿಯತೆ ಹೊಂದಿರುವ ವಾಹನಗಳನ್ನು ಖರೀದಿ ಮಾಡವಾಗಲೂ ಎಚ್ಚರವಹಿಸುವುದು ಒಳಿತು.

MOST READ: ಮದುವೆ ಮನೆಯಲ್ಲಿ ಗೆಳೆಯರ ಸ್ಪೆಷಲ್ ಗಿಫ್ಟ್ ನೋಡಿ ನವದಂಪತಿ ಫುಲ್ ಶಾಕ್.!?

ಟಾಟಾ ಡೀಲರ್ಸ್ ಮೋಸದ ವ್ಯಾಪಾರ

ಇನ್ನು ಟಾಟಾ ಸಂಸ್ಥೆಯು ದೇಶದ ಮೂರನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿ ಗ್ರಾಹಕರ ನೆಚ್ಚಿನ ಕಾರ್ ಬ್ರಾಂಡ್ ಆಗಿ ಹೊರಹೊಮ್ಮಿದ್ದು, ದೇಶದ ಜನತೆಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಟಾಟಾ ಬಗೆಗೆ ಕೆಲವು ವಿಚಾರಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು.

ಟಾಟಾ ದೇಶದ ಜನಪ್ರಿಯ ಕಾರ್

1945ರಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರಕ್ ಉತ್ಪಾದನೆ ಮೂಲಕ ಆಟೋ ಮೊಬೈಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ಟಾಟಾ ಸಂಸ್ಥೆಯು ಇಂದಿನ ತನಕ ನೆಕ್ಸಾನ್ ಕಾರು ಉತ್ಪಾದನೆಯ ವರೆಗೆ ಹಲವು ಏಳು ಬೀಳುಗಳನ್ನು ಕಂಡಿದ್ದು, ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಹಿಂದಿನ ಹಲವು ಇಂಟ್ರಸ್ಟಿಂಗ್ ವಿಚಾರಗಳಿವೆ.

ಟಾಟಾ ದೇಶದ ಜನಪ್ರಿಯ ಕಾರ್

ಮೊದಲ ಬಾರಿಗೆ ವಾಣಿಜ್ಯ ವಾಹನಗಳನ್ನು ಉತ್ಪಾದನೆ ಕೈಗೊಂಡಿದ್ದ ಟಾಟಾ ಸಂಸ್ಥೆಯು, ಯಾವುದೇ ರೀತಿಯ ಸ್ವಾಯತ್ತ ಎಂಜಿನ್ ತಂತ್ರಜ್ಞಾನ ಹೊಂದಿರಲಿಲ್ಲ. ಹೀಗಾಗಿ ಜರ್ಮನ್ ಪ್ರತಿಷ್ಠಿತ ಟ್ರಕ್ ಉತ್ಪಾದನಾ ಸಂಸ್ಥೆ ಡೈಮ್ಲರ್-ಬೆಂಝ್ ಜೊತೆ ಟಾಟಾ ಕೈ ಜೋಡಿಸಿತ್ತು.

ಟಾಟಾ ದೇಶದ ಜನಪ್ರಿಯ ಕಾರ್

ಕೇವಲ ಟ್ರಕ್ ಕವಚಗಳನ್ನು ಮಾತ್ರ ನಿರ್ಮಾಣ ಮಾಡುತ್ತಿದ್ದ ಟಾಟಾ ಸಂಸ್ಥೆಯು ಡೈಮ್ಲರ್ ತಂತ್ರಜ್ಞಾನಗಳ ಬಳಕೆಯೊಂದಿಗೆ ಉತೃಷ್ಟ ಗುಣಮಟ್ಟದ ಟ್ರಕ್ ಉತ್ಪನ್ನಗಳೊಂದಿಗೆ ದೇಶದಲ್ಲಿ ಜನಪ್ರಿಯಗೊಳ್ಳತೊಡಗಿತು.

ಟಾಟಾ ದೇಶದ ಜನಪ್ರಿಯ ಕಾರ್

1955ರಲ್ಲಿ ನಡೆದ ಬಾಂಬೆ-ಜಿನೇವಾ ಟ್ರಕ್ ರ‍್ಯಾಲಿಯಲ್ಲಿ ಭಾಗಿಯಾಗುವ ಮೂಲಕ ದೇಶದ ಮನೆ ಮಾತಾದ ಟಾಟಾ, ವಿದೇಶಿ ಟ್ರಕ್ ಮಾದರಿಗಳಿಗಿಂತ ಅತ್ಯುತ್ತಮ ಪ್ರದರ್ಶನ ನೀಡಿದ್ದು ಇಂದಿಗೂ ಇತಿಹಾಸದ ಪುಟಗಳಲ್ಲಿ ಅಚ್ಚ ಅಳಿಯದೇ ಉಳಿದೆ.

ಟಾಟಾ ದೇಶದ ಜನಪ್ರಿಯ ಕಾರ್

60ರ ದಶಕದವರೆಗೂ ದೇಶಿಯವಾಗಿ ಮಾತ್ರ ಉತ್ಪಾದನೆ ಕೈಗೊಳ್ಳುತ್ತಿದ್ದ ಟಾಟಾ ಸಂಸ್ಥೆಯು 1961ರಲ್ಲಿ ಮೊದಲ ಬಾರಿಗೆ ಶ್ರೀಲಂಕಾಗೆ ವಾಣಿಜ್ಯ ವಾಹನಗಳನ್ನು ರಫ್ತು ಮಾಡುವ ಮೂಲಕ ಸಾಗರೋತ್ತರ ವ್ಯವಹಾರಗಳನ್ನು ಆರಂಭಿಸಿತ್ತು.

ಟಾಟಾ ದೇಶದ ಜನಪ್ರಿಯ ಕಾರ್

1969ರಲ್ಲಿ ಡೈಮ್ಲರ್‌ನಿಂದ ಪ್ರತ್ಯೇಕಗೊಂಡ ಟಾಟಾ ಸ್ವತಂತ್ರವಾಗಿ ತನ್ನ ಉತ್ಪನ್ನಗಳ ಮೇಲೆ "T" ಚಿಹ್ನೆಯುಳ್ಳ ಲೋಗೊ ಅಚ್ಚುಹಾಕಲು ಪ್ರಾರಂಭಿಸಿತು. ಇದೇ ಕಾರಣಕ್ಕೆ ಮೊದಮೊದಲು ಟಾಟಾ ಉತ್ಪನ್ನಗಳ ಮೇಲೆ ಬೆಂಝ್ ಚಿಹ್ನೆಯನ್ನೇ ಹಾಕಲಾಗುತ್ತಿತ್ತು.

ಟಾಟಾ ದೇಶದ ಜನಪ್ರಿಯ ಕಾರ್

1986ರಲ್ಲಿ ಬಿಡುಗಡೆಗೊಂಡ ಟಾಟಾ 407 ವಾಹನಗಳು ಹಲವು ದಾಖಲೆಗೆ ಕಾರಣವಾಗಿದಲ್ಲದೇ ಇತಿಹಾದ್ ಮಿಟ್ಸುಬಿಸಿ, ಡಿಸಿಎಂ ಟೊಯೊಟಾ ಮತ್ತು ಸ್ವರಾಜ್ ಮಸ್ದಾ ಟ್ರಕ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡಿತ್ತು.

ಟಾಟಾ ದೇಶದ ಜನಪ್ರಿಯ ಕಾರ್

ಆ ನಂತರ ಬಿಡುಗಡೆಯಾಗಿದ್ದೇ ಟಾಟಾ ಸುಮೋ. ಇದು ಟಾಟಾದ ಮೊದಲ ಯುಟಿಲಿಟಿ ವಾಹನವಾಗಿದ್ದು, ಕಂಪನಿಯ ನಿವೃತ್ತ ಎಂಡಿ ಸುಮಾತ್ ಮುಲೋಂಗನ್ ಅವರ ನೆನಪಿಗಾಗಿ ಸುಮೋ ಹೆಸರಿಡಲಾಯಿತು.

ಟಾಟಾ ದೇಶದ ಜನಪ್ರಿಯ ಕಾರ್

ಕೇವಲ ವಾಣಿಜ್ಯ ವಾಹನಗಳಲ್ಲದೇ ಮಿಲಟರಿ ವಾಹನಗಳ ಉತ್ಪಾದನೆಯಲ್ಲೂ ಜನಪ್ರಿಯತೆ ಸಾಧಿಸಿದ ಟಾಟಾ, ತದನಂತರ ಸುಧಾರಿತ ತಂತ್ರಜ್ಞಾನಗಳೊಂದಿಗೆ ಇಂಡಿಕಾ ಕಾರನ್ನು ಬಿಡುಗಡೆ ಮಾಡಿ ಬಹುದೊಡ್ಡ ಯಶಸ್ಸು ಸಾಧಿಸಿತು.

ಟಾಟಾ ದೇಶದ ಜನಪ್ರಿಯ ಕಾರ್

ಹೀಗೆ ಹಲವು ಬಗೆಯ ವಾಹನಗಳ ಉತ್ಪಾದನೆ ಮಾಡಿ ದೇಶದ ಜನತೆಯೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಟಾಟಾ ಸಂಸ್ಥೆಯು, ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲೂ ತನ್ನ ಜನಪ್ರಿಯತೆ ಉಳಿಸಿಕೊಂಡಿರುವುದು ಅದರ ಯಶಸ್ಸಿಗೆ ಹಿಡಿದ ಕೈಗನ್ನಡಿ ಎಂದ್ರೆ ತಪ್ಪಾಗಲಾರದು.

ಟಾಟಾ ಮೊಟಾರ್ಸ್ ತಮ್ಮ ಜನಪ್ರಿಯ ಟಿಯಾಗೊ ಕಾರು ಬಿಡುಗಡೆಗೊಂಡ ಒಂದು ವರ್ಷದ ಸಂಭ್ರಮಕ್ಕಾಗಿ ಟಿಯಾಗೊ ಕಾರಿನ ಎನ್‍ಆರ್‍‍‍ಜಿ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದು,ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

Most Read Articles

Kannada
Read more on auto news
English summary
Tata Motors Pays Rs 4.6 Lakh As Compensation To Indica Owner On Account Of Faulty Service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more