ಮುಂದಿನ 5 ವರ್ಷಗಳಲ್ಲಿ 15 ಹೊಸ ಕಾರುಗಳನ್ನ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ಈ ಹಿಂದಿಗಿಂತಲೂ ಅತಿ ವಿನೂತನ ಪ್ರಯಾಣಿಕ ಕಾರುಗಳನ್ನು ಪರಿಚಯಿಸುವ ಯೋಜನೆಯಲ್ಲಿದೆ.

By Praveen Sannamani

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ಈ ಹಿಂದಿಗಿಂತಲೂ ಅತಿ ವಿನೂತನ ಪ್ರಯಾಣಿಕ ಕಾರುಗಳನ್ನು ಪರಿಚಯಿಸುತ್ತಿದ್ದು, ಎಲ್ಲಾ ವರ್ಗದ ಗ್ರಾಹಕರನ್ನು ಕೂಡಾ ತನ್ನತ್ತ ಆಕರ್ಷಣೆ ಮಾಡುತ್ತಿದೆ. ಇದೇ ವೇಳೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮುಂದಿನ 5 ವರ್ಷಗಳಲ್ಲಿ ಹೊಸ ಉತ್ಪನ್ನಗಳನ್ನು ಪರಿಚಯಿಸಲಿರುವ ಟಾಟಾ ಸಂಸ್ಥೆಯು ಗೇಮ್‌ಚೇಂಜರ್ ಕಾರುಗಳನ್ನು ಅಭಿವೃದ್ಧಿಗೊಳಿಸುವ ಸುಳಿವು ನೀಡಿದೆ.

ಮುಂದಿನ 5 ವರ್ಷಗಳಲ್ಲಿ 15 ಹೊಸ ಕಾರುಗಳನ್ನ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಪಿಟಿಐ ಜೊತೆ ಸಂದರ್ಶನವೊಂದರಲ್ಲಿ ಹೊಸ ಕಾರುಗಳ ಬಿಡುಗಡೆ ಕುರಿತಂತೆ ಮಾತನಾಡಿರುವ ಟಾಟಾ ಮೋಟಾರ್ಸ್ ಹಿರಿಯ ಅಧಿಕಾರಿಯೊಬ್ಬರು ಆಟೋ ಉದ್ಯಮದಲ್ಲಿ ತ್ರೀವ ಬೆಳವಣಿಗೆ ಕಾಣುತ್ತಿರುವ ಭಾರತದಲ್ಲಿ ಮುಂದಿನ 5 ವರ್ಷಗಳಲ್ಲಿ 15 ವಿನೂತನ ಮಾದರಿಯ ಕಾರುಗಳು ರಸ್ತೆಗಿಳಿಯಲಿವೆ ಎಂದಿದ್ದಾರೆ. ಹೀಗಾಗಿ ಪ್ಯಾಸೆಂಜರ್ ವಿಭಾಗದಲ್ಲಿ ಬಹುದೊಡ್ಡ ಬದಲಾವಣೆಗಾಗಿ ಯೋಜನೆ ರೂಪಿಸಿರುವ ಟಾಟಾ ಸಂಸ್ಥೆಯು ಸಾಮಾನ್ಯ ಕಾರುಗಳ ಜೊತೆಗೆ ಕೆಲವು ಐಷಾರಾಮಿ ಕಾರುಗಳನ್ನು ಅಭಿವೃದ್ಧಿ ಮಾಡಲಿದೆ ಎನ್ನಬಹುದು.

ಮುಂದಿನ 5 ವರ್ಷಗಳಲ್ಲಿ 15 ಹೊಸ ಕಾರುಗಳನ್ನ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಟಾಟಾ ಸಂಸ್ಥೆಯು ಸದ್ಯ ಹ್ಯಾರಿಯರ್ ಎಸ್‌ಯುವಿ ಮತ್ತು 45ಎಕ್ಸ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಪರಿಚಯಿಸಲು ಸಜ್ಜಾಗುತ್ತಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ 12 ರಿಂದ 13 ಹೊಸ ಕಾರುಗಳ ಅಭಿವೃದ್ಧಿ ಬಗ್ಗೆ ಮಾರುಕಟ್ಟೆ ಅಧ್ಯಯನ ನಡೆಸಿದೆ.

ಮುಂದಿನ 5 ವರ್ಷಗಳಲ್ಲಿ 15 ಹೊಸ ಕಾರುಗಳನ್ನ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಟಾಟಾ ಸಂಸ್ಥೆಯು ಹೊಸ ಉತ್ಪನ್ನಗಳ ಅಭಿವೃದ್ಧಿಯಾಗಿ ಜೆಎಲ್ಆರ್ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಅಲ್ಫಾ ಮತ್ತು ಒಮೇಗಾ ಎನ್ನುವ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಾರುಗಳನ್ನು ಸಿದ್ದಗೊಳಿಸಿದೆ.

ಮುಂದಿನ 5 ವರ್ಷಗಳಲ್ಲಿ 15 ಹೊಸ ಕಾರುಗಳನ್ನ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಜೆಎಲ್ಆರ್ ಸಂಸ್ಥೆಯು ಸದ್ಯ ತನ್ನ ಐಷಾರಾಮಿ ಕಾರು ಮಾದರಿಯಾದ ಲ್ಯಾಂಡ್ ರೋವರ್, ರೇಂಜ್ ರೋವರ್ ಮತ್ತು ಜಾಗ್ವಾರ್ ಕಾರುಗಳನ್ನು ಒಮೇಗಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ಧಿ ಮಾಡುತ್ತಿದ್ದು, ಇದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಟಾಟಾ ಕಾರುಗಳು ಸಹ ಹೊಸ ವಿನ್ಯಾಸಗಳೊಂದಿಗೆ ಅಭಿವೃದ್ಧಿಯಾಗಲಿವೆ.

ಮುಂದಿನ 5 ವರ್ಷಗಳಲ್ಲಿ 15 ಹೊಸ ಕಾರುಗಳನ್ನ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಭಾರತದಲ್ಲಿ ಸದ್ಯ ಪ್ಯಾಸೆಂಜರ್ ಕಾರು ವಿಭಾಗದಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಸಂಸ್ಥೆಗಳು ಶೇ.75ರಷ್ಟು ಕಾರು ಮಾರಾಟ ಪಾಲನ್ನು ತಮ್ಮದಾಗಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಟಾಟಾ ಹೊಸ ಕಾರುಗಳು ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಮುಂದಿನ 5 ವರ್ಷಗಳಲ್ಲಿ 15 ಹೊಸ ಕಾರುಗಳನ್ನ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಇದಕ್ಕಾಗಿಯೇ ಜೆಎಲ್ಆರ್ ಸಂಸ್ಥೆಯು ಟಾಟಾ ಸಂಸ್ಥೆಗೆ ತಂತ್ರಜ್ಞಾನ ಅಭಿವೃದ್ದಿ ಜೊತೆ ಡಿಸೈನ್ ವಿಭಾಗದಲ್ಲಿ ಸಹಾಯ ಮಾಡುವ ಹೊಸ ಒಪ್ಪಂದ ಸಹಿ ಹಾಕಿದ್ದು, ಇದರಿಂದ ಜೆಎಲ್ಆರ್ ಸಂಸ್ಥೆಯು ಟಾಟಾ ಹೊಸ ಕಾರುಗಳ ಅಭಿವೃದ್ಧಿ ಪ್ರಮುಖ ಪಾತ್ರ ವಹಿಸಲಿದೆ ಎನ್ನಬಹುದು.

ಮುಂದಿನ 5 ವರ್ಷಗಳಲ್ಲಿ 15 ಹೊಸ ಕಾರುಗಳನ್ನ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ವಿಶೇಷ ಅಂದ್ರೆ ಇದೀಗ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿರುವ ಟಾಟಾ ಹೊಸ ಕಾರುಗಳನ್ನು ಗಮನಿಸಿದ್ದಲ್ಲಿ ಈ ಹಿಂದಿಗಿಂತಲೂ ಹೆಚ್ಚಿನ ಬದಲಾವಣೆ ಪಡೆದುಕೊಂಡಿದ್ದು, ಇದು ಜೆಎಲ್ಆರ್ ಸಂಸ್ಥೆಯ ಹೊಸ ಪ್ರಯೋಗ ಅಂದ್ರೆ ತಪ್ಪಾಗುದಿಲ್ಲ.

ಮುಂದಿನ 5 ವರ್ಷಗಳಲ್ಲಿ 15 ಹೊಸ ಕಾರುಗಳನ್ನ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಇದರಿಂದ ಮುಂದಿನ 5 ವರ್ಷಗಳ ಅವಧಿಯಲ್ಲಿ ಶೇ.70ರಷ್ಟು ಕಾರು ಮಾರಾಟ ಪಾಲನ್ನ ತನ್ನದಾಗಿಸಿಕೊಳ್ಳುವ ಯೋಜನೆಯಲ್ಲಿರುವ ಟಾಟಾ ಸಂಸ್ಥೆಯು ಕಾರುಗಳ ವಿನ್ಯಾಸ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸಾಕಷ್ಟು ಬದಲಾಣೆ ತರುತ್ತಿರುವುದು ಕಾರು ಆಯ್ಕೆಯ ಮೌಲ್ಯವನ್ನ ಹೆಚ್ಚಿಸಲಿದೆ.

ಮುಂದಿನ 5 ವರ್ಷಗಳಲ್ಲಿ 15 ಹೊಸ ಕಾರುಗಳನ್ನ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಇದಲ್ಲದೇ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಕೂಡಾ ಭಾರತದಲ್ಲಿ ಹೆಚ್ಚುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಸಂಸ್ಥೆಯು ಸಹ ಪ್ರತಿ ಚಾರ್ಜ್‌ಗೆ ಗರಿಷ್ಠ 300 ಕಿ.ಮಿ ಮೈಲೇಜ್ ನೀಡಬಲ್ಲ ಸೆಡಾನ್ ಮಾದರಿಯೊಂದನ್ನು ಕೂಡಾ ಸಿದ್ದಪಡಿಸಿದೆ. ಕಳೆದ ಮಾರ್ಚ್ ಅವಧಿಯಲ್ಲಿ ನಡೆದಿದ್ದ ಜಿನೇವಾ ಆಟೋ ಎಕ್ಸ್‌ಪೋದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನ ಪ್ರದರ್ಶನ ಮಾಡುವ ಮೂಲಕ ಜಗತ್ತಿನ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳನ್ನೇ ನಿಬ್ಬೆರಗಾಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ಮುಂದಿನ 5 ವರ್ಷಗಳಲ್ಲಿ 15 ಹೊಸ ಕಾರುಗಳನ್ನ ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಬರಲಿರುವ ಟಾಟಾ ಕಾರುಗಳು ಗುಣಮಟ್ಟ ಮತ್ತು ವಿನ್ಯಾಸದಲ್ಲಿ ಇತರೆ ಕಾರು ಮಾದರಿಗಳಿಂತಲೂ ಭಿನ್ನತೆ ಹೊಂದಿರಲಿದ್ದು, ಇದೀಗ ಜನಪ್ರಿಯತೆಯಲ್ಲಿರುವ ಅಗ್ಗದ ಕಾರುಗಳನ್ನ ಹಿಂದಿಕ್ಕಿ ಹೊಸ ದಾಖಲೆ ಮಾಡುವ ತವಕದಲ್ಲಿವೆ.

More from DriveSpark

Article Published On: Wednesday, August 8, 2018, 13:18 [IST]
English summary
Tata Motors plans to roll out 10-12 new passenger vehicles in next 5 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+