ಟಾಟಾ ನೆಕ್ಸಾನ್ ಎಎಮ್‍ಟಿ ಕಾರು ಖರೀದಿಗಾಗಿ ಬುಕ್ಕಿಂಗ್ ಶುರು..

ಕಳೆದ ಸಪ್ಟೆಂಬರ್‌ನಲ್ಲಿ ದೇಶಿಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಟಾಟಾ ನೆಕ್ಸಾನ್ ಕಾರು ಆವೃತ್ತಿಗಳು ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ ಮಾತ್ರ ಮಾರಾಟಕ್ಕೆ ಲಭ್ಯವಾಗಿದ್ದವು.

By Rahul Ts

ಕಳೆದ ಸಪ್ಟೆಂಬರ್‌ನಲ್ಲಿ ದೇಶಿಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಟಾಟಾ ನೆಕ್ಸಾನ್ ಕಾರು ಆವೃತ್ತಿಗಳು ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ ಮಾತ್ರ ಮಾರಾಟಕ್ಕೆ ಲಭ್ಯವಾಗಿದ್ದವು. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯನ್ನು ಕೂಡಾ ಪರಿಚಯಿಸಲಾಗುತ್ತಿದೆ.

ಟಾಟಾ ನೆಕ್ಸಾನ್ ಎಎಮ್‍ಟಿ ಕಾರು ಖರೀದಿಗಾಗಿ ಬುಕ್ಕಿಂಗ್ ಶುರು..

ಟಾಟಾ ನೆಕ್ಸಾನ್ ಎಎಂಟಿ ಕಾರು ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಅನಾವರಣಗೊಳಿಸಲಾಗಿತ್ತು. ಇರೀಗ ಕಾರುಗಳು ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದೆ ಎನ್ನಲಾಗಿದ್ದು, ಖರೀದಿಗೆ ಬುಕ್ಕಿಂಗ್ ಅನ್ನು ಶುರುಮಾಡಿವೆ.

ಟಾಟಾ ನೆಕ್ಸಾನ್ ಎಎಮ್‍ಟಿ ಕಾರು ಖರೀದಿಗಾಗಿ ಬುಕ್ಕಿಂಗ್ ಶುರು..

ಟಾಟಾ ನೆಕ್ಸಾನ್ ಕಾರು 2017ರಲ್ಲಿ ಬಿದುಗಡೆಗೊಂಡಿದ್ದು, ಬಹುಬೇಗ ಮಾರಾಟಗೊಂಡ ಎಸ್‍‍ಯುವಿ ಕಾರಾಗಿ ಕರೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಬೇಡಿಕೆಯಂತೆ ನೆಕ್ಸಾನ್ ಕಾರಿನ ಎಎಮ್‍‍ತಿ ಆವೃತ್ತಿಗಳನ್ನು ಪರಿಚಯಿಸುತ್ತಿದ್ದೇವೆ. ಇದಲ್ಲದೆ ಭವಿಷ್ಯದ ದಿನಗಳಲ್ಲಿ ಇನ್ನು ಹಲಾವರು ವಾಹನಗಳನ್ನು ಪರಿಚಯಿಸಲಿದ್ದೇವೆ. ಎಂದು ಟಾಟಾ ಸಂಸ್ಥೆಯ ಪ್ರಯಾಣಿಕ ವಾಹನ ಉದ್ಯಮ ಘಟಕದ ಅಧ್ಯಕ್ಷರಾದ ಮನ್ಯಾಕ್ ಪರೀಕ್ ಅವರು ಹೇಳಿಕೊಂಡಿದ್ದಾರೆ.

ಟಾಟಾ ನೆಕ್ಸಾನ್ ಎಎಮ್‍ಟಿ ಕಾರು ಖರೀದಿಗಾಗಿ ಬುಕ್ಕಿಂಗ್ ಶುರು..

ಫೋರ್ಡ್ ಇಕೋ ಸ್ಪೋರ್ಟ್ ಎಎಂಟಿ, ಮಹೀಂದ್ರಾ ಟಿಯುವಿ300 ಎಎಂಟಿ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೆಕ್ಸಾನ್ ಎಎಂಟಿ ಮಾದರಿಯನ್ನು ಅಭಿವೃದ್ಧಿ ಮಾಡಲಾಗಿದೆ.

ಟಾಟಾ ನೆಕ್ಸಾನ್ ಎಎಮ್‍ಟಿ ಕಾರು ಖರೀದಿಗಾಗಿ ಬುಕ್ಕಿಂಗ್ ಶುರು..

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಟಾ ನೆಕ್ಸಾನ್ ಆವೃತ್ತಿಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಗ್ರಾಹಕರ ಬೇಡಿಕೆ ಹಿನ್ನೆಲೆ ಇದೀಗ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಒದಗಿಸಲು ಮುಂದಾಗಿದೆ.

ಟಾಟಾ ನೆಕ್ಸಾನ್ ಎಎಮ್‍ಟಿ ಕಾರು ಖರೀದಿಗಾಗಿ ಬುಕ್ಕಿಂಗ್ ಶುರು..

ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳಿಗೆ ಈಗಾಗಲೇ ಸಾವಿರಾರು ಗ್ರಾಹಕರು ಬೇಡಿಕೆಯಿಟ್ಟಿದ್ದು, ಈ ಹಿನ್ನೆಲೆ ಮಹತ್ವದ ಯೋಜನೆ ರೂಪಿಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಮಾರ್ಚ್ ಮೊದಲ ವಾರದಲ್ಲಿ ಆಟೋಮ್ಯಾಟಿಕ್ ಗೇರ್‍‌ಬಾಕ್ಸ್ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಟಾಟಾ ನೆಕ್ಸಾನ್ ಎಎಮ್‍ಟಿ ಕಾರು ಖರೀದಿಗಾಗಿ ಬುಕ್ಕಿಂಗ್ ಶುರು..

ಇನ್ನು ವಿಶಿಷ್ಟ ವಿನ್ಯಾಸಗಳೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಆವೃತ್ತಿಯು ಇಂಪ್ಯಾಕ್ಟ್ 2.0 ಡಿಸೈನ್‌ನೊಂದಿಗೆ ಅಭಿವೃದ್ಧಿಗೊಂಡಿದ್ದು, ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಬೃಹತ್ತಾದ ಸೆಂಟ್ರಲ್ ಕನ್ಸಾಲ್ ಪಡೆದುಕೊಂಡಿರುವುದು ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಟಾಟಾ ನೆಕ್ಸಾನ್ ಎಎಮ್‍ಟಿ ಕಾರು ಖರೀದಿಗಾಗಿ ಬುಕ್ಕಿಂಗ್ ಶುರು..

ಎಂಜಿನ್ ಸಾಮರ್ಥ್ಯ

ನೂತನ ಟಾಟಾ ನೆಕ್ಸಾನ್ ಆವೃತ್ತಿಯು 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ರೆವೊಟ್ರಾನ್ ಮತ್ತು 1.5 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಳವಡಿಸಲಾಗಿದ್ದು, ಹೊಸತಾದ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಪರಿಚಯಿಸಲಾಗಿದೆ.

ಟಾಟಾ ನೆಕ್ಸಾನ್ ಎಎಮ್‍ಟಿ ಕಾರು ಖರೀದಿಗಾಗಿ ಬುಕ್ಕಿಂಗ್ ಶುರು..

ಗ್ರಾಹಕರು ಟಾಟಾ ನೆಕ್ಸಾನ್ ಎಎಂಟಿ ಕಾರುಗಳನ್ನು ಖರೀದಿಸಲು ನಿಮ್ಮ ಹತ್ತಿರದ ಟಾಟಾ ಡೀಲರ್‍‍ಗಳ ಹತ್ತಿರ ರೂ 11,000 ಸಾವಿರದ ಮೊತ್ತವನ್ನು ನೀಡಬೇಕಾಗಿದ್ದು, ಇನ್ನು ಕಾರಿನ ಬೆಲೆಯು ರೂ 7 ರಿಂದ 9 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on tata motors suv
English summary
Tata Nexon AMT Bookings Open.
Story first published: Monday, April 23, 2018, 17:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X