ಮಾರಾಟದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟ ಮೋಟಾರ್ಸ್ 2017ರ ಸೆಪ್ಟೆಂಬರ್‍‍ನಲ್ಲಿ ತಮ್ಮ ನೆಕ್ಸಾನ್ ಕಾರನ್ನು ಬಿಡುಗಡೆಗೊಳಿಸಿದ್ದು, ಬಿಡುಗದೆಗೊಂಡ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿನ ಗ್ರಾಹಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟ ಮೋಟಾರ್ಸ್ 2017ರ ಸೆಪ್ಟೆಂಬರ್‍‍ನಲ್ಲಿ ತಮ್ಮ ನೆಕ್ಸಾನ್ ಕಾರನ್ನು ಬಿಡುಗಡೆಗೊಳಿಸಿದ್ದು, ಬಿಡುಗದೆಗೊಂಡ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿನ ಗ್ರಾಹಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಟಾಟಾ ನೆಕ್ಸಾನ್ ಕಾರು ಪ್ರತೀ ತಿಂಗಳು 4,500 ಯೂನಿಟ್ ಮಾರಾಟಗೊಂಳ್ಳುತ್ತಿದ್ದು, ಸಂಸ್ಥೆಯ ಬೆಸ್ಟ್ ಸೆಲ್ಲಿಂಗ್ ಎಸ್‍‍ಯುವಿ ಕಾರು ಎಂಬ ಸ್ಥಾನವನ್ನು ಪಡೆದಿದೆ.

ಮಾರಾಟದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್..

2018-19ರ ಮೊದಲನೆಯ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 13,173 ಯೂನಿಟ್ ಕಾರುಗಳನ್ನು ಮಾರಾಟಮಾದಿದ್ದು, ಎಪ್ರಿಲ್‍‍ನಲ್ಲಿ 4128, ಮೇ ತಿಂಗಳಿನಲ್ಲಿ 4717, ಜೂನ್ ತಿಂಗಳಿನಲ್ಲಿ 4308 ಯೂನಿಟ್ ಕಾರುಗಳು ಮಾರಾಟಗೊಂಡಿದೆ.

ಮಾರಾಟದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್..

ಮತ್ತೊಂದು ಕಡೆ ಟಾಟಾ ನೆಕ್ಸಾನ್ ಕಾರಿನ ಎದುರಾಳಿಯಾದ ಫೋರ್ಡ್ ಇಕೊಸ್ಪೋರ್ಟ್ 13,138 ಯೂನಿಟ್ ಕಾರುಗಳನ್ನು ಮಾರಾಟಮಾಡಿವೆ. 2018ರ ಏಪ್ರಿಲ್‍‍ನಲ್ಲಿ 4128 ಯೂನಿಟ್, ಮೇ ನಲ್ಲಿ 5003 ಯೂನಿಟ್, ಜೂನ್ ತಿಂಗಳಿನಲ್ಲಿ 4007 ಯೂನಿಟ್ ಕಾರುಗಳನ್ನು ಮಾರಾಟಮಾಡಿದೆ. ಅಂದರೆ ಫೋರ್ಡ್ ಸಿಕೊಸ್ಪೋರ್ಟ್ ಟಾಟಾ ನೆಕ್ಸಾನ್ ಕಾರಿಗಿಂತ ಕೇವಲ 38 ಯೂನಿಟ್ ಕಾರು ಕಡಿಮೆ ಮಾರಾಟಗೊಂಡಿದೆ.

ಮಾರಾಟದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್..

ಟಾಟಾ ನೆಕ್ಸಾನ್ ಕಾರುಗಳಲ್ಲಿ ಕ್ರೋಮ್ ಗಾರ್ನಿಶ್ಡ್ ಒಆರ್‍‍ವಿಎಂಎಸ್, ಬಂಪರ್, ಫ್ರಂಟ್ ಗ್ರಿಲ್ ಮತ್ತು ಬಾಗಿಲಿಗಳಂತಹ ಉಪಕರಣಗಳನ್ನು ಕೂಡ ಸೇರಿಸಲಾಗಿದ್ದು ಇದೀಗ ಸಂಸ್ಥೆಯು ಹೊಸದಾಗಿ ಈ ಕಾರುಗಳಿಗೆ ಮ್ಯಾನುವನ್ ಸನ್‍‍ರೂಫ್ ಅನ್ನು ಬಳಸಿಕೊಳ್ಳುವ ಆಫರ್ ನೀಡಿದೆ.

ಮಾರಾಟದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್..

ಟಾಟ ಮೋಟರ್ಸ್ ಮೊನ್ನೆಯಷ್ಟೆ ತಮ್ಮ ನೆಕ್ಸಾನ್ ಕಾರಿನ ಎಎಮ್‍‍ಟಿ ಕಾರಿನ ಮಾದರಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ನೆಕ್ಸಾನ್ ಪೆಟ್ರೋಲ್ ಮಾದರಿಯ ಕಾರುಗಳ ಬೆಲೆಯು ರೂ 9.41 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಇನ್ನು ಡೀಸೆಲ್ ಮಾದರುಯ ಕಾರುಗಳ ಬೆಲೆಯು ರೂ 10.3 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಮಾರಾಟದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್..

ನೆಕ್ಸಾನ್ ಎಎಮ್‍ಟಿ ಪೆಟ್ರೋಲ್ ಮಾದರಿಯ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 108 ಬಿಹೆಚ್‍ಪಿ ಮತ್ತು 170ಎನ್ಎಂ ಟಾರ್ಕ್ ಅನ್ನು ಉಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರಾಟದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್..

ಇನ್ನು ನೆಕ್ಸಾನ್ ಎಎಮ್‍ಟಿ ಡೀಸೆಲ್ ಮಾದರಿಯ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 108ಬಿಹೆಚ್‍ಪಿ ಮತ್ತು 260ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದನ್ನು ಕೂಡ 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರಾಟದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್..

ಫೋರ್ಡ್ ಇಕೋ ಸ್ಪೋರ್ಟ್ ಎಎಂಟಿ, ಮಹೀಂದ್ರಾ ಟಿಯುವಿ300 ಎಎಂಟಿ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೆಕ್ಸಾನ್ ಎಎಂಟಿ ಮಾದರಿಯನ್ನು ಅಭಿವೃದ್ಧಿ ಮಾಡಲಾಗಿದೆ.

More from DriveSpark

Article Published On: Friday, July 6, 2018, 10:19 [IST]
English summary
Tata Nexon beats Ford EcoSport SUV in Q1 sales of current FY.
Read more on tata motors sales ford suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+