ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಕಾರು..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಈಗಾಗಲೇ ತಮ್ಮ ವಿವಿಧ ಕಾರು ಮಾದರಿಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡುತಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಈಗಾಗಲೇ ತಮ್ಮ ವಿವಿಧ ಕಾರು ಮಾದರಿಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡುತಿದ್ದು, ಇದೀಗ ಟಾಟಾ ಸಂಸ್ಥೆಯ ಡೀಲರ್‍‍ಗಳು ನೆಕ್ಸಾನ್ ಕಾರಿನ ಐಪಿಎಲ್ ಏಡಿಷನ್ ಕಾರುಗಳನ್ನು ತಮ್ಮ ಶೋರಂಗಳಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.

ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಕಾರು..

ಮೊನ್ನೆಯಷ್ಟೆ ಮುಂಬೈ ಇಂಡಿಯನ್ಸ್ ಎಡಿಶನ್ ಕಾರುಗಳು ಕಾಣಿಸಿಕೊಂಡಿದ್ದು, ಇದೀಗ ಚೆನ್ನೈ ಸೂಪರ್‍ ಕಿಂಗ್ಸ್ ಆವೃತ್ತಿಯ ಕಾರುಗಳು ಕಾಣಿಸಿಕೊಂಡಿದೆ. ಹೌದು, ಈ ಬಾರಿ ಐಪಿಎಲ್‌ನ ಅಧಿಕೃತ ಪಾಲುದಾರ ಕಾರ್ ಬ್ರಾಂಡ್ ಆಗಿ ಟಾಟಾ ಮೋಟಾರ್ಸ್ ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದು, ಐಪಿಎಲ್ ಪಂದ್ಯಗಳಲ್ಲಿ ಭಾಗಿಯಾಗುವ ಅಭಿಮಾನಿಗಳಿಗೆ ವಿನೂತನ ಆಫರ್ ಒಂದನ್ನು ನೀಡುತ್ತಿದೆ.

ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಕಾರು..

ಅಭಿಮಾನಿಗಳಿಗಾಗಿ ಟಾಟಾ ಸಂಸ್ಥೆಯು ನೆಕ್ಸಾನ್ ಫ್ಯಾನ್ ಕ್ಯಾಚ್ ಸ್ಪರ್ಧೆಯನ್ನು ಆಯೋಜಿಸಿದ್ದು, ಒಂದು ಬಾರಿ ಕ್ಯಾಚ್ ಹಿಡಿದಲ್ಲಿ 1 ಲಕ್ಷ ಬಹುಮಾನ ಮತ್ತು ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಅಭಿಮಾನಿಗಳಿಗೆ ನೆಕ್ಸಾನ್ ಕಾರು ಅನ್ನು ಗಿಫ್ಟ್ ಆಗಿ ನೀಡಲಿದೆ.

ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಕಾರು..

ಹೀಗಾಗಿ ಸೂಪರ್ ಸ್ಟ್ರೈಕರ್‌ನಲ್ಲಿ ಕ್ಯಾಚ್ ಹಿಡಿಯುವ ಅಭಿಮಾನಿಗಳು ನೆಕ್ಸಾನ್ ಎಸ್‌ಯುವಿ ಕಾರ್ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದ್ದು, ಪಂದ್ಯದ ಅವಧಿಯಲ್ಲಿ ಕ್ಯಾಚ್ ಹಿಡಿಯುವ ಎಲ್ಲಾ ಅಭಿಮಾನಿಗಳು ಲಕ್ಕಿ ವಿನ್ನರ್ಸ್ ಆಗಲಿದ್ದಾರೆ.

ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಕಾರು..

ಇದಲ್ಲದೇ ನೆಕ್ಸಾನ್ ಕಾರಿನ ಐಪಿಎಲ್ ಕಾರುಗಳು ಟಾಪ್ ಎಂಡ್ ಎಕ್ಸ್ ಜೆಡ್ ವೇರಿಯಂಟ್‍‍ಗಳಾಗಿದ್ದು, ಮುಂಬೈನಲ್ಲಿ ಹಲವಾರು ಡೀಲರ್‍‍ಗಳ ಹತ್ತಿರ ಕಾಡಿಸಿಕೊಂಡಿದೆ. ವರದಿಗಳ ಪ್ರಕಾರ ಐಪಿಎಲ್‍‍ನಲ್ಲಿನ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರೇರೇಪಿಸಲು ತಯಾರಿಸಲಾಗಿದ್ದು, ಈ ಲಿಮಿಟೆಡ್ ಎಡಿಷನ್ ಕಾರುಗಳು ಹೊಸ ಡೆಕಲ್ಸ್, ವ್ರ್ಯಾಪ್ಸ್ ಮತ್ತು ಗ್ರಾಫಿಕ್ಸ್ ಅನ್ನು ಪಡೆದುಕೊಂಡಿರಲಿದೆ.

ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಕಾರು..

ಟಾಟಾ ನೆಕ್ಸಾನ್ ಸಿಎಸ್‍ಕೆ ಕಾರಿನ ಲಿಮಿಟೆಡ್ ಆವೃತ್ತಿಯ ಕಾರುಗಳು ಹಳದಿ ಬಣ್ಣದ ಗೆರೆಯನ್ನು ವೀಲ್ ಆರ್ಚೆಸ್, ಸೈಡ್ ಸ್ಕರ್ಟ್ಸ್, ರೂಫ್‍ಲೈನ್, ವಿಂಡ್‍‍ಶೀಲ್ಡ್ ಮತ್ತು ರೀಯರ್ ಬಂಪರ್‍‍ಗಳಲ್ಲಿ ಅಳವಡಿಸಲಾಗಿದ್ದು, ಒಆರ್‍‍ವಿಎಂ‍‍ಗಳಲಿಯು ಹಳದಿ ಬಣ್ಣದಿಂದ ಸಜ್ಜುಗೊಂಡಿದೆ. ಅದಲ್ಲದೆ ವಿಶೇಷವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೋಗೊವನ್ನು ಕೂಡ ಮುಂಭಾಗದಲಿನ ಫೆಂಡರ್‍‍ಗಳಲ್ಲಿ ಅಳಬಡಿಸಲಾಗಿದೆ.

ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಕಾರು..

ಮುಂಬೈ ಇಂಡಿಯನ್ಸ್ ಮಾದರಿಯ ನೆಕ್ಸಾನ್ ಕಾರುಗಳಿಗೆ ಹೋಲಿಸಿದರೆ, ಸಿಎಸ್‍ಕಿ ಮಾದರಿಯ ನೆಕ್ಸಾನ್ ಕಾರುಗಳ ವಿನ್ಯಾಸದಲ್ಲಿ ಸೂಕ್ಷ್ಮವಾದ ಬದಲಾವಣೇಗಳನ್ನು ಕಾಣಬಹುದಾಗಿದ್ದು, ಮುಂಭಾಗದ ಬಂಪರ್, ಗ್ರಿಲ್ ಮತ್ತು ಹೆಡ್‍‍ಲ್ಯಾಂಪ್‍‍ನ ಭಾಗಗಳು ಬಿಳಿ ಬಣ್ಣದಿಂದ ಸಜ್ಜುಗೊಂಡಿದೆ.

ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಕಾರು..

ಟಾಟಾ ಮೋಟಾರ್ಸ್ ಇತ್ತೀಚೆಗೆ ನೆಕ್ಸಾನ್ ಕಾರಿನ ಎಕ್ಸ್ ಜೆಡ್ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, 1.2-ಲೀಟರ್ ರೆವಟ್ರಾನ್ ಎಂಜಿನ್ ಮತ್ತು 1.5-ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿವೆ.

ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಕಾರು..

ಪೆಟ್ರೋಲ್ ಮಾದರಿಗಳು 108ಬಿಹೆಚ್‍ಪಿ ಮತ್ತು 170ಎನ್ಎಂ ಟಾರ್ಕ್ ಮತ್ತು 260ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Article Published On: Saturday, April 28, 2018, 10:31 [IST]
English summary
Tata Nexon IPL Edition With Chennai Super Kings Theme Spotted.
Read more on tata motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+