ಹೊಸ ಅವತಾರದಲ್ಲಿ ಮಿಂಚಲಿದೆ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಈಗಾಗಲೇ ತಮ್ಮ ವಿವಿಧ ಕಾರು ಮಾದರಿಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡುತಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಈಗಾಗಲೇ ತಮ್ಮ ವಿವಿಧ ಕಾರು ಮಾದರಿಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡುತಿದ್ದು, ಇದೀಗ ಮುಂಬೈ‍‍ನಲ್ಲಿ ಟಾಟಾ ಸಂಸ್ಥೆಯ ಡೀಲರ್‍‍ಗಳು ನೆಕ್ಸಾನ್ ಕಾರಿನ ಐಪಿಎಲ್ ಏಡಿಷನ್ ಕಾರುಗಳನ್ನು ತಮ್ಮ ಶೋರಂಗಳಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.

ಹೊಸ ಅವತಾರದಲ್ಲಿ ಮಿಂಚಲಿದೆ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಹೌದು, ಈ ಬಾರಿ ಐಪಿಎಲ್‌ನ ಅಧಿಕೃತ ಪಾಲುದಾರ ಕಾರ್ ಬ್ರಾಂಡ್ ಆಗಿ ಟಾಟಾ ಮೋಟಾರ್ಸ್ ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದು, ಐಪಿಎಲ್ ಪಂದ್ಯಗಳಲ್ಲಿ ಭಾಗಿಯಾಗುವ ಅಭಿಮಾನಿಗಳಿಗೆ ವಿನೂತನ ಆಫರ್ ಒಂದನ್ನು ನೀಡುತ್ತಿದೆ.

ಹೊಸ ಅವತಾರದಲ್ಲಿ ಮಿಂಚಲಿದೆ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಅಭಿಮಾನಿಗಳಿಗಾಗಿ ಟಾಟಾ ಸಂಸ್ಥೆಯು ನೆಕ್ಸಾನ್ ಫ್ಯಾನ್ ಕ್ಯಾಚ್ ಸ್ಪರ್ಧೆಯನ್ನು ಆಯೋಜಿಸಿದ್ದು, ಒಂದು ಬಾರಿ ಕ್ಯಾಚ್ ಹಿಡಿದಲ್ಲಿ 1 ಲಕ್ಷ ಬಹುಮಾನ ಮತ್ತು ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಅಭಿಮಾನಿಗಳಿಗೆ ನೆಕ್ಸಾನ್ ಕಾರು ಅನ್ನು ಗಿಫ್ಟ್ ಆಗಿ ನೀಡಲಿದೆ.

ಹೊಸ ಅವತಾರದಲ್ಲಿ ಮಿಂಚಲಿದೆ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಹೀಗಾಗಿ ಸೂಪರ್ ಸ್ಟ್ರೈಕರ್‌ನಲ್ಲಿ ಕ್ಯಾಚ್ ಹಿಡಿಯುವ ಅಭಿಮಾನಿಗಳು ನೆಕ್ಸಾನ್ ಎಸ್‌ಯುವಿ ಕಾರ್ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದ್ದು, ಪಂದ್ಯದ ಅವಧಿಯಲ್ಲಿ ಕ್ಯಾಚ್ ಹಿಡಿಯುವ ಎಲ್ಲಾ ಅಭಿಮಾನಿಗಳು ಲಕ್ಕಿ ವಿನ್ನರ್ಸ್ ಆಗಲಿದ್ದಾರೆ.

ಹೊಸ ಅವತಾರದಲ್ಲಿ ಮಿಂಚಲಿದೆ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಇದಲ್ಲದೇ ನೆಕ್ಸಾನ್ ಕಾರಿನ ಐಪಿಎಲ್ ಕಾರುಗಳು ಟಾಪ್ ಎಂಡ್ ಎಕ್ಸ್ ಜೆಡ್ ವೇರಿಯಂಟ್‍‍ಗಳಾಗಿದ್ದು, ಮುಂಬೈನಲ್ಲಿ ಹಲವಾರು ಡೀಲರ್‍‍ಗಳ ಹತ್ತಿರ ಕಾಡಿಸಿಕೊಂಡಿದೆ. ವರದಿಗಳ ಪ್ರಕಾರ ಐಪಿಎಲ್‍‍ನಲ್ಲಿನ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರೇರೇಪಿಸಲು ತಯಾರಿಸಲಾಗಿದ್ದು, ಈ ಲಿಮಿಟೆಡ್ ಎಡಿಷನ್ ಕಾರುಗಳು ಹೊಸ ಡೆಕಲ್ಸ್, ವ್ರ್ಯಾಪ್ಸ್ ಮತ್ತು ಗ್ರಾಫಿಕ್ಸ್ ಅನ್ನು ಪಡೆದುಕೊಂಡಿರಲಿದೆ.

ಹೊಸ ಅವತಾರದಲ್ಲಿ ಮಿಂಚಲಿದೆ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೇ, ಬಾನೆಟ್‍ ಮೇಲೆ ಕಪ್ಪು ಮತ್ತು ಹಳದಿ ಬಣ್ಣದಿಂದ ಗೆರೆಗಳನ್ನು ಡಿಸೈನ್ ಮಾಡಲಾಗಿದ್ದು, ಮುಂಭಾಗದ ಗ್ರಿಲ್‍ ಹಳದಿ ಬಣ್ಣವನ್ನು ಬಳಸಿರುವುದು ಆಕರ್ಷಕವಾಗಿದೆ. ಇದಲ್ಲದೇ ಮುಂಭಾಗದ ಸ್ಕಿಡ್ ಪ್ಲೇಟ್‍‍ಗಳು ಮತ್ತು ಒಆರ್‍‍ವಿಎಮ್‍‍ಗಳನ್ನು ಕೂಡಾ ಹಳಾದಿ ಬಣ್ಣದಿಂದ ವಿನ್ಯಾಸಗಳೊಂಡಿದೆ.

ಹೊಸ ಅವತಾರದಲ್ಲಿ ಮಿಂಚಲಿದೆ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಇನ್ನು ಕಾರಿನ ಶೊಡ್ಡರ್ಸ್‌ನಿಂದ ಹಿಡಿದು ರೂಫ್ ಮತ್ತು ಹಿಂಭಾಗದ ವರೆಗೂ ಮೆಟಾ ಬ್ಲೂ ಬಣ್ಣದಿಂದ ಸಜ್ಜುಗೊಂಡಿದ್ದು, ಹಿಂಭಾಗದಲ್ಲಿಯೂ ಕೂಡಾ ಮೇಟಾ ಬ್ಲೂ ಬಣ್ಣದ ಗೆರೆಗಳನ್ನು ಬಳಸಲಾಗಿದೆ.

ಹೊಸ ಅವತಾರದಲ್ಲಿ ಮಿಂಚಲಿದೆ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ನೀಲಿ ಮತ್ತು ಹಳದಿ ಬಣ್ಣಗಳಲ್ಲದೇ ಈ ಕಾರು ಮುಂಬೈ ಇಂಡಿಯನ್ಸ್ ತಂಡದ ಲೋಗೊ ವನ್ನುಕೂಡಾ ವೀಲ್ ಆರ್ಚ್ ಮತ್ತು ಬಂಪರ್‍‍ಗಳ ಮೇಲೆ ಅಳವಡಿಸಲಾಗಿದೆ. ಈ ಎಲ್ಲಾ ಗ್ರಾಫಿಕ್ಸ್ ಮತ್ತು ವಿನ್ಯಾಸಗಳು ನೆಕ್ಸಾನ್ ಕಾರಿನ ಟಾಪ್ ಎಂಡ್ ವೇರಿಯಂಟ್ ಆದ ಎಕ್ಸ್ ಜೆಡ್+ ವೇರಿಯಂಟ್‍‍ನಲ್ಲಿ ಮಾತ್ರ ಕಾಣಬಹುದಾಗಿದ್ದು, ಬೇರಾವ ಮಾರ್ಪಾಡುಗಳನ್ನು ಪಡೆದಿರುವುದಿಲ್ಲ ಎನ್ನಲಾಗಿದೆ.

ಹೊಸ ಅವತಾರದಲ್ಲಿ ಮಿಂಚಲಿದೆ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಟಾಟಾ ಮೋಟಾರ್ಸ್ ಇತ್ತೀಚೆಗೆ ನೆಕ್ಸಾನ್ ಕಾರಿನ ಎಕ್ಸ್ ಜೆಡ್ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, 1.2-ಲೀಟರ್ ರೆವಟ್ರಾನ್ ಎಂಜಿನ್ ಮತ್ತು 1.5-ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿವೆ.

ಹೊಸ ಅವತಾರದಲ್ಲಿ ಮಿಂಚಲಿದೆ ಟಾಟಾ ನೆಕ್ಸಾನ್ ಐಪಿಎಲ್ ಎಡಿಷನ್

ಪೆಟ್ರೋಲ್ ಮಾದರಿಗಳು 108ಬಿಹೆಚ್‍ಪಿ ಮತ್ತು 170ಎನ್ಎಂ ಟಾರ್ಕ್ ಮತ್ತು 260ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Article Published On: Monday, April 23, 2018, 15:36 [IST]
English summary
Tata Nexon IPL Edition Spotted In Dealerships — Sports The Mumbai Indians Logo.
Read more on suv tata motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+