ನೆಕ್ಸಾನ್ ಜೆಟಿಪಿ(ಪರ್ಫಾಮೆನ್ಸ್ ವರ್ಷನ್) ಬಿಡುಗಡೆ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಟಾಟಾ ಸಂಸ್ಥೆಯು ಹೊಸ ಹೊಸ ಕಾರು ಉತ್ಪನ್ನಗಳ ಮೂಲಕ ಮಾರುತಿ ಸುಜುಕಿ ತೀವ್ರ ಪೈಪೋಟಿ ನಡೆಸುವ ತವಕದಲ್ಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನಮೂನೆಯ ಕಾರು ಉತ್ಪನ್ನಗಳನ್ನು ಸಿದ್ದಗೊಳಿಸುತ್ತಿದೆ. ಇದರಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಸಿದ್ದವಾಗಿರುವ ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ಜೊತೆಗೆ ಇದೀಗ ನೆಕ್ಸಾನ್ ಜೆಟಿಪಿ ಕೂಡಾ ಸದ್ಯದಲ್ಲೇ ಬಿಡುಗಡೆಗೊಳ್ಳುವ ಸುಳಿವು ನೀಡಿದೆ.

ನೆಕ್ಸಾನ್ ಜೆಟಿಪಿ(ಪರ್ಫಾಮೆನ್ಸ್ ವರ್ಷನ್) ಬಿಡುಗಡೆ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಸಂಸ್ಥೆಯು ಕಳೆದ ವಾರವಷ್ಟೇ ಟಿಯಾಗೊ ಎನ್‌ಆರ್‌ಜಿ ಎನ್ನುವ ಹೊಸ ಕಾರನ್ನು ಬಿಡುಗಡೆ ಮಾಡಿದ್ದು, ಇದೀಗ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಬಿಡುಗಡೆಗಾಗಿ ವೇದಿಕೆ ಸಿದ್ದಗೊಳಿಸುತ್ತಿದೆ. ಹೀಗಿರುವಾಗಲೇ ನೆಕ್ಸಾನ್ ಜೆಟಿಪಿ ವರ್ಷನ್ ಕೂಡಾ ಬಿಡುಗಡೆ ಮಾಡುವ ಬಗ್ಗೆ ಟಾಟಾ ಸಂಸ್ಥೆಯಿಂದಲೇ ಮಹತ್ವದ ಮಾಹಿತಿ ಲಭ್ಯವಾಗಲಿದೆ.

ನೆಕ್ಸಾನ್ ಜೆಟಿಪಿ(ಪರ್ಫಾಮೆನ್ಸ್ ವರ್ಷನ್) ಬಿಡುಗಡೆ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ 2018ರ ಆಟೋ ಎಕ್ಸ್‌ಪೋದಲ್ಲಿ ಅತಿ ನೂತನ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳನ್ನು ಅನಾವರಣಗೊಳಿಸಿದ್ದ ಟಾಟಾ ಸಂಸ್ಥೆಯು ತನ್ನ ಸಾಮಾನ್ಯ ಮಾದರಿಯ ಕಾರುಗಳಿಂತಲೂ ಹೆಚ್ಚಿನ ಎಂಜಿನ್ ಪರ್ಫಾಮೆನ್ಸ್ ಒದಗಿಸಲಿದೆ.

ನೆಕ್ಸಾನ್ ಜೆಟಿಪಿ(ಪರ್ಫಾಮೆನ್ಸ್ ವರ್ಷನ್) ಬಿಡುಗಡೆ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಅಂದಹಾಗೆ, ಜೆಟಿಪಿ ಎಂಬುದರ ಪೂರ್ಣರೂಪ ಜೇಯಮ್ ಟಾಟಾ ಪರ್ಫಾಮನ್ಸ್ (Jayem Tata Performance) ಎಂಬುದಾಗಿದೆ. ಟಾಟಾ ಮೋಟಾರ್ಸ್ ಹಾಗೂ ಜೇಯಮ್ ಆಟೋಮೋಟಿವ್ಸ್ ಜಂಟಿಯಾಗಿ ಟಾಟಾ ಕಾರುಗಳ ಶಕ್ತಿಶಾಲಿ ಮಾಡೆಲ್‌ಗಳನ್ನು ನಿರ್ಮಿಸುತ್ತಿದೆ.

ನೆಕ್ಸಾನ್ ಜೆಟಿಪಿ(ಪರ್ಫಾಮೆನ್ಸ್ ವರ್ಷನ್) ಬಿಡುಗಡೆ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಸ್ಟ್ಯಾಂಡರ್ಡ್ ಮಾದರಿಗಳಿಗೆ ಹೋಲಿಸಿದಾಗ ಜೆಟಿಪಿ ವರ್ಷನ್‌ಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿದ್ದು, ಕ್ರೀಡಾತ್ಮಕ ಬಂಪರ್ ಜತೆಗೆ ಹೊಸತಾದ ಫಾಗ್ ಲ್ಯಾಂಪ್ ಹೌಸಿಂಗ್ ಹಾಗೂ ಅಗಲವಾದ ಲೋವರ್ ಗ್ರಿಲ್ ಇರಲಿದೆ. ಕಪ್ಪು ವರ್ಣ ಸುತ್ತುವರಿದ ಹೆಡ್‌ಲ್ಯಾಂಪ್ ಜತೆಗೆ ಜೆಟಿಪಿ ಲೊಗೊ ಸಹ ಪ್ರಮುಖ ಆಕರ್ಷಣೆಯಾಗಲಿದ್ದು, ಹಿಂಭಾಗದಲ್ಲೂ ರೂಫ್ ಸ್ಪಾಯ್ಲರ್ ಹೆಚ್ಚಿನ ಕ್ರೀಡಾತ್ಮಕ ಲುಕ್ ನೀಡಲಿದೆ.

ನೆಕ್ಸಾನ್ ಜೆಟಿಪಿ(ಪರ್ಫಾಮೆನ್ಸ್ ವರ್ಷನ್) ಬಿಡುಗಡೆ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಹೀಗಾಗಿ ನೆಕ್ಸಾನ್ ಕಾರುಗಳು ಸಹ ಸಾಮಾನ್ಯ ಮಾದರಿಯ ಕಾರುಗಳಿಂತ ಜೆಟಿಪಿ ನೆಕ್ಸಾನ್ ಕಾರುಗಳು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳನ್ನು ಹೊಂದಿರಲಿದ್ದು, ಮೊದಲ ಹಂತವಾಗಿ ಟಿಗೋರ್ ಜೆಟಿಪಿ ಮತ್ತು ಟಿಯಾಗೋ ಜೆಟಿಪಿ ಬಿಡುಗಡೆಯ ನಂತರವೇ ನೆಕ್ಸಾನ್ ಜೆಟಿಪಿ ಬಿಡುಗಡೆಯಾಗಲಿದೆ.

MOST READ: ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ನೆಕ್ಸಾನ್ ಜೆಟಿಪಿ(ಪರ್ಫಾಮೆನ್ಸ್ ವರ್ಷನ್) ಬಿಡುಗಡೆ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ನೆಕ್ಸಾನ್ ಜೆಟಿಪಿ ವರ್ಷನ್‌ಗಳು ಕನಿಷ್ಠ ಅಂದ್ರು ಇನ್ನು 1 ವರ್ಷವಾದ್ರು ಬೇಕಾಬಹುದು ಎನ್ನಲಾಗಿದ್ದು, ಈ ವೇಳೆ ಭಾರತೀಯ ಮೋಟಾರ್ ಕಾಯ್ದೆ ಅನ್ವಯ ಎಂಜಿನ್ ವಿಭಾಗದಲ್ಲಿ ಕೆಲವು ಮಾರ್ಪಾಡುಗಳನ್ನು ತರುವುದು ಅಗತ್ಯವಾಗಿದೆ.

ನೆಕ್ಸಾನ್ ಜೆಟಿಪಿ(ಪರ್ಫಾಮೆನ್ಸ್ ವರ್ಷನ್) ಬಿಡುಗಡೆ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಕಳೆದ ವರ್ಷ ಬಿಎಸ್ 3 ಎಂಜಿನ್‌ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಗೊಳಿಸಿರುವ ಕೇಂದ್ರ ಸರ್ಕಾರವು ಬಿಎಸ್ 4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನಗಳಿಗೆ ಮಾತ್ರವೇ ಉತ್ಪಾದನೆಗೆ ಅವಕಾಶ ನೀಡುತ್ತಿದೆ. ಇದೇ ತಂತ್ರವನ್ನು 2019ರ ಕೊನೆಯಲ್ಲಿ ಬದಲಾವಣೆ ಮಾಡಲಿರುವ ಕೇಂದ್ರವು ಬಿಎಸ್ 4 ನಿಷೇಧಗೊಳಿಸಿ ಬಿಎಸ್ 6 ವಾಹನಗಳಲ್ಲಿ ಮಾತ್ರವೇ ಅವಕಾಶ ನೀಡಲಿದೆ.

ನೆಕ್ಸಾನ್ ಜೆಟಿಪಿ(ಪರ್ಫಾಮೆನ್ಸ್ ವರ್ಷನ್) ಬಿಡುಗಡೆ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಇದರಿಂದ ಹೊಸ ಜೆಟಿಪಿ ನೆಕ್ಸಾನ್ ಕಾರುಗಳನ್ನು ಬಿಎಸ್ 6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಲು ನಿರ್ಧರಿಸಿರುವ ಟಾಟಾ ಸಂಸ್ಥೆಯು ಹೊಸ ಮೋಟಾರ್ ಕಾಯ್ದೆ ಮಾರ್ಗಸೂಚಿಯೆಂತೆ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದ್ದು, ಇದೇ ವರ್ಷಾಂತ್ಯಕ್ಕೆ ಟಿಗೋರ್ ಜೆಟಿಪಿ ಮತ್ತು ಟಿಯಾಗೋ ಜೆಟಿಪಿ ಖರೀದಿಗೆ ಲಭ್ಯವಾಗುವುದು ಬಹುತೇಕ ಖಚಿತವಾಗಿದೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ನೆಕ್ಸಾನ್ ಜೆಟಿಪಿ(ಪರ್ಫಾಮೆನ್ಸ್ ವರ್ಷನ್) ಬಿಡುಗಡೆ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಒಟ್ಟಿನಲ್ಲಿ ಟಾಟಾ ಹೊಸ ಕಾರುಗಳು ಉತ್ತಮ ರೈಡ್ ಮತ್ತು ಹ್ಯಾಂಡ್ಲಿಂಗ್ ಅನುಭವವನ್ನು ನೀಡಲಿದ್ದು, ಗ್ರಾಹಕರು ಹೆಚ್ಚಿನ ಮೈಲೇಜ್ ಕೊಡುವಂತಹ ರೆಗ್ಯುಲರ್ ಮಾಡೆಲ್‌ಗಳನ್ನು ಅಥವಾ ಸ್ಪೋರ್ಟ್ ಡ್ರೈವ್ ಅನುಭವಕ್ಕಾಗಿ ಜಿಟಿಪಿ ಆವೃತ್ತಿಯ ಕಾರುಗಳನ್ನು ಆಯ್ಕೆ ಮಾಡಬಹುದಾಗಿದೆ.

Most Read Articles

Kannada
Read more on tata motors
English summary
Tata Nexon JTP — Better Performance, Stiffer Springs And What More To Expect!
Story first published: Tuesday, September 18, 2018, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X