ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಕಾರು..
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್‍ನ ನೆಕ್ಸಾನ್ ಕಾರು ಈಗಾಗಲೆ ಬಿಡುಗಡೆಗೊಂಡು ಸಂಸ್ಥೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್‍ನ ನೆಕ್ಸಾನ್ ಕಾರು ಈಗಾಗಲೆ ಬಿಡುಗಡೆಗೊಂಡು ಸಂಸ್ಥೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆಯೆ ಟಾಟಾ ನೆಕ್ಸಾನ್ ಕಾರಿನ ಹಲವಾರು ಐಪಿಲ್ ಎಡಿಶನ್‍ಗಳ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ ಈ ಕಾರು ಇದೀಗ ಐಪಿಲ್ ಮುಗಿದ ನಂತರ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದೆ.

2018ರ ಐಪಿಎಲ್ ಪ್ರಾರಂಭವಾದಾಗಿನಿಂದಲೂ ಒಂದೊಂದು ಐಪಿಎಲ್ ಟೀಮ್ ಅನ್ನು ಪ್ರೇರೇಪಿಸಲು ಒಂದೊಂದು ಎಡಿಶನ್ ಕಾರನ್ನು ಬಿಡುಗಡೆಗೊಳಿಸಿತ್ತು. ಆದರೆ ಇದೀಗ ಟಾಟಾ ನೆಕ್ಸಾನ್ ಕಾರಿನ ಎಸ್‍ಆರ್‍ಟಿ ಫ್ರೋಜೆನ್ ಎಡಿಶನ್ ಕಾರು ಡೀಲರ್‍ನ ಹತ್ತಿರ ಕಾಣಿಸಿಕೊಂಡಿದ್ದು, ಇದು ಡೀಲರ್ ಲೆವೆಲ್ ಮಾಡಿಫಿಕೇಷನ್ ಕಾರು ಎನ್ನಲಾಗಿದೆ.

ಹೊಸ ಟಾಟಾ ನೆಕ್ಸಾನ್ ಎಸ್‍ಆರ್‍ಟಿ ಫ್ರೋಜೆನ್ ಎಡಿಶನ್ ಕಾರುಗಳು ಹಳದಿ ಮತ್ತು ಕಪ್ಪು ಬಣ್ಣದಿಂದ ಸಜ್ಜುಗೊಂಡಿದ್ದು, ಕಾರಿನ ರೂಫ್ ಅನ್ನು ಕಪ್ಪು ಬಣ್ಣದಿಂದ ಮತ್ತು ಬೇರೆಲ್ಲಾ ಭಾಗವನ್ನು ಹಳದಿ ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಹೊಸ ಬಣ್ಣವನ್ನು ಪಡೆಯುವುದಲ್ಲದೆ ಈ ಕಾರಿನ ವಿನ್ಯಾಸದಲ್ಲಿಯೂ ಇನ್ನಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ.

ಟಾಟಾ ನೆಕ್ಸಾನ್ ಎಸ್‍ಅರ್‍ಟಿ ಎಡಿಶನ್ ಕಾರಿನ ಮುಂಭಾಗದಲ್ಲಿ ಸಿಲ್ವರ್ ಬಣ್ಣದಿಂದ ರೀವ್ಯಾಂಪ್ಡ್ ಟಾಟಾ ಲೋಗೊ, ಕಾರ್ ಗ್ರಿಲ್‍ನ ಮೆಶ್ ಪ್ಯಾಟರ್ನ್ ಮತ್ತು ರೇಡಿಯೇಟರ್ ಗ್ರಿಲ್ ಅನ್ನು ಕೂಡ ಸಿಲ್ವರ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಕ್ರೋಮ್ ಅನ್ನು ಮುಂಭಾಗದ ಗ್ರಿಲ್‍ಗೆ ಜೋಡಿಸಲಾಗಿದ್ದು ಮತ್ತು ಬಂಪರ್ ಅನ್ನು ಹಳದಿ ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಕಾರಿನ ಬಹುತೇಕ ಬಾಗಗಳನ್ನು ಹಳದಿ ಬಣ್ಣದಿಂದ ಪೇಯಿಂಟ್ ಮಾಡಲಾಗಿದ್ದು, ಕಾರಿನ ವೀಲ್ ಆರ್ಚೆಸ್ ಮೇಲಿನ ಬ್ಲಾಕ್ ಕ್ಲೇಡಿಂಗ್ ಮತ್ತು ಬಾಗಿಲುಗಳನ್ನು ಕೂಡ ಹಳದಿ ಬಣ್ಣದಿಂದ ಪೇಯಿಂಟ್ ಮಾಡಲಾಗಿದೆ.

ಇನ್ನು ಟಾಟಾ ನೆಕ್ಸಾನ್ ಎಸ್‍ಆರ್‍ಟಿ ಫ್ರೋಜೆನ್ ಎಡಿಶನ್ ಕಾರುಗಳ ಹಿಂಭಾಗದಲ್ಲಿಯೂ ಸಹ ಹಳದಿ ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಹಿಂಭಾಗದ ಬಂಪರ್ ಮೇಲಿನ ಬ್ಲಾಕ್ ಕ್ಲೇಡಿಂಗ್ ಮತ್ತು ಟೈಲ್‍ಗೇಟ್ ಕೂಡ ಹಳದಿ ಬಣ್ಣವನ್ನು ಪಡೆದುಕೊಂಡಿದೆ.

ಟಾಟಾ ನೆಕ್ಸಾನ್ ಎಸ್‍ಆರ್‍ಟಿ ಫ್ರೋಜೆನ್ ಎಡಿಶನ್ ಕಾರಿನ ಒಳಭಾಗದಲ್ಲಿಯೂ ಕೂಡ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಕಾರಿನ ಡ್ಯಾಶ್‍ಬೋರ್ಡ್ ಹಳದಿ ಪಟ್ಟಿಗಳನ್ನು ಪಡೆದಿದ್ದು, ಕಾರಿನ ಹಿಂಬದಿಯ ಮತ್ತು ಮುಂಭಾಗದ ಸೀಟ್‍ಗಳಿಗು ಸಹ ಹಳದಿ ಪಟ್ಟಿಗಳನ್ನು ಅಳವಡಿಸಲಾಗಿದೆ.

ಟಾಟಾ ಮೋಟಾರ್ಸ್ ಕೆಲ ದಿನಗಳ ಹಿಂದಷ್ಟೆ ತಮ್ಮ ನೆಕ್ಸಾನ್ ಕಾರಿನ ಎಎಮ್‍ಟಿ ಕಾರಿನ ಮಾದರಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ನೆಕ್ಸಾನ್ ಪೆಟ್ರೋಲ್ ಮಾದರಿಯ ಕಾರುಗಳ ಬೆಲೆಯು ರೂ 9.41 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಇನ್ನು ಡೀಸೆಲ್ ಮಾದರಿಯ ಕಾರುಗಳ ಬೆಲೆಯು ರೂ 10.3 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ನೆಕ್ಸಾನ್ ಎಎಮ್‍ಟಿ ಪೆಟ್ರೋಲ್ ಮಾದರಿಯ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 108 ಬಿಹೆಚ್‍ಪಿ ಮತ್ತು 170ಎನ್ಎಂ ಟಾರ್ಕ್ ಅನ್ನು ಉಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ನೆಕ್ಸಾನ್ ಎಎಮ್‍ಟಿ ಡೀಸೆಲ್ ಮಾದರಿಯ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 108ಬಿಹೆಚ್‍ಪಿ ಮತ್ತು 260ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದನ್ನು ಕೂಡ 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.


Click it and Unblock the Notifications