ಬರಲಿದೆ ಟಾಟಾ ನೆಕ್ಸಾನ್ ಕಾರಿನ ವಿನೂತನ ಎಕ್ಸ್‌ಜೆಡ್ ಆವೃತ್ತಿ

Written By: Rahul TS

ದೇಶಿಯ ಮಾರುಕಟ್ಟೆಯಲ್ಲಿನ ವಾಹನ ಮಾರಾಟದಲ್ಲಿ ಜನಪ್ರಿಯತೆ ಗಳಿಸಿರುವ ಟಾಟಾ ಮೋಟಾರ್ಸ್ ಹೊಸದೊಂದು ಕಾರು ಬಿಡುಗಡೆಗೆ ಎದುರು ನೋಡುತ್ತಿದ್ದ, ನೆಕ್ಸಾನ್ ಎಸ್‌ಯುವಿ ಕಾರಿನ ಎಕ್ಸ್ ಜೆಡ್ ವೇರಿಯಂಟ್ ಪರಿಚಯಿಸಲು ಮುಂದಾಗಿದೆ.

ಬರಲಿದೆ ಟಾಟಾ ನೆಕ್ಸಾನ್ ಕಾರಿನ ವಿನೂತನ ಎಕ್ಸ್‌ಜೆಡ್ ಆವೃತ್ತಿ

ಈಗಾಗಲೇ ಮಾರುಕಟ್ಟೆಯಲ್ಲಿ ನೆಕ್ಸಾನ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್ ಟಿ ಮತ್ತು ಎಕ್ಸ್ ಜೆಡ್ ಪ್ಲಸ್ ವೇರಿಯಂಟ್‍ಗಳಲ್ಲಿ ಲಭ್ಯವಿದ್ದು, ಹೊಸದಾಗಿ ಎಕ್ಸ್ ಜೆಡ್ ಪ್ಲಸ್ ಮಾದರಿಗಿಂತ ಕೆಳ ದರ್ಜೆಯ ಎಕ್ಸ್ ಜೆಡ್ ಮಾದರಿಯನ್ನು ಸೇರಿಸಲಿದೆ.

ಬರಲಿದೆ ಟಾಟಾ ನೆಕ್ಸಾನ್ ಕಾರಿನ ವಿನೂತನ ಎಕ್ಸ್‌ಜೆಡ್ ಆವೃತ್ತಿ

ಇದಕ್ಕೆ ಕಾರಣ, ಎಲ್ಲಾ ಲೋ ವೇರಿಯಂಟ್ ಕಾರುಗಳ ನಡುವೆ ಸುಮಾರು ರೂ.75 ಸಾವಿರ ಬೆಲೆ ಅಂತರವಿದ್ದು, ಇದು ಟಾಪ್ ಎರಡು ಮಾದರಿಗಳಲ್ಲಿ ಮಾತ್ರ ರೂ. 1.45 ಲಕ್ಷ ಬೆಲೆ ಅಂತರದಲ್ಲಿದೆ. ಇದರಿಂದಾಗಿ ಬೆಲೆಗಳ ನಡುವಿನ ಅಂತರವನ್ನು ಸರಿದೂಗಿಸಲು ಎಕ್ಸ್ ಜೆಡ್ ಮಾದರಿಯನ್ನು ಪರಿಚಯಿಸುತ್ತಿದೆ.

ಬರಲಿದೆ ಟಾಟಾ ನೆಕ್ಸಾನ್ ಕಾರಿನ ವಿನೂತನ ಎಕ್ಸ್‌ಜೆಡ್ ಆವೃತ್ತಿ

ಹೊಸ ಮಾದರಿಯ ನೆಕ್ಸಾನ್ ಕಾರುಗಳು ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳನ್ನು ಪಡೆಯುವುದಿಲ್ಲವಾದರೂ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಹಾಗು ಇನ್ನಿತರೆ ಡ್ರೈವಿಂಗ್ ಮೋಡ್‍‍ಗಳನ್ನು ಪಡೆದಿರಲಿವೆ.

ಬರಲಿದೆ ಟಾಟಾ ನೆಕ್ಸಾನ್ ಕಾರಿನ ವಿನೂತನ ಎಕ್ಸ್‌ಜೆಡ್ ಆವೃತ್ತಿ

ನೆಕ್ಸಾನ್ ಟಾಪ್ಎಂಡ್ ಎಕ್ಸ್ ಜೆಡ್+ ಕಾರಿಗೆ ಹೋಲಿಸಿದರೆ ಈ ಕಾರು ಹೊರಗಿನ ಎಲ್ಇಡಿ ಡಿಆರ್‍ಎಲ್, ಡ್ಯುಯಲ್ ಟೋನ್ ರೂಫ್, ಮುಂಭಾಗ ಮತ್ತು ಹಿಂಭಾಗದ ಫಾಗ್ ಲ್ಯಾಂಪ್ಸ್ ಹಾಗೆಯೇ ರೀರ್ ಡೆಫಾಗರ್ ಅನ್ನು ಕಳೆದುಕೊಂಡಿರಲಿದೆ ಎನ್ನಲಾಗಿದೆ.

ಬರಲಿದೆ ಟಾಟಾ ನೆಕ್ಸಾನ್ ಕಾರಿನ ವಿನೂತನ ಎಕ್ಸ್‌ಜೆಡ್ ಆವೃತ್ತಿ

ಇದಲ್ಲದೇ ಕಾರಿನ ಒಳಭಾಗದಲ್ಲಿ ಮುಂಭಾಗ ಮತ್ತು ಹಿಂಭಾಗದ ಸೆಂಟರ್ ಆರ್ಮ್‍ರೆಸ್ಟ್, 60:40 ಸ್ಪ್ಲಿಟ್ ಫೋಲ್ಡಿಂಗ್ ರೀರ್ ಸೀಟ್ಸ್ ಮತ್ತು ಸ್ಮಾರ್ಟ್ ಕೀ ಪುಷ್ ಬಟನ್ ಅನ್ನು ಕೂಡ ಕಳೆದುಕೊಳ್ಳಲಿದೆ.

ಬರಲಿದೆ ಟಾಟಾ ನೆಕ್ಸಾನ್ ಕಾರಿನ ವಿನೂತನ ಎಕ್ಸ್‌ಜೆಡ್ ಆವೃತ್ತಿ

ಆದರೆ ಕಾರಿನ ಒಳಭಾಗದಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಸ್ಮಾರ್ಟ್‍ಪೋನ್ ಕನೆಕ್ಟಿವಿಟಿ, ಅಡ್ಜೆಸ್ಟ್ ಮಾಡಿಕೊಳ್ಳಬಹುದಾದ ಸೀಟ್ ಮತ್ತು ಸೀಟ್ ಬೆಲ್ಟ್ಸ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲರ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಬರಲಿದೆ ಟಾಟಾ ನೆಕ್ಸಾನ್ ಕಾರಿನ ವಿನೂತನ ಎಕ್ಸ್‌ಜೆಡ್ ಆವೃತ್ತಿ

ಟಾಟಾ ಸಂಸ್ಥೆಯು ಮಾರುಕಟ್ಟೆಯಲ್ಲಿ ನೆಕ್ಸಾನ್ ಕಾರು ಮಾದರಿಯನ್ನು ಅನ್ನು ಅತಿ ಹೆಚ್ಚು ಮಾರಾಟಗೊಳಿಸುವ ಪ್ರಯತ್ನದಲ್ಲಿದ್ದು, ಶೀಘ್ರವೇ ನೆಕ್ಸಾನ್ ಕಾರಿನ ಎಎಂಟಿ ಆವೃತ್ತಿಯನ್ನು ಕೂಡ ಪರಿಚಯಿಸಲಿದೆ ಎನ್ನಲಾಗಿದೆ.

Read more on tata motors
English summary
Tata Motors To Add A 'XZ' Variant To Its Nexon Lineup.
Story first published: Saturday, March 24, 2018, 16:56 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark