ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಕಾರು ಟಿಯಾಗೊ ಜೆಟಿಪಿ..

ದೇಶದ ಅತಿ ದೊಡ್ಡ ವಾಹನ ನಿರ್ಮಾಣ ಸಂಸ್ಥೆಯಾದ ಟಾಟಾ ಮೋಟಾರ್ಸ್ ಮುಂಬರುವ ಉತ್ಸವ ದಿನಗಳಲ್ಲಿ ಹೊಚ್ಚ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

By Praveen Sannamani

ದೇಶದ ಅತಿ ದೊಡ್ಡ ವಾಹನ ನಿರ್ಮಾಣ ಸಂಸ್ಥೆಯಾದ ಟಾಟಾ ಮೋಟಾರ್ಸ್ ಮುಂಬರುವ ಉತ್ಸವ ದಿನಗಳಲ್ಲಿ ಹೊಚ್ಚ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಕುರಿತು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಕಾರು ಟಿಯಾಗೊ ಜೆಟಿಪಿ..

ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ 2018ರ ಆಟೋ ಎಕ್ಸ್‌ಪೊದಲ್ಲಿ ಅತಿ ನೂತನ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ನಿರ್ವಹಣಾ ಆವೃತ್ತಿಗಳನ್ನು ಅನಾವರಣಗೊಳಿಸಿದ್ದ ಟಾಟಾ ಸಂಸ್ಥೆಯು ಇದೀಗ ಬಿಡುಗಡೆಯಾಗಿ ತಯಾರಿ ನಡೆಸುತ್ತಿದ್ದು,ಇದು ಸದ್ಯ ಮಾರುಕಟ್ಟೆಯಲ್ಲಿರುವ ಟಿಯಾಗೊ ಹ್ಯಾಚ್‌ಬ್ಯಾಕ್ ಮತ್ತು ಟಿಗೋರ್ ಕಾಂಪಾಕ್ಟ್ ಸೆಡಾನ್ ಕಾರುಗಳಿಂತಲೂ ಹೆತ್ತು ಶಕ್ತಿಶಾಲಿ ಆವೃತ್ತಿಯಾಗಿರಲಿವೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಕಾರು ಟಿಯಾಗೊ ಜೆಟಿಪಿ..

ವರದಿಗಳ ಪ್ರಕಾರ, ಮುಂದಿನ ದಸರಾ ಅಥವಾ ದೀಪಾವಳಿ ಅವಧಿಯಲ್ಲಿ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ನಿರ್ವಹಣಾ ಆವೃತ್ತಿಗಳು ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಸ್ಪಾಟ್ ಟೆಸ್ಟಿಂಗ್ ಸಂದರ್ಭದಲ್ಲಿ ಹೊಸ ಕಾರುಗಳು ಸ್ಪೋರ್ಟಿ ಲುಕ್ ಹೊಂದಿರುವುದು ಬಹಿರಂಗವಾಗಿದೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಕಾರು ಟಿಯಾಗೊ ಜೆಟಿಪಿ..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಜೆಟಿಪಿ ಎಂಬುದರ ಪೂರ್ಣರೂಪ ಜೇಯಮ್ ಟಾಟಾ ಫರ್ಫಾಮನ್ಸ್ (Jayem Tata Performance) ಎಂಬುದಾಗಿದೆ. ಟಾಟಾ ಮೋಟಾರ್ಸ್ ಹಾಗೂ ಜೇಯಮ್ ಆಟೋಮೋಟಿವ್ಸ್ ಜಂಟಿಯಾಗಿ ತಾಜಾ ಟಾಟಾ ಕಾರುಗಳ ಶಕ್ತಿಶಾಲಿ ಮಾಡೆಲ್‌ಗಳನ್ನು ನಿರ್ಮಿಸುತ್ತಿದೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಕಾರು ಟಿಯಾಗೊ ಜೆಟಿಪಿ..

ಸ್ಟ್ಯಾಂಡರ್ಡ್ ಮಾದರಿಗಳಿಗೆ ಹೋಲಿಸಿದಾಗ ಗಮನಾರ್ಹ ಬದಲಾವಣೆಗಳು ಕಂಡುಬರಲಿದ್ದು, ಕ್ರೀಡಾತ್ಮಕ ಬಂಪರ್ ಜತೆಗೆ ಹೊಸತಾದ ಫಾಗ್ ಲ್ಯಾಂಪ್ ಹೌಸಿಂಗ್ ಹಾಗೂ ಅಗಲವಾದ ಲೋವರ್ ಗ್ರಿಲ್ ಇರಲಿದೆ. ಕಪ್ಪು ವರ್ಣ ಸುತ್ತುವರಿದ ಹೆಡ್‌ಲ್ಯಾಂಪ್ ಜತೆಗೆ ಜೆಟಿಪಿ ಲಾಂಛನ ಸಹ ಪ್ರಮುಖ ಆಕರ್ಷಣೆಯಾಗಲಿದೆ. ಹಿಂದುಗಡೆಯೂ ರೂಫ್ ಸ್ಪಾಯ್ಲರ್ ಹೆಚ್ಚಿನ ಕ್ರೀಡಾತ್ಮಕ ಲುಕ್ ನೀಡಲಿದೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಕಾರು ಟಿಯಾಗೊ ಜೆಟಿಪಿ..

ಜೊತೆಗೆ ಟಾಟಾ ಟಿಯಾಗೊ ಜಿಟಿಪಿ ಮತ್ತು ಟಿಗೋರ್ ಜೆಟಿಪಿ ಅಗಲವಾದ ಏರ್ ಡ್ಯಾಮ್ ಮತ್ತು ಫೋಗ್ ಲ್ಯಾಂಪ್ ಹೌಸಿಂಗ್, ಕೆಂಪು ಕಾಂಸ್ಟ್ರಾಕ್ಟಿಂಗ್ ಡಿಟೈಲಿಂಗ್, ಅರ್ ವೆಂಟ್ಸ್ ಆಯ್ಕೆಗಳನ್ನು ಹೊಂದಿದ್ದು, ಜೊತೆಗೆ ಸ್ಮೋಕ್ಡ್ ಹೇಡ್ ಲ್ಯಾಂಪ್ಸ್, ಸೈಡ್ ಸ್ಕರ್ಟ್ಸ್ ಮತ್ತು ರಿಯರ್ ಡಿಫ್ಯೂಸರ್‌ಗಳು ಕಾರುಗಳಿಗೆ ಸ್ಪೋರ್ಟಿ ಲುಕ್ ತರಿಸಿವೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಕಾರು ಟಿಯಾಗೊ ಜೆಟಿಪಿ..

15 ಇಂಚುಗಳ ದೊಡ್ಡದಾದ ಡೈಮಂಡ್ ಕಟ್ ಅಲಾಯ್ ಚಕ್ರಗಳು ಹಾಗೂ ಏರೋಡೈನಾಮಿಕ್ ವಿನ್ಯಾಸ ಇರಲಿದೆ. ಕಾರಿನೊಳಗೂ ಆಲ್ ಬ್ಲ್ಯಾಕ್ ಲೆಧರ್ ಹೋದಿಕೆ ಜತೆ ಲೆಧರ್ ಹೋದಿಕೆಯ ಸ್ಟೀರಿಂಗ್ ಇರಲಿದೆ. ಎಂಟು ಸ್ಪೀಕರ್‌ಗಳ ಹರ್ಮನ್ ಇನ್ಪೋಟೈನ್ಮೆಂಟ್ ಸಿಸ್ಟಂ ಸಹ ಕಂಡುಬರಲಿದೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಕಾರು ಟಿಯಾಗೊ ಜೆಟಿಪಿ..

ಅಂದ ಹಾಗೆ ಟಾಟಾ ಟಿಯಾಗೊ ಜೆಟಿಪಿ ಹಾಗೂ ಟಿಗೋರ್ ಜೆಟಿಪಿ ಮಾದರಿಗಳು ನೆಕ್ಸನ್ ಎಸ್‌ಯುವಿಗೆ ಸಮಾನವಾದ 1.2 ಲೀಟರ್ ಟರ್ಬೊಚಾರ್ಜ್ಡ್ ರವೊಟಾರ್ನ್ ಪೆಟ್ರೋಲ್ ಎಂಜಿನ್‌ಗಳನ್ನು ಪಡೆಯಲಿದೆ. ಇದು 150 ಎನ್‌ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಕಾರು ಟಿಯಾಗೊ ಜೆಟಿಪಿ..

ಒಟ್ಟಿನಲ್ಲಿ ಎರಡೂ ಕಾರುಗಳು ಚಾಲಕರಿಗೆ ಉತ್ತಮ ರೈಡ್ ಮತ್ತು ಹ್ಯಾಂಡ್ಲಿಂಗ್ ಅನುಭವವನ್ನು ನೀಡಲಿದ್ದು, ಗ್ರಾಹಕರು ಹೆಚ್ಚಿನ ಮೈಲೇಜ್ ಕೊಡುವಂತಹ ರೆಗ್ಯುಲರ್ ಟಿಯಾಗೊ ಅಥಾವ ಸ್ಪೋರ್ಟ್ ಡ್ರೈವ್ ಅನುಭವಕ್ಕಾಗಿ ಜಿಟಿಪಿ ಆವೃತ್ತಿಯ ಟಿಯಾಗೊ ಕಾರನ್ನು ಬಳಸಬಹುದಾಗಿದೆ.

Spy Image Source: Overdrive

Article Published On: Friday, June 1, 2018, 20:07 [IST]
English summary
Tata Tiago JTP Hot-Hatch Spotted Testing On Public Roads.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+