ಕಾಯುವಿಕೆ ಅಂತ್ಯ- ಅಕ್ಟೋಬರ್ 23ಕ್ಕೆ ಟಾಟಾ ಜೆಟಿಪಿ ವರ್ಷನ್ ಟಿಯಾಗೊ, ಟಿಗೋರ್ ಬಿಡುಗಡೆ

ಟಾಟಾ ಮೋಟಾರ್ಸ್ ಸಂಸ್ಥೆಯು ದೀಪಾವಳಿ ಹೊತ್ತಿಗೆ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಇದೇ ತಿಂಗಳು 23ರಂದು ಹೊಸ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವುದಾಗಿ ಅಧಿಕೃತ ಮಾಹಿತಿ ನೀಡಿದೆ.

ಕಾಯುವಿಕೆ ಅಂತ್ಯ- ಅಕ್ಟೋಬರ್ 23ಕ್ಕೆ ಟಾಟಾ ಜೆಟಿಪಿ ವರ್ಷನ್ ಟಿಯಾಗೊ, ಟಿಗೋರ್ ಬಿಡುಗಡೆ

ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಹೊಸ ಟಾಟಾ ಟಿಯಗೊ ಮತ್ತು ಟಾಟಾ ಟಿಗೋರ್ ಕಾರುಗಳ ಸ್ಪೋರ್ಟ್ಸ್ ಆವೃತ್ತಿಗಳಾದ ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಕಾರುಗಳನ್ನು 2018ರ ಆಟೋ ಎಕ್ಸ್ ಪೋನಲ್ಲಿ ಅನಾವರಣಗೊಳಿಸಿದ್ದಲ್ಲೇ ಇದೀಗ ಕಾರುಗಳ ಬಿಡುಗಡೆಯಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ.

ಕಾಯುವಿಕೆ ಅಂತ್ಯ- ಅಕ್ಟೋಬರ್ 23ಕ್ಕೆ ಟಾಟಾ ಜೆಟಿಪಿ ವರ್ಷನ್ ಟಿಯಾಗೊ, ಟಿಗೋರ್ ಬಿಡುಗಡೆ

ತಮಿಳುನಾಡಿನ ಹಲವು ಕಡೆ ಸ್ಪಾಟ್ ಟೆಸ್ಟಿಂಗ್ ಸಂದರ್ಭದಲ್ಲಿ ಹೊಸ ಕಾರುಗಳಲ್ಲಿ ಸ್ಪೋರ್ಟಿ ಲುಕ್ ಒದಗಿಸಿರುವುದು ಈಗಾಗಲೇ ಬಹಿರಂಗವಾಗಿದ್ದು, ಹೊಸ ಜೆಟಿಪಿ ವರ್ಷನ್‌ಗಳು ವಿಶೇಷವಾಗಿ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ಸಿದ್ದವಾಗಿವೆ.

ಕಾಯುವಿಕೆ ಅಂತ್ಯ- ಅಕ್ಟೋಬರ್ 23ಕ್ಕೆ ಟಾಟಾ ಜೆಟಿಪಿ ವರ್ಷನ್ ಟಿಯಾಗೊ, ಟಿಗೋರ್ ಬಿಡುಗಡೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಜೆಟಿಪಿ ಎಂಬುದರ ಪೂರ್ಣರೂಪ ಜೇಯಮ್ ಟಾಟಾ ಫರ್ಫಾಮನ್ಸ್ (Jayem Tata Performance) ಎಂಬುದಾಗಿದೆ. ಟಾಟಾ ಮೋಟಾರ್ಸ್ ಹಾಗೂ ಜೇಯಮ್ ಆಟೋಮೋಟಿವ್ಸ್ ಜಂಟಿಯಾಗಿ ತಾಜಾ ಟಾಟಾ ಕಾರುಗಳ ಶಕ್ತಿಶಾಲಿ ಮಾಡೆಲ್‌ಗಳನ್ನು ನಿರ್ಮಿಸುತ್ತಿದೆ.

ಕಾಯುವಿಕೆ ಅಂತ್ಯ- ಅಕ್ಟೋಬರ್ 23ಕ್ಕೆ ಟಾಟಾ ಜೆಟಿಪಿ ವರ್ಷನ್ ಟಿಯಾಗೊ, ಟಿಗೋರ್ ಬಿಡುಗಡೆ

ಹೀಗಾಗಿ ಸ್ಟ್ಯಾಂಡರ್ಡ್ ಮಾದರಿಗಳಿಗೆ ಹೋಲಿಸಿದಾಗ ಹೊಸ ಕಾರುಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿದ್ದು, ಕ್ರೀಡಾತ್ಮಕ ಬಂಪರ್ ಜತೆಗೆ ಹೊಸತಾದ ಫಾಗ್ ಲ್ಯಾಂಪ್ ಹೌಸಿಂಗ್ ಹಾಗೂ ಅಗಲವಾದ ಲೋವರ್ ಗ್ರಿಲ್ ಇರಲಿದೆ. ಕಪ್ಪು ವರ್ಣ ಸುತ್ತುವರಿದ ಹೆಡ್‌ಲ್ಯಾಂಪ್ ಜತೆಗೆ ಜೆಟಿಪಿ ಲೊಗೊ ಸಹ ಪ್ರಮುಖ ಆಕರ್ಷಣೆಯಾಗಲಿದ್ದು, ಹಿಂಭಾಗದಲ್ಲೂ ರೂಫ್ ಸ್ಪಾಯ್ಲರ್ ಹೆಚ್ಚಿನ ಕ್ರೀಡಾತ್ಮಕ ಲುಕ್ ನೀಡಲಿದೆ.

ಕಾಯುವಿಕೆ ಅಂತ್ಯ- ಅಕ್ಟೋಬರ್ 23ಕ್ಕೆ ಟಾಟಾ ಜೆಟಿಪಿ ವರ್ಷನ್ ಟಿಯಾಗೊ, ಟಿಗೋರ್ ಬಿಡುಗಡೆ

ಟಾಟಾ ಟಿಯಾಗೊ ಜಿಟಿಪಿ ಮತ್ತು ಟಿಗೋರ್ ಜೆಟಿಪಿ ಅಗಲವಾದ ಏರ್ ಡ್ಯಾಮ್ ಮತ್ತು ಫೋಗ್ ಲ್ಯಾಂಪ್ ಹೌಸಿಂಗ್, ಕೆಂಪು ಕಾಂಸ್ಟ್ರಾಕ್ಟಿಂಗ್ ಡಿಟೈಲಿಂಗ್, ಅರ್ ವೆಂಟ್ಸ್ ಆಯ್ಕೆಗಳನ್ನು ಹೊಂದಿದ್ದು, ಜೊತೆಗೆ ಸ್ಮೋಕ್ಡ್ ಹೇಡ್ ಲ್ಯಾಂಪ್ಸ್, ಸೈಡ್ ಸ್ಕರ್ಟ್ಸ್ ಮತ್ತು ರೇರ್ ಡಿಫ್ಯೂಸರ್ ಅನ್ನು ಕಾರುಗಳಿಗೆ ಸ್ಪೋರ್ಟಿ ಲುಕ್ ನೀಡಿವೆ.

ಕಾಯುವಿಕೆ ಅಂತ್ಯ- ಅಕ್ಟೋಬರ್ 23ಕ್ಕೆ ಟಾಟಾ ಜೆಟಿಪಿ ವರ್ಷನ್ ಟಿಯಾಗೊ, ಟಿಗೋರ್ ಬಿಡುಗಡೆ

ಕಾರಿನ ಚಕ್ರದ ಉದ್ದಳತೆಯು ರೆಗ್ಯುಲರ್ ಆವೃತ್ತಿಯಂತೆಯೇ 15 ಇಂಚಿನ ಡೈಮಂಡ್ ಕಟ್ ಫಿನಿಶ್ ಹೊಂದಿರುವುದೆ ವಿಶೇಷವಾಗಿದ್ದು, ಕಾರಿನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನು ಹೊಂದಿವೆ.

MOST READ:ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುತ್ತಿರುವ ಹೊಸ ಸ್ಯಾಂಟ್ರೋದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?

ಕಾಯುವಿಕೆ ಅಂತ್ಯ- ಅಕ್ಟೋಬರ್ 23ಕ್ಕೆ ಟಾಟಾ ಜೆಟಿಪಿ ವರ್ಷನ್ ಟಿಯಾಗೊ, ಟಿಗೋರ್ ಬಿಡುಗಡೆ

ಕಾರಿನ ಒಳಗೆ ಬ್ಲಾಕ್ ಥೀಮ್, ಸೀಟುಗಳಿಗೆ ರಿಚ್ ಲೆದರ್ ಫಿನಿಶ್, ಅಲ್ಯುಮಿನಿಂ ಪೆಡಲ್ಸ್ ಹೊಂದಿದ್ದು, ಅಪ್ ಗ್ರೇಡ್ ಪಡೆದುಕೊಂಡಂತಹ ಟಚ್-ಸ್ಕ್ರೀನ್ ಸಿಸ್ಟಂ, ಇನ್ಫೋಟೈನ್‌ಮೆಂಟ್ ಸಿಸ್ಟಂ, ಮತ್ತು ಹರ್ಮಾನ್ 8 ಸ್ಪೀಕರ್ ಸಿಸ್ಟಂ ಅನ್ನು ಹೊಂದಿದೆ.

ಕಾಯುವಿಕೆ ಅಂತ್ಯ- ಅಕ್ಟೋಬರ್ 23ಕ್ಕೆ ಟಾಟಾ ಜೆಟಿಪಿ ವರ್ಷನ್ ಟಿಯಾಗೊ, ಟಿಗೋರ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ನೆಕ್ಸಾನ್ ಮಾದರಿಯಲ್ಲೇ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೋಡಣೆ ಹೊಂದಿರಲಿದ್ದು, ಸದ್ಯ ನೆಕ್ಸಾನ್ ಕಾರುಗಳ 108-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್‌ಗಿಂತಲೂ ಟಿಯಾಗೊ ಜೆಟಿಪಿ ಕಾರು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಉತ್ಪಾದಿಸಲಿದೆ.

MOST READ:ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಕಾಯುವಿಕೆ ಅಂತ್ಯ- ಅಕ್ಟೋಬರ್ 23ಕ್ಕೆ ಟಾಟಾ ಜೆಟಿಪಿ ವರ್ಷನ್ ಟಿಯಾಗೊ, ಟಿಗೋರ್ ಬಿಡುಗಡೆ

ಹೀಗಾಗಿ ಟಾಟಾ ಸಂಸ್ಥೆಯ ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಎರಡೂ ಕಾರುಗಳು ಚಾಲಕರಿಗೆ ಉತ್ತಮ ರೈಡ್ ಮತ್ತು ಹ್ಯಾಂಡ್ಲಿಂಗ್ ಅನುಭವವನ್ನು ನೀಡಲಿದ್ದು, ಗ್ರಾಹಕರು ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಮೈಲೇಜ್ ಕೊಡುವಂತಹ ರೆಗ್ಯುಲರ್ ಟಿಯಾಗೊ, ಟಿಗೋರ್ ಅಥವಾ ಸ್ಪೋರ್ಟ್ ಡ್ರೈವ್ ಅನುಭವಕ್ಕಾಗಿ ಜಿಟಿಪಿ ಆವೃತ್ತಿಯ ಕಾರುಗಳನ್ನು ಬಳಸಬಹುದಾಗಿದೆ.

Article Published On: Monday, October 15, 2018, 19:56 [IST]
English summary
Tata Tiago & Tigor JTP Models To Be Launched On October 23 — The Wait Is Finally Over For Tata Fans.
Read more on tata motors new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+