ಟಿಗೋರ್ 'ಬಜ್' ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಟಾಟಾ ಮೋಟಾರ್ಸ್ ಸಂಸ್ಥೆಯು ಲಿಮಿಟೆಡ್ ಎಡಿಷನ್ ಮಾದರಿಯಾದ ಟಿಗೋರ್ ಬಜ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ್ದು, ಟಿಗೋರ್ ಬಿಡುಗಡೆಯಾದ ಪ್ರಥಮ ವರ್ಷದ ಸಂಭ್ರಮಕ್ಕಾಗಿ ಸ್ಪೆಷಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಟಾಟಾ ಸಂಸ್ಥೆಯು ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಕಾರುಗಳ ಮಾರಾಟದಲ್ಲಿ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಮಾರಾಟ ಮಾಡುವ ತವಕದಲ್ಲಿದೆ. ಹೀಗಾಗಿಯೇ ವರ್ಷದ ಸಂಭ್ರಮಕ್ಕಾಗಿ ಟಿಗೋರ್ ಬಜ್ ಎಡಿಷನ್ ಬಿಡುಗಡೆ ಮಾಡಿದ್ದು, ಈ ಕಾರು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿವೆ.

ಕಾರಿನ ಬೆಲೆಗಳು (ಎಕ್ಸ್‌ಶೋರಂ ದೆಹಲಿ)
ಟಿಗೋರ್ 'ಬಜ್' ಪೆಟ್ರೋಲ್ ವರ್ಷನ್- ರೂ. 5.68 ಲಕ್ಷ
ಟಿಗೋರ್ 'ಬಜ್' ಡಿಸೇಲ್ ವರ್ಷನ್- ರೂ. 6.57 ಲಕ್ಷ

ಇನ್ನು ಹೊಸದಾಗಿ ಬಿಡುಗಡೆಗೊಂಡಿರುವ ಟಾಟಾ ಟಿಗೋರ್ ಬಜ್ ಕಾರುಗಳು ಸಾಮಾನ್ಯ ಟಿಗೋರ್ ಎಡಿಷನ್ ಕಾರುಗಳಿಗಿಂತ ವಿನ್ಯಾಸದಲ್ಲಿ ತುಸು ಬದಲಾವಣೆಗಳನ್ನು ಪಡೆದಿದ್ದು, ಒವಿಆರ್‍ಎಮ್‍ಎಸ್‍ಗಳನ್ನು ಪಿಯಾನೊ ಬ್ಲಾಕ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಕಾರಿನ ಒಳಭಾಗದ ಮಧ್ಯದಲ್ಲಿ ಮತ್ತು ಎಸಿ ವೆಂಟ್ಸ್ ಅನ್ನು ಕೆಂಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಫಾಗ್ ಲೈಟ್ ಮತ್ತು ಕ್ರೋಮ್ ಬ್ರೆಜಲ್ ಅನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಜೊತೆಗೆ ಬಜ್ ಸ್ಪೆಷಲ್ ಎಡಿಷನ್ ಲೊಗೊ ಸಹ ಇರಲಿದ್ದು, ಇದು ಕಾರಿನ ಲುಕ್ ಹೆಚ್ಚಿಸಲಿದೆ.

ಇದಲ್ಲದೆ ಕಾರಿನ ವಿಂಡೋ ವೈಸ್ಟ್ ಲೈನ್ ಅನ್ನು ಕೂಡಾ ಕಪ್ಪು ಬಣ್ಣವನ್ನು ಪಡೆದುಕೊಂಡಿದೆ. ಟಿಯಾಗೊ ಮತ್ತು ಟಿಗೋರ್ ಕಾರುಗಳು ಪ್ಯಾಸೆಂಜರ್ ವೆಹಿಕಲ್ ಸೆಗ್ಮೆಂಟ್‍ನಲ್ಲಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲೆಂದೆ ಟೀಗೋರ್ ಬಜ್ ಕಾರನ್ನು ಬಿಡುಗಡೆಗೊಳಿಸಲಾಗಿದೆ.

ಟಾಟಾ ಟಿಗೊರ್ ಬಜ್ ಸ್ಪೆಷಲ್ ಎಡಿಷನ್ ಕಾರುಗಳಲ್ಲಿ 5 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಸೀಟ್‍ಗಳನ್ನು ಕಪ್ಪು ಮತ್ತು ಕೆಂಪು ಬಣ್ಣದ ಪಟ್ಟಿಯಿಂದ ಸಜ್ಜುಗೊಂಡಿರುವುದು ಗ್ರಾಹಕರನ್ನು ಮೊದಲ ನೋಟದಲ್ಲೇ ಸೆಳೆಯಬಲ್ಲದು.

ಎಂಜಿನ್ ಸಾಮರ್ಥ್ಯ
ಲಿಮಿಟೆಡ್ ಎಡಿಷನ್ ಮಾದರಿಯಾದ ಟಾಟಾ ಟಿಗೊರ್ ಬಜ್ ಕಾರುಗಳು 1.2 ಲೀಟರ್ ರೆವೋಟ್ರಾನ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 84-ಬಿಹೆಚ್‍ಪಿ ಮತ್ತು 114-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಹಾಗೆಯೇ ಡೀಸೆಲ್ ಮಾದರಿಯು1.5-ಲೀಟರ್ ರೆವೋಟ್ರಾನ್ 3 ಸಿಲಿಂಡರ್ ಡೀಸೆಲ್ ಎಂಜಿನ್ ಸಹಾಯದಿಂದ 69-ಬಿಹೆಚ್‍ಪಿ ಮತ್ತು 140-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು ಎರಡು ಎಂಜಿನ್‍ಗಳು ಸಹ 5-ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಗ್ರಾಹಕರ ಆಕರ್ಷಣೆಗಾಗಿ ಲಿಮಿಟೆಡ್ ಆವೃತ್ತಿಯನ್ನು ಸಿದ್ದಗೊಳಿಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಬಜ್ ಎಡಿಷನ್ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದ್ದು, ಪ್ರಿಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಬಜ್ ಸ್ಪೆಷಲ್ ಎಡಿಷನ್ ಕಾರುಗಳು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿವೆ.


Click it and Unblock the Notifications








