ಬರಲಿದೆ ಟಾಟಾ ಟಿಗೊರ್ ಬಜ್ ಲಿಮಿಟೆಡ್ ಎಡಿಶನ್ ಕಾರು..
ದೇಶಿಯ ವಾಹನ ತಯಾರಕ ಸಂಸ್ಥಯಾದ ಟಾಟಾ ಮೋಟಾರ್ಸ್ ತಮ್ಮ ಟಿಗೊರ್ ಬಜ್ ಲಿಮಿಟೆಡ್ ಎಡಿಶನ್ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಬಿಡುಗಡೆಗು ಮುನ್ನ ಡೀಲರ್‍ನ ಹತ್ತಿರ ಯಾವುದೆ ಮುಸುಕಿಲ್ಲದೆ ಕಾಣಿಸಿಕೊಂಡಿದೆ.
ದೇಶಿಯ ವಾಹನ ತಯಾರಕ ಸಂಸ್ಥಯಾದ ಟಾಟಾ ಮೋಟಾರ್ಸ್ ತಮ್ಮ ಟಿಗೊರ್ ಬಜ್ ಲಿಮಿಟೆಡ್ ಎಡಿಶನ್ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಬಿಡುಗಡೆಗು ಮುನ್ನ ಡೀಲರ್‍ನ ಹತ್ತಿರ ಯಾವುದೆ ಮುಸುಕಿಲ್ಲದೆ ಕಾಣಿಸಿಕೊಂಡಿದೆ. ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಬಿಡುಗಡೆಗೊಂಡ ಟಾಟಾ ಟಿಯಾಗೊ ವಿಜ್ ಕಾರಿನಂತೆಯೆ ಈ ಕಾರನ್ನು ಕೂಡ ಸಂಸ್ಥೆಯ ಮಾರಟವನ್ನು ಹೆಚ್ಚಿಸಲು ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಟಾಟಾ ಲಿಮಿಟೆಡ್ ಎಡಿಶನ್ ಕಾರಿನ ಹಿಂಭಾಗದಲ್ಲಿ ಬಜ್ ಬ್ಯಾಡ್ಜಿಂಗ್ ಅನ್ನು ಪಡೆದಿದ್ದು, ಕೆಂಪು ಮತ್ತು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಇನ್ನು ಕಾರಿನ ಬಿಡುಗಡೆಯ ಬಗ್ಗೆ ಸಂಸ್ಥೆಯು ಯಾವುದೇ ಮಾಹಿತಿಯನ್ನು ಹೊರಹಾಕಲಿಲ್ಲವಾದರೂ, ಇದೇ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಹೊಸದಾಗಿ ಬಿಡುಗಡೆಗೊಳ್ಳಲಿರುವ ಟಾಟಾ ಟಿಗೊರ್ ಬಜ್ ಕಾರು ಸಾಧಾರಣ ಎಡಿಶನ್ ಕಾರುಗಳಿಗಿಂತ ವಿನ್ಯಾಸದಲ್ಲಿ ಬದಲಾವಣೆಗಳನ್ನು ಪಡೆದಿದ್ದು, ಒವಿಆರ್‍ಎಮ್‍ಎಸ್‍ಗಳನ್ನು ಪಿಯಾನೊ ಬ್ಲಾಕ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಇನ್ನು ಕಾರಿನ ಒಳಭಾಗದಲ್ಲಿ ಮಧ್ಯಭಾಗದಲ್ಲಿ ಮತ್ತು ಎಸಿ ವೆಂಟ್ಸ್ ಅನ್ನು ಕೆಂಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಫಾಗ್ ಲೈಟ್ ಮತ್ತು ಕ್ರೋಮ್ ಬೆಜೆಲ್ ಅನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಇದಲ್ಲದೆ ಕಾರಿನ ವಿಂಡೋ ವೈಸ್ಟ್ ಲೈನ್ ಅನ್ನು ಕೂಡ ಕಪ್ಪು ಬಣ್ಣವನ್ನು ಪಡೆದುಕೊಂಡಿದೆ. ಟಿಯಾಗೊ ಮತ್ತು ಟಿಗೋರ್ ಕಾರುಗಳು ಪ್ಯಾಸೆಂಜರ್ ವೆಹಿಕಲ್ ಸೆಗ್ಮೆಂಟ್‍ನಲ್ಲಿ ಯಷಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲಿ ಟೀಗೋರ್ ಬಜ್ ಕಾರನ್ನು ಬಿಡುಗಡೆಗೊಳಿಸಲಿದೆ.

ಡೀಲರ್‍ನ ಹತ್ತಿರ ಕಾಣಿಸಿಕೊಂಡ ಲಿಮಿಟೆಡ್ ಎಡಿಶನ್ ಟಾಟಾ ಟಿಗೊರ್ ಬಜ್ ಕಾರು 5 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಸೀಟ್‍ಗಳನ್ನು ಕಪ್ಪು ಮತ್ತು ಕೆಂಪು ಬಣ್ಣದ ಪಟ್ಟಿಯಿಂದ ಸಜ್ಜುಗೊಳಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಲಿಮಿಟೆಡ್ ಎಡಿಶನ್ ಟಾಟಾ ಟಿಗೊರ್ ಬಜ್ ಕಾರು 1.2 ಲೀಟರ್ ರೆವಲ್ಟ್ರಾನ್ 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 85 ಬಿಹೆಚ್‍ಪಿ ಮತ್ತು 114 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಇನ್ನು ಡೀಸೆಲ್ ಮಾದರಿಯ ಕಾರುಗಳು 1.05 ಲೀಟರ್ ರೆವಲ್ಟ್ರಾನ್ 3 ಸಿಲೆಂಡರ್ ಡೀಸೆಲ್ ಎಂಜಿನ್ ಸಹಾಯದಿಂದ 70ಬಿಹೆಚ್‍ಪಿ ಮತ್ತು 140 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು ಎರಡು ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.


Click it and Unblock the Notifications