ವರ್ಷಾಂತ್ಯಕ್ಕೆ ಖರೀದಿಗೆ ಲಭ್ಯವಾಗಲಿವೆ ಟಾಟಾ ಟಿಗೋರ್ ಇವಿ

ವರ್ಷಾಂತ್ಯಕ್ಕೆ ಖರೀದಿಗೆ ಲಭ್ಯವಾಗಲಿವೆ ಟಾಟಾ ಟಿಗೋರ್ ಇವಿ

By Praveen Sannamani

ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಭಾರೀ ಪ್ರಮಾಣ ಬಂಡವಾಳ ಹೂಡಿಕೆ ಮಾಡುತ್ತಿದ್ದು, ವರ್ಷಾಂತ್ಯಕ್ಕೆ ಟಿಗೋರ್ ಇವಿ ಕಾರುಗಳನ್ನು ಸರ್ಕಾರಿ ಸ್ವಾಮ್ಯದ ಇಇಎಸ್ಎಲ್ ಸಂಸ್ಥೆಗೆ ಅಷ್ಟೇ ಅಲ್ಲದೇ ಖಾಸಗಿಯಾಗಿಯೂ ಎಲೆಕ್ಟ್ರಿಕ್ ಕಾರುಗಳ ಮಾರಾಟ ಮಾಡಲು ಮುಂದಾಗಿದೆ.

ವರ್ಷಾಂತ್ಯಕ್ಕೆ ಖರೀದಿಗೆ ಲಭ್ಯವಾಗಲಿವೆ ಟಾಟಾ ಟಿಗೋರ್ ಇವಿ

ಸದ್ಯ ಟಾಟಾ ಸಂಸ್ಥೆಯು ನಿರ್ಮಾಣ ಮಾಡುತ್ತಿರುವ ಎಲೆಕ್ಟ್ರಿಕ್ ಟಿಗೋರ್ ಕಾರುಗಳನ್ನು ಖರೀದಿ ಮಾಡುತ್ತಿರುವ ಇಇಎಸ್ಎಲ್ ಸಂಸ್ಥೆಯು ಸರ್ಕಾರಿ ಕಚೇರಿಗಳಿಗೆ ಬೇಕಾದ ಕಾರುಗಳ ಪೂರೈಕೆಗಾಗಿ ಟಾಟಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ 2 ತಿಂಗಳ ಅವಧಿಯಲ್ಲಿ 1 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸುವಂತೆ ಬೇಡಿಕೆ ಸಲ್ಲಿಸಿದೆ.

ವರ್ಷಾಂತ್ಯಕ್ಕೆ ಖರೀದಿಗೆ ಲಭ್ಯವಾಗಲಿವೆ ಟಾಟಾ ಟಿಗೋರ್ ಇವಿ

ಇದಕ್ಕೆ ಒಪ್ಪಿಗೆ ಸೂಚಿಸಿರುವ ಟಾಟಾ ಸಂಸ್ಥೆಯು ಸಹ ಅಗತ್ಯ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯುವ ಮೂಲಕ ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸಲು ಯೋಜನೆ ರೂಪಿಸಿದ್ದು, ಕೇವಲ ಸರ್ಕಾರಿ ಕಚೇರಿಗಳಿಗೆ ಮಾತ್ರವಲ್ಲದೇ ಖಾಸಗಿಯಾಗಿಯು ಇವಿ ಟಿಗೋರ್ ಕಾರುಗಳನ್ನು ಖರೀದಿಸಲು ಅವಕಾಶ ನೀಡುತ್ತಿದೆ.

ವರ್ಷಾಂತ್ಯಕ್ಕೆ ಖರೀದಿಗೆ ಲಭ್ಯವಾಗಲಿವೆ ಟಾಟಾ ಟಿಗೋರ್ ಇವಿ

ಸಾರ್ವಜನಿಕ ವಲಯದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಇದೇ ಕಾರಣಕ್ಕಾಗಿ ಟಾಟಾ ಸಂಸ್ಥೆಯು ತನ್ನ ಇವಿ ಟಿಗೋರ್ ಕಾರನ್ನ ಖಾಸಗಿಯಾಗಿಯು ಖರೀದಿಸುವ ಅವಕಾಶ ಒದಗಿಸುತ್ತಿದ್ದು, ಇದಕ್ಕೂ ದೇಶದ ಪ್ರಮುಖ ನಗರಗಳಲ್ಲಿ ಅಗತ್ಯ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯುವ ಇರಾದೆಯಲ್ಲಿದೆ.

ವರ್ಷಾಂತ್ಯಕ್ಕೆ ಖರೀದಿಗೆ ಲಭ್ಯವಾಗಲಿವೆ ಟಾಟಾ ಟಿಗೋರ್ ಇವಿ

ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಟಿಗೋರ್ ಎಲೆಕ್ಟ್ರಿಕ್ ಕಾರುಗಳು 40ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದೊಂದಿಗೆ ಇತರೆ ಇವಿ ಕಾರುಗಳಿಂತಲೂ ಉತ್ತಮವಾಗಿವೆ ಎಂಬುವುದು ಈಗಾಗಲೇ ಸಾಬೀತಾಗಿದ್ದು, ಇದೇ ಕಾರಣಕ್ಕೆ ಇಇಎಸ್ಎಲ್ ಸಂಸ್ಥೆಯು ಟಿಗೋರ್ ಇವಿ ಕಾರುಗಳನ್ನೇ ಆಯ್ಕೆ ಮಾಡಿದೆ.

ವರ್ಷಾಂತ್ಯಕ್ಕೆ ಖರೀದಿಗೆ ಲಭ್ಯವಾಗಲಿವೆ ಟಾಟಾ ಟಿಗೋರ್ ಇವಿ

ಜೊತೆಗೆ 2+3 ಪ್ರಯಾಣಿಕ ಸೀಟುಗಳ ವ್ಯವಸ್ಥೆಯನ್ನು ಹೊಂದಿರುವ ಟಿಗೋರ್ ಎಲೆಕ್ಟ್ರಿಕ್ ಕಾರುಗಳು, 1,216 ಕೆಜಿ ಭಾರ ಪಡೆದುಕೊಳ್ಳುವ ಮೂಲಕ ಮಹೀಂದ್ರಾ ವೆರಿಟೋ ಕಾರಿಗಿಂತ 200 ಕೆಜಿಯಷ್ಚು ಹಗುರವಾಗಿದೆ ಎನ್ನಲಾಗಿದೆ.

ವರ್ಷಾಂತ್ಯಕ್ಕೆ ಖರೀದಿಗೆ ಲಭ್ಯವಾಗಲಿವೆ ಟಾಟಾ ಟಿಗೋರ್ ಇವಿ

ಬ್ಯಾಟರಿ ಸಾಮರ್ಥ್ಯ

ಟಿಗೋರ್ ಎಲೆಕ್ಟ್ರಿಕ್ ಕಾರು ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಬಳಕೆ ಮಾಡಲಾಗಿದ್ದು, ಒಂದು ಬಾರಿ ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜಿಂಗ್ ಮಾಡಿದಲ್ಲಿ ಗರಿಷ್ಠವಾಗಿ 150 ಕಿ.ಮಿ ಮೈಲೇಜ್ ಒದಗಿಸಲಿದೆ ಎಂದು ಟಾಟಾ ಸಂಸ್ಥೆ ಹೇಳಿಕೊಂಡಿದೆ.

ವರ್ಷಾಂತ್ಯಕ್ಕೆ ಖರೀದಿಗೆ ಲಭ್ಯವಾಗಲಿವೆ ಟಾಟಾ ಟಿಗೋರ್ ಇವಿ

ಕಾರಿನ ಬೆಲೆಗಳು

ಎಲೆಕ್ಟ್ರಿಕ್ ಕಾರುಗಳಲ್ಲಿ ಸದ್ಯ ಮಹೀಂದ್ರಾ ಇ ವೆರಿಟೊ ಸಹ ಸದ್ದು ಮಾಡುತ್ತಿದ್ದು, ಅದಕ್ಕಿಂತೂ ಹೆಚ್ಚಿನ ವೈಶಿಷ್ಟ್ಯತೆ ಹೊಂದಿರುವ ಟಾಟಾ ಇವಿ ಟಿಗೋರ್ ಕಾರುಗಳು ಎಕ್ಸ್‌ಶೋರಂ ಪ್ರಕಾರ ರೂ.9 ಲಕ್ಷ ದಿಂದ ರೂ. 10 ಲಕ್ಷಕ್ಕೆ ಆರಂಭಿಕವಾಗಿ ಲಭ್ಯವಾಗುವ ಸಾಧ್ಯತೆಗಳಿವೆ.

ವರ್ಷಾಂತ್ಯಕ್ಕೆ ಖರೀದಿಗೆ ಲಭ್ಯವಾಗಲಿವೆ ಟಾಟಾ ಟಿಗೋರ್ ಇವಿ

ಹೀಗಾಗಿ ಇದು ಭಾರತೀಯ ಗ್ರಾಹಕರನ್ನು ಸೆಳೆಯುವ ವಿಶ್ವಾಸವನ್ನು ಹೊಂದಿರುವ ಟಾಟಾ ಸಂಸ್ಥೆಯು, ಟಿಗೋರ್ ಜೊತೆಗೆ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ನ್ಯಾನೋ ಆವೃತ್ತಿಯನ್ನು ಕೂಡಾ ಎಲೆಕ್ಟ್ರಿಕ್ ಎಂಜಿನ್ ಜೊತೆಗೆ ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

Article Published On: Thursday, June 7, 2018, 13:19 [IST]
English summary
Tata Motors Planning Launch Of Tigor EV To Private Car Buyers.
Read more on tata motors electric car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+