ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿವೆ ಟಾಟಾ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

By Praveen Sannamani

ದೇಶದ ಅತಿ ದೊಡ್ಡ ವಾಹನ ನಿರ್ಮಾಣ ಸಂಸ್ಥೆಯಾದ ಟಾಟಾ ಮೋಟಾರ್ಸ್ ಮುಂಬರುವ ಉತ್ಸವ ದಿನಗಳಲ್ಲಿ ಹೊಚ್ಚ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ದೇಶಿಯ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಹೊಸ ಟಾಟಾ ಟಿಯಗೊ ಮತ್ತು ಟಾಟಾ ಟಿಗೋರ್ ಕಾರುಗಳ ಸ್ಪೋರ್ಟ್ಸ್ ಆವೃತ್ತಿ, ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಕಾರುಗಳನ್ನು 2018ರ ಆಟೋ ಎಕ್ಸ್ ಪೋನಲ್ಲಿ ಅನಾವರಣಗೊಳಿಸಿತ್ತು. ಇದೀಗ ಕಾರುಗಳ ಬಿಡುಗಡೆಯಾಗಿ ಅಂತಿಮ ಹಂತದ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನ ನಡೆಸುತ್ತಿದ್ದು, ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತಿರುವ ಹೊಸ ಕಾರುಗಳು ಟಾಟಾ ಸಂಸ್ಥೆಯ ಕಾರು ಮಾರಾಟದಲ್ಲಿ ಹೊಸ ಸಂಚಲನ ಉಂಟುಮಾಡಲಿವೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ವರದಿಗಳ ಪ್ರಕಾರ, ಮುಂದಿನ ದಸರಾ ಅಥವಾ ದೀಪಾವಳಿ ಅವಧಿಯಲ್ಲಿ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳು ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ತಮಿಳುನಾಡಿನ ಹಲವು ಕಡೆ ಸ್ಪಾಟ್ ಟೆಸ್ಟಿಂಗ್ ಸಂದರ್ಭದಲ್ಲಿ ಹೊಸ ಕಾರುಗಳಲ್ಲಿ ಸ್ಪೋರ್ಟಿ ಲುಕ್ ಒದಗಿಸಿರುವುದು ಬಹಿರಂಗವಾಗಿದೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಜೆಟಿಪಿ ಎಂಬುದರ ಪೂರ್ಣರೂಪ ಜೇಯಮ್ ಟಾಟಾ ಫರ್ಫಾಮನ್ಸ್ (Jayem Tata Performance) ಎಂಬುದಾಗಿದೆ. ಟಾಟಾ ಮೋಟಾರ್ಸ್ ಹಾಗೂ ಜೇಯಮ್ ಆಟೋಮೋಟಿವ್ಸ್ ಜಂಟಿಯಾಗಿ ತಾಜಾ ಟಾಟಾ ಕಾರುಗಳ ಶಕ್ತಿಶಾಲಿ ಮಾಡೆಲ್‌ಗಳನ್ನು ನಿರ್ಮಿಸುತ್ತಿದೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಹೀಗಾಗಿ ಸ್ಟ್ಯಾಂಡರ್ಡ್ ಮಾದರಿಗಳಿಗೆ ಹೋಲಿಸಿದಾಗ ಹೊಸ ಕಾರುಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿದ್ದು, ಕ್ರೀಡಾತ್ಮಕ ಬಂಪರ್ ಜತೆಗೆ ಹೊಸತಾದ ಫಾಗ್ ಲ್ಯಾಂಪ್ ಹೌಸಿಂಗ್ ಹಾಗೂ ಅಗಲವಾದ ಲೋವರ್ ಗ್ರಿಲ್ ಇರಲಿದೆ. ಕಪ್ಪು ವರ್ಣ ಸುತ್ತುವರಿದ ಹೆಡ್‌ಲ್ಯಾಂಪ್ ಜತೆಗೆ ಜೆಟಿಪಿ ಲೊಗೊ ಸಹ ಪ್ರಮುಖ ಆಕರ್ಷಣೆಯಾಗಲಿದ್ದು, ಹಿಂಭಾಗದಲ್ಲೂ ರೂಫ್ ಸ್ಪಾಯ್ಲರ್ ಹೆಚ್ಚಿನ ಕ್ರೀಡಾತ್ಮಕ ಲುಕ್ ನೀಡಲಿದೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಟಾಟಾ ಟಿಯಾಗೊ ಜಿಟಿಪಿ ಮತ್ತು ಟಿಗೋರ್ ಜೆಟಿಪಿ ಅಗಲವಾದ ಏರ್ ಡ್ಯಾಮ್ ಮತ್ತು ಫೋಗ್ ಲ್ಯಾಂಪ್ ಹೌಸಿಂಗ್, ಕೆಂಪು ಕಾಂಸ್ಟ್ರಾಕ್ಟಿಂಗ್ ಡಿಟೈಲಿಂಗ್, ಅರ್ ವೆಂಟ್ಸ್ ಆಯ್ಕೆಗಳನ್ನು ಹೊಂದಿದ್ದು, ಜೊತೆಗೆ ಸ್ಮೋಕ್ಡ್ ಹೇಡ್ ಲ್ಯಾಂಪ್ಸ್, ಸೈಡ್ ಸ್ಕರ್ಟ್ಸ್ ಮತ್ತು ರೇರ್ ಡಿಫ್ಯೂಸರ್ ಅನ್ನು ಕಾರುಗಳಿಗೆ ಸ್ಪೋರ್ಟಿ ಲುಕ್ ನೀಡಿವೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಕಾರಿನ ಚಕ್ರದ ಉದ್ದಳತೆಯು ರೆಗ್ಯುಲರ್ ಆವೃತ್ತಿಯಂತೆಯೇ 15 ಇಂಚಿನ ಡೈಮಂಡ್ ಕಟ್ ಫಿನಿಶ್ ಹೊಂದಿರುವುದೆ ವಿಶೇಷವಾಗಿದ್ದು, ಕಾರಿನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನು ಹೊಂದಿವೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಕಾರಿನ ಒಳಗೆ ಬ್ಲಾಕ್ ಥೀಮ್, ಸೀಟುಗಳಿಗೆ ರಿಚ್ ಲೆದರ್ ಫಿನಿಶ್, ಅಲ್ಯುಮಿನಿಂ ಪೆಡಲ್ಸ್ ಹೊಂದಿದ್ದು, ಅಪ್ ಗ್ರೇಡ್ ಪಡೆದುಕೊಂಡಂತಹ ಟಚ್-ಸ್ಕ್ರೀನ್ ಸಿಸ್ಟಂ, ಇನ್ಫೋಟೈನ್‌ಮೆಂಟ್ ಸಿಸ್ಟಂ, ಮತ್ತು ಹರ್ಮಾನ್ 8 ಸ್ಪೀಕರ್ ಸಿಸ್ಟಂ ಅನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ನೆಕ್ಸಾನ್ ಎಸ್‌ಯುವಿ ಕಾರಿನ 1.2-ಲೀಟರ್ ಟರ್ಬೋಚಾರ್ಜ್ಡ್ 3 ಸಿಲಿಂಡರ್ ಎಂಜಿನ್‌ನ್ನು ಹೋಲುತ್ತಿದ್ದು, 109-ಬಿಹೆಚ್‌ಪಿ ಮತ್ತು 150-ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಗೇರ್ ರೆಷಿಯೊವನ್ನು 5 ಸ್ಪೀಡ್ ಮಾನುವಲ್ ಗೇರ್ ಬಾಕ್ಸಿಗೆ ಜೋಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಎರಡೂ ಕಾರುಗಳು ಚಾಲಕರಿಗೆ ಉತ್ತಮ ರೈಡ್ ಮತ್ತು ಹ್ಯಾಂಡ್ಲಿಂಗ್ ಅನುಭವವನ್ನು ನೀಡಲಿದ್ದು, ಗ್ರಾಹಕರು ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಮೈಲೇಜ್ ಕೊಡುವಂತಹ ರೆಗ್ಯುಲರ್ ಟಿಯಾಗೊ, ಟಿಗೋರ್ ಅಥವಾ ಸ್ಪೋರ್ಟ್ ಡ್ರೈವ್ ಅನುಭವಕ್ಕಾಗಿ ಜಿಟಿಪಿ ಆವೃತ್ತಿಯ ಟಿಯಾಗೊ ಕಾರನ್ನು ಬಳಸಬಹುದಾಗಿದೆ.

Spy Image: rushlane

Article Published On: Saturday, July 21, 2018, 12:15 [IST]
English summary
Tata Tigor JTP Sedan India Launch by Diwali This Year.
Read more on tata motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+