ಟಾಟಾ ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಬಿಡುಗಡೆ ಮಾಹಿತಿ ಇಲ್ಲಿದೆ...

ದೇಶಿಯ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಹೊಸ ಟಾಟಾ ಟಿಯಗೊ ಮತ್ತು ಟಾಟಾ ಟಿಗೋರ್ ಕಾರುಗಳ ಸ್ಪೋರ್ಟ್ಸ್ ಆವೃತ್ತಿ ಅನಾವರಣ.

By Rahul Ts

ದೇಶಿಯ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಹೊಸ ಟಾಟಾ ಟಿಯಗೊ ಮತ್ತು ಟಾಟಾ ಟಿಗೋರ್ ಕಾರುಗಳ ಸ್ಪೋರ್ಟ್ಸ್ ಆವೃತ್ತಿ, ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಕಾರುಗಳನ್ನು 2018ರ ಆಟೋ ಎಕ್ಸ್ ಪೋನಲ್ಲಿ ಅನಾವರಣಗೊಳಿಸಲಾಗಿತ್ತು.

ಟಿಗೋರ್ ಜೆಟಿಪಿ ಮತ್ತುಟಿಯಾಗೊ ಜೆಟಿಪಿ ಬಿಡುಗಡೆ ಮಾಹಿತಿ ಇಲ್ಲಿದೆ...

ಎರಡು ಕಾರುಗಳ ತಯಾರಿಗಾಗಿ ಟಾಟಾ ಸಂಸ್ಥೆ ಕೊಯಂಬತ್ತೂರ್ ಮೂಲದ ಜಯೆಮ್ ಆಟೋಮೋಟಿವ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಮಾಹಿತಿಗಳ ಪ್ರಕಾರ ಇದೇ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಟಿಗೋರ್ ಜೆಟಿಪಿ ಮತ್ತುಟಿಯಾಗೊ ಜೆಟಿಪಿ ಬಿಡುಗಡೆ ಮಾಹಿತಿ ಇಲ್ಲಿದೆ...

ಟಾಟಾ ಟಿಯಾಗೊ ಮತ್ತು ಜಯೆಮ್ ಮೋಟಾರ್ಸ್ ಸೇರಿ ತಯಾರಿಸಿರುವ ಮೊದಲ ಕಾರುಗಳಿವು, ಜಯೇಮ್ ಟಾಟಾ ಕಾರ್ಯಕ್ಷಮತೆಯನ್ನು ಸೂಚಿಸುವ 'ಜೆಟಿಪಿ' ಬ್ಯಾಡ್ಜ್ ಅನ್ನು ಪಡೆದುಕೊಂಡಿದ್ದು, ರೆಗ್ಯುಲರ್ ಆವೃತ್ತಿಗಳಿಗಿಂತ ಪರ್ಫಾರ್ಮೆಂಸ್ ಮತ್ತು ಕಾಸ್ಮೇಟಿಕ್ ಬದಲ್ಲವಣೆಗಳನ್ನು ಹೊಂದಿದೆ.

ಟಿಗೋರ್ ಜೆಟಿಪಿ ಮತ್ತುಟಿಯಾಗೊ ಜೆಟಿಪಿ ಬಿಡುಗಡೆ ಮಾಹಿತಿ ಇಲ್ಲಿದೆ...

ಟಾಟಾ ಟಿಯಾಗೊ ಜಿಟಿಪಿ ಮತ್ತು ಟಿಗೋರ್ ಜೆಟಿಪಿ ಅಗಲವಾದ ಏರ್ ಡ್ಯಾಮ್ ಮತ್ತು ಫೋಗ್ ಲ್ಯಾಂಪ್ ಹೌಸಿಂಗ್, ಕೆಂಪು ಕಾಂಸ್ಟ್ರಾಕ್ಟಿಂಗ್ ಡಿಟೈಲಿಂಗ್, ಅರ್ ವೆಂಟ್ಸ್ ಆಯ್ಕೆಗಳನ್ನು ಹೊಂದಿದ್ದು, ಜೊತೆಗೆ ಸ್ಮೋಕ್ಡ್ ಹೇಡ್ ಲ್ಯಾಂಪ್ಸ್, ಸೈಡ್ ಸ್ಕರ್ಟ್ಸ್ ಮತ್ತು ರೇರ್ ಡಿಫ್ಯೂಸರ್ ಅನ್ನು ಕಾರುಗಳಿಗೆ ಸ್ಪೋರ್ಟಿ ಲುಕ್ ನೀಡಿವೆ.

ಟಿಗೋರ್ ಜೆಟಿಪಿ ಮತ್ತುಟಿಯಾಗೊ ಜೆಟಿಪಿ ಬಿಡುಗಡೆ ಮಾಹಿತಿ ಇಲ್ಲಿದೆ...

ಕಾರಿನ ಚಕ್ರದ ಉದ್ದಳತೆಯು ರೆಗ್ಯುಲರ್ ಆವೃತ್ತಿಯಂತೆಯೇ 15 ಇಂಚಿನ ಡೈಮಂಡ್ ಕಟ್ ಫಿನಿಶ್ ಹೊಂದಿರುವುದೆ ವಿಶೇಷವಾಗಿದ್ದು, ಕಾರಿನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನು ಹೊಂದಿವೆ.

ಟಿಗೋರ್ ಜೆಟಿಪಿ ಮತ್ತುಟಿಯಾಗೊ ಜೆಟಿಪಿ ಬಿಡುಗಡೆ ಮಾಹಿತಿ ಇಲ್ಲಿದೆ...

ಕಾರಿನ ಒಳಗೆ ಬ್ಲಾಕ್ ಥೀಮ್, ಸೀಟುಗಳಿಗೆ ರಿಚ್ ಲೆದರ್ ಫಿನಿಶ್, ಅಲ್ಯುಮಿನಿಂ ಪೆಡಲ್ಸ್ ಹೊಂದಿದ್ದು, ಅಪ್ ಗ್ರೇಡ್ ಪಡೆದುಕೊಂಡಂತಹ ಟಚ್-ಸ್ಕ್ರೀನ್ ಸಿಸ್ಟಂ, ಇನ್ಫೋಟೈನ್‌ಮೆಂಟ್ ಸಿಸ್ಟಂ, ಮತ್ತು ಹರ್ಮಾನ್ 8 ಸ್ಪೀಕರ್ ಸಿಸ್ಟಂ ಅನ್ನು ಹೊಂದಿದೆ.

ಟಿಗೋರ್ ಜೆಟಿಪಿ ಮತ್ತುಟಿಯಾಗೊ ಜೆಟಿಪಿ ಬಿಡುಗಡೆ ಮಾಹಿತಿ ಇಲ್ಲಿದೆ...

ನೆಕ್ಸಾನ್ ಎಸ್‌ಯುವಿ ಕಾರಿನ 1.2-ಲೀಟರ್ ಟರ್ಬೋಚಾರ್ಜ್ಡ್ 3 ಸಿಲೆಂಡರ್ ಎಂಜಿನ್‌ನ್ನು ಹೋಲುತ್ತಿದ್ದು, 109-ಬಿಹೆಚ್‌ಪಿ ಮತ್ತು 150-ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಗೇರ್ ರೆಷಿಯೊವನ್ನು 5 ಸ್ಪೀಡ್ ಮಾನುವಲ್ ಗೇರ್ ಬಾಕ್ಸಿಗೆ ಜೋಡಿಸಲಾಗಿದೆ.

ಟಿಗೋರ್ ಜೆಟಿಪಿ ಮತ್ತುಟಿಯಾಗೊ ಜೆಟಿಪಿ ಬಿಡುಗಡೆ ಮಾಹಿತಿ ಇಲ್ಲಿದೆ...

ಎರಡೂ ಕಾರುಗಳು ಚಾಲಕರಿಗೆ ಉತ್ತಮ ರೈಡ್ ಮತ್ತು ಹ್ಯಾಂಡ್ಲಿಂಗ್ ಅನುಭವವನ್ನು ನೀಡಲಿದ್ದು, ಟಾಟಾ ಟಿಯಾಗೊ ಜಿಟಿಪಿ ಮತ್ತು ಟಾಟಾ ಟಿಗೋರ್ ಜಿಟಿಪಿ ಕಾರುಗಳು ಸಂಸ್ಥೆಗು ಹಾಗು ಪ್ರಾಮಾಣಿಕ ಕಾರುಗಳಾಗಿದ್ದು, ಗ್ರಾಹಕರು ಹೆಚ್ಚಿನ ಮೈಲೇಜ್ ಕೊಡುವಂತಹ ರೆಗ್ಯುಲರ್ ಟಿಯಾಗೊ ಅಥವ ಸ್ಪೋರ್ಟ್ ಡ್ರೈವ್ ಅನುಭವಕ್ಕಾಗಿ ಜಿಟಿಪಿ ಆವೃತ್ತಿಯ ಟಿಯಾಗೊ ಕಾರನ್ನು ಬಳಸಬಹುದಾಗಿದೆ.

Most Read Articles

Kannada
Read more on tata motors
English summary
Tata Tigor JTP Launch Details; Expected Price, Specs, Features & Images.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X