ಟಿಗೊರ್ ಸ್ಪೆಷಲ್ ಎಡಿಷನ್ ಕಾರನ್ನು ಪರಿಚಯಿಸಲಿದೆ ಟಾಟಾ ಮೋಟಾರ್ಸ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತಮ್ಮ ಜನಪ್ರಿಯ ಟಿಗೊರ್ ಕಾರಿನ ಸ್ಪೆಷಲ್ ಎಡಿಷನ್ ಅನ್ನು ಅಕ್ಟೋಬರ್ 10ರಂದು ಬಿಡುಗಡೆಗೊಳಿಸುವುದರ ಬಗ್ಗೆ ಸುಳಿವು ನೀಡಿದ್ದು, ಈ ಕಾರು ಜೆಟಿಪಿ ಮಾಡಲ್ ವೇರಿಯಂಟ್‍‍ಗಿಂತ ವಿಭಿನ್ನವಾದ ಹೊಸ ಮಾಡಲ್ ಆಗಿ ಬಿಡುಗಡೆಗೊಳ್ಳಲಿದೆ.

ಟಿಗೊರ್ ಸ್ಪೆಷಲ್ ಎಡಿಷನ್ ಕಾರನ್ನು ಪರಿಚಯಿಸಲಿದೆ ಟಾಟಾ ಮೋಟಾರ್ಸ್

ಹೊಸ ಟಾಟಾ ಟಿಗೊರ್ ಸ್ಪೆಷಲ್ ಎಡಿಷನ್ ಕಾರು ಹೊಸ ವಿನ್ಯಾಸ ವೈಶಿಷ್ಟ್ಯತೆ ಮತ್ತು ಉಪಕರಣಗಳನ್ನು ಪಡೆದುಕೊಳ್ಳಲಿದ್ದು, ಟಾಟಾ ಟಿಗೊರ್ ಸ್ಪೆಷಲ್ ಎಡಿಷನ್ ಕಾರು ತಾಂತ್ರಿಕವಾಗಿ ಹೊರತುಪಡಿಸಿ ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಮಾತ್ರ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ.

ಟಿಗೊರ್ ಸ್ಪೆಷಲ್ ಎಡಿಷನ್ ಕಾರನ್ನು ಪರಿಚಯಿಸಲಿದೆ ಟಾಟಾ ಮೋಟಾರ್ಸ್

ಹಬ್ಬದ ಋತುವಿನಲ್ಲಿ ಟಾಟಾ ಮೋಟಾರ್ಸ್ ತಮ್ಮ ಟಿಗೊರ್ ಕಾರಿನ ಸ್ಪೆಷಲ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸುವುದರಿಂದ ಮಾರಾಟದ ಶ್ರೇಣಿಯು ಹೆಚ್ಚಾಗಬಹುದೆಂಬ ಬರವಸೆ ಇದ್ದು, ವಿಶೇಷ ಆವೃತ್ತಿ ಕಾಸ್ಮೆಟಿಕ್ ನವೀಕರಣಗಳ ಜೊತೆಗೆ ಹೆಚ್ಚುವರಿ ವೈಶಿಷ್ಟ್ಯತೆಗಳು ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‍ಗಾಗಿ ಮಾರಾಟದಲ್ಲಿ ಹೆಚ್ಚಾಗುತ್ತದೆ.

ಟಿಗೊರ್ ಸ್ಪೆಷಲ್ ಎಡಿಷನ್ ಕಾರನ್ನು ಪರಿಚಯಿಸಲಿದೆ ಟಾಟಾ ಮೋಟಾರ್ಸ್

ಮೊದಲ ಬಾರಿಗೆ 2017ರಲ್ಲಿ ಬಿಡುಗಡೆಗೊಂಡ ಸಬ್-ಫೋರ್-ಮೀಟರ್ ಟಾಟಾ ಟಿಗೊರ್ ಕಾರು, ಟಿಯಾಗೊ ಹ್ಯಾಚ್‍‍ಭ್ಯಾಕ್ ಕಾರನ್ನು ಆಧರಿಸಿದೆ. ಬಿಡುಗಡೆಗೊಂಡಾಗಿನಿಂದಲೂ ಹೆಚ್ಚು ಮಾರಾಟವನ್ನು ಕಂಡ ಹ್ಯಾಚ್‍‍ಬ್ಯಾಕ್ ಆವೃತ್ತಿಯು ಸ್ಪೆಷಲ್ ಎಡಿಷನ್ ಕಾರು ಕೂಡಾ ಹೆಚ್ಚು ಮಾರಾಟದ ಸಂಖ್ಯೆಯನ್ನು ಕಾಣುವ ತವಕದಲ್ಲಿದೆ.

ಟಿಗೊರ್ ಸ್ಪೆಷಲ್ ಎಡಿಷನ್ ಕಾರನ್ನು ಪರಿಚಯಿಸಲಿದೆ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಸಂಸ್ಥೆಯು ಇತ್ತೀಚೆಗಷ್ಟೆ ತಮ್ಮ ಕ್ಯಾಂಪ್ಯಾಕ್ಟ್ ಸೆಡಾನ್ ಲಿಮಿಟೆಡ್ ಎಡಿಷನ್ ಟಿಗೊರ್ ಬಜ್ ಕಾರನ್ನು ಬಿಡುಗಡೆಗೊಳಿಸಿದ್ದು, ಬಜ್ ವೇರಿಯಂಟ್ ಕಾರು ವಿಭಿನ್ನವಾದ ಸ್ಟೈಲಿಂಗ್ ಫೀಚರ್ಸ್, ಬೆರ್ರಿ ರೆಡ್ ಹೈಲೈಟ್ಸ್ ಮತ್ತು ರೂಪ್ ವ್ರ್ಯಾಪ್ ಅನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಟಿಗೊರ್ ಸ್ಪೆಷಲ್ ಎಡಿಷನ್ ಕಾರನ್ನು ಪರಿಚಯಿಸಲಿದೆ ಟಾಟಾ ಮೋಟಾರ್ಸ್

ಟಾಟಾ ಟಿಗೊರ್ ಕಾರು ಪೆಟ್ರೋಲ್ ಹಾಗು ಡೀಸೆಲ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಆಧಾರಿತ ಕಾರು 1.2 ಲೀಟರ್ ರೆವಟ್ರಾನ್ ಪೆಟ್ರೋಲ್ ಎಂಜಿನ್ ಸಹಾಯದಿಂದ 85ಬಿಹೆಚ್‍ಪಿ ಮತ್ತು 114ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಟಿಗೊರ್ ಸ್ಪೆಷಲ್ ಎಡಿಷನ್ ಕಾರನ್ನು ಪರಿಚಯಿಸಲಿದೆ ಟಾಟಾ ಮೋಟಾರ್ಸ್

ಇನ್ನು ಡೀಸೆಲ್ ಮಾದರಿಯ ಟಾಟಾ ಟಿಗೊರ್ ಕಾರುಗಳು 1.05 ಲೀಟರ್ ರೆವೊಟ್ರಾನ್ ಡೀಸೆಲ್ ಎಂಜಿನ್ ಸಹಾಯದಿಂದ 70ಬಿಹೆಚ್‍‍ಪಿ ಮತ್ತು 140ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎರಡೂ ಎಂಜಿನ್‍ಗಳನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಟಿಗೊರ್ ಸ್ಪೆಷಲ್ ಎಡಿಷನ್ ಕಾರನ್ನು ಪರಿಚಯಿಸಲಿದೆ ಟಾಟಾ ಮೋಟಾರ್ಸ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟಾರ್ಸ್ ತಮ್ಮ ಸ್ಪೆಷಲ್ ಎಡಿಷನ್ ಟಿಗೊರ್ ಆವೃತ್ತಿಯನ್ನು ಭಾರತದ ಮಾರುಕಟ್ಟೆಯಲ್ಲಿ ಕೊಡುಗೆಯಾಗಿ ಸೇರಿಸಲಿವೆ. ಹೊಸ ಸ್ಪೆಷಲ್ ಎಡಿಷನ್ ಮಾದರಿಯು ಪ್ರಮಾಣಿತ ಆವೃತ್ತಿಯ ಮೇಲೆ ಚಿಕ್ಕ ಕಾಸ್ಮೆಟಿಕ್ ಮತ್ತು ಸಲಕರಣೆಗಳ ಪಟ್ಟಿ ನವೀಕರಣಗಳನ್ನು ನೀಡಲಿದೆ ಎಂಬ ನಿರೀಕ್ಷೆ ಇದೆ. ಸ್ಪೆಷಲ್ ಎಡಿಷನ್ ಟಿಗೊರ್ ಜೊತೆ ಹಬ್ಬದ ಅವಧಿಯಲ್ಲಿ ತಮ್ಮ ಕಾಂಪ್ಯಾಕ್ಟ್ ಸೆಡಾನ್ ಮಾರಾಟದ ಸಂಖ್ಯೆಯನ್ನು ಸುಧಾರಿಸಲು ಟಾಟಾ ಆಶಿಸುತ್ತಿದೆ.

Article Published On: Monday, October 1, 2018, 9:47 [IST]
English summary
Tata Motors To Introduce Special Edition Tigor Soon; Details Revealed
Read more on tata motors new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+