ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್...
ದೇಶಿಯಾ ಮಾರುಕಟ್ಟೆಯಲ್ಲಿ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿರುವ ಟಾಟಾ ಮೋಟಾರ್ಸ್ ತನ್ನ ಕಾರುಗಳ ಮೇಲೆ ಭಾರಿ ರಿಯಾಯತಿಯನ್ನು ಘೋಷಣೆ ಮಾಡಿದೆ.
ದೇಶಿಯಾ ಮಾರುಕಟ್ಟೆಯಲ್ಲಿ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿರುವ ಟಾಟಾ ಮೋಟಾರ್ಸ್ ತನ್ನ ಕಾರುಗಳ ಮೇಲೆ ಭಾರಿ ರಿಯಾಯತಿಯನ್ನು ಘೋಷಣೆ ಮಾಡಿದ್ದು, ಜೊತೆಗೆ ಆಯ್ದ ಗ್ರಾಹಕರು 1 ಲಕ್ಷಕ್ಕಿಂತ ಹೆಚ್ಚು ಬೆಲೆಯುಳ್ಳ ಬಹುಮಾನವನ್ನು ಸ್ಕ್ರಾಚ್ ಅಂಡ್ ವಿನ್ ಮೂಲಕ ಪಡೆಯಬಹುದಾಗಿದೆ.

ಟಾಟಾ ಸಂಸ್ಥೆಯು ತನ್ನ ವಿವಿಧ ಕಾರುಗಳ ಮೇಲೆ ಮಾರ್ಚ್ ಅವಧಿಯ ಡಿಸ್ಕೌಂಟ್ ಆಫರ್ ನೀಡುವುದಾಗಿ ಪ್ರಕಟಣೆ ಹೊರಡಿಸಿದ್ದು, ಯಾವ ಕಾರಿನ ಮೇಲೆ ಎಷ್ಟು ಪ್ರಮಾಣದ ರಿಯಾಯಿತಿ ನೀಡಲಿದೆ ಎಂಬುದರ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ಟಾಟಾ ಟಿಯಾಗೊ
ಟಾಟಾ ಮೋಟಾರ್ಸ್ ಸಂಸ್ಥೆಯ ಹ್ಯಾಚ್‍ಬ್ಯಾಕ್ ಕಾರುಗಳಲ್ಲಿ ಒಂದಾದ ಟಾಟಾ ಟಿಯಾಗೊ ಕಾರಿನ ಎಲ್ಲಾ ಡೀಸೆಲ್ ಆವೃತ್ತಿಗಳ ಮೇಲೆ ಉಚಿತವಾಗಿ ಮೊದಲ ಒಂದು ವರ್ಷದವರೆಗೆ ವಿಮೆ ನೀಡಲಿದ್ದು, ಇದಲ್ಲದೆ ಟಿಯಾಗೊ ಕಾರಿನ ಎಲ್ಲಾ ಆವೃತ್ತಿಗಳ ಮೇಲೆ ರೂ. 5 ಸಾವಿರ ಬೆಲೆ ಕಡಿತಗೊಳಿಸಲಾಗಿದೆ.

ಟಾಟಾ ಟಿಗೋರ್
ಟಿಗೋರ್ ಕಾರಿನ ಖರೀದಿ ಮೇಲೂ ರೂ. 5 ಸಾವಿರ ಕಡಿಮೆಗೊಳಿಸಿದ್ದು, ಟಿಯಾಗೊ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಮಾಡಲ್‍ಗಳ ಮೇಲೂ ಸಹ ಒಂದು ವರ್ಷದ ವರೆಗಿನ ಉಚಿತ ವಿಮೆ ಅನ್ನು ನೀಡಲಿದೆ.

ಟಾಟಾ ಬೋಲ್ಟ್
ಟಾಟಾ ಸಂಸ್ಥೆಯ ಬೋಲ್ಟ್ ಕಾರು ಹ್ಯಾಚ್‍ಬ್ಯಾಕ್ ಕಾರುಗಳ ಸರಣಿಯಲ್ಲಿ ಕಡಿಮೆ ಮಾರಾಟವಾಗುತ್ತಿದ್ದು, ಈ ಮೂಲಕ ಸಂಸ್ಥೆಯು ಈ ಕಾರಿನ ಮೇಲೆ ರೂ 50,000 ಸಾವಿರ ವರೆಗು ರಿಯಾಯಿತಿ ನೀಡಲಿದೆ.

ಗ್ರಾಹಕರು ರೂ 35,000 ಸಾವಿರದ ಮೊತ್ತವನ್ನು ಸ್ಟ್ರೈಟ್ ಕ್ಯಾಶ್ ರಿಯಾಯಿತಿಯನ್ನು ಪಡೆಯಬಹುದಾಗಿದ್ದು, ಇದಲ್ಲದೆ ಈ ಕಾರಿನ ಮೇಲೆ ರೂ 15,000 ಸಾವಿರದ ಎಕ್ಸ್ ಚೇಂಜ್ ಬೋನಸ್ ಅನ್ನು ಕೂಡ ಪಡೆಯಬಹುದಾಗಿದೆ.

ಟಾಟಾ ಜೆಸ್ಟ್
ಟಾಟಾ ಜೆಸ್ಟ್ ಕಾರಿನ ಮೇಲೆ ಕೂಡ ರಿಯಾಯಿತಿ ಹಾಗು ಬಹುಮಾನಗಳನ್ನು ಗೆಲ್ಲಬಹುದಾಗಿದ್ದು, ಉಚಿತವಾಗಿ ಮೊದಲ ವರ್ಷದ ವಿಮೆ ನೀಡಲಿದೆ. ಇದರ ಜೊತೆಗೆ ಗ್ರಾಹಕರು ಟಾಟಾ ಡೀಲರ್‍ಗಳ ಬಳಿ ಕಾರನ್ನು ಎಕ್ಸ್ ಚೇಂಜ್ ಮಾಡಿಕೊಂಡಲ್ಲಿ ರೂ 15,000 ಸಾವಿರ ಮೊತ್ತವನ್ನು ಬೋನಸ್ ರೂಪದಲ್ಲಿ ಪಡೆಯಬಹುದಾಗಿದೆ.

ಟಾಟಾ ಸಫಾರಿ ಸ್ಟೋರ್ಮ್
ಟಾಟಾ ಮೋಟಾರ್ಸ್ ಸಂಸ್ಥೆಯ ಎಸ್‍ಯುವಿ ಕಾರಿನ ಸರಣಿಯಲ್ಲಿ ಬಿಡುಗಡೆಗೊಂಡ ಸಫಾರಿ ಸ್ಟೋರ್ಮ್ ಕಾರಿನ ಮೇಲೆ ಸಂಸ್ಥೆಯು ಮೊದಲ ವರ್ಷದ ಉಚಿತ ವಿಮೆ ಮತ್ತುರೂ 15,000 ಸಾವಿರದ ಮೊತ್ತವನ್ನು ಎಕ್ಸ್ ಚೇಂಜ್ ಬೋನಸ್ ಅನ್ನು ಪಡೆಯಬಹುದಾಗಿದೆ.

ಟಾಟಾ ಹೆಕ್ಸಾ
ಈಗಾಗಲೇ ಸಂಸ್ಥೆಯು ಟಾಟಾ ಹೆಕ್ಸಾ ಕಾರಿನ ಫ್ಲಾಗ್‍ಶಿಪ್ ಮಾದರಿಯ ಮೇಲೆ ಉಚಿತವಾಗಿ ಮೊದಲ ವರ್ಷದ ವಿಮೆ ನೀಡುತ್ತಿದ್ದು, 80 ಸಾವಿರದಿಂದ 1 ಲಕ್ಷದ ತನಕ ರಿಯಾಯಿತಿ ಪಡೆಯಬಹುದಾಗಿದೆ. ಜೊತೆಗೆ ಹೊಸದಾಗಿ ಉಚಿತ ವಿಮೆ ನೀಡಿರುವುದರಿಂದ ಗ್ರಾಹಕರು ಈ ಕಾರನ್ನು ಖರೀದಿ ಮಾಡಬಹುದಾಗಿದೆ.

ಮೇಲೆ ನೀಡಲಾಗಿರುವ ಕಾರುಗಳ ಮೇಲೆ ರಿಯಾಯಿತಿ ಬೆಲೆಗಳು ಇದೇ ತಿಂಗಳು(ಮಾರ್ಚ್) 31ರ ತನಕ ದೊರೆಯುತ್ತಿದ್ದು, ಆಸಕ್ತ ಗ್ರಾಹಕರು ನಿಮ್ಮ ಹತ್ತಿರದ ಟಾಟಾ ಡೀಲರ್‍ಗಳ ಬಳಿ ರಿಯಾಯಿತಿ ಹಾಗೂ ಬಹುಮಾನಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.


Click it and Unblock the Notifications








