ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಒಂದು ಹೊಸ ಕಾರು ಖರೀದಿ ಮಾಡುವ ಮುನ್ನ ನಾವು ಅದೆಷ್ಟು ಯೋಚಿಸುತ್ತೇವೆ ಅಲ್ವಾ? ಇಂಜಿನ್ ಕಾರ್ಯಕ್ಷಮತೆ, ಕಂಫರ್ಟ್ ಜತೆಗೆ ನಮ್ಮ ಬಜೆಟ್‌ಗೆ ಹೊಂದುವಂಥ ಕಾರುಗಳನ್ನು ನಾವು ಖರೀದಿಸಲು ಮುಂದಾಗುವುದು ಸಹಜ.

By Praveen Sannamani

ಒಂದು ಹೊಸ ಕಾರು ಖರೀದಿ ಮಾಡುವ ಮುನ್ನ ನಾವು ಅದೆಷ್ಟು ಯೋಚಿಸುತ್ತೇವೆ ಅಲ್ವಾ? ಇಂಜಿನ್ ಕಾರ್ಯಕ್ಷಮತೆ, ಕಂಫರ್ಟ್ ಜತೆಗೆ ನಮ್ಮ ಬಜೆಟ್‌ಗೆ ಹೊಂದುವಂಥ ಕಾರುಗಳನ್ನು ನಾವು ಖರೀದಿಸಲು ಮುಂದಾಗುವುದು ಸಹಜ. ಹೀಗಾಗಿ ಕಡಿಮೆ ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಬೆಸ್ಟ್ ಕಾರು ಯಾವುದು ಎನ್ನುವುದರ ಬಗ್ಗೆ ಗ್ರಾಹಕರಿಗೆ ಗೊಂದಲ ಇದ್ದೇ ಇರುತ್ತೆ. ಹೀಗಾಗಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಉತ್ತಮ ಎಎಂಟಿ ಕಾರುಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಕಾರು ಮಾರಾಟ ಪ್ರಕ್ರಿಯೆ ಜೋರಾಗಿದೆ. ಪ್ರಸ್ತಕ ವರ್ಷದ ಕಾರು ಮಾರಾಟ ಪ್ರಮಾಣವನ್ನು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈ ವರ್ಷ ಶೇ.10ರಷ್ಟು ಹೆಚ್ಚುವರಿ ಪ್ರಮಾಣದ ಕಾರು ಮಾರಾಟ ದಾಖಲಾಗುವ ಸಾಧ್ಯತೆಗಳಿವೆ. ಅದರಲ್ಲೂ 2018ರ ಅವಧಿಯಲ್ಲೇ ಬಿಡುಗಡೆಗಾಗಿ ಸಿದ್ದವಾಗಿರುವ ಕೆಲವು ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಪ್ರೇರಿತ ಬಜೆಟ್ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿವೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ನೆಕ್ಸ್ಟ್ ಜನರೇಷನ್ ಸ್ಯಾಂಟ್ರೋ

ಇದೇ ವರ್ಷ ಮೂರನೇ ತ್ರೈಮಾಸಿಕ ಅವಧಿಗೆ ಬಿಡುಗಡೆಗೊಳ್ಳಲಿರುವ ಹ್ಯುಂಡೈ ಇಂಡಿಯಾ ನಿರ್ಮಾಣದ ನೆಕ್ಸ್ಟ್ ಜನರೇಷನ್ ಸ್ಯಾಂಟ್ರೊ ಕಾರು ಆವೃತ್ತಿಯು ಹಲವು ಬಾರಿ ಸ್ಪಾಟ್ ಟೆಸ್ಟಿಂಗ್‌ ವೇಳೆ ಕಾಣಿಸಿಕೊಂಡಿದ್ದು, ಎಹೆಚ್2 ಎಂಬ ಕೋಡ್ ವಲ್ಡ್ ಹೆಸರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಸ್ಟಾಟ್ ಟೆಸ್ಟಿಂಗ್ ವೇಳೆ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರುಗಳು ಉತ್ತಮ ಪ್ರದರ್ಶನ ತೊರುತ್ತಿದ್ದು, ಅಧಿಕ ಮೈಲೇಜ್ ಮತ್ತು ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯಗಳು ಗ್ರಾಹಕರ ನಂಬಿಕೆಗೆ ವಿಶ್ವಾಸರ್ಹವಾಗಲಿವೆ ಎಂಬ ಮಾಹಿತಿಯೂ ದೊರೆತಿದೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಹೊಸ ಕಾರುಗಳು ಎಎಂಟಿ(ಆಟೋ ಮ್ಯಾಟಿಕ್ ಗೇರ್‌ಬಾಕ್ಸ್) ಕೂಡಾ ಹೊಂದುವ ಸಾಧ್ಯತೆಗಳಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಐ10 ಮಾದರಿಯಲ್ಲೇ ಒಳ ವಿನ್ಯಾಸದ ಸೌಲಭ್ಯಗಳನ್ನು ಪಡೆಯಲಿವೆ ಎನ್ನಲಾಗುತ್ತಿದೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಮಧ್ಯಮ ವರ್ಗಗಳ ಸ್ನೇಹಿಯಾಗಿರುವ ಉತ್ತಮ ಹ್ಯಾಚ್‌ಬ್ಯಾಕ್ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಶಕ್ತವಾಗಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರುಗಳು, 800 ಸಿಸಿ ಪೆಟ್ರೋಲ್ ಎಂಜಿನ್ ಇಲ್ಲವಾದ್ರೆ 1.0-ಲೀಟರ್ ಜೊತೆ ತ್ರಿ ಸಿಲಿಂರ್ ಎಂಜಿನ್ ಪಡೆದುಕೊಳ್ಳಲಿದೆ. ಆದ್ರೆ ಹೊಸ ಕಾರುಗಳಲ್ಲಿ ಡಿಸೇಲ್ ಆವೃತ್ತಿಯನ್ನು ಪರಿಚಯಿಸುತ್ತಿಲ್ಲ.

ಬಿಡುಗಡೆಯ ದಿನಾಂಕ(ಅಂದಾಜು)- 3ನೇ ತ್ರೈಮಾಸಿಕ ಅವಧಿಗೆ

ಕಾರಿನ ಬೆಲೆಗಳು(ಅಂದಾಜು)- ರೂ. 3.50 ಲಕ್ಷದಿಂದ ರೂ. 4.50 ಲಕ್ಷ

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಮಾರುತಿ ಸುಜುಕಿ ವ್ಯಾಗನ್ ಆರ್ 7 ಸೀಟರ್

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಯ ಉದ್ದೇಶಗಳಿಗಾಗಿ 7 ಆಸನವುಳ್ಳ ಎಂಪಿವಿ ಕಾರುಗಳಿಗೆ ಉತ್ತಮ ಬೇಡಿಕೆಯಿದ್ದು, ಈ ಹಿನ್ನೆಲೆ ಸುಜುಕಿ ಸಂಸ್ಥೆಯು ಯುರೋಪ್ ರಾಷ್ಟ್ರಗಳಲ್ಲಿ ಜನಪ್ರಿಯತೆ ಸಾಧಿಸಿರುವ ಸೊಲಿಯೊ ಕಾರುಗಳ ಮಾದರಿಯಲ್ಲೇ 7 ಸೀಟರ್ ವ್ಯಾಗನ್ ಆರ್ ಆವೃತ್ತಿಯನ್ನು ಸಹ ಭಾರತದಲ್ಲಿ ಬಿಡುಗಡೆಗೊಳಿಸುವ ಯೋಜನೆ ಹೊಂದಿದೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಹೀಗಾಗಿ ದೆಹಲಿ ಸೇರಿದಂತೆ ಗುರುಗ್ರಾಮ್ ಹೊರ ವಲಯದಲ್ಲಿ ವ್ಯಾಗನ್ ಆರ್ 7 ಸೀಟರ್ ಕಾರುಗಳ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹೊಸ ಕಾರುಗಳನ್ನು ವಿನೂತನ ಹಾರ್ಟ್‌ಟೆಕ್ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಸ್ಪಾಟ್ ಟೆಸ್ಟಿಂಗ್ ವೇಳೆ ಸಿಕ್ಕಿರುವ ಮಾಹಿತಿ ಪ್ರಕಾರ ಸುಜುಕಿ ನಿರ್ಮಾಣದ ವ್ಯಾಗನರ್ ಹೊಸ ಕಾರುಗಳು 5 ಪ್ಲಸ್ 2 ಆಸನ ಸೌಲಭ್ಯ ಹೊಂದಿದ್ದು, ಎರ್ಟಿಗಾ ಕಾರಿಗಿಂತ ಕಡಿಮೆ ಮತ್ತು ಇಕೋ ವಾಹನಗಿಂತ ಹೆಚ್ಚಿನ ಮಟ್ಟದ ಕಾರು ಮಾದರಿಯಾಗಿ ಜನಪ್ರಿಯತೆ ಹೊಂದಲಿದೆಯೆಂತೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಒಂದು ವೇಳೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ 7 ಸೀಟರ್ ವ್ಯಾಗನರ್ ಮಾದರಿಗಳು ನಿಗದಿತ ಅವಧಿ ಒಳಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದೇ ಆದಲ್ಲಿ ಎಂಪಿವಿ ಕಾರುಗಳ ವಿಭಾಗದಲ್ಲಿ ಹೊಸ ಸಂಚಲಯ ಸೃಷ್ಠಿಸಲಿದ್ದು, ವಾಣಿಜ್ಯ ಬಳಕೆಗಾಗಿ ಕೂಡಾ ಉತ್ತಮ ಕಾರು ಮಾದರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಯ ದಿನಾಂಕ(ಅಂದಾಜು)- ವರ್ಷದ ಕೊನೆಯಲ್ಲಿ

ಕಾರಿನ ಬೆಲೆಗಳು(ಅಂದಾಜು)- ರೂ.5.50 ಲಕ್ಷದಿಂದ ರೂ.6.50 ಲಕ್ಷ

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಎಎಂಟಿ

ಸಣ್ಣ ಗಾತ್ರದ ಎಸ್‌ಯುವಿ ಕಾರು ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿರುವ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಮಾದರಿಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಇದೀಗ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಸದ್ಯ ಖರೀದಿಗೆ ಲಭ್ಯವಿರುವ ಕೆಯುವಿ100 ನೆಕ್ಸ್ಟ್ ಕಾರುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಕ್ರೋಮ್ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್‌ಇಡಿ ಡಿಆರ್‌ಎಲ್ಎಸ್, ಕ್ಲಿಯರ್ ಲೆನ್ಸ್ ಟೈಲ್‌ಮ್ಯಾಪ್, ಡ್ಯುಯಲ್ ಏರ್‌ಬ್ಯಾಗ್, ಅಲಾಯ್ ಚಕ್ರಗಳನ್ನು ಹೊಂದಿರುವುದು ಖರೀದಿಗೆ ಉತ್ತಮವಾಗಿದೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಅದಾಗ್ಯೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಎಂಟಿ ಆವೃತ್ತಿಯನ್ನು ಪರಿಚಯಿಸಲಾಗುತ್ತಿದ್ದು, ಇದು ನಗರ ಪ್ರದೇಶಗಳಲ್ಲಿ ಮಹಿಳಾ ಗ್ರಾಹಕರನ್ನು ಸೆಳೆಯಲು ಮಹೀಂದ್ರಾಗೆ ನೆರವಾಗಲಿದೆ.

ಬಿಡುಗಡೆಯ ದಿನಾಂಕ(ಅಂದಾಜು)- ಅಗಸ್ಟ್

ಕಾರಿನ ಬೆಲೆಗಳು(ಅಂದಾಜು)- ರೂ. 4.50 ಲಕ್ಷದಿಂದ ರೂ.7.50 ಲಕ್ಷ

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

2018ರ ವ್ಯಾಗನ್ ಆರ್

ಮಾರುತಿ ಸುಜುಕಿ ಸಂಸ್ಥೆಯು ವ್ಯಾಗನ್ ಆರ್ ಕಾರು ಮಾರಾಟದಲ್ಲಿ ಈಗಾಗಲೇ ಹೊಸ ದಾಖಲೆ ಸೃಷ್ಠಿಸಿದ್ದು, ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವ್ಯಾಗನ್ ಆರ್ ಕಾರುಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಗೊಳಿಸಿ ಮಾರಾಟ ಮಾಡಲು ಸಿದ್ದವಾಗುತ್ತಿದೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

7 ಸೀಟರ್ ವ್ಯಾಗನ್ ಆರ್ ಕಾರುಗಳ ಬಿಡುಗಡೆಗೂ ಮುನ್ನವೇ ಸಾಮಾನ್ಯ ಮಾದರಿಯ ವ್ಯಾಗನ್ ಆರ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮಾರುತಿ ಸುಜುಕಿ ಸಂಸ್ಥೆಯು ಹೊಸ ಕಾರುಗಳಲ್ಲಿ ವ್ಯಾರ್ಪ್ ಮಾದರಿಯ ಹೆಡ್‌ಲ್ಯಾಂಪ್, ತ್ರಿ ಸ್ಲೈಟ್ ಕ್ರೋಮ್ ಗ್ರಿಲ್, ಸ್ಟೀಲ್ ಚಕ್ರಗಳು, ಎಲ್ಇಡಿ ಟೈಲ್ ಲೈಟ್ಸ್‌ಗಳನ್ನು ಜೋಡಣೆ ಮಾಡಿದೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಶಾರ್ಪ್ ಎಡ್ಜ್‌ಗಳು ಮತ್ತು ಸುರಕ್ಷೆತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವನ್ನು ಅಳವಡಿಸಲಾಗಿದೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಎಂಜಿನ್ ಸಾಮರ್ಥ್ಯ

1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ವ್ಯಾಗನ್ ಆರ್ ಕಾರುಗಳು 67-ಬಿಎಚ್‌ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಇಲ್ಲವೇ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಆಯ್ಕೆ ಮಾಡಬಹುದಾಗಿದೆ.

ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಎಎಂಟಿ ಕಾರುಗಳಿವು...

ಹೊಸ ವ್ಯಾಗನ್ ಆರ್ ಕಾರುಗಳಲ್ಲಿ ಸುರಕ್ಷತೆ ಮತ್ತು ಮತ್ತು ವಿನ್ಯಾಸಗಳಿಗೆ ಹೆಚ್ಚಿನ ಒತ್ತುನೀಡಲಾಗಿದ್ದು, ಉತ್ತಮ ಮಾದರಿಯ ಎಂಟ್ರಿ ಲೆವಲ್ ಕಾರು ಖರೀದಿಸುವ ಗ್ರಾಹಕರಿಗೆ ಇದು ಮತ್ತಷ್ಟು ಆಕರ್ಷಣೆಯಾಗಲಿದೆ.

ಬಿಡುಗಡೆಯ ದಿನಾಂಕ(ಅಂದಾಜು)- ಜುಲೈ ಅಂತ್ಯಕ್ಕೆ

ಕಾರಿನ ಬೆಲೆಗಳು(ಅಂದಾಜು)- ರೂ. 4.50 ಲಕ್ಷದಿಂದ ರೂ.5.50 ಲಕ್ಷ

Article Published On: Tuesday, May 22, 2018, 17:07 [IST]
English summary
4 upcoming AMT cars in 2018 – New Maruti WagonR to Hyundai Santro.
Read more on auto news new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+