2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

By Praveen Sannamani

ದೇಶಿ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಖರೀದಿ ಭರಾಟೆ ಜೋರಾಗಿದ್ದು, 2018-19 ಹಣಕಾಸು ವರ್ಷದ ಅವಧಿಯಲ್ಲೂ ಉತ್ತಮ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದರಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಕಾರು ಮಾರಾಟದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಕಳೆದ ತಿಂಗಳು ವಾಹನ ಮಾರಾಟಕ್ಕೆ ಹೋಲಿಕೆ ಮಾಡಿದ್ದಲ್ಲಿ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ದಾಖಲೆ ಏರಿಕೆ ಕಂಡುಬಂದಿದೆ.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಸದ್ಯ ಭಾರತದಲ್ಲಿ ಹಲವಾರು ವಾಹನ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಪ್ಯಾಸೆಂಜರ್ ವೆಹಿಕಲ್, ಕಮರ್ಷಿಲ್ ವೆಹಿಕಲ್ ಮತ್ತು ತ್ರಿ ಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದು, 2018-19ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 80,64,239 ವಾಹನಗಳು ಮಾರಾಟಗೊಳ್ಳುವ ಮೂಲಕ ಹೊಸ ನೀರಿಕ್ಷೆ ಹುಟ್ಟುಹಾಕಿವೆ. ಅದರಲ್ಲೂ ಜುಲೈ ಅವಧಿಯಲ್ಲಿ ಮಾರಾಟಗೊಂಡ ಕಾರುಗಳ ಮಾರಾಟ ಪ್ರಮಾಣವು ಸಹ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಯಾವ ಸಂಸ್ಥೆಯು ಎಷ್ಟು ವಾಹನಗಳನ್ನು ಮಾರಾಟ ಮಾಡಿವೆ ಎಂಬುವುದನ್ನ ತಿಳಿಯಲು ಮುಂದಿನ ಸ್ಲೈಡರ್‌ಗಳತ್ತ ಸಾಗಿರಿ.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಡಿಜೈರ್

ಕಂಪ್ಯಾಕ್ಟ್ ಸೆಡಾನ್ ಮಾದರಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಡಿಜೈರ್ ಕಾರುಗಳು ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ನಂ.1 ಕಾರು ಮಾದರಿ ಎಂದ್ರೆ ನೀವು ನಂಬಲೇಬೇಕು.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಕಳೆದ ವರ್ಷ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ್ದ ಡಿಜೈರ್ ಕಾರುಗಳು ಗ್ರಾಹಕರ ಆಯ್ಕೆಯಲ್ಲಿ ಅಗ್ರ ಸ್ಥಾನ ಪಡೆದಿದ್ದು, 2018ರ ಜುಲೈ ಅವಧಿಯಲ್ಲಿ ಬರೋಬ್ಬರಿ 25,647 ಕಾರು ಮಾರಾಟಗೊಂಡಿವೆ.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಆಲ್ಟೋ

ಬಿಡುಗಡೆಗೊಂಡ ನಂತರ ಹಲವು ವರ್ಷಗಳ ತನಕವೂ ಒಂದೇ ರೀತಿಯ ಬೇಡಿಕೆಯನ್ನು ಉಳಿಸಿಕೊಂಡ ಕೆಲವೇ ಕೆಲವು ಕಾರು ಮಾದರಿಗಳಲ್ಲಿ ಆಲ್ಟೋ ಕಾರು ಸರಣಿ ಸಹ ಒಂದು. ಆಲ್ಟೋ 800 ಮತ್ತು ಆಲ್ಟೋ ಕೆ10 ಎಂಬ ಮಾದರಿಯಲ್ಲಿ ಖರೀದಿಗೆ ಲಭ್ಯವಿರುವ ಆಲ್ಟೋ ಕಾರುಗಳು ಜುಲೈ ಅವಧಿಯಲ್ಲಿ 23,371 ಕಾರುಗಳು ಮಾರಾಟಗೊಂಡು ಮೂರನೇ ಸ್ಥಾನದಲ್ಲಿದೆ.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಸ್ವಿಫ್ಟ್

ಹ್ಯಾಚ್‌ಬ್ಯಾಕ್ ಪ್ರಿಯರ ಹಾಟ್ ಫೇವರಿಟ್ ಎಂದೇ ಜನಪ್ರಿಯವಾಗಿರುವ ಸ್ವಿಫ್ಟ್ ಕಾರುಗಳು ಸಹ ಜುಲೈ ಅವಧಿಯಲ್ಲಿನ ಕಾರು ಮಾರಾಟದಲ್ಲಿ 3ನೇ ಅಗ್ರಸ್ಥಾನವನ್ನು ಹೊಂದಿದ್ದು, ಬರೋಬ್ಬರಿ 19,993 ಕಾರುಗಳು ಮಾರಾಟಗೊಂಡಿವೆ. ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಸ್ವಿಫ್ಟ್ ಕಾರುಗಳು 2018ರ ಎಕ್ಸ್‌ಪೋದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದವು.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಬಲೆನೊ

2016ರಲ್ಲಿ ಮೊದಲ ಬಾರಿಗೆ ಬಿಡುಗೊಂಡ ಬಲೆನೊ ಕಾರುಗಳು ಸಹ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಹೊಂದಿರುವ ಬಲೆನೊ ಕಾರುಗಳು ಪ್ರಿಮಿಯಂ ವೈಶಿಷ್ಟ್ಯತೆಗಳೊಂದಿಗೆ ಭಾರೀ ಸದ್ದು ಮಾಡುತ್ತಿವೆ. ಹೀಗಾಗಿಯೇ ಕಾರು ಮಾರಾಟದಲ್ಲಿ 4ನೇ ಸ್ಥಾನದಲ್ಲಿರುವ ಬಲೆನೊ ಕಾರುಗಳು ಜುಲೈ ಅವಧಿಯಲ್ಲಿ ಬರೋಬ್ಬರಿ 17,960 ಕಾರುಗಳು ಮಾರಾಟಗೊಂಡಿವೆ.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ವ್ಯಾಗನ್ ಆರ್

ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳಲ್ಲಿ ಮಾರುತಿ ಸುಜುಕಿ ನಿರ್ಮಾಣದ ಕಾರುಗಳೇ ಟಾಪ್ 4ನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದು, ವ್ಯಾಗನ್ ಆರ್ ಹ್ಯಾಚ್‌ಬ್ಯಾಕ್ ಕಾರುಗಳ ಸಹ ಪ್ರಮುಖ ಮಾದರಿಯಾಗಿದೆ. ಪ್ರಥಮ ಬಾರಿಗೆ ಬಿಡುಗಡೆಯಾದ ನಂತರ ಮೊನ್ನೆಯಷ್ಟೇ 20 ಲಕ್ಷ ಕಾರು ಮಾರಾಟ ಗುರಿತಲುಪಿರುವ ವ್ಯಾಗನ್ ಆರ್ ಕಾರುಗಳು ಜುಲೈ ಅವಧಿಯಲ್ಲಿ 14,339 ಕಾರುಗಳು ಮಾರಾಟವಾಗಿವೆ.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಬ್ರೇಝಾ

ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಭಾರೀ ಜನಪ್ರಿಯತೆ ಸಾಧಿಸಿರುವ ಬ್ರೇಝಾ ಕಾರುಗಳು ಮೇ ತಿಂಗಳಿನಲ್ಲಿ ಬಿಡುಗಡೆಯಾದ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳಿಂದಾಗಿ ಮಾರಾಟಕ್ಕೆ ಪೂರಕವಾಗಿದ್ದು, ಜುಲೈ ಅವಧಿಯಲ್ಲಿ 14,181 ಕಾರುಗಳನ್ನು ಮಾರಾಟಗೊಂಡಿವೆ.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಹ್ಯುಂಡೈ ಎಲೈಟ್ ಐ20

ಕಳೆದ ಐದು ತಿಂಗಳ ಅವಧಿಯಲ್ಲಿ ಕಾರು ಮಾರಾಟದ ಟಾಪ್ 10ರ ಪಟ್ಟಿಯಿಂದ ದೂರವಾಗಿದ್ದ ಎಲೈಟ್ ಐ20 ಕಾರುಗಳು ಜುಲೈ ಅವಧಿಯಲ್ಲಿ ಉತ್ತಮ ಮಾರಾಟ ದಾಖಲಿಸಿದ್ದು, ಜುಲೈ ಅವಧಿಯಲ್ಲಿ 10,822 ಕಾರುಗಳು ಮಾರಾಟವಾಗಿವೆ.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಹ್ಯುಂಡೈ ಐ10

ಹೊಸ ತಲೆಮಾರಿನ ಸ್ವಿಫ್ಟ್ ಕಾರುಗಳನ್ನು ಬಿಡುಗಡೆ ನಂತರ ಐ10 ಕಾರುಗಳ ಮಾರಾಟಕ್ಕೆ ಹೊಡೆದ ಬಿದ್ದಿದ್ದು, ಜುಲೈ ಅವಧಿಯಲ್ಲಿ 10,775 ಕಾರುಗಳ ಮಾರಾಟದೊಂದಿಗೆ ಟಾಪ್ 10ರ ಲಿಸ್ಟ್‌ನಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್

ಕಳೆದ ಎರಡು ತಿಂಗಳಿನಿಂದ ಮಾರಾಟದಲ್ಲಿ ಕುಸಿತ ಕಂಡಿದ್ದ ಕ್ರೇಟಾ ಕಾರುಗಳು ಫೇಸ್‌ಲಿಫ್ಟ್ ಕಾರುಗಳು ಬಿಡುಗಡೆ ನಂತರ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಜುಲೈ ಅವಧಿಯಲ್ಲಿ 10,423 ಕಾರುಗಳನ್ನು ಮಾರಾಟಗೊಂಡಿವೆ.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಹೋಂಡಾ ಅಮೇಜ್

ಸತತ 2 ತಿಂಗಳಿನಿಂದ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹೋಂಡಾ ಸಂಸ್ಥೆಯು ಅಮೇಜ್ ಕಂಪ್ಯಾಕ್ಟ್ ಮಾರಾಟದಲ್ಲಿ ಭಾರೀ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಮೇ 16ರಂದು ಬಿಡುಗಡೆಯಾಗಿದ್ದ ಹೊಸ ವಿನ್ಯಾಸದ ಅಮೇಜ್ ಕಾರುಗಳು ಜುಲೈ ಅವಧಿಯಲ್ಲಿ 10,180 ಕಾರುಗಳನ್ನು ಮಾರಾಟ ಮಾಡಿದೆ.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಇದರ ಹೊರತಾಗಿ ಟಾಟಾ ಟಿಯಾಗೋ, ಮಾರುತಿ ಒಮ್ನಿ, ಮಾರುತಿ ಸೆಲೆರಿಯೊ, ಟೊಯೊಟಾ ಇನೋವಾ ಕ್ರಿಸ್ಟಾ, ಮಹೀಂದ್ರಾ ಬಲೆರೊ, ಮಾರುತಿ ಇಕೊ, ರೆನಾಲ್ಟ್ ಕ್ವಿಡ್, ಮಾರುತಿ ಇಗ್ನಿಸ್, ಮಾರುತಿ ಎರ್ಟಿಗಾ, ಹ್ಯುಂಡೈ ಅಯಾನ್, ಹ್ಯುಂಡೈ ಎಕ್ಸ್‌ಸೆಂಟ್, ಟಾಟಾ ನೆಕ್ಸಾನ್, ಮಾರುತಿ ಎಸ್ ಕ್ರಾಸ್, ಫೋರ್ಡ್ ಇಕೋಸ್ಪೋರ್ಟ್, ಹ್ಯುಂಡೈ ವೆರ್ನಾ ಕಾರುಗಳು ಟಾಪ್ 25ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

2018ರ ಜುಲೈ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಇದರಲ್ಲಿ ಮಾರುತಿ ಸುಜುಕಿ ಸಂಸ್ಥೆಯೇ ಉಳಿದೆಲ್ಲಾ ಕಾರು ಉತ್ಪಾದನಾ ಸಂಸ್ಥೆಗಳಿಂತಲೂ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ತದನಂತರದ ಹ್ಯುಂಡೈ ಹಾಗೂ ಹೋಂಡಾ ಕೂಡಾ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.

More from DriveSpark

Article Published On: Wednesday, August 8, 2018, 15:50 [IST]
English summary
Top-Selling Cars In India July 2018 — Maruti & Hyundai Dominates While Honda Tries.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+