ಟೊಯೊಟಾ ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್- ಇದರ ವಿಶೇಷತೆ ಏನು ಗೊತ್ತಾ?

By Praveen Sannamani

ಟೊಯೊಟಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿದ್ದು, ಎಲ್ಲಾ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಮಾದರಿಯ ಹತ್ತಾರು ಕಾರು ಉತ್ಪನ್ನಗಳನ್ನ ಮಾರಾಟ ಮಾಡುತ್ತಿದೆ. ಇವುಗಳಲ್ಲಿ ಇಟಿಯಾಸ್ ಲಿವಾ ಹ್ಯಾಚ್‌ಬ್ಯಾಕ್ ಮಾದರಿ ಕೂಡಾ ಒಂದಾಗಿದ್ದು, ಇದೀಗ ಗ್ರಾಹಕರ ಬೇಡಿಕೆಯ ಮೇರೆಗೆ ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಪರಿಚಯಿಸಿದೆ.

ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಟೊಯೊಟಾ ಸಂಸ್ಥೆಯು ತನ್ನ ಪ್ರಮುಖ ಉತ್ಪನ್ನಗಳನ್ನು ಪ್ರಮುಖ ಮೂರು ತತ್ವದಡಿ ನಿರ್ಮಾಣಗೊಳಿಸುತ್ತಿದ್ದು, ವಿನ್ಯಾಸ, ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹೊಸ ಉತ್ಪನ್ನಗಳ ಅಭಿವೃದ್ಧಿಗೆ ಬದ್ಧವಾಗಿದೆ. ಹೀಗಾಗಿ ಖರೀದಿಗೆ ಯೋಗ್ಯ ಎನ್ನಿಸುವ ಟೊಯೊಟಾ ಉತ್ಪನ್ನಗಳಲ್ಲಿ ಇದೀಗ ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಹೊಸ ಸೇರ್ಪಡೆಯಾಗಿದೆ.

ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಇಟಿಯಾಸ್ ಲಿವಾ ಕಾರು ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದ್ದು, ಹೊಸದಾಗಿ ಪರಿಚಯಿಸಿರುವ ಸೀಮಿತ ಅವಧಿಯ ಡ್ಯುಯಲ್ ಟೋನ್ ಸೌಲಭ್ಯದ ಇಟಿಯಾಸ್ ಲಿವಾ ಕಾರು ಹ್ಯಾಚ್‌ಬ್ಯಾಕ್ ಪ್ರಿಯರನ್ನ ರಂಜಿಸಲು ಸಜ್ಜುಗೊಂಡಿವೆ.

ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಹಾಟ್ ಹ್ಯಾಚ್‌ಬ್ಯಾಕ್ ಸ್ಟೈಲ್

ವಿನೂತನ ಬಣ್ಣಗಳ ವಿನ್ಯಾಸವನ್ನ ಹೊಂದಿರುವ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಕಾರುಗಳನ್ನ ಮುಖ್ಯವಾಗಿ ಯುವ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಹೊರತರಲಾಗಿದ್ದು, ಹೊಸ ವಿನ್ಯಾಸದ ಬಣ್ಣದ ಆಯ್ಕೆಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡಿರುವುದು ಸುಳ್ಳಲ್ಲ.

ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಕಾರಿನ ತಾಂತ್ರಿಕ ಅಂಶಗಳು

ಸೂಪರ್ ವೈಟ್ ಪ್ಲಸ್ ಗ್ಲಾಸ್ ಬ್ಲ್ಯಾಕ್ ಡ್ಯುಯಲ್ ಟೋನ್ ಬಣ್ಣದೊಂದಿಗೆ ಸಿದ್ದಗೊಂಡಿರುವ ಹೊಸ ಕಾರುಗಳ ಹಿಂಬದಿಯಲ್ಲಿ ಇರಿಸಲಾದ ಸ್ಪೋರ್ಟಿ ಸ್ಪಾಯ್ಲರ್, 15-ಇಂಚಿನ ಫೈವ್ ಸ್ಪೋಕ್ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಜೋಡಣೆ ಮಾಡಿರುವುದು ಕಾರಿನ ಅಂದವನ್ನು ಹೆಚ್ಚಿಸಿವೆ.

ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಹೀಗಾಗಿ ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಕಾರು ದಿನಂಪ್ರತಿ ಬಳಕೆಗಾಗಿ, ಅಡ್ವೆಂಚರ್ ಮತ್ತು ಕುಟುಂಬ ಸಮೇತರಾಗಿ ಪ್ರಯಾಣಿಸಲು ಅನುಕೂಲಕರವಾಗಿದ್ದು, ಕಾರಿನ ಒಳಭಾಗ ವಿನ್ಯಾಸವು ಸಹ ಯಾವುದೇ ಐಷಾರಾಮಿ ಕಮ್ಮಿ ಇಲ್ಲದಂತೆ ಸಿದ್ದಗೊಳಿಸಲಾಗಿದೆ.

ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಕಾರಿನ ಒಳವಿನ್ಯಾಸ

ಹೊರ ಭಾಗದಲ್ಲಿ ಯಾವ ರೀತಿ ಅಂದಚೆಂದ ಪಡೆದುಕೊಂಡಿದೆಯೋ ಅದೇ ರೀತಿಯಾಗಿ ಒಳಭಾಗದ ವಿನ್ಯಾಸಕ್ಕೂ ಹೆಚ್ಚಿನ ಒತ್ತು ನೀಡಲಾಗಿದ್ದು, ಬ್ಲ್ಯಾಕ್ ಥೀಮ್ ಇಂಟಿರಿಯರ್, 6.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಮನರಂಜನೆಗಾಗಿ ಆರು ಸ್ಪೀಕರ್ಸ್, ಚಾಲಕನ ಸಹಾಯಕ್ಕಾಗಿ ರಿವರ್ಸ್ ಕ್ಯಾಮೆರಾ, ಲೆದರ್ ಹೊದಿಕೆಯ ಸೀಟುಗಳು, ಆಡಿಯೋ ಕಂಟ್ರೋಲರ್, ವಿವಿಧ ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಸೀಟು ಸೇರಿದಂತೆ ಹಲವು ಗುಣಮಟ್ಟದ ಸೌಲಭ್ಯಗಳನ್ನ ನೀಡಲಾಗಿದೆ.

ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ..

ಕಾರಿನ ಬಣ್ಣ ಮತ್ತು ವಿನ್ಯಾಸಗಳಲ್ಲಿ ಮಾತ್ರವಲ್ಲ ಸುರಕ್ಷತೆಯಲ್ಲೂ ಇಟಿಯಾಸ್ ಲಿವಾ ಕಾರುಗಳು ಖರೀದಿಗೆ ಅತ್ಯುತ್ತಮ ಎನ್ನಿಸಲಿವೆ. ಕಾರುಗಳಲ್ಲಿ ಡ್ಯುಯಲ್ ಏರ್‌ಬ್ಯಾಗ್ಸ್, ಎಬಿಎಸ್ ಪ್ಲಸ್ ಇಬಿಡಿ, ISOFIX ಚೈಲ್ಡ್ ಸೀಟ್ ಮೌಂಟ್, ರಿವರ್ಸ್ ಕ್ಯಾಮೆರಾ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯ ಹೊಂದಿರುತ್ತದೆ. ಇದರಿಂದಲೇ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಇಟಿಯಾಸ್ ಲಿವಾ ಕಾರುಗಳು 4 ಸ್ಟಾರ್ ಸುರಕ್ಷಾ ರೇಟಿಂಗ್ ತನ್ನದಾಗಿಸಿಕೊಂಡಿತ್ತು.

ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಮತ್ತು 1.4-ಲೀಟರ್ ಡಿಸೇಲ್ ಎಂಜಿನ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಇಟಿಯಾಸ್ ಲಿವಾ ಕಾರು ಪೆಟ್ರೋಲ್ ಎಂಜಿನ್ ಮೂಲಕ 79-ಬಿಎಚ್‌ಪಿ, 104-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಆವೃತ್ತಿಯು 67-ಬಿಎಚ್‌ಪಿ, 170-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಇದರೊಂದಿಗೆ ಪೆಟ್ರೋಲ್ ಕಾರುಗಳು ಪ್ರತಿ ಲೀಟರ್‌ಗೆ 18.16ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಡಿಸೇಲ್ ಕಾರುಗಳು ಪ್ರತಿ ಲೀಟರ್‌ಗೆ 23.59ಕಿ.ಮಿ ಮೈಲೇಜ್ ಗುಣಹೊಂದಿದ್ದು, ಕಡಿಮೆ ನಿರ್ವಹಣಾ ಸಾಮರ್ಥ್ಯದ ಈ ಕಾರುಗಳಿಗೆ 7 ವರ್ಷದ ಗರಿಷ್ಠ ವಾರಂಟಿ ಸೌಲಭ್ಯ ಸಿಗಲಿದೆ.

ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಕಾರಿನ ಬೆಲೆಗಳು

ಗ್ರಾಹಕರ ಆಕರ್ಷಣೆ ಕಾರಣವಾಗಿರುವ ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಕಾರುಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ, ಪೆಟ್ರೋಲ್ ಮಾದರಿಯನ್ನು ರೂ.6.50 ಲಕ್ಷಕ್ಕೆ ಮತ್ತು ಡೀಸೆಲ್ ಮಾದರಿಯನ್ನು ರೂ.7.65 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಟೊಯೊಟಾ

ಒಟ್ಟಿನಲ್ಲಿ ಹತ್ತು ಹಲವು ವಿನೂತನ ಸೌಲಭ್ಯಗಳೊಂದಿಗೆ ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಇಟಿಯಾಸ್ ಲಿವಾ ಡ್ಯುಯಲ್ ಟೋನ್ ಲಿಮಿಟೆಡ್ ಎಡಿಷನ್ ಕಾರು ಸದ್ಯ ಖರೀದಿಗೆ ಲಭ್ಯವಿದ್ದು, ನೀವು ಕೂಡಾ ಕಾರು ಖರೀದಿಯ ಯೋಜನೆಯಲ್ಲಿದ್ದರೆ ನಿಮ್ಮ ಹತ್ತಿರದ ಟೊಯೊಟಾ ಡೀಲರ್ಸ್‌ಗಳನ್ನು ಸಂಪರ್ಕಿಸಿ ಇನ್ನಷ್ಟು ಮಾಹಿತಿ ಪಡೆದುಕೊಳ್ಳಬಹುದು.

More from DriveSpark

Article Published On: Wednesday, August 22, 2018, 13:15 [IST]
English summary
Toyota Etios Liva Dual-Tone Limited Edition.
Read more on toyota etios liva hatchback
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+