ಟೊಯೊಟಾ ಇಟಿಯಾಸ್ ಪ್ಲಾಟಿನಂ ಆವೃತ್ತಿ ಬಿಡುಗಡೆ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಭಾರತೀಯ ಮಾರುಕಟ್ಟೆಗೆ ಹೊಸ ಇಟಿಯಾಸ್ ಪ್ಲಾಟಿನಂ ಲಿಮಿಟೆಡ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದೆ.

By Rahul Ts

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಭಾರತೀಯ ಮಾರುಕಟ್ಟೆಗೆ ಹೊಸ ಇಟಿಯಾಸ್ ಪ್ಲಾಟಿನಂ ಲಿಮಿಟೆಡ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿ ಎಕ್ಸ್ ಶೋರಂ ಪ್ರಕಾರ ಪೆಟ್ರೋಲ್ ಆವೃತ್ತಿಯು 7.84 ಲಕ್ಷ ಮತ್ತು ಡೀಸೆಲ್ ಆವೃತ್ತಿಯು 8.94 ಲಕ್ಷ ಬೆಲೆ ಹೊಂದಿವೆ.

ಟೊಯೊಟಾ ಇಟಿಯಾಸ್ ಪ್ಲಾಟಿನಂ ಆವೃತ್ತಿ ಬಿಡುಗಡೆ

ಬಿಡುಗಡೆಗೊಂಡ ಹೊಸ ಇಟಿಯಾಸ್ ಪ್ಲಾಟಿನಂ ಲಿಮಿಟೆಡ್ ಆವೃತ್ತಿಯು ರೆಗ್ಯುಲರ್ ಆವೃತ್ತಿಗಿಂತ ಹೊಸ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದ್ದು, ಈ ಕಾರು ವಿನೂತನ ಪೆಯಿಂಟ್ ಸ್ಕೀಮ್, ಅಡಿಷನಲ್ ಇನ್ಫೋಟೈನ್ಮೆಂಟ್ ಮತ್ತು ಡ್ಯುಯಲ್ ಟೋನ್ ಸೀಟ್ ದಿಂಬುಗಳನ್ನು ಪಡಿದಿದೆ.

ಟೊಯೊಟಾ ಇಟಿಯಾಸ್ ಪ್ಲಾಟಿನಂ ಆವೃತ್ತಿ ಬಿಡುಗಡೆ

ಇದಲ್ಲದೇ ಲಿಮಿಟೆಡ್ ಎಡಿಷನ್ ಆವೃತ್ತಿಯು ಹೊಸ ಫ್ಯಾಂಟಮ್ ಬ್ರೌನ್ ಕಲರ್‍‍ನೊಂದಿಗೆ ಪರ್ಲ್ ವೈಟ್ ಆಯ್ಕೆಗಳನ್ನು ಪಡೆದಿದ್ದು, ಕಾರಿನ ಒಳ ಮತ್ತು ಹೊರ ವಿನ್ಯಾಸವನ್ನು ಬದಲುಗೊಳಿಸಲಿಲ್ಲ ಎನ್ನಲಾಗಿದೆ.

ಟೊಯೊಟಾ ಇಟಿಯಾಸ್ ಪ್ಲಾಟಿನಂ ಆವೃತ್ತಿ ಬಿಡುಗಡೆ

ಟೊಯೊಟಾ ಇಟಿಯಾಸ್ ಪ್ಲಾಟಿನಂ ಡ್ಯುಯಲ್ ಟೋನ್ ಕಾರಿನ ಹೊರಭಾಗದ ಬಣ್ಣವನ್ನು ಹೋಲುವಂತೆ ಸಜ್ಜುಗೊಂಡಿದ್ದು, ಆರ್ಮ್‍ ರೆಸ್ಟ್ ಹೊಸ ಪಾಟರ್ನ್‍ ಅನ್ನು ಪಡೆದಿದೆ. ಈ ಕಾರಿನಲ್ಲಿ 6.8 ಇಂಚಿನ ಟಚ್‍ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಬಳಸಿರುವುದು ಪ್ರಮುಖವಾಗಿದೆ.

ಟೊಯೊಟಾ ಇಟಿಯಾಸ್ ಪ್ಲಾಟಿನಂ ಆವೃತ್ತಿ ಬಿಡುಗಡೆ

ಹೊಸ ಇನ್ಫೋಟೈನ್ಮೆಂಟ್ ಸಿಸ್ಟಂ ಆಕ್ಸ್, ಯುಎಸ್‍‍ಬಿ, ಬ್ಲೂಟೂತ್ ಕನೆಕ್ಟಿವಿಟಿನ್ ವಾಯ್ಸ್ ರೆಕಗ್ನಿಷನ್ ಮತ್ತು ರಿಮೋಟ್ ಕಂಟ್ರೋಲ್ ಆಯ್ಕೆಗಳನ್ನು ಹೊಂದಿದೆ. ಆದರೆ ಇತ್ತೀಚೆಗೆ ಬಿಡುಗಡೆಗೊಂಡ ಕಾರುಗಳಲ್ಲಿ ಕಾಣಬಹುದಾದ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‍‍ಪ್ಲೇ ಇದರಲ್ಲಿ ಒದಗಿಸದಿರುವುದನ್ನು ಕಾಣಬಹುದು.

ಟೊಯೊಟಾ ಇಟಿಯಾಸ್ ಪ್ಲಾಟಿನಂ ಆವೃತ್ತಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಪೆಟ್ರೋಲ್ ಆವೃತ್ತಿಯ 1.5ಲೀಟರ್ ಎಂಜಿನ್‍‍ನೊಂದಿಗೆ 89ಬಿಹೆಚ್‍‍ಪಿ ಮತ್ತು 132ಎನ್ಎಂ ಟಾರ್ಕನ್ನು ಉತ್ಪಾದಿಸಲಿದ್ದು, 1.4 ಲೀಟರ್ ಡೀಸೆಲ್ ಎಂಜಿನ್ 67ಬಿಹೆಚ್‍‍ಪಿ ಮತ್ತು 170ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಂಡಿದೆ. ಜೊತೆಗೆ ಎರಡೂ ಎಂಜಿನ್‍‍ಗಳನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಟೊಯೊಟಾ ಇಟಿಯಾಸ್ ಪ್ಲಾಟಿನಂ ಆವೃತ್ತಿ ಬಿಡುಗಡೆ

ಟೊಯೊಟಾ ಸಂಸ್ಥೆಯು ಇಟಿಯಾಸ್ ಪ್ಲಾಟಿನಂ ಲಿಮಿಟೆಡ್ ಆವೃತ್ತಿಯನ್ನು ಪ್ರಯಾಣಿಕ ಸೆಡಾನ್ ಕಾರುಗಳ ಮಾರಾಟವನ್ನು ಹೆಚ್ಚಿಸಲು ಬಿಡುಗಡೆ ಮಾಡಿದ್ದು, ಕಾರಿನಲ್ಲಿ ಹೊಸದಾಗಿ ಇನ್ಫೋಟೈನ್ಮೆಂಟ್ ಸಿಸ್ಟಂ ಎನ್ನು ಹೊರತು ಪಡಿಸಿ ಬೇರಾವ ಹೆಚ್ಚಿನ ಬದಲಾವಣೆಗಳನ್ನು ಮಾಡಲಿಲ್ಲ.

ಟೊಯೊಟಾ ಇಟಿಯಾಸ್ ಪ್ಲಾಟಿನಂ ಆವೃತ್ತಿ ಬಿಡುಗಡೆ

ಜೊತೆಗೆ ಇದೇ ವರ್ಷದಲ್ಲಿ ಟೊಯೊಟಾ ಸಂಸ್ಥೆಯು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಿದ್ದ ತನ್ನ ಯಾರಿಸ್ ಸೆಡಾನ್ ಕಾರನ್ನು ಕೂಡಾ ಬಿಡುಗಡೆಗೊಳಿಸುವ ತವಕದಲ್ಲಿದೆ.

Article Published On: Thursday, March 1, 2018, 15:18 [IST]
English summary
Toyota Etios Platinum Limited Edition Launched In India; Prices Start At Rs 7.84 Lakh.
Read more on toyota ಟೊಯೊಟಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+