ಇನ್ಮುಂದೆ ಟೊಯೊಟಾ ಶೋರಂನಲ್ಲಿ ಖರೀದಿಸಿರಿ ಮಾರುತಿ ಸುಜುಕಿ ಕಾರು..
ಸುಜುಕಿ ಟೊಯೊಟಾ ಭಾಗಸ್ವಾಮ್ಯದಲ್ಲಿ ಎರಡು ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಹಂಚಿಕೊಂಡು ಮಾರಾಟಗೊಳಿಸಲಿದ್ದಾರೆ. ಅದರ ಭಾಗವಾಗಿ ಮಾರುತಿ ಸುಜುಕಿ ಬಲೆನೊ ಕಾರನ್ನು ಟೊಯೊಟಾ ಬ್ರ್ಯಾಂಡ್ ಹೆಸರಿನಲ್ಲಿ ಟೊಯೊಟಾ ಮೋಟರ್ಸ್ ಮಾರಾಟಗೊಳಿಸಲಿದೆ.
ಸುಜುಕಿ ಟೊಯೊಟಾ ಭಾಗಸ್ವಾಮ್ಯದಲ್ಲಿ ಎರಡು ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಹಂಚಿಕೊಂಡು ಮಾರಾಟಗೊಳಿಸಲಿದ್ದಾರೆ. ಅದರ ಭಾಗವಾಗಿ ಮಾರುತಿ ಸುಜುಕಿ ಬಲೆನೊ ಕಾರನ್ನು ಟೊಯೊಟಾ ಬ್ರ್ಯಾಂಡ್ ಹೆಸರಿನಲ್ಲಿ ಟೊಯೊಟಾ ಮೋಟರ್ಸ್ ಮಾರಾಟಗೊಳಿಸಲಿದೆ.

ಹೌದು, ಮುಂದಿನ ವರ್ಷದಿಂದ ಟೊಯೊಟಾ ಬಲೆನೊ, ಮಾರುತಿ ಇಟಿಯಾಸ್ ಮಾಡಲ್ ಕಾರುಗಳು ಬಿಡುಗಡೆಗೊಳ್ಳಲಿದೆ. ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಉತ್ತಮಗೊಳಿಸಲು ಹಾಗು ಹೆಚ್ಚು ಜನಪ್ರಿಯತೆಯನ್ನು ಪಡೆಯಲು ಮಾರುತಿ ಮತ್ತು ಟೊಯೊಟಾ ಸಂಸ್ಥೆಗಳ ಮಧ್ಯದಲ್ಲಿ ಭಾಗಸ್ವಾಮ್ಯವು ಸ್ಥಾಪನೆಗೊಂಡಿದೆ.

ಸುಜುಕಿ ಮೋಟರ್ ಕಾರ್ಪೋರೇಷನ್ ಮೊದಲಿಗೆ 25,000 ಯೂನಿಟ್ ಕಾರುಗಳನ್ನು ಟೊಯೊಟಾ ಕಿರ್ಲೋಸ್ಕರ್ ಮೋಟರ್ಸ್ ಸರಬರಾಜು ಮಾಡಲಿದೆ. ಇವುಗಳಿಗೆ ಇಂಟೀಯರ್ ಮತ್ತು ಎಕ್ಸ್ಟೀರಿಯರ್ ಪರವಾಗಿ ಹಲವು ಬದಲಾವಣೆಗಳನ್ನು ಒದಗಿಸಿ ಟೊಯೊಟಾ ಬ್ಯಾಡ್ಜ್ ಹೆಸರಿನಲ್ಲಿ ಮುಂಬರಲಿರುವ ಆರ್ಥಿಕ ವರ್ಷದಿಂದ ಮಾರುಕಟ್ಟೆಯಲ್ಲಿ ಮಾರಾಟಮಾಡಲಿದೆ.

ಮಾಹಿತಿಗಳ ಪ್ರಕಾರ ಟೊಯೊಟಾ ಸಂಸ್ಥೆಯು ಮಾರಾಟ ಮಾಡಲಿರುವ ಮೊದಲ ಮಾರುತಿ ಸಂಸ್ಥೆಯ ಉತ್ಪತ್ತಿಯಾದ ಬಲೆನೊ ಮಾಡಲ್ ಕಾರನ್ನು ಜಪಾನ್‍ನಲ್ಲಿನ ಎರಡೂ ಪ್ರಧಾನ ಕಾರ್ಯಾಲಯಗಳಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಅದೇ ವಿಧವಾಗಿ ಎಷ್ಟು ಕಾರುಗಳನ್ನು ಸರಬರಾಜು ಮಾಡಬೇಕು ಎಂಬ ವಿಷಯವನ್ನು ಕೂಡಾ ಚರ್ಚಿಸಲಾಗಿದೆ.

ಭಾರತದಲ್ಲಿ ಟೊಯೊಟಾ ಮತ್ತು ಮಾರುತಿ ಸುಜುಕಿ ಮಧ್ಯ ಆದ ಭಾಗಸ್ವಾಮ್ಯದ ಒಪ್ಪಂದದ ಭಾಗವಾಗಿ ಬಲೆನೊ ಹ್ಯಾಚ್‍ಬ್ಯಾಕ್ ಕಾರುಗಳನ್ನು ಮಾರುತಿ ಟೊಯೊಟಾ ಸಂಸ್ಥೆಗೆ ರವಾನಿಸಲಿದೆ. ಈ ವರ್ಷದ ಮಾರ್ಚ್ ತಿಂಗಳಿನ ಕೊನೆಯಲ್ಲಿ ಈ ಎರಡೂ ಜಪನ್ ಸಂಸ್ಥೆಗಳ ನಡುವೆ ಒಪ್ಪಂದವು ಏರ್ಪಾಡಾಗಿದೆ.

ಮಾರುತಿ ಸುಜುಕಿ ಬಲೆನೊ ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ಕಾರುಗಳ ಜೊತೆಗೆ ವಿಟಾರಾ ಬ್ರೆಝಾ ಮಡಲ್ ಕಾರುಗಳನ್ನು ಕೂಡಾ ಟೊಯೊಟಾ ಸರಬರಾಜು ಮಾಡುತ್ತದೆ. ಅದೇ ವಿಧವಾಗಿ ಮಾರುತಿ ಡೀಲರ್‍ಗಳು ಮಾರಾಟ ಮಾಡಲು ಟೊಯೊಟಾ ಕರೊಲಾ, ಆಲ್ಟಿಸ್ ಮಾಡಲ್‍ಗಳಾನ್ನು ಸರಬರಾಜು ಮಾಡಲಿದೆ.

ಭಾರತದಲ್ಲಿ ಅತ್ಯಂತ ಪೈಪೋಟಿಯಿರುವ ಹ್ಯಾಚ್‍ಬ್ಯಾಕ್ ಕಾರುಗಳ ಸರನಿಯಲ್ಲಿ ರೀ-ಬ್ಯಾಡ್ಜ್ ಅಂಗವಾಗಿ ಬರಲಿರುವ ಬಲೆನೊ ಕಾರುಗಳ ಮಾರಾಟದೊಂದಿಗೆ ಟೊಯೊಟಾ ತಮ್ಮ ಸಾಮರ್ಥ್ಯವನ್ನು ತೋರಿಸಲಿದೆ. ದೇಶಿಯ ಹ್ಯಾಚ್‍ಬ್ಯಾಕ್ ಸರಣಿಯಲ್ಲಿ ಇಟಿಯಾಸ್ ಲಿವಾ ಹ್ಯಾಚ್‍ಬ್ಯಾಕ್ ಅನ್ನು ಮಾತ್ರ ಮಾರಾಟಗೊಳಿಸುತ್ತಿದೆ.

ಬಲೆನೊ ಕಾರನ್ನು ಪ್ರಸ್ಥುತ ಗುಜರಾತ್‍ನಲ್ಲಿನ ಸುಜುಕಿ ಪ್ರೊಡಕ್ಷನ್ ಪ್ಲಾಂಟ್‍ನಲ್ಲಿ ಉತ್ಪನ್ನ ಮಾಡಲಾಗುತ್ತಿದೆ. ಮಾರುತಿ ಇಂದ ಬಲೆನೊ ಕಾರುಗಳಾ ಸರಬರಾಜು ಪ್ರಾರಂಭವಾದಲ್ಲಿ, ಕರ್ನಾಟಕದ ಬೆಂಗಳೂರಿನಲ್ಲಿನ ಬಿಡದಿಯ ಪ್ಲಾಂಟ್ ಅನ್ನು ಪ್ರೊಡಕ್ಷನ್ ಅಂಗವಾಗಿ ಬಳಸಲಾಗುತ್ತದೆ.

ಮಾರುತಿ ಬಲೆನೊ ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ಕಾರಿಗೆ ದೇಶವ್ಯಾಪ್ತಿಯಾಗಿ ಒಳ್ಳೆಯ ಪ್ರತಿಕ್ರಿಯೆಯು ಲಭಯವಾಗುತ್ತಿರುವ ಕಾರಣ, ಟೊಯೊಟಾ ಇಂಡಿಯಾ ಬಲೆನೊ ಮೂಲವಾಗಿ ಉತ್ತಮ ಫಲಿತವನ್ನು ಸಾಧಿಸುವ ಅವಕಾಶವಿದೆ.


Click it and Unblock the Notifications