ಏಪ್ರಿಲ್‍ನಿಂದಲೇ ಟೊಯೊಟಾ ಯಾರಿಸ್ ಕಾರಿನ ಬುಕ್ಕಿಂಗ್ ಆರಂಭ..!

ಜಪಾನ್ ಮೂಲದ ವಾಹನ ತಯಾರಕ ಟೊಯೊಟಾ ಸಂಸ್ಥೆಯು ಈ ಹಿಂದೆ 2018ರ ಆಟೋ ಎಕ್ಸ್‌ಪೋದಲ್ಲಿ ತನ್ನ ಹೊಸ ಕಾರು ಆವೃತ್ತಿ ಯಾರಿಸ್ ಕಾರ್ ಅನ್ನು ಅನಾವರಣಗೊಳಿಸಿತ್ತು.

By Rahul Ts

ಜಪಾನ್ ಮೂಲದ ವಾಹನ ತಯಾರಕ ಟೊಯೊಟಾ ಸಂಸ್ಥೆಯು ಈ ಹಿಂದೆ 2018ರ ಆಟೋ ಎಕ್ಸ್‌ಪೋದಲ್ಲಿ ತನ್ನ ಹೊಸ ಕಾರು ಆವೃತ್ತಿ ಯಾರಿಸ್ ಕಾರ್ ಅನ್ನು ಅನಾವರಣಗೊಳಿಸಿತ್ತು. ಇದೀಗ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭಿಸುತ್ತಿದ್ದು, ಎಪ್ರಿಲ್ ಅಂತ್ಯಕ್ಕೆ ಹೊಸ ಕಾರು ಬಿಡುಗಡೆಯಾಗುವ ನೀರಿಕ್ಷೆಯಿದೆ.

ಏಪ್ರಿಲ್‍ನಿಂದಲೇ ಟೊಯೊಟಾ ಯಾರಿಸ್ ಕಾರಿನ ಬುಕ್ಕಿಂಗ್ ಆರಂಭ..!

ಟೊಯೊಟಾ ಸಂಸ್ಥೆಯು ಯಾರಿಸ್ ಕಾರುಗಳನ್ನು ಇದೇ ವರ್ಷದ 2ನೇ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಬಹುದು ಎನ್ನಲಾಗಿದ್ದು, ಮಾರುತಿ ಸುಜುಕಿ ಸಿಯಾಜ್, ಸ್ಕೋಡಾ ರ‍್ಯಾಪಿಡ್, ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಇದು ತೀವ್ರ ಪೈಪೋಟಿ ನೀಡಲಿದೆ.

ಏಪ್ರಿಲ್‍ನಿಂದಲೇ ಟೊಯೊಟಾ ಯಾರಿಸ್ ಕಾರಿನ ಬುಕ್ಕಿಂಗ್ ಆರಂಭ..!

ಟೊಯೊಟಾ ಯಾರಿಸ್ ಕಾರುಗಳು 1.5 ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 6 ಸ್ಪೀಡ್ ಅಥವಾ 7 ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೋದಿಗೆ ಜೋಡಿಸಲಾಗಿದೆ.

ಏಪ್ರಿಲ್‍ನಿಂದಲೇ ಟೊಯೊಟಾ ಯಾರಿಸ್ ಕಾರಿನ ಬುಕ್ಕಿಂಗ್ ಆರಂಭ..!

ಸದ್ಯ ಮಾರುಕಟ್ಟೆಯಲ್ಲಿರುವ ಟೊಯೊಟಾ ನಿರ್ಮಾಣದ ಸೆಡಾನ್ ಆವೃತ್ತಿಗಳು ಜನಪ್ರಿಯತೆ ಗಳಿಸುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಇದೇ ಉದ್ದೇಶಕ್ಕಾಗಿ ಗ್ರಾಹಕರನ್ನು ಸೆಳೆಯಲು ಉದ್ದೇಶದೊಂದಿಗೆ ಸುಧಾರಿತ ಮಾದರಿಯ ಯಾರಿಸ್ ಕಾರನ್ನು ಸಿದ್ಧಗೊಳಿಸಿದೆ.

ಏಪ್ರಿಲ್‍ನಿಂದಲೇ ಟೊಯೊಟಾ ಯಾರಿಸ್ ಕಾರಿನ ಬುಕ್ಕಿಂಗ್ ಆರಂಭ..!

ಹೊಸ ಕಾರಿನ ವೈಶಿಷ್ಟ್ಯತೆ

ವೃತ್ತಾಕಾರದ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್ ಹೊಂದಿರುವ ಯಾರಿಸ್, ಎಲ್ಇಡಿ ಡೇ ಟೈಮ್ ಲೈಟ್, ಫ್ರಂಟ್ ಬಂಪರ್, ಫುಲ್ ಎಲ್ಇಡಿ ಟೈಲ್ ಲೈಟ್ಸ್, ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಸಂಜ್ಞೆಗಳ ಮೂಲಕ ನಿಯಂತ್ರಿಸಬಹುದಾದ ತಾಂತ್ರಿಕ ಪ್ರತಿಫಲಕವನ್ನು ನೀಡಲಾಗಿದೆ.

ಏಪ್ರಿಲ್‍ನಿಂದಲೇ ಟೊಯೊಟಾ ಯಾರಿಸ್ ಕಾರಿನ ಬುಕ್ಕಿಂಗ್ ಆರಂಭ..!

ಜೊತೆಗೆ ಇಂಧನ ಕಾರ್ಯಕ್ಷಮತೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ಪವರ್ ಡ್ರೈವ್ ಸೀಟ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಆಲ್ ವೀಲ್ ಡಿಸ್ಕ್ ಬ್ರೇಕ್ ಒದಗಿಸಲಾಗಿದೆ. ಹೀಗಾಗಿ ಇದೊಂದು ಉತ್ತಮ ಸೆಡಾನ್ ಮಾದರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಏಪ್ರಿಲ್‍ನಿಂದಲೇ ಟೊಯೊಟಾ ಯಾರಿಸ್ ಕಾರಿನ ಬುಕ್ಕಿಂಗ್ ಆರಂಭ..!

ಬೆಲೆ(ಅಂದಾಜು)

ಬೆಲೆಗಳ ಬಗೆಗೆ ನಿಖರ ಮಾಹಿತಿ ಇಲ್ಲವಾದರೂ ಯಾರಿಸ್ ಬೆಲೆಯನ್ನು ರೂ.10 ಲಕ್ಷದಿಂದ ರೂ.12 ಲಕ್ಷದವರೆಗೆ ನಿಗದಿಪಡಿಸಬಹುದಾದ ಸಾಧ್ಯತೆಗಳಿವೆ.

ಏಪ್ರಿಲ್‍ನಿಂದಲೇ ಟೊಯೊಟಾ ಯಾರಿಸ್ ಕಾರಿನ ಬುಕ್ಕಿಂಗ್ ಆರಂಭ..!

ಎಸ್‌ಯುವಿ ಆವೃತ್ತಿಗಳಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಟೊಯೊಟಾ ಸಂಸ್ಥೆಯು ಸೆಡಾನ್ ವಿಭಾಗದಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುವ ನಿಟ್ಟಿನಲ್ಲಿ ಹೊಸ ಕಾರನ್ನು ಪರಿಚಯಿಸುತ್ತಿದ್ದು, ಯಾರಿಸ್ ಹೊಸ ಸಂಚಲನ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

More from DriveSpark

Article Published On: Tuesday, March 13, 2018, 16:04 [IST]
English summary
Toyota Yaris Bookings To Start From April 2018.
Read more on toyota four wheeler
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+