ಹೊಸದಾಗಿ ಬಿಡುಗಡೆಗೊಂಡ ಟೊಯೊಟಾ ಯಾರಿಸ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..??
ಟೊಯೊಟಾ ಯಾರಿಸ್ ಕೆಲದಿನಗಳ ಹಿಂದಷ್ಟೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 8.75 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.
ಟೊಯೊಟಾ ಯಾರಿಸ್ ಕೆಲದಿನಗಳ ಹಿಂದಷ್ಟೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 8.75 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ. ಟೊಯೊಟಾ ಯಾರಿಸ್ ತಮ್ಮ ಸಂಸ್ಥೆಯ ಮೊದಲ ಸಿ ಸೆಗ್ಮೆಂಟ್ ಸೆಡಾನ್ ಕಾರಾಗಿದ್ದು, ಮಾರುಕಟ್ಟೆಯಲ್ಲಿ ಹ್ಯುಂಡೈ ವೆರ್ನಾ, ಹೋಂಡಾ ಸಿಟಿ ಮತ್ತು ಮಾರಿತಿ ಸುಜುಕಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ಟೊಯೊಟಾ ಯಾರಿಸ್ ಕಾರುಗಳು ಕೇವಲ ಪೆಟ್ರೋಲ್ ಮಾದರಿಗಳಲ್ಲಿ ಮಾತ್ರ ಬಿಡುಗಡೆಗೊಂಡಿದ್ದು, ಹತ್ತು ಕಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ. ಬಿಡುಗಡೆಗೊಂಡಾಗಿನಿಂದಲೂ ಒಳ್ಳೆಯ ಮಾರಾಟವನ್ನು ಕಾಣುತ್ತಿದ್ದು, ಟೊಯೊಟಾ ಯಾರಿಸ್ ಕಾರು ಪಡೆದಿರುವ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಎಂಜಿನ್ ಸಾಮರ್ಥ್ಯ
ಮೇಲೆ ಹೇಳಿರುವ ಹಾಗೆಯೆ ಟೊಯೊಟಾ ಯಾರಿಸ್ ಕೇವಲ ಪೆಟ್ರೋಲ್ ವೇರಿಯಟ್‍ನಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಈ ಕಾರಿನಲ್ಲಿ ಬಳಸಲಾಗಿರುವ ಎಂಜಿನ್ ಅನ್ನು ಟೊಯೊಟಾ ಇಟಿಯಾಸ್‍ನಿಂದ ಪಡೆದಿದ್ದು, ಎಂಜಿನ್‍ನ ಔಟ್‍ಪುಟ್ ಅಭಿವೃದ್ಧಿಗೊಳಿಸಲು ಡ್ಯುಯಲ್ ವಿವಿಟಿ ಯೂನಿಟ್ ಅನ್ನು ಅಳವಡಿಸಲಾಗಿದೆ.

ಟೊಯೊಟಾ ಯಾರಿಸ್ ಕಾರು 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 105 ಬಿಹೆಚ್‍ಪಿ ಮತ್ತು 140ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಮ್ಯಾನುವಲ್ ಅಥವ 7 ಸ್ಟೆಪ್ ಸಿವಿಟಿ ಎಂಜಿನ್‍ನೊಂದಿಗೆ ಜೋಡಿಸಲಾಗಿದೆ.

ಟೊಯೊಟಾ ಯಾರಿಸ್ ಮ್ಯಾನುವಲ್ ಗೇರ್‍ಬಾಕ್ಸ್ ಕಾರು ಪ್ರತೀ ಲೀಟರ್‍ಗೆ 17.1 ಕಿಲೋಮೀಟರ್ ಮೈಲೇಜ್ ನೀಡುತ್ತಿದ್ದು, ಇನ್ನು ಸಿವಿಟಿ ವೇರಿಯಂಟ್ ಕಾರುಗಳು ಪ್ರತೀ ಲೀಟರ್‍ಗೆ 17.8 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತವೆ. ಇದಲ್ಲದೆ ಈ ಕಾರು 42 ಲೀಟರ್ ತುಂಬಬಹುದಾದ ಪೆಟ್ರೋಲ್ ಟ್ಯಾಂಕ್ ಅನ್ನು ಸಹ ಪಡೆದಿದೆ.

ಕಾರಿನ ಸುತ್ತಳತೆ
ಟೊಯೊಟಾ ಯಾರಿಸ್ ಕಾರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ಯಾರಿಸ್ ಅಟಿವ್ ಕಾರಿನ ಸುತ್ತಳಾತೆಯನ್ನೆ ಆಧರಿಸಿದ್ದು, ಭಾರತದಲ್ಲಿ ಬಿಡುಗಡೆಗೊಂಡ ಯಾರಿಸ್ ಕಾರು ಸಣ್ಣದಾದ ವೀಲ್ ಅನ್ನು ಅನ್ನು ಮತ್ತು ಎತ್ತರವಾದ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ.

ಹೊಸ ಯಾರಿಸ್ ಕಾರು 4,425ಎಂಎಂ ಉದ್ದ, 1730ಎಂಎಂ ಅಗಲ, 1495ಎಂಎಂ ಉತ್ತರ, 2550ಎಂಎಂ ವೀಲ್ ಬೇಸ್ ಮತ್ತು 160ಎಂಎಂ ಗೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿವೆ. ಜೊತೆಗೆ 5.1 ಮೀಟರ್ ಟರ್ನಿಂಗ್ ರೇಡಿಯಸ್ ಅನ್ನು ಸಹ ಪಡೆದುಕೊಂಡಿದೆ.

ಭಾರತದಲ್ಲಿ ಲಭ್ಯವಿರುವ ಟೊಯೊಟಾ ಯಾರಿಸ್ ಕಾರುಗಳು ಮೇಲೆ ಹೇಳಿರುವ ಹಾಗೆ ಸಣ್ಣದಾದ ವೀಲ್‍ಗಳನ್ನು ಪಡೆದಿದ್ದು, ಕಾರಿನ 2 ಟಾಪ್ ವೇರಿಯಂಟ್‍ಗಳು 6 ಸ್ಪೋಕ್ ಅಲಾಯ್ ಚಕ್ರಗಳು, 2 ಬೇಸ್ ವೇರಿಯಂಟ್ ಕಾರುಗಳು ಕಬ್ಬಿಣದ ರಿಮ್‍ಗಳನ್ನು ಪಡೆದುಕೊಂಡಿವೆ.

ಯಾರಿಸ್ ಕಾರುಗಳು ಫುಲ್ ಸೈಜ್ ಸ್ಪೇರ್ ವೀಲ್ ಅನ್ನು ಪಡೆದಿದ್ದು ಅದನ್ನು ಬೂಟ್ ಫ್ಲೋರ್‍ನ ಕೆಳಗೆ ಇರಿಸಲಾಗಿದ್ದು, 476 ಲೀಟರ್‍ನಷ್ಟು ಬೂಟ್ ಕ್ಯಾಪಸಿತಿಯನ್ನು ಕೂಡ ಪಡೆದುಕೊಂಡಿದೆ.

ಟೊಯೊಟಾ ಯಾರಿಸ್ ಕಾರು ವೈಲ್ಡ್ ಫೈರ್ ರೆಡ್, ಫ್ಯಾಂಥಮ್ ಬ್ರೌನ್, ಗ್ರೇ ಮೆಟಾಲಿಕ್, ಸೂಪರ್ ವೈಟ್, ಪರ್ಲ್ ವೈಟ್ ಮತ್ತು ಸಿಲ್ವರ್ ಮೆಟಾಲಿಕ್ ಎಂಬ ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications








