2017ರ ಮಹೀಂದ್ರಾ ಎಕ್ಸ್‌ಯುವಿ500 ಮೇಲೆ ಭಾರೀ ಡಿಸ್ಕೌಂಟ್..
ಏಪ್ರಿಲ್ 19ರಂದು ಮಹೀಂದ್ರಾ ಸಂಸ್ಥೆಯು ತಮ್ಮ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಿತ್ತು. ಮಹೀಂದ್ರಾ ಸಂಸ್ಥೆಯ ಅಧಿಕೃತ ಡೀಲರ್‍ಗಳು ಹಿಂದಿನ ತಲೆಮಾರಿನ ಎಕ್ಸ್‌ಯುವಿ500 ಎಸ್‍ಯುವಿ ಕಾರನ್ನು ಭಾರಿ ರಿಯಾಯಿತಿಯಲ್ಲಿ ಮಾರಾಟ
ಏಪ್ರಿಲ್ 19ರಂದು ಮಹೀಂದ್ರಾ ಸಂಸ್ಥೆಯು ತಮ್ಮ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಿತ್ತು. ಮಹೀಂದ್ರಾ ಸಂಸ್ಥೆಯ ಅಧಿಕೃತ ಡೀಲರ್‍ಗಳು ಹಿಂದಿನ ತಲೆಮಾರಿನ ಎಕ್ಸ್‌ಯುವಿ500 ಎಸ್‍ಯುವಿ ಕಾರನ್ನು ಭಾರೀ ರಿಯಾಯಿತಿಯಲ್ಲಿ ಮಾರಾಟಗೊಳಿಸಲು ತೀರ್ಮಾನಿಸಿದ್ದು, 2017ರ ಮಹೀಂದ್ರಾ ಎಕ್ಸ್‌ಯುವಿ500 ಕಾರಿನ ಖರೀದಿಯ ಮೇಲೆ ರೂ. 1.06 ಲಕ್ಷದ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ಮಾರಾಟವನ್ನು ಮುಂದುವರೆಸಲು ಕಾತುರದಿಂದ ಕಾಯ್ದಿರುವ ಮಹೀಂದ್ರಾ ಸಂಸ್ಥೆಯ ಡೀಲರ್‍ಗಳು 2017ರ ಮಹೀಂದ್ರಾ ಎಕ್ಸ್‌ಯುವಿ500 ಕಾರಿನೆ ಮೇಲೆ 1.06 ಲಕ್ಷ ರಿಯಾಯಿತಿಯಲ್ಲಿ ಮಾರುತ್ತಿದೆ ಎನ್ನಲಾಗಿದ್ದು, ರೂ. 1.33 ಲಕ್ಷದ ನಗದು ರಿಯಾಯಿತಿ ಹಾಗು ರೂ. 25 ಸಾವಿರ ಎಕ್ಸ್ಚೇಂಜ್ ಬೋನಸ್ ಅನ್ನು ನೀಡತ್ತಿದೆ.

ಈ ಆಫರ್ ಕಾರು ಖರೀದಿಸಲು ಯೋಜಿಸುತ್ತಿರುವವರಿಗೆ ಸುವರ್ಣ ಅವಕಾಶವಾಗಿದ್ದು, ಹೊಸ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 12.42 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದಿದ್ದು, ಇನ್ನು 2017ರ ಎಕ್ಸ್‌ಯುವಿ500 ಕಾರು ರೂ. 11.99 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಅಂದರೆ ಪ್ರಸ್ತುತ 2017ರ ಎಕ್ಸ್‌ಯುವಿ500 ಕಾರು ಅಂದಾಜು ರೂ. 10.4 ಲಕ್ಷಕ್ಕೆ ಖರೀದಿಸಬಹುದಾಗಿದೆ.

ಫ್ರೀ ಫೇಸ್‍ಲಿಫ್ಟ್ ಎಕ್ಸ್‌ಯುವಿ500 ಕಾರುಗಳು 2.2 ಲೀಟರ್ ಎಮ್‍ಹಾವ್ಕ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಮತ್ತು 330ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೊಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇದಲ್ಲದೆ 2017ರ ಎಕ್ಸ್‌ಯುವಿ500 ಕಾರು 2.2 ಲೀಟರ್ ಎಮ್‍ಹಾವ್ಕ್ ಪೆಟ್ರೋಲ್ ಎಂಜಿನ್ ಸಯಾಹದಿಂದ 140ಬಿಹೆಚ್‍ಪಿ ಮತ್ತು 320ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಫೀಡ್ ಆಟೊಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಹೊಸ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ಬಗ್ಗೆ ಹೇಳುವುದಾದರೇ ಆರನೇ ತಲೆಮಾರಿನ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಸಹಾಯದಿಂದ 155 ಬಿಹೆಚ್‍ಪಿ ಹಾಗು 360ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದು.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಪೆಟ್ರೋಲ್ ಎಂಜಿನ್ ಕಾರು 140 ಬಿಹೆಚ್‍ಪಿ ಹಾಗು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಾರಿನ ಒಳಭಾಗದಲ್ಲಿ ಗುರುತರ ಬದಲಾವಣೆಯನ್ನು ಪಡೆದಿದ್ದು, ಜೊತೆಗೆ ಹೊಸದಾಗಿ ಹೆಡ್‍ಲ್ಯಾಂಪ್ ಮತ್ತು ಟೈಲ್‍ಲ್ಯಾಂಪ್‍ಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಈ ಕಾರುಗಳಲ್ಲಿ ಬಳಸಲಾಗಿರುವ ಫ್ರಂಟ್ ಗ್ರಿಲ್ ಕ್ರೋಮ್ ಮತ್ತು 18 ಇಂಚಿನ 5 ಸ್ಪೋಕ್ ಅಲಾಯ್ ಚಕ್ರಗಳು ಕಾರಿನ ವಿನ್ಯಾಸವನ್ನು ಇನ್ನಷ್ಟು ಆಕರ್ಷಿಸುತ್ತದೆ.

ಮಹಿಂದ್ರಾ ಸಂಸ್ಥೆಯು ಬೇರಾವ ಕಾರುಗಳಲ್ಲಿಯು ಕಾಣದಂತಹ ಸ್ಮಾರ್ಟ್‍ವಾಹ್ ಕನೆಕ್ಟಿವಿಟಿ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದ್ದು, ಸ್ಮಾರ್ಟ್ ವಾಚ್‍ನಲ್ಲಿರುವ ಬ್ಲೂಸೆನ್ಸ್ ಅಪ್ಲಿಕೇಶನ್‍ನಿಂದ ಕಾರಿನ ಏಸಿ, ಆಡಿಯೊ, ಬಾಗಿಲುಗಳು, ಎಮರ್ಜೆನ್ಸಿ ಅಸ್ಸಿಸ್ಟ್ಸ್, ಲೊಕೇಶನ್ ಸರ್ವಿಸಸ್ ಮತ್ತು ಇನ್ನಿತರೆ ಆಯ್ಕೆಗಳನ್ನು ನಿಯಂತ್ರಿಸಬಹುದಾಗಿದೆ.

ಇದಲ್ಲದೆ ಆಂಡ್ರಾಯ್ಡ್ ಆಟೋ ಕನೆಕ್ಟೆಡ್ ಆಪ್ಸ್, ನಾವಿಗೇಶನ್ ಮತ್ತು ಇನ್ನಿತರೆ ಆಯ್ಕೆಗಳನ್ನು ಪಡೆದಿರುವ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನು ಪಡೆದಿದ್ದು, ಸಂಗೀತ ಪ್ರಿಯರನ್ನು ಆಕರ್ಷಿಸಲು ಕಾರಿನಲ್ಲಿ ಅರ್ಕಮಿಸ್ ಸಿಸ್ಟಂನ ಅಡಿಯೊ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ.

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನಲ್ಲಿ ಮೊದಲಬಾರಿಗೆ ವಿನೂತನವಾಗಿ ಪ್ರಯಾಣಿಕರ ಸುರಕ್ಷತೆಗಾಗಿ ಎಮರ್ಜೆನ್ಸಿ ಕಾಲ್ ಫಂಕ್ಷನ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ ಆರು ಏರ್‍ಬ್ಯಾಗ್‍ಗಳು, ಹಿಲ್ ಡೆಸ್ಸೆಂಟ್ ಮತ್ತು ಹೋಲ್ಡ್ ಕಂಟ್ರೋಲ್, ಎಬಿಎಸ್‍ನೊಂದಿಗೆ ಇಬಿಡಿ, ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟೈರ್ ಮಾನಿಟರಿಂಗ್ ಸಿಸ್ಟಂ ಹಾಗು ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.
Source : Rushlane


Click it and Unblock the Notifications








