ನಿಮ್ಮಲ್ಲಿ ವೈಟ್ ಬೋರ್ಡ್ ಕಾರು ಇದೆಯಾ? ಹಾಗಾದ್ರೆ ಕಾರ್ ಪೂಲಿಂಗ್ ಮಾಡಿ ಹಣ ಗಳಿಸಿ...

ನಿಮ್ಮಲ್ಲಿ ವೈಟ್ ಬೋರ್ಡ್ ಕಾರು ಇದ್ರೆ ಓಲಾ, ಉಬರ್‌ನಂತೆ ಪ್ರಯಾಣಿಕರಿಗೆ ಸೇವೆ ನೀಡುವ ಅವಕಾಶವನ್ನು ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರವು ಹೊಸ ನಿಯಮಾವಳಿಗಳನ್ನ ರೂಪಿಸುತ್ತಿದೆ.

By Praveen Sannamani

ನಿಮ್ಮಲ್ಲಿ ವೈಟ್ ಬೋರ್ಡ್ ಕಾರು ಇದ್ರೆ ಓಲಾ, ಉಬರ್‌ನಂತೆ ಪ್ರಯಾಣಿಕರಿಗೆ ಸೇವೆ ನೀಡುವ ಅವಕಾಶವನ್ನು ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರವು ಹೊಸ ನಿಯಮಾವಳಿಗಳನ್ನ ರೂಪಿಸುತ್ತಿದ್ದು, ಒಂದು ವೇಳೆ ಹೊಸ ನಿಯಮಗಳಿಗೆ ಒಪ್ಪಿಗೆ ಸಿಕ್ಕಲ್ಲಿ ವೈಟ್ ಬೋರ್ಡ್ ಕಾರು ಮಾಲೀಕರು ಸಹ ನಿಗದಿತ ಮಟ್ಟದಲ್ಲಿ ಪ್ರಯಾಣಿಕ ಸೇವೆಗಳನ್ನು ಒದಗಿಸಿ ಗಳಿಕೆ ಮಾಡಬಹುದು.

ನಿಮ್ಮಲ್ಲಿ ವೈಟ್ ಬೋರ್ಡ್ ಕಾರು ಇದೆಯಾ? ಹಾಗಾದ್ರೆ ಕಾರ್ ಪೂಲಿಂಗ್ ಮಾಡಿ ಹಣ ಗಳಿಸಿ...

ಹೌದು, ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಕಾರ್ ಪೂಲಿಂಗ್ ವಿಧಾನವನ್ನು ಕೆಲವು ವೈಜ್ಞಾನಿಕ ವಿಧಾನಗಳೊಂದಿಗೆ ಅವಕಾಶ ನೀಡುವ ಸಂಬಂಧ ಕೇಂದ್ರ ಸರ್ಕಾರವು ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನ ತಡೆಯಲು ಇಂತದೊಂದು ಮಹತ್ವದ ಕ್ರಮವನ್ನ ಕೈಗೊಳ್ಳಲಾಗುತ್ತಿದೆ.

ನಿಮ್ಮಲ್ಲಿ ವೈಟ್ ಬೋರ್ಡ್ ಕಾರು ಇದೆಯಾ? ಹಾಗಾದ್ರೆ ಕಾರ್ ಪೂಲಿಂಗ್ ಮಾಡಿ ಹಣ ಗಳಿಸಿ...

ಈಗಾಗಲೇ ಸಿಂಗಪುರ್ ಮತ್ತು ಯುಎಸ್ಎಗಳಲ್ಲಿ ಕಾರ್ ಪೂಲಿಂಗ್ ಕ್ರಮಗಳು ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲೇ ದೇಶದ ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಈ ಯೋಜನೆಯನ್ನ ಜಾರಿ ತರಲು ಚಿಂತನೆ ನಡೆಸಲಾಗುತ್ತಿದೆ. ಒಂದು ವೇಳೆ ಹೊಸ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಲ್ಲಿ ವೈಟ್ ಬೋರ್ಡ್ ಕಾರು ಮಾಲೀಕರು ಸಹ ದಿನಕ್ಕೆ ಇಂತಿಷ್ಟ ಮಟ್ಟದ ಪ್ರಯಾಣಿಕ ಸೇವೆಯನ್ನು ಒದಗಿಸಿ ತುಸು ಗಳಿಕೆ ಮಾಡುವ ಅವಕಾಶ ಸಿಗಲಿದೆ.

ನಿಮ್ಮಲ್ಲಿ ವೈಟ್ ಬೋರ್ಡ್ ಕಾರು ಇದೆಯಾ? ಹಾಗಾದ್ರೆ ಕಾರ್ ಪೂಲಿಂಗ್ ಮಾಡಿ ಹಣ ಗಳಿಸಿ...

ಏನಿದು ಕಾರ್ ಪೂಲಿಂಗ್..?

ನಗರದಲ್ಲಿ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಜಾಸ್ತಿಯಾಗಿದೆ. ಇದರಿಂದ ಜನರು ವಿವಿಧ ಖಾಯಿಲೆಗಳಿಂದ ಬಳಲುವ ಸಾಧ್ಯತೆಯೂ ಇದೆ. ಅಷ್ಟೇ ಯಾಕೆ ಒಬ್ಬರೇ ಆಟೋ ಅಥವಾ ನಿಮ್ಮ ಆಟೋದಲ್ಲಿ ಪಯಣಿಸುವಾಗ ಅದಕ್ಕೆ ಅಗತ್ಯವಿರುವ ಪೆಟ್ರೋಲ್ ಹಾಕಿಸಬೇಕು. ನಗರದಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಹನಗಳಿಂದ ಮಾಲಿನ್ಯ ಹೆಚ್ಚಿದೆ. ಇವೆಲ್ಲವನ್ನು ಮನಗಂಡಿರುವ ಸಂಚಾರ ಪೊಲೀಸರು ಈ ಹಿಂದೆಯೇ ಕಾರ್ ಪೂಲಿಂಗ್ ಅಥವಾ ಕಾರ್ ಶೇರಿಂಗ್ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದಾರೆ.

ನಿಮ್ಮಲ್ಲಿ ವೈಟ್ ಬೋರ್ಡ್ ಕಾರು ಇದೆಯಾ? ಹಾಗಾದ್ರೆ ಕಾರ್ ಪೂಲಿಂಗ್ ಮಾಡಿ ಹಣ ಗಳಿಸಿ...

ಇದರಿಂದಾಗಿ ನಾಲ್ಕು ಜನ ಪ್ರತ್ಯೇಕವಾಗಿ ಪ್ರತ್ಯೇಕ ಕಾರುಗಳನ್ನು ಬಳಸುವುದಕ್ಕೆ ಬದಲಾಗಿ ನಾಲ್ಕು ಜನ ಒಂದೇ ಕಾರನ್ನು ಹಂಚಿಕೊಂಡು ತಮ್ಮ ಕಚೇರಿ ಮತ್ತಿತರ ಸ್ಥಳಕ್ಕೆ ಸಂಚರಿಸುವ ವಿಧಾನನೇ ಕಾರ್ ಪೂಲಿಂಗ್ ಮಾದರಿಯಾಗಿದೆ. ಆದ್ರೆ ಇದು ಆರಂಭದಲ್ಲಿ ತುಸು ಜನಪ್ರಿಯವಾಗಿತ್ತಾದರೂ ತದನಂತರ ಟ್ಯಾಕ್ಸಿ ಸಂಸ್ಥೆಗಳ ಹಿತಾಸಕ್ತಿ ಮತ್ತು ಅಸುರಕ್ಷಿತ ದೃಷ್ಠಿಯಿಂದ ಬಹುತೇಕ ಈ ವಿಧಾನವನ್ನ ಬಳಸಲು ಹಿಂದೇಟು ಹಾಕಿದ್ದರು.

ನಿಮ್ಮಲ್ಲಿ ವೈಟ್ ಬೋರ್ಡ್ ಕಾರು ಇದೆಯಾ? ಹಾಗಾದ್ರೆ ಕಾರ್ ಪೂಲಿಂಗ್ ಮಾಡಿ ಹಣ ಗಳಿಸಿ...

ಇದೀಗ ಕೇಂದ್ರ ಸರ್ಕಾರವು ಇದಕ್ಕಾಗಿಯೇ ಕೆಲವು ಹೊಸ ನಿಯಮಾವಳಿಗಳನ್ನ ಜಾರಿ ಮಾಡುವ ಮೂಲಕ ಮಹತ್ವದ ಯೋಜನೆಗೆ ಮತ್ತೆ ಚಾಲನೆ ನೀಡುವ ಬಗ್ಗೆ ಮಾಲಿನ್ಯ ತಗ್ಗಿಸುವ ಉದ್ದೇಶ ಹೊಂದಿದೆ. ಇದರೊಟ್ಟಿಗೆ ಕಾರು ಮಾಲೀಕನಿಗೆ ಗಳಿಕೆ ಮಾಡಬಹುದು ಅವಕಾಶವನ್ನು ಸಹ ನೀಡುತ್ತಿದೆ.

ನಿಮ್ಮಲ್ಲಿ ವೈಟ್ ಬೋರ್ಡ್ ಕಾರು ಇದೆಯಾ? ಹಾಗಾದ್ರೆ ಕಾರ್ ಪೂಲಿಂಗ್ ಮಾಡಿ ಹಣ ಗಳಿಸಿ...

ನಿಮ್ಮಲ್ಲಿ ಕಾರು ಅಥವಾ ಬೈಕ್ ಇರಬಹುದು. ಆದರೆ ಅದರಲ್ಲಿ ದಿನನಿತ್ಯ ಒಬ್ಬರೇ ಪ್ರಯಾಣಿಸುತ್ತಿರಬಹುದು. ಕಾರಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಸೀಟುಗಳು ಖಾಲಿ ಇರಬಹುದು. ಆ ಸೀಟುಗಳಲ್ಲಿ ಅದೇ ದಾರಿಯಲ್ಲಿ ನಿತ್ಯ ಸಾಗುವರನ್ನು ನೀವು ಕರೆದುಕೊಂಡು ಹೋಗಬಹುದು. ದಿನನಿತ್ಯ ಈ ರೀತಿ ಕರೆದುಕೊಂಡು ಹೋಗಲು ಅಥವಾ ನೀವು ಬೇರೆ ಯಾವುದಾದರೂ ಕಾರಲ್ಲಿ ಹೋಗಬಹುದು. ಎಲ್ಲರಲ್ಲೂ ಕಾರಿದ್ದರೆ ಒಂದಿನ ಒಬ್ಬರ ಕಾರಲ್ಲಿ, ಮತ್ತೊಂದಿನ ಇನ್ನೊಬ್ಬರ ಕಾರಲ್ಲಿ ಹೋಗಬಹುದು. ಇದರಿಂದ ಇಂಧನವೂ ಉಳಿತಾಯವಾಗುತ್ತದೆ. ಪೆಟ್ರೋಲ್ ದುಡ್ಡು ಉಳಿತಾಯವಾಗುತ್ತದೆ.

ನಿಮ್ಮಲ್ಲಿ ವೈಟ್ ಬೋರ್ಡ್ ಕಾರು ಇದೆಯಾ? ಹಾಗಾದ್ರೆ ಕಾರ್ ಪೂಲಿಂಗ್ ಮಾಡಿ ಹಣ ಗಳಿಸಿ...

ಉಳಿತಾಯ ಹೇಗೆ?

ಇದರಲ್ಲಿ ಉಳಿತಾಯ ಹೇಗೆ ಎಂದು ಕೇಳಬಹುದು. ಈ ಕುರಿತು ನೀವು ನಿಮ್ಮ ಸಹ ಪ್ರಯಾಣಿಕರಲ್ಲಿ ಆರಂಭದಲ್ಲಿಯೇ ಮಾತುಕತೆ ನಡೆಸಬೇಕು. ತಿಂಗಳಿಗೆ ಇಂತಿಷ್ಟು ಪಾವತಿಸಬೇಕೆಂದು ಹೇಳಿಬಿಟ್ಟರೆ ಸಾಕು. ನಿಮ್ಮ ಕಾರು ನಿಮಗೆ ಆದಾಯವನ್ನೂ ತಂದುಕೊಡುತ್ತದೆ. ಪೆಟ್ರೋಲ್ ಹಣವೂ ಉಳಿತಾಯವಾಗುತ್ತದೆ.

ನಿಮ್ಮಲ್ಲಿ ವೈಟ್ ಬೋರ್ಡ್ ಕಾರು ಇದೆಯಾ? ಹಾಗಾದ್ರೆ ಕಾರ್ ಪೂಲಿಂಗ್ ಮಾಡಿ ಹಣ ಗಳಿಸಿ...

ಜತೆಗಾರರು ಎಲ್ಲಿ ಸಿಗುತ್ತಾರೆ?

ಅದೆಲ್ಲ ಸರಿ, ಜೊತೆಗಾರರು ಎಲ್ಲಿ ಸಿಗುತ್ತಾರೆ ಎಂದು ನೀವು ಕೇಳಬಹುದು. ಈ ಕುರಿತು ನಿಮ್ಮ ಸ್ನೇಹಿತರು, ಪರಿಚಿತರಲ್ಲಿ ವಿಚಾರಿಸಬಹುದು. ಇವರಲ್ಲಿ ವ್ಯವಹಾರ ಕಷ್ಟವೆಂದು ಅನಿಸುವುದೇ? ಅಥವಾ ಯಾರೂ ಸಹ ಪ್ರಯಾಣಿಕರು ಸಿಗುತ್ತಿಲ್ಲವೆಂಬುದಕ್ಕೆ ನೀವು ಕೊರಗುವ ಅವಶ್ಯಕತೆಯಿಲ್ಲ.

ನಿಮ್ಮಲ್ಲಿ ವೈಟ್ ಬೋರ್ಡ್ ಕಾರು ಇದೆಯಾ? ಹಾಗಾದ್ರೆ ಕಾರ್ ಪೂಲಿಂಗ್ ಮಾಡಿ ಹಣ ಗಳಿಸಿ...

ಕಾರ್ ಪೂಲಿಂಗ್ ಬಗ್ಗೆ ನೀವೇನಂತೀರಿ?

ಸಂಚಾರಿ ಪೊಲೀಸರು ಈಗಾಗಲೇ ಸಾಕಷ್ಟು ಬಾರಿ ಕಾರ್ ಪೂಲಿಂಗ್ ವ್ಯವಸ್ಥೆಗೆ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಟ್ರಾಫಿಕ್ ಮಧ್ಯೆ ನಿಂತು ಕಾರ್ ಪೂಲಿಂಗ್ ವ್ಯವಸ್ಥೆ ಬಗ್ಗೆ ನೀವು ಏನಂತೀರಿ, ಹೇಳಿ. ಏಕೆಂದರೆ ಕಾರ್ ಪೂಲಿಂಗ್ ವ್ಯವಸ್ಥೆಯಿಂದ ಸುಗಮ ಸಂಚಾರದ ಜತೆಗೆ ಹಣ ಮತ್ತು ಪೆಟ್ರೋಲ್ ಉಳಿತಾಯ ಸಾಧ್ಯವಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಒಬ್ಬರಿಗಿಂತ ಹೆಚ್ಚು ಮಂದಿ ವಾಹನದಲ್ಲಿ ಸಂಚರಿಸುವ ಮೂಲಕ ಶಬ್ದ ಮಾಲಿನ್ಯ ಹಾಗೂ ವಿಪರೀತ ವಾಹನ ದಟ್ಟಣೆಯನ್ನು ತಡೆಯಬಹುದಲ್ಲವೇ?

Source: business today

Most Read Articles

Kannada
Read more on auto news
English summary
You may soon be allowed to use your private car as Ola, Uber cab.
Story first published: Saturday, July 28, 2018, 18:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X