ಫೋಕ್ಸ್‌ವ್ಯಾಗನ್ ಹೊಸ ಕಾರುಗಳ ಖರೀದಿ ಮೇಲೆ ಬಂಪರ್ ಸರ್ವೀಸ್ ಪ್ಯಾಕೇಜ್

ಜರ್ಮನ್ ಬ್ರಾಂಡ್ ಖ್ಯಾತಿಯ ಫೋಕ್ಸ್‌ವ್ಯಾಗನ್ ಕಾರುಗಳ ಖರೀದಿ ಮೇಲೆ ಇದೀಗ ಬಂಪರ್ ಸರ್ವೀಸ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಲಾಗಿದೆ.

By Praveen Sannamani

ಜರ್ಮನ್ ಬ್ರಾಂಡ್ ಖ್ಯಾತಿಯ ಫೋಕ್ಸ್‌ವ್ಯಾಗನ್ ಕಾರುಗಳ ಖರೀದಿ ಮೇಲೆ ಇದೀಗ ಬಂಪರ್ ಸರ್ವೀಸ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಲಾಗಿದ್ದು, ಹೊಸದಾಗಿ ಖರೀದಿ ಮಾಡುವ ಕಾರುಗಳಿಗೆ ಅಷ್ಟೇ ಅಲ್ಲದೇ ಸರ್ವೀಸ್ ಪ್ಯಾಕೇಜ್ ಅವಧಿಯನ್ನು ಮುಂದುವರಿಸುವ ಅವಕಾಶವನ್ನು ನೀಡುತ್ತಿದೆ.

ಫೋಕ್ಸ್‌ವ್ಯಾಗನ್ ಹೊಸ ಕಾರುಗಳ ಖರೀದಿ ಮೇಲೆ ಬಂಪರ್ ಸರ್ವೀಸ್ ಪ್ಯಾಕೇಜ್

ಕಾರು ಖರೀದಿ ಮಾಡುವುದಕ್ಕಿಂತ ಅದರ ಸರಿಯಾಗಿ ನಿರ್ವಹಣೆ ಮಾಡುವುದೇ ದೊಡ್ಡ ಸವಾಲು. ಅದರಲ್ಲೂ ನಿರ್ವಹಣೆ ಇಲ್ಲದ ರಸ್ತೆಗಳಲ್ಲಿ ನಿಮ್ಮ ಹೊಸ ಕಾರುಗಳು ಯಾವಾಗ ಏನ್ ಆಗುತ್ತೋ ಯಾರಿಗೂ ಗೊತ್ತಿಲ್ಲ. ಹೀಗಾಗಿ ಕಾರುಗಳ ಸರಿಯಾಗಿ ನಿರ್ವಹಣೆ ಮಾಡಲು ಸರ್ವೀಸ್ ಪ್ಯಾಕೇಜ್‌ಗಳು ತುಂಬಾನೇ ಇಂಫಾರ್ಟೆಂಟ್ ಎನ್ನಬಹುದು.

ಫೋಕ್ಸ್‌ವ್ಯಾಗನ್ ಹೊಸ ಕಾರುಗಳ ಖರೀದಿ ಮೇಲೆ ಬಂಪರ್ ಸರ್ವೀಸ್ ಪ್ಯಾಕೇಜ್

ಈ ಹಿನ್ನೆಲೆಯಲ್ಲಿ ಮಾನ್ಸೂನ್ ಆಫರ್ ಘೋಷಣೆ ಮಾಡಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಆರಂಭಿಕ ಬೆಲೆಗಳಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರಿನ ಸರ್ವೀಸ್ ಕಾರ್ಯಗಳು ಅನ್ವಯವಾಗುವಂತೆ ಹೊಸ ಪ್ಲ್ಯಾನ್‌ಗಳನ್ನು ಪ್ರಕಟಿಸಿದೆ.

ಫೋಕ್ಸ್‌ವ್ಯಾಗನ್ ಹೊಸ ಕಾರುಗಳ ಖರೀದಿ ಮೇಲೆ ಬಂಪರ್ ಸರ್ವೀಸ್ ಪ್ಯಾಕೇಜ್

ಹೊಸದಾಗಿ ಕಾರು ಖರೀದಿಸುವಾಗ ನೀಡುವ 2 ವರ್ಷಗಳ ಸರ್ವೀಸ್ ಪ್ಯಾಕೇಜ್‌ಗಳ ಜೊತೆಗೆ ಹೊಸದಾಗಿ ಮೂರು ವರ್ಷಗಳ ಕಾಲ ಮುಂದುವರಿಸುವ ಅವಕಾಶ ನೀಡಿದ್ದು, ಕಾರಿನ ಪ್ರಮುಖ ತಾಂತ್ರಿಕ ವಿಭಾಗಗಳ ಮೇಲೆ ಸಂಪೂರ್ಣ ಖಾತ್ರಿ ನೀಡುತ್ತಿದೆ.

ಫೋಕ್ಸ್‌ವ್ಯಾಗನ್ ಹೊಸ ಕಾರುಗಳ ಖರೀದಿ ಮೇಲೆ ಬಂಪರ್ ಸರ್ವೀಸ್ ಪ್ಯಾಕೇಜ್

ಇದರಿಂದ ಕಡಿಮೆ ಮೊತ್ತಗಳಲ್ಲಿ 3 ವರ್ಷಗಳ ಕಾಲ ಹೆಚ್ಚುವರಿ ಸರ್ವೀಸ್ ಪ್ಯಾಕೇಜ್‌ಗಳನ್ನು ನಿಮ್ಮದಾಸಿಕೊಳ್ಳಬಹುದಾಗಿದ್ದು, ಮಾನ್ಸೂನ್ ಸರ್ವೀಸ್ ಪ್ಯಾಕೇಜ್ ಆಯ್ದುಕೊಳ್ಳುವ ಮೊದಲ 1 ಸಾವಿರ ಗ್ರಾಹಕರಿಗೂ ಭರ್ಜರಿ ಆಫರ್ ಸಹ ಸಿಗಲಿದೆಯೆಂತೆ.

ಫೋಕ್ಸ್‌ವ್ಯಾಗನ್ ಹೊಸ ಕಾರುಗಳ ಖರೀದಿ ಮೇಲೆ ಬಂಪರ್ ಸರ್ವೀಸ್ ಪ್ಯಾಕೇಜ್

ಮೊದಲ ಬಾರಿಗೆ ಹೆಚ್ಚುವರಿ ಸರ್ವೀಸ್ ಪ್ಯಾಕೇಜ್‌ಗಳನ್ನು ಆಯ್ದುಕೊಂಡ 1 ಸಾವಿರ ಗ್ರಾಹಕರಿಗೆ ಭರ್ಜರಿ ಉಡುಗೊರೆ ಸಿಗಲಿದ್ದು, ಇದರಲ್ಲಿ 5 ಗ್ರಾಹಕರಿಗೆ ಹೆಚ್ಚುವರಿಯಾಗಿ ಒಂದು ವರ್ಷ ಸರ್ವೀಸ್ ಪ್ಯಾಕೇಜ್ ಕೂಪನ್ ಪಡೆದುಕೊಳ್ಳಲ್ಲಿದ್ದಾರೆ. ಅಂದ್ರೆ 5 ಪ್ಲಸ್ ಹೆಚ್ಚುವರಿ 1 ವರ್ಷ ಸರ್ವೀಸ್ ಪ್ಯಾಕೇಜ್ ಇವರದ್ದಾಗಲಿದೆ.

ಫೋಕ್ಸ್‌ವ್ಯಾಗನ್ ಹೊಸ ಕಾರುಗಳ ಖರೀದಿ ಮೇಲೆ ಬಂಪರ್ ಸರ್ವೀಸ್ ಪ್ಯಾಕೇಜ್

ಈ ಬಗ್ಗೆ ಮಾತನಾಡಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯ ಇಂಡಿಯಾ ವಿಭಾಗದ ಎಂಡಿ ಸ್ಟೀಫನ್ ಕಾಪ್ನಾ ಅವರು 'ಬೇಸಿಗೆ ಅವಧಿಗಿಂತ ಮಳೆಗಾಲದ ಅವಧಿಯಲ್ಲೇ ವಾಹನಗಳ ತಾಂತ್ರಿಕ ಅಂಶಗಳು ಹೆಚ್ಚು ಕೈಕೊಡುವ ಸಾಧ್ಯತೆಗಳಿರುತ್ತವೆ. ಹೀಗಾಗಿಯೇ ಫೋಕ್ಸ್‌ವ್ಯಾಗನ್ ಗ್ರಾಹಕರು ಇಂತಹ ಸಮಸ್ಯೆ ಸಿಲುಕುವುದನ್ನು ತಪ್ಪಿಸಲು ಹೊಸ ಸರ್ವೀಸ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಲಾಗಿದೆ' ಎಂದಿದ್ದಾರೆ.

ಫೋಕ್ಸ್‌ವ್ಯಾಗನ್ ಹೊಸ ಕಾರುಗಳ ಖರೀದಿ ಮೇಲೆ ಬಂಪರ್ ಸರ್ವೀಸ್ ಪ್ಯಾಕೇಜ್

ಇನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯು ಕಳೆದ ವಾರವಷ್ಟೇ ಪೊಲೊ, ವೆಂಟೊ, ಆಮಿಯೊ ಕಾರುಗಳ ಸ್ಪೆಷಲ್ ಎಡಿಷನ್‌ಗಳನ್ನು ಪರಿಚಯಿಸಿದ್ದು, ಹೊಸ ಕಾರುಗಳ ಮಾರಾಟವನ್ನು ಹೆಚ್ಚಿಸಲು ಮತ್ತು ಬ್ರಾಂಡ್ ಮೌಲ್ಯವನ್ನು ಜನಪ್ರಿಯತೆಗೊಳಿಸಲು ಈ ಹೊಸ ಆಯ್ಕೆ ನೀಡಲಾಗುತ್ತಿದೆ.

ಫೋಕ್ಸ್‌ವ್ಯಾಗನ್ ಹೊಸ ಕಾರುಗಳ ಖರೀದಿ ಮೇಲೆ ಬಂಪರ್ ಸರ್ವೀಸ್ ಪ್ಯಾಕೇಜ್

ಒಟ್ಟಿನಲ್ಲಿ ಫೋಕ್ಸ್‌ವ್ಯಾಗನ್ ಕಾರು ಮಾಲೀಕರಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದಾಗಿದ್ದು, ಸುರಕ್ಷಿತ ಕಾರು ಚಾಲನೆಗಾಗಿ ಕಾಲಕಾಲಕ್ಕೆ ಕಾರುಗಳ ತಾಂತ್ರಿಕ ಅಂಶಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸರ್ವೀಸ್ ಪ್ಯಾಕೇಜ್‌ಗಳಿದ್ದಲ್ಲಿ ಉತ್ತಮ ಎನ್ನಬಹುದು.

More from DriveSpark

Article Published On: Saturday, June 16, 2018, 11:54 [IST]
English summary
Volkswagen Extended Warranty & Service Packages: New Monsoon Plans From Volkswagen India
Read more on volkswagen
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+