ಪಸ್ಸಾಟ್ ಕನೆಕ್ಟ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ದೇಶಾದ್ಯಂತ ದಸರಾ ಮತ್ತು ದೀಪಾವಳಿ ಹಬ್ಬದ ಸಡಗರಕ್ಕೆ ಸಾಕ್ಷಿಯಾಗಲು ಆಟೋ ಉತ್ಪಾದನಾ ಸಂಸ್ಥೆಗಳು ಕೆಲವು ಸ್ಪೆಷಲ್ ಎಡಿಷನ್ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದು, ಫೋಕ್ಸ್‌ವ್ಯಾಗನ್ ಸಂಸ್ಥೆಯು ಸಹ ತನ್ನ ಜನಪ್ರಿಯ ಪೊಲೊ, ಎಮಿಯೊ, ವೆಂಟೊ ಮತ್ತು ಪಸ್ಸಾಟ್ ಕೆನೆಕ್ಟ್ ಎಡಿಷನ್‌ಗಳನ್ನು ಬಿಡುಗಡೆ ಮಾಡಿದೆ.

ಪಸ್ಸಾಟ್ ಕನೆಕ್ಟ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಮಧ್ಯಮ ಕ್ರಮಾಂಕದ ಉತ್ತಮ ಪರ್ಫಾಮೆನ್ಸ್ ಕಾರುಗಳನ್ನು ಉತ್ಪಾದನೆ ಮಾಡುವಲ್ಲಿ ಜನಪ್ರಿಯವಾಗಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ನೆಚ್ಚಿನ ಮಾದರಿಗಳಾದ ಪೊಲೊ, ಎಮಿಯೊ, ವೆಂಟೊ ಮತ್ತು ಪಸ್ಸಾಟ್ ಸ್ಪೆಷಲ್ ಎಡಿಷನ್‌ಗಳನ್ನು ಪರಿಚಯಿಸಿದ್ದು, ಹೊಸ ಕಾರುಗಳಲ್ಲಿ ಕೆಲವು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ಜೋಡಿಸಿರುವುದು ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಪಸ್ಸಾಟ್ ಕನೆಕ್ಟ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಸ್ಪೆಷಲ್ ಎಡಿಷನ್‌ಗಳಲ್ಲಿ ಎಂಜಿನ್ ಮಾದರಿಯನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಕಾರಿನ ವಿನ್ಯಾಸದಲ್ಲಿ ಗುರುತರ ಬದಲಾವಣೆ ತರಲಾಗಿದೆ. ಕಾರಿನ ವಿನ್ಯಾಸಗಳಿಗೆ ಸ್ಪೋರ್ಟಿ ಲುಕ್ ನೀಡಲಾಗಿದ್ದು, ಕಾರು ಪ್ರಿಯರ ಬೇಡಿಕೆಗೆ ಅನುಗುಣವಾಗಿ ಹೊರ ಮತ್ತು ಒಳ ವಿನ್ಯಾಸಗಳಲ್ಲಿ ಭಾರೀ ಬದಲಾವಣೆ ಪಡೆದುಕೊಂಡಿವೆ.

ಪಸ್ಸಾಟ್ ಕನೆಕ್ಟ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಹೊಸದಾಗಿ ಬಿಡುಗಡೆಯಾಗಿರುವ ಪಸ್ಸಾಟ್ ಕನೆಕ್ಟ್ ಕಾರಿನಲ್ಲಿ ಟ್ರಿಪ್ ಟ್ರ್ಯಾಕಿಂಗ್, ಇಂಧನ ವೆಚ್ಚದ ಮಾನಿಟರ್, ಡ್ರೈವಿಂಗ್ ಮಾಹಿತಿ ಸೇರಿದಂತೆ ಹಲವು ವಿಶಿಷ್ಟತೆಗಳನ್ನು ಹೊಂದಿರಲಿದ್ದು, ಅತ್ಯಾಧುನಿಕ ಟೆಲಿಮ್ಯಾಟಿಕ್ಸ್ ಹಾಗೂ ವೆಹಿಕಲ್ ಅಸಿಸ್ಟನ್ಸ್ ಸಿಸ್ಟಂ ಹೊಸ ಕಾರನ್ನು ವಿಭಿನ್ನವಾಗಿಸಲಿದೆ.

ಪಸ್ಸಾಟ್ ಕನೆಕ್ಟ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಇನ್ನುಳಿದಂತೆ ಸ್ಪೆಷಲ್ ಎಡಿಷನ್ ಕಾರುಗಳ ರೂಫ್ ಸ್ಪಾಯ್ಲರ್, ಸ್ಟೈಲಿಶ್ ಸೈಡ್ ಪ್ರೋಫೈಲ್, ಬ್ಲ್ಯಾಕ್ ರಿಯರ್ ಸ್ಪಾಯ್ಲರ್, ಕಾರ್ಬನ್ ಫಿನಿಷ್ ಓಆರ್‌ವಿಎಂ ಕ್ಯಾಪ್‌ ಸೌಲಭ್ಯಗಳು ಹೊಸ ಕಾರುಗಳ ಹೊರನೋಟವನ್ನೇ ಬದಲಾವಣೆಗೊಳಿಸಿದ್ದು, ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಈ ಹೊಸ ಮಾದರಿಗಳನ್ನು ಸಿದ್ದಪಡಿಸಲಾಗಿದೆ.

ಪಸ್ಸಾಟ್ ಕನೆಕ್ಟ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಜೊತೆಗೆ ಕಾರು ಚಾಲನೆಯನ್ನು ಸುಲಭವಾಗಿಸಲು ಹೊಸದಾಗಿ ಇಂಟಲಿಜೆಂಟ್ ಅಸಿಸ್ಟೆನ್ಸ್ ಸಿಸ್ಟಂ ಎನ್ನುವ ಹೊಸ ಸೌಲಭ್ಯವನ್ನು ನೀಡಲಾಗಿದ್ದು, ಸ್ಮಾರ್ಟ್ ಫೋನ್ ಕನೆಕ್ಟ್ ಮೂಲಕ ಕಾರು ಉತ್ಪಾದಕರಿಂದಲೇ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದಾದ ವ್ಯವಸ್ಥೆ ಇದಾಗಿದೆ.

ಪಸ್ಸಾಟ್ ಕನೆಕ್ಟ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಅಂದರೇ, ಕಾರಿನಲ್ಲಿರುವ ಜೋಡಣೆ ಮಾಡಲಾಗಿರುವ ಇಂಟಲಿಜೆಂಟ್ ಅಸಿಸ್ಟೆನ್ಸ್ ಸಿಸ್ಟಂನಿಂದ ಕಾರಿನಲ್ಲಿರುವ ಸಮಸ್ಯೆಯನ್ನು ಆಲಿಸಲು ಈ ಸೌಲಭ್ಯ ನೇರವಿಗೆ ಬರಲಿದ್ದು, ಒಂದು ವೇಳೆ ಕಾರಿನ ಸರ್ವೀಸ್ ಅಗತ್ಯವಿದ್ದಲ್ಲಿ ಆ್ಯಪ್ ಮೂಲಕವೇ ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಅದು ನಿಮಗೆ ಮಾಹಿತಿ ನೀಡಲಿದೆ.

ಪಸ್ಸಾಟ್ ಕನೆಕ್ಟ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಬೆಲೆಯಲ್ಲಿ ಇಲ್ಲ ಬದಲಾವಣೆ

ಹೌದು, ಕೇವಲ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಪರಿಚಯಿಸಲಾಗಿರುವ ಪೊಲೊ, ಎಮಿಯೊ, ವೆಂಟೊ ಮತ್ತು ಪಸ್ಸಾಟ್ ಸ್ಪೆಷಲ್ ಎಡಿಷನ್ ಕಾರುಗಳಿಗೆ ನೀವು ಯಾವುದೇ ಹೆಚ್ಚುವರಿ ದರಗಳನ್ನು ಪಾವತಿಸಬೇಕಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ವಿಧಿಸಲಾಗುವ ದರಗಳೇ ಹೊಸ ಕಾರುಗಳಿಗೂ ಅನ್ವಯವಾಗುತ್ತವೆ.

ಪಸ್ಸಾಟ್ ಕನೆಕ್ಟ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಸದ್ಯ ಪೊಲೊ ಕಾರು ಎಕ್ಸ್‌ಶೋರಂ ಪ್ರಕಾರ ರೂ.5.55 ಲಕ್ಷದಿಂದ ರೂ.9.39ಲಕ್ಷ ಬೆಲೆ ಹೊಂದಿದ್ದರೆ, ಎಮಿಯೊ ಕಾರು ಎಕ್ಸ್‌ಶೋರಂ ಪ್ರಕಾರ ರೂ.5.65 ಲಕ್ಷದಿಂದ ರೂ.9.99 ಲಕ್ಷ, ವೆಂಟೊ ಸೆಡಾನ್ ಕಾರು ರೂ.8.38 ಲಕ್ಷದಿಂದ ರೂ.14.02 ಲಕ್ಷ ಮತ್ತು ಪಸ್ಸಾಟ್ ಕಾರು 25.99 ಲಕ್ಷ ಬೆಲೆ ಪಡೆದುಕೊಂಡಿವೆ.

ಪಸ್ಸಾಟ್ ಕನೆಕ್ಟ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಇನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯು ಪರಿಚಯಿಸಿರುವ ಸ್ಪೆಷಲ್ ಎಡಿಷನ್ ಪೊಲೊ, ಎಮಿಯೊ, ವೆಂಟೊ ಮತ್ತು ಪಸ್ಸಾಟ್ ಕಾರುಗಳು ಸಿಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ನಿಗದಿತ ಮಟ್ಟದಲ್ಲಿ ಉತ್ಪಾದನೆಗೊಂಡಿರುವ ಕಾರುಗಳು ಮಾರಾಟಗೊಂಡ ನಂತರ ಮತ್ತೆ ಸಾಮಾನ್ಯ ಮಾದರಿಗಳೇ ಖರೀದಿಗೆ ಲಭ್ಯವಿರಲಿವೆ.

ಪಸ್ಸಾಟ್ ಕನೆಕ್ಟ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್

ಇನ್ನು ಬಿಡುಗಡೆಯಾಗಿರುವ ಪೊಲೊ, ಎಮಿಯೊ ಸ್ಪೆಷಲ್ ಎಡಿಷನ್‌ಗಳಲ್ಲಿ ಈ ಹಿಂದೆಯೇ 1.0-ಲೀಟರ್ ಎಂಜಿನ್ ಪ್ರೇರಿತ ಆವೃತ್ತಿಗಳನ್ನು ಸಹ ಬಿಡುಗಡೆ ಮಾಡಲಾಗಿದ್ದು, ಹೊಸ ಕಾರುಗಳು 75-ಬಿಎಚ್‌ಪಿ ಮತ್ತು 95-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

Kannada
English summary
Volkswagen Passat Connect Edition Launched In India; Prices Start At Rs 25.99 Lakh.
Story first published: Saturday, October 20, 2018, 19:20 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more