ಎಕ್ಸ್‌ಸಿ90 ಟಿ8 ಪೆಟ್ರೋಲ್ ಹೈಬ್ರಿಡ್ ಬಿಡುಗಡೆ ಮಾಡಿದ ವೊಲ್ವೊ
ಹೈಬ್ರಿಡ್ ಕಾರುಗಳನ್ನು ಅಭಿವೃದ್ಧಿಗೊಳಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿರುವ ವೊಲ್ವೊ ಸಂಸ್ಥೆಯು ಸದ್ಯ ಎಕ್ಸ್‌ಸಿ90 ಟಿ8 ಇನ್‌ಸ್ಕ್ರಿಷನ್ ಪೆಟ್ರೋಲ್ ಹೈಬ್ರಿಡ್ ಕಾರನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.96.65 ಲಕ್ಷಕ್ಕೆ ನಿಗದಿ ಮಾಡಿದೆ.

ವೊಲ್ವೊ ಸಂಸ್ಥೆಯು ಈಗಾಗಲೇ ಎಕ್ಸ್‌ಸಿ90 ಟಿ8 ಸರಣಿಯಲ್ಲೇ ಎಕ್ಸ್‌ಲೆನ್ಸ್ ಎನ್ನುವ ಟಾಪ್ ವೆರಿಯೆಂಟ್ ಒಂದನ್ನು ಬಿಡುಗಡೆ ಮಾಡಿದ್ದು, ಇದೀಗ ಟಿ8 ಸರಣಿಯಲ್ಲೇ ಇನ್‌ಸ್ಕ್ರಿಷನ್ ಎನ್ನುವ ಆರಂಭಿಕ ಆವೃತ್ತಿಯನ್ನು ಪರಿಚಯಿಸಿದೆ. ಟಾಪ್ ವೆರಿಯೆಂಟ್‌ಗಳಾದ ಎಕ್ಸ್‌ಲೆನ್ಸ್ ಕಾರುಗಳು ಎಕ್ಸ್‌ಶೋರಂ ಪ್ರಕಾರ ರೂ.1.31 ಕೋಟಿ ಬೆಲೆ ಹೊಂದಿದ್ದು, ಇನ್‌ಸ್ಕ್ರಿಷನ್ ಮಾದರಿಯನ್ನು ಎಕ್ಸ್‌ಶೋರಂ ಪ್ರಕಾರ ರೂ.96.65 ಲಕ್ಷಕ್ಕೆ ಖರೀದಿ ಮಾಡಬಹುದಾಗಿದೆ.

ಎಕ್ಸ್‌ಸಿ90 ಟಿ8 ಕಾರುಗಳಲ್ಲಿ ಎಕ್ಸ್‌ಲೆನ್ಸ್ ಹಾಗೂ ಇನ್‌ಸ್ಕ್ರಿಷನ್ ಆವೃತ್ತಿಗಳು ಒಂದೇ ಮಾದರಿಯ ಹೈಬ್ರಿಡ್ ಎಂಜಿನ್ ಪಡೆದುಕೊಂಡಿದ್ದರು ಕಾರಿನಲ್ಲಿ ಒದಗಿಲಾಗಿರುವ ಹೊಸ ತಂತ್ರಜ್ಞಾನಗಳ ಆಧಾರದ ಮೇಲೆ ಕಾರು ದರಗಳು ನಿಗದಿಯಾಗಿದ್ದು, ಕಾರುಗಳ ಒಳಭಾಗದ ವಿನ್ಯಾಸವು ವಿಶ್ವದರ್ಜೆ ವೈಶಿಷ್ಟ್ಯತೆಯನ್ನು ಪಡೆದಿವೆ.

ಎಂಜಿನ್ ಸಾಮರ್ಥ್ಯ
2.0-ಲೀಟರ್ ಟರ್ಬೋಚಾರ್ಜ್ಡ್ ಮತ್ತು ಸೂಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯ ಹೊಂದಿರುವ ಎಕ್ಸ್‌ಸಿ90 ಟಿ8 ಇನ್‌ಸ್ಕ್ರಿಷನ್ ಕಾರುಗಳು, ಪೆಟ್ರೋಲ್ ಎಂಜಿನ್ ಮೂಲಕ 320-ಬಿಎಚ್‌ಪಿ ಉತ್ಪಾದನೆ ಮಾಡಿದ್ದಲ್ಲಿ ಎಲೆಕ್ಟ್ರಿಕ್ ಮೋಟಾರ್ ಪ್ರೇರಣೆಯೊಂದಿಗೆ ಹೆಚ್ಚುವರಿ 87-ಬಿಎಚ್‌ಪಿ ಉತ್ಪಾದಿಸಬಲ್ಲವು.

ಹೀಗಾಗಿ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಜೊತೆಗೂಡಿ 407-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಮುಂಭಾಗದ ಚಕ್ರಗಳಿಗೆ ಪವರ್ ಬೂಸ್ಟರ್ ಸೌಲಭ್ಯ ಹೊಂದಿವೆ.

ಇನ್ನು ಎಲೆಕ್ಟ್ರಿಕ್ ಮೋಟಾರ್ ಸಹಾಯದೊಂದಿಗೆ ಪ್ರತಿ ಚಾರ್ಜಿಂಗ್‌ಗೆ 40 ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿದ್ದು, ಶೇ.100ರಷ್ಟು ಬ್ಯಾಟರಿ ಚಾರ್ಜ್ ಮಾಡಲು ಎರಡೂವರೆ ಗಂಟೆ ಕಾಲಾವಕಾಶ ತೆಗೆದುಕೊಳ್ಳುತ್ತದೆ.

ಈ ಮೂಲಕ ಅತ್ಯತ್ತಮ ಇಂಧನ ದಕ್ಷತೆಗೆ ಸಹಾಕಾರಿಯಾಗುವ ಎಕ್ಸ್‌ಸಿ90 ಟಿ8 ಕಾರುಗಳಲ್ಲಿ ವರ್ಲ್ಡ್ ಕ್ಲಾಸ್ ಇಂಟಿರಿಯರ್ ಸೌಲಭ್ಯಗಳು ಮೊದಲ ನೋಟದಲ್ಲೇ ಐಷಾರಾಮಿ ಕಾರು ಪ್ರಿಯರ ಮನಸೆಳೆಯುತ್ತವೆ.

ಒಳಾಂಗಣ ವೈಶಿಷ್ಟ್ಯತೆಗಳು
ಪನೊರೊಮಿಕ್ ಸನ್‌ರೂಫ್, ಫುಲ್ ಜೋನ್ ಕ್ಲೈಮೆಟ್ ಕಂಟ್ರೊಲರ್, ಮಸಾಜ್ ಫಂಕ್ಷನ್ ಸೀಟುಗಳು ಮತ್ತು ವೊಲ್ವೊ ಸಿಗ್ನಿಚೆರ್ ಸೌಲಭ್ಯಗಳಾದ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಜೊತೆ ಸುಖಕರ ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಇನ್ಪೋಟೈನ್‌ಮೆಂಟ್ ಇದರಲ್ಲಿದೆ.

ಸುರಕ್ಷಾ ಸೌಲಭ್ಯಗಳು
ಲೆನ್ ಕಿಪ್ ಅಸಿಸ್ಟ್, ಕೂಲಿಷನ್ ಅವಾಯ್ಡ್ ಬ್ರೇಕಿಂಗ್ ಸಿಸ್ಟಂ, ರನ್ ಆಫ್ ರೋಡ್ ಪ್ರೊಟೆಕ್ಷನ್, ರಡಾರ್ ಬೆಸ್ಡ್ ಅಡ್ಪಾಟಿವ್ ಕ್ರೂಸ್ ಕಂಟ್ರೊಲರ್ ಸಹ ಇದರಲ್ಲಿದ್ದು, ವೊಲ್ವೊ ಮಾಹಿತಿ ಪ್ರಕಾರ ಮುಂಬರುವ ದಿನಗಳಲ್ಲಿ ಡಿಸೇಲ್ ಹೈಬ್ರಿಡ್ ಕಾರುಗಳು ಸಹ ರಸ್ತೆಗಿಳಿಯಲಿವೆಯೆಂತೆ.

ಇದಲ್ಲದೇ 2025ರ ವೇಳೆಗೆ ವೊಲ್ವೊ ನಿರ್ಮಾಣದ ಪ್ರತಿಯೊಂದು ಕಾರು ಮಾದರಿಯು ಸಹ ಹೈಬ್ರಿಡ್ ವರ್ಷನ್‌ಗಳೊಂದಿಗೆ ಮಾರಾಟಕ್ಕೆ ಲಭ್ಯವಾಗಲಿದ್ದು, ಸದ್ಯ ಹೊಸ ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಿರುವ ಎಕ್ಸ್‌ಸಿ90 ಟಿ8 ಇನ್‌ಸ್ಕ್ರಿಷನ್ ಪೆಟ್ರೋಲ್ ಹೈಬ್ರಿಡ್ ಕಾರುಗಳು ಮರ್ಸಿಡಿಸ್ ಬೆಂಝ್ ಜಿಎಲ್ಎಸ್, ಬಿಎಂಡಬ್ಲ್ಯು ಎಕ್ಸ್6 ಮತ್ತು ರೇಂಜ್ ರೋವರ್ ವೆಲಾರ್ ಕಾರುಗಳಿಗೆ ತ್ರೀವ ಪೈಪೋಟಿ ನೀಡಲಿದೆ.


Click it and Unblock the Notifications








