ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಫಾರಿ ಸ್ಟ್ರೋಮ್ 4x4 ವರ್ಷನ್

By Praveen Sannamani

ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯ ತನ್ನ ಜನಪ್ರಿಯ ಕಾರು ಮಾದರಿಯಾದ ಸಫಾರಿ ಸ್ಸ್ಟ್ರೋಮ್ ಕಾರುಗಳನ್ನ ಭಾರತೀಯ ಸೇನೆ ಒದಗಿಸುವ ಬೃಹತ್ ಯೋಜನೆಯನ್ನ ತನ್ನದಾಗಿಸಿಕೊಂಡಿದ್ದು, ಇದೀಗ ಆರ್ಮಿ ವರ್ಷನ್ ಹೊರತು ಪಡಿಸಿ ಸಾಮಾನ್ಯ ಮಾದರಿಯಲ್ಲೂ 4x4 ಪರಿಚಯಿಸುವ ಸುಳಿವು ನೀಡಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಫಾರಿ ಸ್ಟ್ರೋಮ್ 4x4 ವರ್ಷನ್

ಕಾಲಕ್ಕೆ ತಕ್ಕಂತೆ ಭಾರತೀಯ ಸೇನೆಯು ತಾಂತ್ರಿಕ ವಿಭಾಗದಲ್ಲಿ ಸಾಕಷ್ಟು ಬದಲಾವಣೆ ಹೊಂದುತ್ತಿದ್ದು, ಇದೀಗ ಬಹುದಿನಗಳಿಂದ ಬಳಕೆಯಾಗುತ್ತಿದ್ದ ಜನಪ್ರಿಯ ಮಾರುತಿ ಜಿಪ್ಸಿಗೆ ಗುಡ್ ಬೈ ಹೇಳುವ ಮೂಲಕ ಟಾಟಾ ಮೋಟಾರ್ಸ್ ಸಫಾರಿ ಸ್ಟ್ರೋಮ್ ಎಸ್‌ಯುವಿ ಬಳಕೆಗೆ ಹಸಿರು ನಿಶಾನೆ ತೊರಿದೆ. ಹೀಗಾಗಿ ಆರ್ಮಿ ವರ್ಷನ್‌ ಸಫಾರಿ ಸ್ಟ್ರೋಮ್ ಕಾರುಗಳಲ್ಲಿ ಮೊದಲ ಬಾರಿಗೆ 4x4 ಡ್ರೈವ್ ಸೌಲಭ್ಯವನ್ನು ಒದಗಿಸುತ್ತಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಫಾರಿ ಸ್ಟ್ರೋಮ್ 4x4 ವರ್ಷನ್

ಸೇನಾಪಡೆಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಆರ್ಮಿ ವರ್ಷನ್ ಸಫಾರಿ ಸ್ಟ್ರೋಮ್ ಕಾರುಗಳು ಮ್ಯಾಟೆ ಗ್ರೀನ್‌ ಬಣ್ಣ ಹೊಂದಿದ್ದು, ಸಫಾರಿ ಸ್ಟ್ರೋಮ್ ಕಾರಿನ ಇಂಚಿಂಚೂ ಕೂಡಾ ಆರ್ಮಿ ಗ್ರೀನ್ ಬಣ್ಣದೊಂದಿಗೆ ಮಿಂಚುತ್ತಿವೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಫಾರಿ ಸ್ಟ್ರೋಮ್ 4x4 ವರ್ಷನ್

ಆದ್ರೆ, ಟಾಟಾ ಸಂಸ್ಥೆಯು ಆರ್ಮಿ ವರ್ಷನ್ ಸಫಾರಿ ಸ್ಟ್ರೋಮ್‌ಗಳಲ್ಲಿ ಅಷ್ಟೇ ಅಲ್ಲದೇ ಸಾಮಾನ್ಯ ಮಾದರಿಯ ಸಫಾರಿ ಸ್ಟ್ರೋಮ್ ಕಾರುಗಳಲ್ಲೂ ಕೂಡಾ 4x4 ಡ್ರೈವ್ ಸೌಲಭ್ಯವನ್ನು ಒದಗಿಸುವ ಸುಳಿವು ನೀಡಿದ್ದು, ಈ ಪೂರಕ ಎನ್ನುವಂತೆ ಇದೀಗ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಫಾರಿ ಸ್ಟ್ರೋಮ್ 4x4 ವರ್ಷನ್

ವೈಟ್ ಬಣ್ಣದ ಸಫಾರಿ ಸ್ಟ್ರೋಮ್ ಕಾರೊಂದು ನಿನ್ನೆಯಷ್ಟೇ ಮುಂಬೈ ಹೊರವಲಯದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುವಾಗ ಹೊಸ ಕಾರಿನ ಚಿತ್ರಗಳು ಸೆರೆಸಿಕ್ಕಿದ್ದು, ಸರ್ಕಾರಿ ಅಧಿಕಾರಿಗಳ ಭದ್ರತೆಗಾಗಿ ಈ ಮಾದರಿಯನ್ನ ಬಳಕೆ ಮಾಡಿಕೊಳ್ಳಬಹುದಾದ ಸಾಧ್ಯತೆಗಳು ಕೂಡಾ ಇವೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಫಾರಿ ಸ್ಟ್ರೋಮ್ 4x4 ವರ್ಷನ್

ಹೀಗಾಗಿ ಭದ್ರತಾ ವಿಭಾಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಸಫಾರಿ ಸ್ಟೋಮ್ ಕಾರುಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಆಕರ್ಷಕ ಬೆಲೆ ಹೊಂದಿರುವುದೇ ಈ ಕಾರಿನ ವಿಶೇಷ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಫಾರಿ ಸ್ಟ್ರೋಮ್ 4x4 ವರ್ಷನ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಆರ್ಮಿ ವರ್ಷನ್ ಟಾಟಾ ಸಫಾರಿ ಸ್ಟ್ರೋಮ್ ಕಾರುಗಳು ಸಹ 4x4 ಡ್ರೈವ್ ಟೆಕ್ನಾಲಜಿಯೊಂದಿಗೆ ಆಫ್ ರೋಡ್ ಕೌಶಲ್ಯ ಹೊಂದಿದ್ದು, ಇದು ಗಡಿಭಾಗಗಳಲ್ಲಿನ ರಕ್ಷಣಾ ಕಾರ್ಯಚರಣೆಗಳಲ್ಲಿ ಮಹತ್ವದ ಪಾತ್ರವಹಿಸಲಿವೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಫಾರಿ ಸ್ಟ್ರೋಮ್ 4x4 ವರ್ಷನ್

ಕಳೆದ ಕೆಲದಿನಗಳ ಹಿಂದಷ್ಟೇ ಮಿಲಿಟರಿ ವರ್ಷನ್ ಎಸ್‌ಯುವಿ ಕಾರುಗಳಿಗಾಗಿ ಬಿಡ್ ಮಾಡಿದ್ದ ಭಾರತೀಯ ಸೇನೆಯು, ಮಹೀಂದ್ರಾ ಸ್ಕಾರ್ಪಿಯೊ ಮತ್ತು ಟಾಟಾ ಸಫಾರಿ ಸ್ಟ್ರೋಮ್ ಕಾರುಗಳ ಮೂಲಕ ಪರೀಕ್ಷೆ ಕೈಗೊಂಡಿತ್ತು. ಇದರಲ್ಲಿ ಸಫಾರಿ ಸ್ಟೋಮ್‌ಗಳು ಸೇನಾಪಡೆಯ ಅಗತ್ಯಕ್ಕೆ ತಕ್ಕಂತೆ ಸಿದ್ದವಾಗಿರುವುದು ಆಯ್ಕೆಗೆ ಕಾರಣವಾಗಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಫಾರಿ ಸ್ಟ್ರೋಮ್ 4x4 ವರ್ಷನ್

ಸದ್ಯ ಆರ್ಮಿ ವರ್ಷನ್ ಸಫಾರಿ ಸ್ಟ್ರೋಮ್ ಕಾರುಗಳು ಮೊಟ್ಟ ಮೊದಲ ಬಾರಿಗೆ ಸೇನಾ ಕ್ಯಾಂಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ಒಟ್ಟು 3,193 ಸಫಾರಿ ಸ್ಟ್ರೋಮ್ ಕಾರುಗಳನ್ನು ಟಾಟಾ ಮೋಟಾರ್ಸ್ ಸಂಸ್ಥೆಯು ಸೇನಾಪಡೆಗೆ ಸರಬರಾಜು ಮಾಡುತ್ತಿದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಫಾರಿ ಸ್ಟ್ರೋಮ್ 4x4 ವರ್ಷನ್

ಸರಕು ಸಾಗಿಸಲು ಅನುಕೂಲಕವಾಗುವಂತೆ ರಿಯರ್ ಹುಕ್, ಕಾರಿನ ಬ್ಯಾನೆಟ್ ಮೇಲೆ ಆ್ಯಂಟೆನಾ, ಫ್ರಂಟ್ ಬಂಪರ್‌ಗಳಲ್ಲಿ ಸ್ಪಾಟ್ ಲೈಟ್ ಪಡೆದುಕೊಂಡಿದ್ದು, ಇನ್ನು ಕಾರಿನ ಒಳಭಾಗದಲ್ಲಿ ಅಳವಡಿಸಲಾಗಿರುವ ತಾಂತ್ರಿಕ ಅಂಶಗಳ ಬಗೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಫಾರಿ ಸ್ಟ್ರೋಮ್ 4x4 ವರ್ಷನ್

ಎಂಜಿನ್ ಸಾಮರ್ಥ್ಯ

ಎಂಜಿನ್ ಸಾಮರ್ಥ್ಯ ಆರ್ಮಿ ವರ್ಷನ್ ಟಾಟಾ ಸಫಾರಿ ಸ್ಟ್ರೋಮ್ ಕಾರುಗಳು 2.2 ಲೀಟರ್ 4 ಸಿಲಿಂಡರ್‌ ಟರ್ಬೋ ಚಾರ್ಜ್ಡ್ ಡೀಸೇಲ್ ಎಂಜಿನ್ ಪಡೆದುಕೊಂಡಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 154ಬಿಎಚ್‌ಪಿ ಮತ್ತು 400ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಸಫಾರಿ ಸ್ಟ್ರೋಮ್ 4x4 ವರ್ಷನ್

ಒಟ್ಟಿನಲ್ಲಿ ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಟಾಟಾ ಸ್ಟ್ರೋಮ್ ಕಾರುಗಳು ಸದ್ಯ ಸೇನಾ ಕಾರ್ಯಚರಣೆಯಲ್ಲಿ ಸೇವೆಗೆ ಸಿದ್ದವಾಗಿದ್ದು, ಸದ್ಯದಲ್ಲೇ ಸಾಮಾನ್ಯ ಮಾದರಿಗಳಲ್ಲೂ 4x4 ವರ್ಷನ್ ಖರೀದಿ ಲಭ್ಯವಾಗುವ ಎಲ್ಲಾ ಸಾಧ್ಯತೆಗಳಿವೆ.

Image Courtesy: Shifting Gears

Article Published On: Thursday, August 2, 2018, 18:41 [IST]
English summary
White painted Tata Safari GS800 spotted in Mumbai.
Read more on tata motors suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+