ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

By Praveen Sannamani

ಸದ್ಯ ದೇಶದ್ಯಾಂತ ಹೊಸ ಮೋಟಾರ್ ವೆಹಿಕಲ್ ಆಕ್ಟ್ ಜಾರಿಯಲ್ಲಿದ್ದು, ಹೊಸ ನಿಯಮಾವಳಿಗಳ ಪ್ರಕಾರ ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸಲಾಗುವ ದಂಡದ ಮೊತ್ತಗಳು ವಾಹನ ಸವಾರರನ್ನು ತಲೆ ತಿರುಗುವಂತೆ ಮಾಡುತ್ತವೆ. ಹೀಗಾಗಿ ನಿಯಮ ಉಲ್ಲಂಘಿಸಿ ಜೇಬು ಖಾಲಿ ಮಾಡಿಕೊಳ್ಳುವುದಕ್ಕೂ ಮುನ್ನ ಹೊಸ ನಿಯಮಗಳ ಬಗ್ಗೆ ಅರಿತುಕೊಂಡು ವಾಹನಗಳನ್ನ ರಸ್ತೆಗಿಳಿಸುವುದು ಒಳಿತು.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಕೇಂದ್ರ ಸಾರಿಗೆ ಇಲಾಖೆಯು ಪ್ರಯಾಣಿಕರ ಸುರಕ್ಷೆ ದೃಷ್ಠಿಯಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಸಾಕಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದು, ಇದರಲ್ಲಿ ಪ್ರತಿ ವಾಹನವು ಥರ್ಡ್ ಪಾರ್ಟಿ ವಿಮೆ ಹೊಂದಿರುವುದು ಕಡ್ಡಾಯ ಕೂಡಾ ಒಂದಾಗಿದೆ. ಹಾಗಾದ್ರೆ ವಾಹನ ಸವಾರರು ಮೂರನೇ ವ್ಯಕ್ತಿ ವಿಮೆ ಹೊಂದಿರಬೇಕಿರುವ ಅಗತ್ಯತೆ ಹಾಗೂ ಯಾವ ರೀತಿಯ ವಿಮಾ ಹೊಂದಿದ್ದರೇ ವಾಹನ ಸವಾರರಿಗೆ ಅನುಕೂಲ ಎನ್ನುವ ಕುರಿತು ನಾವಿಲ್ಲಿ ಸಮಗ್ರ ಮಾಹಿತಿಯನ್ನ ಚರ್ಚಿಸುತ್ತಿದ್ದೇವೆ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಹಾಗಾದ್ರೆ ಮೋಟಾರು ವಿಮೆ ಎಂದರೇನು?

ಮೋಟಾರು ವಿಮೆ ಎಂಬುದು ವಾಹನ ವಿಮೆ, ಜಿಎಪಿ ವಿಮೆ, ಕಾರು ವಿಮೆ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇದು ಪ್ರಮುಖವಾಗಿಯೂ ಕಾರು, ಟ್ರಕ್, ಮೋಟಾರ್ ಸೈಕಲ್ ಅಥವಾ ಇತರ ರಸ್ತೆ ಅಪಘಾತಗಳಿಗೆ ಸುರಕ್ಷತೆಯನ್ನು ಒದಗಿಸುತ್ತದೆ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ವಾಹನ ಅಪಘಾತ ಸಂಭವಿಸಿದಂತಹ ಪರಿಸ್ಥಿತಿಯಲ್ಲಿ ದೈಹಿಕವಾದ ಗಾಯ ಅಥವಾ ವಾಹನಗಳಿಗೆ ಹಾನಿಯಂಟಾದ ಸಂದರ್ಭದಲ್ಲಿ ಹಣಕಾಸಿನ ರಕ್ಷಣೆ ಒದಗಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದ್ದು, ವಾಹನ ವಿಮೆ ನೆರವಿನಿಂದ ವಾಹನಗಳಿಗೆ ಹಾನಿ ಸಂಭವಿಸಿದ್ದಲ್ಲಿ ಅದರ ದುರಸ್ತಿಗೆ ಸಂಭವಿಸಬಹುದಾದ ವೆಚ್ಚವನ್ನು ಹಾಗೆಯೇ ವ್ಯಕ್ತಿಯ ಚಿಕಿತ್ಸೆಗೆ ಬೇಕಾಗಿರುವ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಮೋಟಾರು ವಿಮೆಯ ಅಗತ್ಯವೇನು?

ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲ ವಾಹನಗಳ ಮಾಲಿಕರು ಕಾರು ವಿಮೆ ಮಾಡಿಸತಕ್ಕದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ. ಬಹುಶಃ ನಿಮ್ಮ ವಾಹನ ನೀವು ಖರೀದಿಸುವ ವಸ್ತುಗಳಲ್ಲಿ ಅತ್ಯಂತ ದುಬಾರಿಯಾಗಿರಬಹುದು. ವಿಮೆಯು ಈ ಸ್ವತ್ತಿಗೆ ರಕ್ಷಣೆ ಒದಗಿಸುವುದಲ್ಲದೆ ಅಪಘಾತ, ಹಾನಿ ಅಥವಾ ಕಳ್ಳತನ ಸಂಭವಿಸಿದ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ನಿಭಾಯಿಸಲು ಸಹಕಾರಿಯಾಗುತ್ತದೆ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಮತ್ತೊಂದು ಕಾರಣವೆಂದರೆ ಚಾಲನೆ ಮಾಡುವಾಗ, ಈ ಕೆಳಕಂಡವರ ಸುರಕ್ಷತೆ ನೋಡುವುದು ಸಹ ನಿಮ್ಮ ಜವಾಬ್ದಾರಿಯಾಗಿರುತ್ತದೆ.

*ಸಹ ಪ್ರಯಾಣಿಕರು

*ನಿಮ್ಮ ಸಹ ಚಾಲಕರು

*ಇತರ ಜನರ ಆಸ್ತಿ

*ಪಾದಚಾರಿಗಳು,

*ಸ್ವತ: ನೀವೇ

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಮೋಟಾರು ವಿಮೆ.!

ಅನಿರೀಕ್ಷಿತವಾಗಿ ಸಂಭವಿಸಬಹುದಾದ ಅಪಘಾತ ಅಥವಾ ವಾಹನ ಕಳವು ಸಂದರ್ಭದಲ್ಲಿ ಸಂಭಾವ್ಯ ಗಾಯ, ಹಾನಿಗಳಿಗೆ ವಿಮೆ ರಕ್ಷಣೆಯನ್ನು ಒದಗಿಸುತ್ತದೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ನಮ್ಮ ದೇಶದಲ್ಲಿ ನೀವು ಕಾರು ರಸ್ತೆಗಿಳಿಸುವ ಮೊದಲಾಗಿ ಮೂರನೇ ವ್ಯಕ್ತಿ ಮೋಟಾರು ವಿಮೆ ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಮೋಟಾರು ವಿಮಾ ಪಾಲಿಸಿಗಳ ಅವಧಿಯೆಷ್ಟು?

ಎಲ್ಲ ಸಂದರ್ಭದಲ್ಲಿಯೂ ನಿಮ್ಮ ಕಾರಿಗೆ ರಕ್ಷಣೆ ಒದಗಿಸುವುದು ಅತಿ ಅಗತ್ಯವಾಗಿದೆ. ಸಾಮಾನ್ಯವಾಗಿ ಮೋಟಾರು ವಿಮೆ ಕರಾರು ಒಂದು ವರ್ಷಕ್ಕೆ ಮಾತ್ರ ಅನ್ವಯವಾಗಿರುತ್ತದೆ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಮೋಟಾರು ವಿಮಾ ಪಾಲಿಸಿಗಳಲ್ಲಿ ಎಷ್ಟು ವಿಧ?

ಕಾರು ವಿಮಾ ಪಾಲಿಸಿಯಲ್ಲಿ ಎರಡು ವಿಧಗಳಿವೆ. ಪಾಲಿಸಿ 'ಎ' ಎಂಬುದು ಮೂರನೇ ವ್ಯಕ್ತಿ ವಿಮಾ ಹಾಗೂ ಪಾಲಿಸಿ 'ಬಿ' ಎಂಬುದು ಸಮಗ್ರ ಪಾಲಿಸಿಯಾಗಿದೆ. ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ. ಎರಡನೇಯದ್ದಲ್ಲಿ ವಾಹನಕ್ಕಾಗುವ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ವಿಮೆಯ ಕಂತಿನ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ಎಂಜಿನ್ ಘನ ಸಾಮರ್ಥ್ಯ (cubic capacity), ವಾಹನದ ವಯಸ್ಸು, ಭೌಗೋಳಿಕ ವಲಯ, ಮಾದರಿ ವಿಧ, ವಿಮೆ ಮೌಲ್ಯ (Insured declared value)

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಮೂರನೇ ವ್ಯಕ್ತಿಯ ವಾಹನ ವಿಮೆ ಅಪಾಯ ನೀತಿ ಎಂದರೇನು?

ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ. ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಮೂರನೇ ವ್ಯಕ್ತಿ ವಿಮೆಯು ಕೆಳಗಿನ ನಷ್ಟಗಳನ್ನು ಒಳಗೊಳ್ಳುತ್ತದೆ.!

ನಿಮ್ಮ ವಿಮಾ ವಾಹನದಿಂದಾಗಿ ಮೂರನೇ ವ್ಯಕ್ತಿಗೆ ಯಾವುದೇ ಶಾಶ್ವತ ಗಾಯ ಅಥವಾ ಮರಣ ಸಂಭವಿಸಿದ್ದಲ್ಲಿ ಹಾಗೆಯೇ ನಿಮ್ಮ ವಿಮಾ ವಾಹನದಿಂದಾಗಿ ಯಾವುದೇ ಹಾನಿ ಸಂಭವಿಸಿದ್ದಲ್ಲಿ (ವಾಹನ ಹೊರತುಪಡಿಸಿ) ಇದು ರಕ್ಷಣೆಯನ್ನು ಒದಗಿಸುತ್ತದೆ. ಈ ಪಾಲಿಸಿಯಲ್ಲಿ ವಿಮೆಯೂ ಮೂರನೇ ವ್ಯಕ್ತಿಯ ಆಸ್ತಿಯ ಯಾವುದೇ ನಷ್ಟ ಸಂಭವಿಸಿದ್ದಲ್ಲಿ ಖಾಸಗಿ ಕಾರಿಗೆ 7.5 ಲಕ್ಷ ರು. ಹಾಗೂ ದ್ವಿಚಕ್ರವಾಗಿದ್ದಲ್ಲಿ ರು. 1 ಲಕ್ಷದ ವರಗೆ ರಕ್ಷಣೆಯನ್ನು ಒದಗಿಸುತ್ತದೆ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಸಮಗ್ರ ಮೋಟಾರ್ ವಿಮಾ ನೀತಿ ಎಂದರೇನು?

ಸಮಗ್ರ ವಾಹನ ವಿಮೆಯು ಮೂರನೇ ವ್ಯಕ್ತಿ ಪಾಲಿಸಿಗಿಂತ ತುಂಬಾ ವಿಭಿನ್ನವಾಗಿದ್ದು, ವಾಹನಕ್ಕಾಗುವ ಎಲ್ಲ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ. ಇದರಲ್ಲಿ ಥರ್ಡ್ ಪಾರ್ಟಿ ಜತೆಗೆ ಬೆಂಕಿ, ಅಪಘಾತ, ಕಳವು, ಪ್ರವಾಹ, ಭೂಕಂಪ, ಗಲಭೆ ಇತ್ಯಾದಿ ಅನಿಷ್ಟಗಳಿಂದಾಗಿ ವಾಹನಕ್ಕಾಗುವ ನಷ್ಟಗಳ ಜತೆಗೆ ಸಹ ಪ್ರಯಾಣಿಕ ಸೇರಿದಂತೆ ಮಾಲಿಕರಿಗಾಗುವ ನಷ್ಟವನ್ನು ಭರಿಸುತ್ತದೆ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಸಮಗ್ರ ವಿಮೆಯಲ್ಲಿ ಮ್ಯೂಸಿಕ್ ಸಿಸ್ಟಂ, ಎಸಿ ಮುಂತಾದ ಕಾರು ಆಕ್ಸೆಸರಿಗಳಿಗೂ ವಿಮೆ ದೊರಕುತ್ತವೆ. ಇದಕ್ಕಾಗಿ ಹೆಚ್ಚುವರಿ ವಿಮೆ ಮೊತ್ತ ಭರಿಸಬೇಕಾಗುತ್ತದೆ. ಒಟ್ಟಿನಲ್ಲಿ ಇದು ದುಬಾರಿ ಎನಿಸಿಕೊಂಡರೂ ಸಮಗ್ರ ವಿಮೆ ಮಾಡಿಸಿದರೆ ಉತ್ತಮ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ನೊ ಕ್ಲೈಂ ಬೋನಸ್ (ಎನ್‌ಸಿಬಿ) ಎಂದರೇನು?

ಸುಲಭವಾಗಿ ಹೇಳಬೇಕೆಂದರೆ ಅಪಘಾತ ನಡೆಸದ ಚಾಲಕರು ನೋ ಕ್ಲೈಂ ಬೋನಸ್(ಎನ್‌ಸಿಬಿ)ಗೆ ಅರ್ಹರಾಗುತ್ತಾರೆ. ಅಂದರೆ ಮೊದಲ ವಿಮಾ ಅವಧಿಯಲ್ಲಿ ಕ್ಲೈಮ್ ಮಾಡದಿದ್ದಲ್ಲಿ ಮುಂದಿನ ಪಾಲಿಸಿಯಲ್ಲಿ ಡಿಸ್ಕೌಂಟ್ ದೊರಕಲಿದೆ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಹಾಗೆಯೇ ಒಂದು ವಿಮಾ ಕಂಪನಿಯಿಂದ ಇನ್ನೊಂದು ವಿಮಾ ಕಂಪನಿಗೆ ಬದಲಾದಲೂ ಎನ್‌ಸಿಬಿ ಸೌಲಭ್ಯ ಮುಂದುವಿರಿಸಿಕೊಂಡು ಹೋಗಬಹುದು. ಐದು ವರ್ಷದ ವರೆಗೂ ಯಾವುದೇ ಕ್ಲೈಮ್ ಮಾಡದಿದ್ದಲ್ಲಿ ಪ್ರೀಮಿಯಂನಲ್ಲಿ ಶೇ. 50ರಷ್ಟು ಡಿಸ್ಕೌಂಟ್ ಪಡೆಯಬಹುದು.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಎನ್‌ಸಿಬಿ ಸೌಲಭ್ಯ ಇಂತಿದೆ:

ಒಂದು ವರ್ಷದ ವರೆಗೂ ಕ್ಲೈಮ್ ಮಾಡದಿದ್ದಲ್ಲಿ- 20%

2 ವರ್ಷದ ವರೆಗೂ ಕ್ಲೈಮ್ ಮಾಡದಿದ್ದಲ್ಲಿ- 25%

ಸತತ 3 ವರ್ಷದ ವರೆಗೆ ಕ್ಲೈಮ್ ಮಾಡದಿದ್ದಲ್ಲಿ- 35%

ಸತತ 4 ವರ್ಷದ ವರೆಗೆ ಕ್ಲೈಮ್ ಮಾಡದಿದ್ದಲ್ಲಿ- 45%

ಸತತ 5 ವರ್ಷದ ವರೆಗೆ ಕ್ಲೈಮ್ ಮಾಡದಿದ್ದಲ್ಲಿ- 50%

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಆಟೋ ದುರಸ್ತಿ ಮತ್ತು ವಾಹನ ವಿಮೆ ನಡುವೆ ವ್ಯತ್ಯಾಸ ಏನು?

ಆಟೋ ದುರಸ್ತಿ ವಿಮಾ ಪಾಲಿಸಿಯು, ಕಾರಿಗೆ ಹಾನಿಯುಂಟಾದ ನಿರ್ದಿಷ್ಟ ಪ್ರದೇಶದ ನಷ್ಟ ಪರಿಹಾರವನ್ನು ಮಾತ್ರ ಭರಿಸುತ್ತದೆ. ಇನ್ನೊಂದೆಡೆ ವಾಹನ ವಿಮಾ ಪಾಲಿಸಿಯು ವಾಹನ ಮಾಲಿಕ ಹಾಗೂ ವಾಹನ ವಿಮಾ ಸಂಸ್ಥೆಯ ನಡುವೆ ಕರಾರು ಹೊಂದಿರುತ್ತಲ್ಲದೆ ನಿರ್ದಿಷ್ಟ ಸಮಯದಲ್ಲಿ ಕಾರಿಗೆ ಹಾನಿ ಸಂಭವಿಸಿದ ಎಲ್ಲ ಭಾಗಗಳ ಪರಿಹಾರ ಭರಿಸುತ್ತದೆ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ವಿಮೆ ಕ್ಲೈಮ್ ಮಾಡಲು ಬೇಕಾಗಿರುವ ದಸ್ತಾವೇಜುಗಳು?

ವಿಮಾ ಪಾಲಿಸಿಯ ಅಸಲಿ ಪತ್ರ,

ವಾಹನದ ರಿಜಿಸ್ಟ್ರೇಷನ್ ಬುಕ್,

ಡ್ರೈವಿಂಗ್ ಲೈಸನ್ಸ್‌ನ ಅಸಲಿ ಪತ್ರ,

ಅಪಘಾತದ ಎಫ್‌ಐಆರ್ ಪತ್ರ,

ಮೂರನೇ ವ್ಯಕ್ತಿಯ ಅಪಘಾತದ ರಶೀದಿ,

ವಾಹನ ಡ್ಯಾಮೇಜ್ ರಿಪೇರಿ ರಶೀದಿ

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಪರಿಹಾರ ಪಡೆಯುವುದು ಹೇಗೆ?

ಈ ಎಲ್ಲ ದಾಖಲೆಗಳನ್ನು ಸಮರ್ಪಿಸಿದ ಬಳಿಕ ವಿಮಾ ಕಂಪನಿಯು ಓರ್ವ ಸರ್ವೆಯರನ್ನು ನೇಮಕಗೊಳಿಸುತ್ತಿದ್ದು, ಅವರು ಸತ್ಯಾಸತ್ಯತೆಯನ್ನು ಪರೀಶೀಲಿಸಿ ಹಾನಿಗೊಳಗಾದ ಕಾರನ್ನು ಪರಿಕ್ಷೀಸಿ ರಿಪೇರಿ ಅಂದಾಜು ಲೆಕ್ಕ ಹಾಕುತ್ತಾರೆ. ಹಾಗಾಗಿ ಕಾರು ವಿಮೆ ಸರ್ವೇಯರ್ ತಪಾಸಣೆ ಮಾಡಿದ ಬಳಿಕವಷ್ಟೇ ದುರಸ್ತಿ ಮಾಡಬೇಕು.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಕಾರು ದುರಸ್ತಿಗೊಳಿಸಿದ ಬಳಿಕ ಅಂತಿಮ ಅಂದಾಜು ಸ್ಟ್ಯಾಂಪ್ ರಶೀದಿ ಕಾರು ವಿಮಾ ಕಂಪನಿಗೆ ಸಲ್ಲಿಸಬೇಕಾಗುತ್ತದೆ. ಹಾಗೊಂದು ವೇಳೆ ನಿಮ್ಮ ಕಾರು ಕಳವಾಗಿದ್ದಲ್ಲಿ, ವಿಮಾ ಕಂಪನಿ ಜತೆ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಬೇಕಾಗುತ್ತದೆ. ಅಲ್ಲದೆ ಮೊದಲು ಕಾರು ನೊಂದಾವಣಿ ಮಾಡಿದ್ದ ಆರ್‌ಸಿ ಆಫೀಸಿನಲ್ಲೂ ಪ್ರಕರಣ ದಾಖಲಿಸಬೇಕಾಗುತ್ತದೆ.

ಮೋಟಾರ್ ವಿಮೆ ಕಡ್ಡಾಯ ಏಕೆ? ಇದರಿಂದ ವಾಹನ ಮಾಲೀಕರಿಗೆ ಲಾಭವೇನು?

ಆ ಬಳಿಕ ನಕಲಿ ಆರ್‌ಸಿ ಬುಕ್ ಗಿಟ್ಟಿಸಿಕೊಳ್ಳಬೇಕಾಗುತ್ತದೆ. ಇನ್ನು ಕಳ್ಳತನ ಪ್ರಕರಣದಲ್ಲಿ ಆರ್‌ಟಿಒ ಮತ್ತು ಪೊಲೀಸ್‌ಗೆ ಕಳವಾದ ಕಾರು ವಾಪಾಸ್ ಗಿಟ್ಟಿಸಿಕೊಳ್ಳುವ ಕಾರ್ಯವಿಧಾನ ಪೂರ್ತಿಗೊಳಿಸಲು ನಿರ್ದಿಷ್ಟ ಸಮಯ ತೆಗೆದುಕೊಳ್ಳುವುದರಿಂದ ವಿಮೆ ಕ್ಲೈಮ್ ಮಾಡಲು ಹೆಚ್ಚು ಸಮಯ ತಗಲುತ್ತದೆ.

More from DriveSpark

Article Published On: Monday, August 20, 2018, 13:38 [IST]
English summary
Why is it mandatory to have vehicle insurance?
Read more on auto news insurance
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+