ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ರಸ್ತೆ ಅಪಘಾತ ಎಂದು ಬಂದಾಗ ಅದರಲ್ಲಿ ಚ್ಚಿಕ್ಕದು ದೊಡ್ಡದು ಎಂಬದು ಲೆಕ್ಕ ಹಾಕಲು ಸಾಧ್ಯವಿಲ್ಲ ಏಕೆಂದರೆ ನಡೆಯುವ ಹಲವಾರು ಅಪಘಾತಗಳಲ್ಲಿ ಯಾರಾದರು ಒಬ್ಬರು ಗಂಭೀರವಾಗಿ ಗಾಯಗೊಂಡಿರುತ್ತಾರೆ. ಅದರಲ್ಲಿಯು ಬಸ್ ಅಥವಾ ಲಾರಿ ಎಂಬ ಬೃಹತ್ ಆಕಾರವುಳ್ಳ ವಾಹನಗಳು ಅಪಘಾತಕ್ಕೀಡಾದರೆ ಗಾಯಾಳುಗಳ ಸಂಖ್ಯೆ ಸುಮಾರು 10ರ ಮೇಲೆಯೆ ಇರುತ್ತದೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಇತ್ತೆಚೆಗೆ ನಡೆದ ರಸ್ತೆ ಅಪಘಾತದಲ್ಲಿ ಸುಮಾರು 15 ಮಂದಿ ಮರಣ ಹೊಂದಿದ್ದು, ಇನ್ನು 10 ಮಂದಿಯ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈ ಅಪಘಾತಕ್ಕೆ ಕಾರಣ ಏನು ಅಂತ ನಿಮಗೆ ಗೊತ್ತಾದ್ರೆ ಇನ್ಮುಂದೆ ವಾಹನದಲ್ಲಿ ಪ್ರಯಾಣಿಸುವುದನ್ನೆ ನಿಲ್ಲಿಸಬಹುದು.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ದುರಾದೃಷ್ಟವಶಾತ್ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳ ಕಾರಣದಿಂದಾಗಿ ಮರಣಹೊಂದುತ್ತಿರುವ ಸಂಖ್ಯೆ ಕಡಿಮೆಯಾಗುತ್ತಲೇ ಇಲ್ಲ. ಪ್ರತೀ ವರ್ಷ ಅಪಘಾತಗಳ ಕಾರಣದಿಂದಾಗಿ ಸುಮಾರು 3 ಲಕ್ಷಕ್ಕು ಹೆಚ್ಚು ಮಂದಿ ರಸ್ತೆಯಲ್ಲಿಯೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ಒಂದು ಆಶ್ಚರ್ಯಕರ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಆದರೆ ನಡೆಯುತ್ತಿರುವ ರಸ್ತೆ ಅಪಘಾತಗಳಿಗೆ ಸಾರಿಗೆ ನಿಯಮಗಳನ್ನು ಉಲ್ಲಂಘಿಸುವುದರಿಂದ ಆಗುತ್ತಿದೆ ಎಂದು ನೀವು ತಿಳಿದಿದ್ದಾರೆ ಅದು ತಪ್ಪಾಗುತ್ತದೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಹೆಲ್ಮೆಟ್ ರಹಿತ ಚಾಲನೆ, ಸೀಟ್ ಬೆಲ್ಟ್ ಹಾಕದೆ ಇರುವುದು, ವ್ರಾಂಗ್ ವೇನಲ್ಲಿ ಚಾಲನೆ, ಓವರ್ ಸ್ಪೀಡಿಂಗ್ ಎಂಬ ಸಾರಿಗೆ ನಿಯಮಗಳನ್ನು ಉಲ್ಲಂಘನೆ ಇಂಡ ಮಾತ್ರವಲ್ಲದೇ ಕೆಲವೊಮ್ಮೆ ರಸ್ತೆ ಅಪಘಾತಗಳಿಗೆ ಪ್ರಕೃತಿಯು ಕೂಡಾ ಕಾರಣವಾಗಬಹುದು ಎಂದು ಗೊತ್ತೇ.?

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಹೌದು, ಇಂತಹ ಅಪಘಾತಗಳು ದಕ್ಷಿಣ ಭಾರತದಲ್ಲಿ ಕಡಿಮೆ ನಡೆದರೂ, ಉತ್ತರ ಭಾರದ ಮತ್ತು ಇನ್ನಿತರೆ ಪ್ರದೇಶಗಳಲ್ಲಿ ತುಂಬಿಕೊಳ್ಳುವ ಮಂಜಿನ ಕಾರಣದಿಂದಾಗಿ ಅಪಘಾತಗಳು ಸಂಭವಿಸಿತ್ತಿದ್ದು, ಅದರಲ್ಲಿ ಕೇವಲ ಎರಡು ವಾಹನಗಳಲ್ಲದೆ ಸುಮಾರು 10ಕ್ಕು ಹೆಚ್ಚು ವಾಹನಗಳು ಒಂದರ ಹಿಂದೆ ಒಂದು ಗುದ್ದಿಕೊಂಡು ದೊಡ್ಡ ಪ್ರಯಾಣದಲ್ಲಿ ಅಪಘಾತಗಳು ಸಂಭವಿಸುತ್ತರೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಇಂತಹ ಘಟನೆ ಇತ್ತಿಚೆಗೆ ಕೂಡಾ ನಡೆದಿದ್ದು, ರಾಷ್ಟೀಯ ಹೆದ್ದಾರಿ 28ರ ಬಳಿ ಇರುವ ಮಿರ್ಜಾಪುರ್ (ಬಿಹಾರ್) ಎಂಬ ಪ್ರಾಂತ್ಯದ ಬಳೆ ಗುರುವಾದ ಮುಂಜಾನೆ 7.30ರ ವೇಲೆಯಲ್ಲಿ ವಾಹನಗಳು ಕಾಣದೆಯೆ ಇರುವಷ್ಟು ಮಂಜು ಸುತ್ತಿವರೆದಿದ್ದು ರಸ್ತೆ ಅಪಘಾತವು ಸಂಭವಿಸಿದೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಈ ರಸ್ತೆ ಅಪಘಾತದಲ್ಲಿ ವಾಹನಗಳು ಒಂದರ ಹಿಂದೆಯೊಂದು ವಾಹನಗಳು ಗುದ್ದಿಕೊಂಡು, ಹಲವಾರು ಮಂದಿ ಸ್ಥಳದಲ್ಲಿಯೆ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಸುಮಾರು 15 ಮಂದಿ ಗಂಭೀರವಾದ ಗಾಯಗಳಿಂದ ಆಸ್ಪತ್ರೆಯ ಪಾಲಾಗಿದ್ದಾರೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆಯುವುದು ಸಹಜವಾಗಿ ಹೋಗಿದ್ದು, ಅದರಲ್ಲಿಯು ಚಳಿಗಾಲದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಜನವರಿ 3ರಂದು ಸಹ ಇಂತಹ ಅಪಘಾತ ನಡಿದಿದ್ದು, ದೆಹಲಿಯ ಔಟ್‍ಸ್ಕರ್ಟ್ಸ್ ನಲಿರುವ ಕಂಚನ್‍ವಾಲ-ಭವನಾ ರಸ್ತೆಯಲ್ಲಿ ಸುಮಾರು 25 ವಾಹನಗಳು ಒಂದ ಹಿಂದೆಯೊಂದು ಗುದ್ದಿಕೊಂಡಿದೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರೊಬ್ಬರು ಮರಣಿಸದಿದ್ದರೂ, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಮಥುರಾ ಜಿಲ್ಲೆಯಲ್ಲಿ ಜನವರಿ 1ರಂದು ಮಂಜಿನಿಂದ ಆದ ಅಪಘಾತದಲ್ಲಿ ಸುಮಾರು 12 ವಾಹನಗಳು ಒಂದರ ಹಿಂದೆಯೊಂದು ಗುದ್ದಿಕೊಂಡಿದೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಈ ಅಪಘಾತದಲ್ಲಿ ಒಟ್ಟಾರೆಯಾಗಿ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತ್ಪೊಂದು ಘಟನೆ ಡಿಸೆಂಬರ್ 24, 2018ರಂದು ದೆಹಲಿ ಮತ್ತು ಹರ್ಯಾಣ ಹೈವೇ ನಡುವೆ ಇರುವ ರೋಥಾಕ್-ರೆವಿತಿಯಲ್ಲಿ ಸ್ಕೂಲ್ ಬಸ್ ಸೇರಿ ಹಲವಾರು ವಾಹನಗಳು ಅಪಘಾತಕ್ಕೆ ಈಡಾಗಿದೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಸುಮಾರು 50 ವಾಹನಗಳು ಒಂದರ ಹಿಂದೆಯೊಂದು ವಾಹನಗಳು ಅಪಘಾತಕ್ಕೀಡಾಗಿದ್ದು, ಈ ಅಪಘಾತದಲ್ಲಿ 7 ಮಂದು ಮಹಿಳೆಯರು ಮತ್ತು 8 ಮಂದಿ ಪುರುಷರು ಮರಣಾ ಹೊಂದಿದ್ದಾರೆ.

ಆದ್ರೆ ಇಂತಹ ಮಂಜಿನ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡುವುದು ಹೇಗೆ ಎಂಬುದು ನಿಮ್ಮ ಪ್ರಶ್ನೆಯಾದರೆ ಅದಕ್ಕೆ ಉತ್ತರವನ್ನು ಪಡೆಯಲು ಮುಂದಕ್ಕೆ ಓದಿರಿ...

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

ದಟ್ಟವಾದ ಮಂಜಿನಲ್ಲಿ ವಾಹನ ಸವಾರಿ ಮಾಡುವುದರಿಂದ ಹಲವಾರು ಅಪಘಾತಗಳು ಆಗುತ್ತಿವೆ. ವಾತಾವರಣದಲ್ಲಿ ಬದಲಾವಣೆಗಳಿಂದ ಸೀಜನ್‍‍ಗೆ ತಕ್ಕ ಹಾಗೆ ದಟ್ಟವಾಗಿ ಅಧಿಕಗೊಳ್ಳುವ ಅವಕಾಶವು ಇರುತ್ತದೆ. ಇಂತಹ ಸಂಧರ್ಭಗಳಲ್ಲಿ ವಾಹನ ಪ್ರಯಾಣವು ಬಹಳ ಆಪತ್ತುಗಳಿಂದ ಕೂಡಿರುತ್ತದೆ. ಈಗಲೂ ಸುಮಾರು 99ಕ್ಕು ಹೆಚ್ಚು ಮಂದಿ ಡ್ರೈವರ್‍‍ಗಳು ದಟ್ಟವಾದ ಮಂಜಿನಲ್ಲಿ ಡ್ರೈವ್ ಮಾಡಲು ಮುಂದಾಗುವುದಿಲ್ಲ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

1. ಲೋ ಬೀಮ್ ಲೈಟ್‍‍ಗಳನ್ನು ಮಾತ್ರ ಬಳಸಿರಿ.

ಸಾಧಾರಣವಾಗಿ ಇಂಡಿಯನ್ ಡ್ರೈವರ್‍‍ಗಳ ಪ್ರಕಾರ, ಲೋ ಬೀಮ್ ಕಡಿಮೆ ಬೆಳಕನ್ನು ಮತ್ತು ಹೈ ಬೀಮ್ ಲೈಟ್ ಹೆಚ್ಚು ಬೆಳಕನ್ನು ನೀಡುತ್ತದೆ ಎಂಬ ಅರಿವಿನಲಿದ್ದಾರೆ. ಆದ್ದರಿಂದ ಮಂಜಿನಲ್ಲಿ ಹೈ ಬೀಮ್ ಲೈಟ್‍‍ಗಳನ್ನು ಬಳಸುತ್ತಾರೆ. ಇದರಿಂದ ಲೈಟ್‍‍ನ ಗರಿಷ್ಠ ಕಾಂತಿಯು ಹೊಗೆಯ ಹಾಗೆ ಕಾಣಿಸಿತ್ತುದ್ದೆ. ಅದೇ ಲೋ ಬೀಮ್ ಲೈಟ್ ಅನ್ನು ಬಳಸುವುದರ ಮುಖಾಂತರ ಬರುತ್ತಿರುವ ವ್ಯಕ್ತಿಗಳನ್ನಾಗಲಿ ಅಥವಾ ಡ್ರೈವರ್‍‍ಗಳು ನಿಮಗೆ ಕಾಣಿಸಿಕೊಳ್ಳುತ್ತಾರೆ. ಇದರ ಜೊತೆಗೆ ಫಾಗ್ ಲೈಟ್‍‍ಗಳನ್ನು ಕೂಡಾ ಆನ್ ಮಾಡಿಕೊಳ್ಳಬೇಕಾಗುತ್ತದೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

2. ಕಾರಿನಲ್ಲಿನ ಅಪಘಾತ ಸೂಚಕ ಲೈಟ್‍‍ಗಳನ್ನು ಆನ್ ಮಾಡಿರಿ

ಯಾವುದಾದರೂ ಲೋಪವಿದ್ದಲ್ಲಿ, ಪ್ರಮಾದದಲ್ಲಿದ್ದರೂ ಅಥವಾ ಸಮಸ್ಯೆಯು ಇದ್ದಾಗ ಈ ಅಪಘಾತ ಸೂಚಕ ಲೈಟ್‍‍ಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಆದರೇ ದಟ್ಟವಾದ ಮಂಜಿನಲ್ಲಿ ಪ್ರಯಾಣಿಸುವಾಗ ಈ ಲೈಟ್‍‍ಗಳು ಆನ್ ಮಾಡಿಕೊಂಡು ಹೋಗುವುದು ಒಳ್ಳೆಯದು. ಹೀಗೆ ಮಾಡಿದಲ್ಲಿ ರಸ್ತೆಯಲ್ಲಿ ಆ ಬೆಳಕಿನಿಂದ ಇನ್ನಿತರೆ ವಾಹನಗಳು ಗುರುತಿಸುವ ಅವಕಾಶವಿರುತ್ತದೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

3. ನಿಧಾನವಾಗಿ ಚಲಿಸಿ

ಬೆಳಕಿರುವಾಗ ಚಲಿಸುವ ಸ್ಪೀಡ್‍‍ನಲ್ಲಿ ಮಂಜಿನ ವಾತವರಣದಲ್ಲಿ ಚಲಿಸಿದರೆ ಅದು ನಿಮ್ಮ ಜೀವಕ್ಕೆ ಪ್ರಮಾದಕರ. ಎದುರಿಗೆ ಬರುವ ವಾಹನಗಳಾ ಮೇಲೆ ದೃಷ್ಟಿಯನಿಟ್ಟು ಸ್ಟೀರಿಂಗ್ ಮೇಲೆಯೆ ಸದಾ ಕಣ್ಣಿಟ್ಟು ತಿರುವುಗಳಲ್ಲಿ ತಟ್ಟನೆ ಸ್ಪಂದಿಸಿ ಸ್ಟೀರಿಂಗ್ ಮಾಡುವ ವಿಧವಾಗಿರಬೇಕು. ಇದು ಆಗಬೇಕಾದರೆ ಕಡಿಮೆ ಸ್ಪೀಡ್‍‍ನಲ್ಲಿ ವಾಹನ ಚಲಾಯಿಸಬೇಕು.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

4. ಹೆದ್ದಾರಿಗಳ ಮೇಲಿನ ಗುರುತುಗಳನ್ನು ಅನುಸರಿಸಿ

ಪ್ರಸ್ಥುತ ಬಹಳಷ್ಟು ಜಾತೀಯ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ರೇಡಿಯಮ್ ಲೈಟಿಂಗ್ ಅನ್ನು ನೀಡಲಾಗಿದೆ. ಇದು ರೋಡನ್ನು ಎರಡು ಭಾಗಗಳಾಗಿ ಮತ್ತು ಡಿವೈಡರ್, ರೇಡಿಯಮ್ ಲೈಟಿಂಗ್ಸ್ ಮತ್ತು ಬಿಳಿ, ಹಳದಿ ಬಣ್ಣಗಳಲ್ಲಿ ರಸ್ತೆಯ ಮೇಲೆ ಗುರುತುಗಳಿರುತ್ತವೆ. ಇವುಗಳನ್ನು ಅನುಸರಿಸುವುದರಿಂದ ಪ್ರಮಾದವನ್ನು ಕಡಿಮೆ ಮಾಡಬಹುದು.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

5. ಡೀ ಫಾಗರ್

ಡೀ ಫಾಗರ್ : ವಾಹನದ ಕನ್ನಡಿಯ ಮೇಲಿರುವ ಮಂಜನ್ನು ಕರಗಿಸಲು ಬಳಸಲು ಉಪಯೋಗಿಸುತ್ತಾರೆ. ಚಳಿಗಾಲದಲ್ಲಿ ಹೆಚ್ಚಾಗಿ ಮಂಜಿರುವ ಕಾರಣ ಕಾರಿನಲ್ಲಿನ ಮುಂಭಾಗದ ಮತ್ತು ಹಿಂಭಾಗದಲ್ಲಿ ಮಿರರ್‍‍ಗಳ ಮೇಲೆ ಬಿಳಿ ಬಣ್ಣದ ಮಂಜು ಕೂರುವುದರಿಂದ, ನಂತರ ರಸ್ತೆಯನ್ನು ನೋಡಲಾಗುವುದಿಲ್ಲ. ಆದರೇ ಮಂಜನ್ನು ಆಟೋಮ್ಯಾಟಿಕ್ ಆಗಿ ಕರಗಿಸಲು ಹೆಚ್ಚು ಕಾರಿನ ಸಂಸ್ಥೆಗಳು ಡೀ ಫಾಗರ್‍ ಅನ್ನು ಅಳವಡಿಸುತ್ತಿದ್ದಾರೆ. ಇದರಿಂದ ಕನ್ನಡಿಗಳ ಮೇಲಿರುವ ಮಂಜು ಬಿಸಿಗೆ ಕರಗುತ್ತಾ ಹೋಗುತ್ತದೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

6. ಮ್ಯೂಸಿಕ್ ಸೌಂಡ್ ಅನ್ನು ಕಡಿಮೆ ಇಡಿ

ದಟ್ಟವಾದ ಮಂಜಿನಲ್ಲಿ ಪ್ರಯಾಣವೆಂದರೆ ಕತ್ತಿಯ ಮೇಲೆ ನಡೆದ ಹಾಗೆ. ರಸ್ತೆಯು ಸ್ಪಷ್ಟವಾಗಿ ಕಾಣಿಸುವ ಅವಕಾಶವು ಬಹಳ ಕಡಿಮೆ. ಆದ್ದರಿಂದ ಡ್ರೈವಿಂಗ್ ಸಮಯದಲ್ಲಿ ಹೆಚ್ಚಾಗಿ ನಿಮ್ಮ ಮನಸ್ಸನ್ನು ಒಂದೆ ಕಡಿ ಇರಿಸಿಕೊಳ್ಳಬೇಕು. ಹೊರಗಿನಿಂದ ಬರುವ ಶಬ್ದವನ್ನು ಗ್ರಹಿಸುತ್ತಾ ಇರಬೇಕು. ನಂತರ ದೊಡ್ಡ ದೊಡ್ಡ ವಾಹನಗಳ ಬರುಹೋಗುವಿಕೆಯನ್ನು ಗ್ರಹಿಸಬಹುದು. ಆದ್ದರಿಂದ ಮ್ಯೂಸಿಕ್ ಸೌಂಡ್ ಅನ್ನು ಕಡಿಮೆ ಇಟ್ಟುಕೊಳ್ಳಿರಿ. ಸಾಧ್ಯವಾದರೇ ಆಫ್ ಮಾಡಿದರೆ ಇನ್ನು ಒಳ್ಳೆಯದು.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

7. ಮಧ್ಯ ಸೇವಿಸಿ ಡ್ರೈವ್ ಮಾಡಬೇಡಿ

ಸಾಧಾರಣ ಪರಿಸ್ಥಿತಿಯಲ್ಲಿ ಮಧ್ಯದ ಮತ್ತಿನಲ್ಲಿ ಡ್ರೈವ್ ಮಾಡಲು ಸಾಧ್ಯವಾಗುವುದಿಲ್ಲ, ಹೀಗಿದ್ದರೆ ಇನ್ನು ದಟ್ಟವಾದ ಮಂಜಿನಲ್ಲಿ ಕುಡಿದು ಡ್ರೈವಿಂಗ್ ಮಾಡುವುದು ಇನ್ನು ಡೇಂಜರ್. ಅಂತಹ ಸಂದರ್ಭದಲ್ಲಿ ಡ್ರೈವಿಂಗ್‍‍ಗೆ ದೂರವಿದ್ದರೆ ಇನ್ನು ಒಳ್ಳೆಯದು.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

8. ಪಕ್ಕದಲ್ಲಿ ನಿಮ್ಮ ವಾಹನವನ್ನು ನಿಲ್ಲಿಸುವಾಗ ಹೀಗೆ ಮಾಡಿ

ದಟ್ಟವಾದ ಮಂಜು ಇರುವ ಸಮಯದಲ್ಲಿ ಹೆದ್ದಾರಿಗಳಲ್ಲಿ ಅಥವಾ ಹೆಚ್ಚು ವಾಹನಗಳಿರುವ ರಸ್ಥೆಯಲ್ಲಿ ಹೋಗುತಿರುವಾಗ ನಿಮ್ಮ ವಾಹನವನ್ನು ಪಕ್ಕಕ್ಕೆ ನಿಲ್ಲಿಸುವಾಗ ಟರ್ನ್ ಇಂಡೀಕೇಟರ್‍‍ಗಳನ್ನು ಆನ್ ಮಾಡಿರಿ. ಇದರಿಂದಾ ನಿಮ್ಮ ಹಿಂದೆ ಬರುವ ವಾಹನಗಳು ಡ್ರೈವರ್ ನಿಮ್ಮನು ಗಮನಿಸುತ್ತಾ ಪಕ್ಕಕ್ಕೆ ಹೋಗುತ್ತಾನೆ.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

9. ವಾಹನಗಳ ನಡುವೆ ಅಂತರವಿರಲಿ

ಬೆಳಕಿನ ಸಮಯದಲ್ಲಿ ವಾಹನ ಚಲಾಯಿಸುವ ಹಾಗೆ ಅಲ್ಲದೇ, ಮಂಜಿನಲ್ಲಿ ಪ್ರಯಾಣಿಸುವಾಗ ನಿಮ್ಮ ಮುಂದಿರುವ ವಾಹನದಿಂದ ಸಾಧ್ಯವಾದಷ್ಟು ಅಂತರವನ್ನು ಅನುಸರಿಸಿ. ಇದರಿಂದ ಆ ವಾಹನವು ತಟ್ಟನೆ ಪ್ರಮಾದಕ್ಕೆ ಗುರುಯಾದಲ್ಲಿ ಬೇಗನೇ ಸ್ಪಂದಿಸಿ ಪಕ್ಕಕ್ಕೆ ತಪ್ಪಿಕೊಳ್ಳುವ ಆವಕಾಶವು ಇರುತ್ತದೆ. ಹೊಗೆ ಮಂಜಿನಲ್ಲಿ ಎದುರಲ್ಲಿರುವ ವಾಹನಗಳನ್ನು ಹೇಗೆ ಗುರುತಿಸಬೇಕು ಎಂಬುದು ನಿಮ್ಮ ಸಂದೇಹವಿರಬಹುದು. ಎದುರಿರುವ ವಾಹನಗಳ ಟೈಲ್ ಲೈಟ್ ಮತ್ತು ಬ್ರೇಕ್ ಲೈಟ್‍‍ನ ಮುಕಾಂತರ ಅವುಗಳನ್ನು ಗುರುತಿಸಬಹುದು.

ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

10. ಪ್ರಯಾಣಕ್ಕೆ ಮುಂಚೆ ನಿಮ್ಮ ಎರಡೂ ಹೆಡ್‍‍ಲೈಟ್‍‍ಗಳನ್ನು ಪರಿಶೀಲಿಸಿಕೊಳ್ಳಿ.

ಮಂಜಿನಲ್ಲಿ ಪ್ರಯಾಣಿಸುವ ಮುನ್ನ ಮಾತ್ರವಲ್ಲದೇ, ರಾತ್ರಿ ಸಮಯದಲ್ಲಿ ಜರ್ನಿ ಪ್ರಾರಂಭಿಸುವ ಮುನ್ನ ಕೂಡಾ ಹೆಡ್‍‍ಲೈಟ್‍‍ಗಳನ್ನು ತಪ್ಪದೇ ಚೆಕ್ ಮಾಡಿಕೊಳ್ಳಿ. ಒಂದು ಲೈಟ್ ಮಾತ್ರವೇ ಕೆಲಸ ಮಾಡುತ್ತಿರುವಾಗ ನಿಮ್ಮ ಪ್ರಯಾಣವನ್ನು ಸ್ಥಗಿತಗೊಳಿಸುವುದು ಉತ್ತಮ. ಹಾಗೆಯೆ ಹೊದರೆ ಎದುರುನಲ್ಲಿ ಬರುತ್ತಿರುವ ವಾಹನವು ನಿಮ್ಮ ವಾಹನವನನ್ನು ಟೂ ವ್ಹೀಲರ್ ಏಂದು ತಿಳಿದುಕೊಳ್ಳುವ ಅವಕಾಶವಿರುತ್ತದೆ.

ಹ್ಯಾಪಿ ಜರ್ನಿ..

More from DriveSpark

Article Published On: Friday, January 4, 2019, 17:35 [IST]
English summary
10 Killed After Vehicles Pile-Up Due To Dense Fog In North India. Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+