ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಮಾರುಕಟ್ಟೆಯಲ್ಲಿ ಪ್ರತೀ ವರ್ಷ ಹಲವಾರು ವಾಹನಗಳನ್ನು ಬಿಡುಗಡೆಗೊಳಿಸಿ, ಹೆಚ್ಚು ಜನಪ್ರೀಯತೆಯನ್ನು ಪಡೆಯುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಈಗಲೂ ಕೂಡಾ ಕಳೇದ ವರ್ಷ ಮಾರುತಿ ಸುಜುಕಿ ಸಂಸ್ಥೆಯ ಸ್ವಿಫ್ಟ್ ಕಾರು ಬೆಸ್ಟ್ ಕಾರ್ ಆಫ್ ದಿ ಇಯರ್ 2018 ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ನಾವಿಂದು ಹೇಳಲು ಹೊರಟಿರುವ ವಿಚಾರ ಏನಪ್ಪಾ ಅಂದ್ರೆ, ಮಾರುತಿ ಸುಜುಕಿ 1999ರಲ್ಲಿ ತಮ್ಮ ಮೊದಲ ತಲೆಮಾರಿನ ವ್ಯಾಗನ್ ಆರ್ ಕಾರನ್ನು ಬಿಡುಗಡೆಗೊಳಿಸಿತ್ತು. ಈ ಕಾರು ಆಟೋಮೊಬೈಲ್ ಉದ್ಯಮದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದು, ಇದು ಟಾಲ್ ಬಾಯ್ ವಿನ್ಯಾಸವನ್ನು ಪಡೆದ ಕಾರೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಹಾಗಾದರೆ ಸುಮಾರು 19 ವರ್ಷದಲ್ಲಿ ಎಷ್ಟು ವ್ಯಾಗನ್ ಆರ್ ಕಾರು ಮಾರಾಟಗೊಂಡಿದೆ ಗೊತ್ತಾ.?

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಮೇಲೆ ಹೇಳಿರುವ ಹಾಗೆ 1999ರಲ್ಲಿ ಮೊದಲ ಬಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಕಾಲಿಟ್ಟ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಇಲ್ಲಿಯ ವರೆಗು ಸುಮಾರು 22,14,554 ಯೂನಿಟ್‍ಗಳಿಗು ಅಧಿಕವಾಗಿ ಮಾರಾಟವಾಗಿದೆಯಂತೆ. ಅಂದರೆ ಲೆಕ್ಕಕ್ಕೆ 227 ತಿಂಗಳುಗಳ ಸಮಯದಲ್ಲಿ ಸುಮಾರು 9,756 ಯೂನಿಟ್ ಕಾರುಗಳು ಸೇಲ್ ಆಗುತ್ತಿದೆಯಂತೆ.

Image Courtesy Source: Auto Punditz

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಮಾರಾಟಗೊಂಡ 22 ಲಕ್ಷಕ್ಕು ಹೆಚ್ಚು ಕಾರುಗಳಲ್ಲಿ 2014ರ ಜೂನ್ ತಿಂಗಳಿನಲ್ಲಿ ಸುಮಾರು 17,119 ಯೂನಿಟ್ ಮಾರಾಟಗೊಂಡಿದ್ದು, ಇಲ್ಲಿಯವರೆಗು ಈ ಮಾರಾಟದ ಸಂಖ್ಯೆಯೆ ಹೆಚ್ಚಿದೆಯಂತೆ. ಮತ್ತು ವಾರ್ಷಿಕವಾಗಿ 2016ರಲ್ಲಿ ಸುಮಾರು 1,59,233 ಯೂನಿಟ್ ಕಾರುಗಳು ಮಾರಾಟಗೊಂಡಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಇದೇ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಂದ ಹೊಸ ಸ್ಯಾಂಟ್ರೋ ಕಾರುಗಳಿಗೆ ಪೈಪೋಟಿ ನೀಡಲು ಐದನೆಯ ತಲೆಮಾರಿನ ವ್ಯಾಗನ್ ಆರ್ ಕಾರನ್ನು ಇದೇ ತಿಂಗಳು 23ರಂದು ಬಿಡುಗಡೆಗೊಳಿಸಲಿದ್ದು, ಈ ಕುರಿತಾದ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ...

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಪೆಟ್ರೋಲ್, ಸಿಎನ್‍ಜಿ ಮತ್ತು ಎಲ್‍ಪಿಜಿ ಮಾದರಿಯಲ್ಲಿ ಬಿಡುಗಡೆಯಾಗಲಿರುವ ಹೊಸ ವ್ಯಾಗನ್ ಆರ್ ಕಾರು ಈಗಾಗಲೇ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಹೊಸ ತಲೆಮಾರಿನ ಹ್ಯುಂಡೈ ಸ್ಯಾಂಟ್ರೋ ಕಾರಿಗೆ ಟಕ್ಕರ್ ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಬುಕ್ಕಿಂಗ್ ಶುರು

ಮಾರುತಿ ಸುಜುಕಿ ಸಂಸ್ಥೆಯ ಡೀಲರ್‍‍ಗಳು ಹೊಸ ತಲೆಮಾರಿನ ವ್ಯಾಗನ್ ಆರ್ ಕಾರಿನ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಆಸಕ್ತ ಗ್ರಾಹಕರು ತಮ್ಮ ಸಮೀಪದಲ್ಲಿರುವ ಮಾರುತಿ ಸುಜುಕಿ ಡೀಲರ್‍‍ನ ಅಥವಾ ಮಾರುತಿ ಸುಜುಕಿ ಸಂಸ್ಥೆಯ ವೆಬ್‍ಸೈಟ್‍ನಲ್ಲಿ ರೂ. 11,000 ಮುಂಗಡವಾಗಿ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಹೊಸ ಕಾರಿನ ವಿನ್ಯಾಸ

ಈಗಾಗಲೇ ಹೊಸ ವ್ಯಾಗನ್ ಆರ್ ಕಾರು ಜಪಾನ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಕಾರು ಈ ಬಾರಿ ಉದ್ದನೆಯ ಆಕಾರವನ್ನು ಪಡೆದುಕೊಂಡಿದೆ. ಜೊತೆಗೆ ಅಗಲವಾದ ಹೆಡ್‍ಲ್ಯಾಂಪ್, ಹೊಸ ಬಂಪರ್, ಫಾಗ್‍ಲೈಟ್, ಮುಂಭಾಗದಲ್ಲಿ ರೆಕ್ಟಾಂಗ್ಯುಲರ್ ಗ್ರಿಲ್, ಆಕರ್ಷಕವಾಗಿ ಕಾಣಲು ಕ್ರೋಮ್ ಸ್ಟ್ರಿಪ್ ಅನ್ನು ಒದಗಿಸಲಾಗಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಕಾರಿನ ಹಿಂಭಾಗದಲ್ಲಿ ಸಾಧಾರಣವಾದ ಬಂಪರ್, ಎಕ್ಸ್-ಮಾಸ್ ಟ್ರೀ ಆಕಾರದಲ್ಲಿರುವ ಟೈಲ್‍ಲೈಟ್ಸ್, ನಂಬರ್ ಪ್ಲೇಟ್ ನೀಡುವ ಜಾಗದಲ್ಲಿ ಕೂಡಾ ಕ್ರೋಮ್ ಅನ್ನು ಬಳಸಲಾಗಿದ್ದು, ಒಳಭಾಗದಲ್ಲಿ ಡ್ರೈವರ್‍‍ಗೆ ಸೈಡ್ ಏರ್‍‍ಬ್ಯಾಗ್ಸ್ ಮತ್ತು ರಿಯರ್ ಪಾರ್ಕಿಂಗ್ ವಿಂಡೋಗಳನ್ನು ನೀಡಲಾಗಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಕಾರಿನ ಒಳಭಾಗವನ್ನು ಡ್ಯುಯಲ್ ಟೊನ್ ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಹೊಸದಾಗಿ ನೀಡಲಾಗಿದೆ. ಕಾರಿನ ಟಾಪ್ ಎಂಡ್ ವೆರಿಯೆಂಟ್ ಸ್ಮಾರ್ಟ್‍ ‍ಪ್ಲೇ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 12 ವೋಲ್ಟ್ಸ್ ಫೋನ್ ಚಾರ್ಜಿಂಗ್ ಸಾಕೆಟ್, ಎಲೆಕ್ಟ್ರಿಕ್ ಒಆರ್‍‍‍ವಿಎಂ, ಪವರ್ ವಿಂಡೋಸ್ ಮತ್ತು ಹಲವಾರು ಕಂಟ್ರೋಲ್ ಬಟನ್‍‍ಗಳನ್ನು ಪಡೆದ ಸ್ಟೀರಿಂಗ್ ವ್ಹೀಲ್ ಅನ್ನು ನೀಡಲಾಗಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಕಾರಿನ ಸುತ್ತಳತೆ

ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು 3655ಎಂಎಂ ಉದ್ದ, 1620ಎಂಎಂ ಅಗಲ, 1675ಎಂಎಂ ಎತ್ತರ, 2435ಎಂಎಂ ವ್ಹೀಲ್‍‍ಬೇಸ್ ಮತ್ತು 4.7 ಮೀಟರ್‍‍ನ ಟರ್ನ್ ರೇಡಿಯಸ್ ಅನ್ನು ಪಡೆದುಕೊಂಡಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ವೇರಿಯೆಂಟ್‍‍ಗಳು

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಹ್ಯಾಚ್‍‍ಬ್ಯಾಕ್ ಕಾರು ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಜೆಡ್ಎಕ್ಸ್ಐ ಎಂಬ ಮೂರು ಸಾಧಾರಣ ವೆರಿಯೆಂಟ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ವಿಎಕ್ಸ್ಐ ಹಾಗು ಜೆಡ್ಎಕ್ಸ್ಐ ಎಂಬ ಎರಡು ವೆರಿಯೆಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಎಂಜಿನ್ ಸಾಮರ್ಥ್ಯ

ಹೊಸ ವ್ಯಾಗನ್ ಆರ್ ಕಾರು ಈ ಬಾರಿ 1.0 ಲೀಟರ್ ಮತ್ತು 1.2 ಲೀಟರ್ ಪೆಟ್ರೋಲ್ ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಎಂಜಿನ್ ಅನ್ನು ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಆಯ್ಕೆಗಳಲ್ಲಿ ದೊರೆಯಲಿದೆ. ಇದಲ್ಲದೇ ಸಿಎನ್‍ಜಿ ಮತ್ತು ಎಲ್‍ಪಿಜಿ ಆಯ್ಕೆಯಲ್ಲಿ ಕೂಡಾ ಬಿಡುಗಡೆಯಾಗಲಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಮಿಡ್ ಮತ್ತು ಟಾಪ್ ಎಂಡ್ ವೇರಿಯಂಟ್‍‍ಗಳು 1.2-ಲೀಟರ್ ಎಂಜಿನ್‍ ಅನ್ನು ಪಡೆಯಲಿದ್ದು, ಇದನ್ನು ಸ್ವಿಫ್ಟ್ ಕಾರಿನಿಂದ ಪಡೆಯಲಾಗಿದೆ. 1.0-ಲೀಟರ್ ಪೆಟ್ರೋಲ್ ಎಂಜಿನ್ 63-ಬಿಹೆಚ್‍ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಇನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ 83-ಬಿಹೆಚ್‍ಪಿ ಮತ್ತು 113-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಸುರಕ್ಷಾ ವೈಶಿಷ್ಟ್ಯತೆಗಳು

ಕೀ ಲೆಸ್ ಎಂಟ್ರಿ, ಟಿಲ್ಟ್ ಟೆಲಿಸ್ಕೋಪಿಕ್ ಅಡೆಸ್ಟೆಬಲ್ ಸ್ಟೀರಿಂಗ್ ವ್ಹೀಲ್, ಆಟೋಮ್ಯಾಟಿಕ್ ಕಂಟ್ರೋಲ್ ಮತ್ತು ಕ್ಯಾಮೆರಾದೊಂದಿಗೆ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಪಡೆದುಕೊಳ್ಳಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ ಮತ್ತು ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‍‍ಗಳನ್ನು ನೀಡಲಾಗಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಲಭ್ಯವಿರುವ ಬಣ್ಣಗಳು

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರುಗಳನ್ನು ಗ್ರಾಹಕರು ಈ ಬಾರಿ ವೈಟ್, ಸಿಲ್ವರ್, ಆರೆಂಜ್, ಬ್ರೌನ್, ಗ್ರೇ ಮತ್ತು ನೀಲಿ ಎಂಬ ಆರು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಮೈಲೇಜ್

ಹೊಸ ವ್ಯಾಗನ್ ಆರ್ ಕಾರು ಪ್ರತಿ ಲೀಟರ್‍ ಪೆಟ್ರೋಲ್‌ಗೆ ನಗರ ಪ್ರದೇಶದಲ್ಲಿ 16 ರಿಂದ 18 ಕಿಲೋಮೀಟರ್ ಮತ್ತು ಹೆದ್ದಾರಿಗಳಲ್ಲಿ 22 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಹಾಗೆಯೇ ಸಿಎನ್‌ಜಿ ಆಯ್ಕೆಯುಳ್ಳ ಕಾರು ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 24 ಕಿ.ಮಿ ಮೈಲೇಜ್ ನೀಡಬಲ್ಲದು.

ಅಬ್ಬಾ.! 19 ವರ್ಷದಲ್ಲಿ ಇಷ್ಟೋಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮಾರಾಟವಾಗಿದ್ಯಾ.?

ಕಾರಿನ ಬೆಲೆ

ಹಳೆಯ ವರ್ಷನ್ ಕಾರಿಗಳಿಂತ ಹೊಸ ಕಾರಿನ ಬೆಲೆಯು ರೂ.1.50 ಲಕ್ಷದಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳುವುದು ಖಚಿತವಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ವಿಶೇಷ ವಿನ್ಯಾಸದೊಂದಿಗೆ ಸುಧಾರಿತ ಮಾದರಿಯ ಸೌಲಭ್ಯಗಳನ್ನು ಹೊತ್ತುಬಂದಿರುವ ವ್ಯಾಗನ್ ಆರ್ ಕಾರು ಹ್ಯುಂಡೈ ನ್ಯೂ ಸ್ಯಾಂಟ್ರೋ ಕಾರಿಗೆ ತೀವ್ರ ಪೈಪೋಟಿ ನೀಡಲಿದೆ.

More from DriveSpark

Article Published On: Friday, January 18, 2019, 18:04 [IST]
English summary
20 Million Maruti Suzuki Wagon R Sold In 19 Years. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+