ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಾರ್ ಹಾಗೂ ಟಿಯುವಿ 300
ಭಾರತದ ಅತಿ ದೊಡ್ಡ ಯುಟಿಲಿಟಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ, ಎಸ್‍ಯುವಿ ಸೆಗ್‍ಮೆಂಟಿನಲ್ಲಿ ಹಲವು ವಾಹನಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಈ ವಾಹನಗಳಲ್ಲಿ ಹೊಸ ಥಾರ್, ಹೊಸ ಸ್ಕಾರ್ಪಿಯೊ ಹಾಗೂ ಹೊಸ ಟಿಯುವಿ 300 ಪ್ಲಸ್‍ಗಳು ಸೇರಿವೆ.

ಸ್ಪಾಟ್ ಟೆಸ್ಟ್ ಮಾಡುವಾಗ ಥಾರ್ ಹಾಗೂ ಟಿಯುವಿ 300 ಪ್ಲಸ್ ವಾಹನಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ಎಲ್ಲಾ ಹೊಸ ವಾಹನಗಳನ್ನು ಪರೀಕ್ಷಿಸಲಾಗುತ್ತಿದೆ. ಈ ವಾಹನಗಳನ್ನು ಹಲವಾರು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಇತ್ತೀಚಿಗೆ ಇಂಡಿಯನ್ ಆಟೋಸ್ ಬ್ಲಾಗ್ ಬಿಡುಗಡೆಗೊಳಿಸಿರುವ ಚಿತ್ರಗಳಲ್ಲಿ ಹೊಸ ತಲೆಮಾರಿನ ಥಾರ್ ಹಾಗೂ ಹೊಸ ಟಿಯುವಿ 300 ಪ್ಲಸ್ ವಾಹನಗಳನ್ನು ಸ್ಪಾಟ್ ಟೆಸ್ಟ್ ಮಾಡುತ್ತಿರುವುದನ್ನು ಕಾಣಬಹುದು.

ಈ ಚಿತ್ರಗಳಲ್ಲಿ, ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ 2020ರ ಮಹೀಂದ್ರಾ ಥಾರ್ ವಿಭಿನ್ನವಾದ ಬಾಡಿ ಶೆಲ್ ಡಿಸೈನ್ ಹೊಂದಿರುವುದನ್ನು ಕಾಣಬಹುದು. ಇದರಲ್ಲಿರುವ ಹಾರ್ಡ್ ಟಾಪ್ ಆವೃತ್ತಿಯು ಮಾರುಕಟ್ಟೆಯಲ್ಲಿರುವ ಮಾದರಿಗಿಂತ ದೊಡ್ಡದಾಗಿ ಕಾಣುತ್ತದೆ.

ಈ ಚಿತ್ರಗಳಲ್ಲಿ ಕಾಣುವಂತೆ ಥಾರ್ ಎಸ್‍ಯುವಿ ಅಗಲವಾದ ಬಾಡಿ ಹಾಗೂ ದೊಡ್ಡ ವ್ಹೀಲ್ ಅರ್ಕ್ ಹೊಂದಿದೆ. ಈ ಎಸ್‍ಯುವಿಯಲ್ಲಿರುವ ವ್ಹೀಲ್‍ಗಳೂ ಸಹ ದೊಡ್ಡ ಗಾತ್ರವನ್ನು ಹೊಂದಿವೆ. ಈ ಎಸ್‍ಯುವಿಯ ಮುಂಭಾಗದಲ್ಲಿರುವ ಏಳು ಸ್ಲಾಟ್‍ನ ವರ್ಟಿಕಲ್ ಗ್ರಿಲ್‍ನ ಸುತ್ತಲೂ ರೌಂಡ್ ಹೆಡ್‍ಲೈಟ್‍ಗಳಿವೆ.

ಹೊಸ 2020ರ ಮಹೀಂದ್ರಾ ಥಾರ್ ಎಸ್‍ಯುವಿಯನ್ನು 2019ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿರುವ ಬಿಎನ್‍ವಿಎಸ್‍ಎಪಿ ಕ್ರಾಶ್ ಟೆಸ್ಟ್ ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿದೆ. ಈ ಎಸ್‍ಯುವಿಯಲ್ಲಿ ಡ್ರೈವರ್ ಏರ್‍ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಅಲರ್ಟ್ ಸಿಸ್ಟಂಗಳಿವೆ.

ಇವುಗಳ ಜೊತೆಗೆ, ಚಾಲ್ತಿಯಲ್ಲಿರುವ ಎಐಎಸ್ 145 ಸುರಕ್ಷಾ ನಿಯಮಗಳಿಗೆ ಕಡ್ಡಾಯವಾಗಿರುವ ಫೀಚರ್‍ಗಳನ್ನು ಹೊಂದಿರಲಿದೆ. ಹೊಸ ಮಹೀಂದ್ರಾ ಥಾರ್‍ನಲ್ಲಿರುವ ಇಂಟಿರಿಯರ್‍ನಲ್ಲಿ ದೊಡ್ಡ ಎಂಐಡಿ, ರೌಂಡ್ ಎಸಿ ವೆಂಟ್ ಹಾಗೂ ಬ್ಲಾಕ್ ಥೀಮ್‍ಗಳಿವೆ.

ಥಾರ್ ಎಸ್‍ಯುವಿಯಲ್ಲಿ 2.0 ಲೀಟರಿನ ಬಿಎಸ್ 6 ಡೀಸೆಲ್ ಎಂಜಿನ್ ಇರಲಿದೆ. ಈ ಎಂಜಿನ್ 140 ಬಿಹೆಚ್‍ಪಿ ಪವರ್ ಹಾಗೂ 300 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ. ಈ ಎಂಜಿನ್ 6 ಸ್ಪೀಡೀನ ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿರಲಿದೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಹೊಸ ಟಿಯುವಿ 300 ಪ್ಲಸ್ ಫೇಸ್‍ಲಿಫ್ಟ್ ಆವೃತ್ತಿಯಾಗಿದೆ. ಈ ಎಸ್‍ಯುವಿಯ ವಿನ್ಯಾಸದಲ್ಲಿ ಸಣ್ಣ ಬದಲಾವಣೆಗಳಾಗಲಿದ್ದು ಹೊಸದಾದ ಫ್ರಂಟ್ ಬಂಪರ್ ಹಾಗೂ ಹೊಸ ಹೆಡ್‍ಲ್ಯಾಂಪ್‍ಗಳಿರಲಿವೆ. ಕೆಲವು ವದಂತಿಗಳ ಪ್ರಕಾರ ಹೊಸ ವಿನ್ಯಾಸವನ್ನು ಮಹೀಂದ್ರಾ ಆಲ್ಟುರಾಸ್ ಜಿ4ನಿಂದ ಪಡೆಯಲಾಗಿದೆ.
MOST READ: ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಅಪ್‍ಗ್ರೇಡ್ ಮಾಡಲಾದ ಟಿಯುವಿ 300 ಪ್ಲಸ್ ಎಸ್‍ಯುವಿ 2.2 ಲೀಟರಿನ ಎಂಹಾಕ್ ಬಿಎಸ್ 6 ಎಂಜಿನ್ ಹೊಂದಿರಲಿದೆ. ಈ ಎಂಜಿನ್ 120 ಬಿಹೆಚ್‍ಪಿ ಪವರ್ ಹಾಗೂ 280 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಈ ಎಂಜಿನ್‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಹಾಗೂ ಎಎಂಟಿ ಆಯ್ಕೆಗಳನ್ನು ಹೊಂದಿರಲಿದೆ. ಈ ಎರಡೂ ಮಾದರಿಗಳನ್ನು 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಸ್ಪಾಟ್ ಟೆಸ್ಟ್ ಮಾಡಲಾಗಿರುವ ವಾಹನಗಳನ್ನು ನೋಡಿದರೆ ಮಹೀಂದ್ರಾ 2020ರ ಥಾರ್ ಹಾಗೂ ಟಿಯುವಿ 300 ಪ್ಲಸ್ ವಾಹನಗಳನ್ನು ಪೂರ್ತಿಯಾಗಿ ಅಭಿವೃದ್ಧಿಪಡಿಸಿರುವಂತಿದೆ. ಮಹೀಂದ್ರಾ ಕಂಪನಿಯ ಹೊಸ ಎಸ್‍ಯುವಿಗಳಿಗಾಗಿ ಆಟೋಮೊಬೈಲ್ ಪ್ರಿಯರು ಕಾಯುತ್ತಿದ್ದಾರೆ.
Source: Indianautosblog


Click it and Unblock the Notifications