ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್6 ಎಕ್ಸ್‌ಯುವಿ 500
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಎಕ್ಸ್‌ಯುವಿ 500 ವಾಹನವನ್ನು ಬಿಎಸ್6 ಎಂಜಿನ್‍ನಲ್ಲಿ ನವೀಕರಿಸುತ್ತಿದೆ. ಇದರ ಸಲುವಾಗಿ ಬಿಎಸ್-6 ಡೀಸೆಲ್ ಎಂಜಿನ್ ಅನ್ನು ಹೊಂದಿರುವ ಮಹೀಂದ್ರಾ ಇತ್ತೀಚಿಗೆ ತನ್ನ ಜನಪ್ರಿಯ ಎಕ್ಸ್‌ಯುವಿ 500 ಅನ್ನು ಸ್ಪಾಟ್ ಟೆಸ್ಟ್ ನಡೆಸಿತ್ತು.

ಮಹೀಂದ್ರಾ ತನ್ನ ಎಕ್ಸ್‌ಯುವಿ 500 ಅನ್ನು ಸ್ಪಾಟ್ ಟೆಸ್ಟ್ ನಡೆಸುವ ವೇಳೆಯಲ್ಲಿ ಹಲವು ಪ್ರಮುಖ ಭಾಗಗಳನ್ನು ಮರೆಮಾಚಿಲಾಗಿದೆ. ಇದರಲ್ಲಿ ಫ್ಯೂಲ್ ಟ್ಯಾಂಕ್ ಅನ್ನು ಮಾರೆಮಾಚಲು 504 ಸ್ಟಿಕರ್ ಅನ್ನು ಅಳವಡಿಸಿದ್ದಾರೆ. 2.2 ಲೀಟರ್ ಎಮ್ಹಾಕ್ ಡೀಸೆಲ್ ಎಂಜಿನ್ ಅನ್ನು ಬದಲಿಸಿ 2.0 ಬಿಎಸ್-6 ಎಂಜಿನ್ ಅನ್ನು ಅಳವಡಿಸಿದೆ.

ಪ್ರಸ್ತುತ ಎಕ್ಸ್‌ಯುವಿ 500, 2.2 ಲೀಟರ್ ಎಮ್ಹಾಕ್ ಟರ್ಬೊ ಜಾರ್ಜ್ಡ್ ಪೆಟ್ರೋಲ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಡೀಸೆಲ್ ಎಂಜಿನ್ 155 ಬಿಹೆಚ್‍ಪಿ ಪವರ್ ಮತ್ತು 360 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್ 140 ಬಿಹೆಚ್‍ಪಿ ಪವರ್ ಮತ್ತು 320 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಸಂಸ್ಥೆಯು ಸ್ಕಾರ್ಪಿಯೋ, ಎಕ್ಸ್‌ಯುವಿ500 ಮತ್ತು ಥಾರ್ ಎಸ್‍ಯುವಿಗಳ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ವಿನ್ಯಾಸದ ಮತ್ತು ಪವರ್‍ಫುಲ್ ಸ್ಕಾರ್ಪಿಯೋ, ಎಕ್ಸ್‌ಯುವಿ500 ಮತ್ತು ಥಾರ್ ನ್ಯೂ ಜನರೇಷನ್ ಆವೃತ್ತಿಗಳೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.

ಕೇಂದ್ರ ಸರ್ಕಾರದ ಹೊಸ ಬಿಎಸ್-6 ಮಾಲಿನ್ಯ ನಿಯಮದಂತೆ ಮಹೀಂದ್ರಾ ಸೇರಿದಂತೆ ಬಹುತೇಕ ಸಂಸ್ಥೆಗಳು 2019ರ ಕೊನೆಯಲ್ಲಿ ಇಲ್ಲವೇ 2020ರ ಆರಂಭದಲ್ಲಿ ಬಿಎಸ್-6 ಎಂಜಿನ್ ವಾಹನಗಳನ್ನು ಬಿಡುಗಡೆಗೊಳಿಸಲಿವೆ. ಇದರಲ್ಲಿ ನ್ಯೂ ಜನರೇಷನ್ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ಥಾರ್ ಕಾರುಗಳು ಹೊಸ ಮಾದರಿಯ ಬಿಎಸ್-6 ಎಂಜಿನ್ ಸೌಲಭ್ಯದೊಂದಿಗೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ .

ಬಿಎಸ್-6 ಎಂಜಿನ್‍ನೊಂದಿಗೆ ಎಕ್ಸ್‌ಯುವಿ500 ಕಾರಿನಲ್ಲಿ ಹಲವಾರು ಹೊಸ ಸುರಕ್ಷಾ ಸೌಲಭ್ಯಗಳನ್ನು ನೀಡಲಾಗುತ್ತದೆ. ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್ ಸಿಸ್ಟಂ, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯಗಳನ್ನು ಅಳವಡಿಸಬಹುದು.

ಹಾಗೆಯೇ ಏರ್‌ಬ್ಯಾಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರೇರ್ ಪಾರ್ಕಿಂಗ್ ಕ್ಯಾಮರಾ, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರೇರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, ಟಚ್ ಸ್ಕ್ರಿನ್ ಇನ್ಪೋಟೇನ್ ಸಿಸ್ಟಂ ಅನ್ನು ಅಳವಡಿಸುವ ನಿರೀಕ್ಷೆಗಳಿವೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಡಬ್ಲ್ಯು 504 ಸ್ಪಾಟ್ ಟೆಸ್ಟ್ ನಡೆಸುವಾಗ ಹಿಂಭಾಗದಲ್ಲಿ ಡಬ್ಲ್ಯು 11 ರೂಪಾಂತರದ ಬ್ಯಾಡ್ಜ್ ಅನ್ನು ಮುಂದುವರೆಸಿದೆ. ಇದು ಪೆಟ್ರೋಲ್ ಜಿ ಎಟಿ ಟ್ರಿಮ್ ಮಾತ್ರ ಲಭ್ಯವಿರುವುದರಿಂದ ಇದು ಡೀಸೆಲ್ ಎಂಜಿನ್ ಆಗಿರಬಹುದು. 2020ರ ಎಕ್ಸ್‌ಯುವಿ 500 ಎಂಜಿನ್ ಸ್ಪಾಟ್ ಟೆಸ್ಟ್ ನಡೆಸಲಾಗಿದೆ, ಇದರಿಂದ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಗಳಿವೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಮಹೀಂದ್ರಾ ಕಂಪನಿಯು ಕಳೆದ 14 ತಿಂಗಳ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಇರುವ ಮಾದರಿಗಳನ್ನು ನವೀಕರಿಸಲಾಗುತ್ತಿದೆ. ಎರಡನೇ ತಲೆಮಾರಿನ ಮಹೀಂದ್ರಾ ಥಾರ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಬಹುದು. ಬಿಎಸ್-6 ಮಾಲಿನ್ಯ ನಿಯಮ ಗಡವು ಅಂತ್ಯವಾಗುವ ಮೊದಲೇ ತನ್ನ ಶ್ರೇಣಿಯ ವಾಹನಗಳನ್ನು ನವೀಕರಿಸುವ ಸಾಧ್ಯತೆಗಳಿವೆ.


Click it and Unblock the Notifications