ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಬಿಎಂಡಬ್ಲ್ಯು ಎಕ್ಸ್7

ಐಷಾರಾಮಿ ಎಸ್‌ಯುವಿ ವಿಭಾಗದಲ್ಲೇ ಹೊಸದೊಂದು ಮಾದರಿಯನ್ನು ಪರಿಚಯಿಸಲು ಮುಂದಾಗಿರುವ ಪ್ರತಿಷ್ಠಿತ ಬಿಎಂಡಬ್ಲ್ಯು ಸಂಸ್ಥೆಯು ಮೊಟ್ಟ ಮೊದಲ ಬಾರಿಗೆ 7 ಸೀಟರ್ ಸಾಮರ್ಥ್ಯದ ಎಕ್ಸ್7 ಕಾರುನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರನ್ನು ಬಿಡುಗಡೆಗೊಳಿಸುವುದಕ್ಕಾಗಿ ದೇಶದ ವಿವಿಧ ಕಡೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಬಿಎಂಡಬ್ಲ್ಯು ಎಕ್ಸ್7

ಜನಪ್ರಿಯ ಎಕ್ಸ್ ರೇಂಜ್ ಎಸ್‌ಯುವಿ ಕಾರುಗಳ ಸರಣಿಯಲ್ಲಿ ಇದೇ ಮೊದಲ ಬಾರಿಗೆ 7 ಸೀಟರ್ ಆಸನವುಳ್ಳ ಎಕ್ಸ್7 ಕಾರು ಮಾದರಿಯನ್ನು ಹೊರತರುತ್ತಿರುವ ಬಿಎಂಡಬ್ಲ್ಯು ಸಂಸ್ಥೆಯು ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸಿದ್ದು, ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಈ ಹೊಸ ಕಾರುನ್ನು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸುವುದಕ್ಕಾಗಿ ನಿನ್ನೆಯಷ್ಟೇ ಪುಣೆಯಲ್ಲಿರುವ ಬಿಎಂಡಬ್ಲ್ಯು ಡೀಲರ್ಸ್‌ ಯಾರ್ಡ್‌ನಲ್ಲಿ ಸ್ಟಾಕ್ ಮಾಡುತ್ತಿರುವುದು ಕಂಡುಬಂದಿದೆ.

ಹೊಸ ಎಕ್ಸ್7 ಕಾರು 5151-ಎಂಎಂ ಉದ್ದ, 1805-ಎಂಎಂ ಎತ್ತರ, 2000-ಎಂಎಂ ಅಗಲ ಮತ್ತು 3105-ಎಂಎಂ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್6 ಕಾರಿಗಿಂತಲೂ 9-ಎಎಂ ಹೆಚ್ಚಿನ ಉದ್ದ ಮತ್ತು 3 ಇಂಚಿನಷ್ಟು ಕಡಿಮೆ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿರಲಿದೆ.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಬಿಎಂಡಬ್ಲ್ಯು ಎಕ್ಸ್7

ಕಾರಿನ ವಿನ್ಯಾಸ

ಬಿಎಂಡಬ್ಲ್ಯು ಎಕ್ಸ್7 ಎಸ್‍ಯುವಿ ಕಾರು ಮುಂಭಾಗದಲ್ಲಿ ಚೌಕಾಕಾರದ ಮತ್ತು ಉದ್ದನೆಯ ಸಿಗ್ನೇಚರ್ ಗ್ರೀಲ್ ಅನ್ನು ಪಡೆದುಕೊಂಡಿರಲಿದ್ದು, ಬಿಎಂಡಬ್ಲ್ಯು ನಿರ್ಮಾಣದ ಬೇರೆ ಯಾವುದೇ ಕಾರಿಗೂ ನೀಡಲಾಗದ ಗ್ರೀಲ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, ಹಾಗೆಯೇ ಎಲ್ಇಡಿ ಹೆಡ್‍ಲ್ಯಾಂಪ್‍ಗಳನ್ನು ಸಹ ಒದಗಿಸಲಾಗಿದೆ.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಬಿಎಂಡಬ್ಲ್ಯು ಎಕ್ಸ್7

ಪ್ರಸ್ತುತ ಎಕ್ಸ್7 ಕಾರಿಗೆ ಫುಲ್ ಎಲ್ಇಡಿ ಹೆಡ್‍‍ಲ್ಯಾಂಪ್‍ಗಳನ್ನು ನೀಡಲಾಗಿದ್ದರೂ ಸಹ ಭವಿಷ್ಯದಲ್ಲಿ ಲೇಜರ್ ಟೆಕ್ ಹೆಡ್‍ಲ್ಯಾಂಪ್‍ಗಳನ್ನು ಆಯ್ಕೆಯಾಗಿ ನೀಡಲಾಗುವುದು ಎನ್ನಲಾಗಿದ್ದು, ಈ ಲೇಜರ್ ಟೆಕ್ ಹೆಡ್‍ಲ್ಯಾಂಪ್‍ಗಳು ಸಾಧಾರಣ ಎಲ್ಇಡಿ ಹೆಡ್‍ಲ್ಯಾಂಪ್‍ಗಳಿಗಿಂತಲೂ ಎರಡು ಪಟ್ಟು ಅಧಿಕ ಬೆಳಕನ್ನು ಹೊರಸೂಸಬಲ್ಲವು.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಬಿಎಂಡಬ್ಲ್ಯು ಎಕ್ಸ್7

ಇನ್ನು ಈ ಕಾರಿನ ಹಿಂಭಾಗದಲ್ಲಿ 2 ಸೆಕ್ಷನ್ ವಿಭಜಿತ ಟೈಲ್‍ಗೇಟ್ ವಿನ್ಯಾಸವನ್ನು ನೀಡಲಾಗಿದ್ದು, 326-ಲೀಟರ್‍‍ನಷ್ಟು ಬೂಟ್ ಸ್ಪೇಸ್ ಅನ್ನು ಇದು ಪಡೆದುಕೊಳ್ಳಲಿದೆ. ಇದಲ್ಲದೇ ಎರಡನೆಯ ಮತ್ತು ಮೂರನೆಯ ಸೀಟ್ ಅನ್ನು ಫೋರ್ಡ್ ಮಾಡಿದಲ್ಲಿ ಸುಮಾರು 2120-ಲೀಟರ್‍‍ನಷ್ಟು ಹೆಚ್ಚುವರಿ ಸ್ಥಳಾವಕಾಶ ಮಾಡಿಕೊಳ್ಳಬಹುದು.

ಕಾರಿನ ಒಳವಿನ್ಯಾಸ

ಮೇಲೆ ಹೇಳಿದ ಹಾಗೆ ಇದು ಬಿಎಂಡಬ್ಲ್ಯು ಮೊದಲ 7 ಆಸನವುಳ್ಳ ಎಸ್‍ಯುವಿ ಕಾರಾಗಿದ್ದು, ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಮಧ್ಯದಲ್ಲಿರುವ ಸೀಟ್‍‍ಗಳನ್ನು ಕೊಂಚ ದೊಡ್ಡದಾಗಿಯೇ ನೀಡಲಾಗಿದೆ. ಜೊತೆಗೆ ಈ ಕಾರು ಫೌರ್ ಜೋನ್ ಕ್ಲೈಮೇಟ್ ಕಂಟ್ರೋಲ್, ಏಂಬಿಯೆಂಟ್ ಲೈಟ್ನಿಂಗ್, 3 ಸೆಕ್ಷನ್ ಪನೋರಮಿಕ್ ಗ್ಲಾಸ್ ರೂಫ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದಿದ್ದು, 12-ಇಂಚಿನ ಟ್ವಿನ್ ಸ್ಕ್ರೀನ್‍ಗಳನ್ನು ಸಹ ಒದಗಿಸಲಾಗಿದೆ.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಬಿಎಂಡಬ್ಲ್ಯು ಎಕ್ಸ್7

ಇಷ್ಟು ಮಾತ್ರವಲ್ಲದೇ ಪನೋರಮಿಕ್ ಗ್ಲಾಸ್ ರೂಫ್ ಸ್ಕೈ ಆನ್, ಬೋವರ್ಸ್ ಮತ್ತು ವಿಲ್ಕಿಂನ್ಸ್ ಡೈಮಂಡ್-ಸರೌಂಡ್ ಸಿಸ್ಟಂ, ರಿರಯ್ ಸೀಟ್ ಎಂಟರ್‍‍ಟೈನೆಂಟ್ ಮತ್ತು ಗ್ಲಾಸ್ ಅಪ್ಲಿಕೇಶನ್ ಕಂಟ್ರೋಲ್‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಬಿಎಂಡಬ್ಲ್ಯು ಎಕ್ಸ್7

ಎಂಜಿನ್ ಸಾಮರ್ಥ್ಯ

ಹೊಸ ಬಿಎಂಡಬ್ಲ್ಯು ಎಕ್ಸ್7 ಕಾರು ಒಂದು ಪೆಟ್ರೋಲ್ ಮಾದರಿಯಲ್ಲಿ ಹಾಗು ಎರಡು ಡೀಸೇಲ್ ಮಾದರಿಯ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಭವಿಷ್ಯದಲ್ಲಿ ಮತ್ತೆರಡು ಎರಡು ಪೆಟ್ರೋಲ್ ಹಾಗು ಎರಡು ಡೀಸೆಲ್ ಎಂಜಿನ್ ಆಯ್ಕೆಗಳು ಲಭ್ಯವಿರಲಿವೆ.

ಸದ್ಯಕ್ಕೆ ಬಿಡುಗಡೆಯಾಗಲಿರುವ ಪೆಟ್ರೊಲ್ ಆಧರಿತ ಕಾರು 340-ಬಿಎಚ್‌ಪಿ ಉತ್ಪಾದನೆಯ 3.0-ಲೀಟರ್ ಸ್ಟೈಟ್ ಸಿಕ್ಸ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದಲ್ಲಿ ಡಿಸೇಲ್ ಎಂಜಿನ್‌ ಪ್ರೇರಿತ ಮತ್ತೆರಡು ಕಾರುಗಳು ಸಹ 3.0-ಲೀಟರ್ ಎಂಜಿನ್‌ನೊಂದಿಗೆ 265-ಬಿಎಚ್‌ಪಿ ಮತ್ತು ಟಾಪ್ ಎಂಡ್ ಮಾದರಿಯು 400-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲವು.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಬಿಎಂಡಬ್ಲ್ಯು ಎಕ್ಸ್7

ಜೊತೆಗೆ ಎಕ್ಸ್‌ ಸ್ಯಾಂಡ್, ಎಕ್ಸ್ ಗ್ರ್ಯಾವೆಲ್, ಎಕ್ಸ್‌ ರಾಕ್ಸ್ ಮತ್ತು ಎಕ್ಸ್‌ ಸ್ನೋ ಎನ್ನುವ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುವ ಹೊಸ ಕಾರು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಆಫ್ ರೋಡ್ ಕೌಶಲ್ಯ ಪ್ರದರ್ಶನದಲ್ಲೂ ಸಾಕಷ್ಟು ಗಮನಸೆಳೆಯಲಿವೆ.

ಹಾಗೆಯೇ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 9 ಏರ್‌‌ಬ್ಯಾಗ್, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಹಲವು ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳಿದ್ದು, ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 99.90 ಲಕ್ಷದಿಂದ ರೂ.1.15 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿ ಬಿಎಂಡಬ್ಲ್ಯು ಎಕ್ಸ್7

ಇದರಿಂದ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆಡಿ ಕ್ಯೂ7, ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಕಾರುಗಳಿಗೆ ಪೈಪೋಟಿ ನೀಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಎಕ್ಸ್‌7 ಕಾರು ಮುಂದಿನ ಕೆಲವೇ ದಿನಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

Source: Premster14

Article Published On: Tuesday, April 30, 2019, 13:25 [IST]
English summary
BMW X7 Spotted Ahead Of Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+