ಎಲೆಕ್ಟ್ರಿಕ್ ವಾಹನಗಳ ಮೇಲೆ ತಗ್ಗಿದ ಜಿಎಸ್‌ಟಿ- ಮುಂದಿನ ವಾರದಿಂದಲೇ ಹೊಸ ದರ ಅನ್ವಯ

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಮತ್ತು ಖರೀದಿಸುವ ಗ್ರಾಹಕರಿಗೂ ಕೂಡಾ ವಿವಿಧ ಹೊಸ ಯೋಜನೆಗಳನ್ನು ಘೋಷಿಸಿದ್ದು, ಇದರಲ್ಲಿ ಜಿಎಸ್‌ಟಿ ದರ ಇಳಿಕೆ ಕೂಡಾ ಒಂದಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ತಗ್ಗಿದ ಜಿಎಸ್‌ಟಿ- ಮುಂದಿನ ವಾರದಿಂದಲೇ ಹೊಸ ದರ ಅನ್ವಯ

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮಾರಾಟದ ಮೇಲೆ ಹೆಚ್ಚಿನ ಮಟ್ಟದ ಸೆಸ್ ಸೇರಿದಂತೆ ದುಬಾರಿ ನೋಂದಣಿ ಶುಲ್ಕ ವಿಧಿಸುತ್ತಿರುವ ಕೇಂದ್ರ ಸರ್ಕಾರವು ಅದಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಕ್ರಮಕೈಗೊಳ್ಳುತ್ತಿದೆ. ಈ ಹಿಂದೆ ಫೇಮ್ ಯೋಜನೆಯ ಮೂಲಕ ಸಬ್ಸಡಿ ಯೋಜನೆಯನ್ನು ಘೋಷಿಸಿದ್ದ ಕೇಂದ್ರವು ಈ ಬಾರಿ ಜಿಎಸ್‌ಟಿ ಪ್ರಮಾಣದಲ್ಲಿ ಭಾರೀ ಕಡಿತ ಮಾಡಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ತಗ್ಗಿದ ಜಿಎಸ್‌ಟಿ- ಮುಂದಿನ ವಾರದಿಂದಲೇ ಹೊಸ ದರ ಅನ್ವಯ

ಎಲೆಕ್ಟ್ರಿಕ್ ವಾಹನಗಳ ಮೇಲೆ ಈ ಹಿಂದೆ ವಿಧಿಸಲಾಗುತ್ತಿದ್ದ ಜಿಎಸ್‌ಟಿ ಪ್ರಮಾಣವನ್ನು ನೀತಿ ಆಯೋಗದ ಶಿಫಾರಸ್ಸು ಮೇರೆಗೆ ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಂಸ್ಥೆಗಳ ಜೊತೆಗೆ ಎಲೆಕ್ಟ್ರಕ್ ವಾಹನ ಖರೀದಿದಾರರಿಗೂ ಸಾಕಷ್ಟು ಸಹಕಾರಿಯಾಗಲಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ತಗ್ಗಿದ ಜಿಎಸ್‌ಟಿ- ಮುಂದಿನ ವಾರದಿಂದಲೇ ಹೊಸ ದರ ಅನ್ವಯ

ಕೇಂದ್ರ ಸರ್ಕಾರದ ಹೊಸ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಜಿಎಸ್‌ಟಿ ದರ ಕಡಿತ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸುವ ಸಂಬಂಧ ಇಂದು ಮತ್ತೊಂದು ಮಹತ್ವದ ಸಭೆ ನಡೆದಿದ್ದು, ಜಿಎಸ್‌ಟಿ ಕೌನ್ಸಿಲ್ ಮಂಡಳಿಯು ಮುಂದಿನ ವಾರದಿಂದಲೇ ಹೊಸ ದರ ಅನ್ವಯವಾಗುವಂತೆ ಆದೇಶ ನೀಡಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ತಗ್ಗಿದ ಜಿಎಸ್‌ಟಿ- ಮುಂದಿನ ವಾರದಿಂದಲೇ ಹೊಸ ದರ ಅನ್ವಯ

ಹೊಸ ಆದೇಶದಿಂದಾಗಿ ಮುಂದಿನ ವಾರದಿಂದಲೇ ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಲಿದ್ದು, ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿವೆ. ಯಾಕೆಂದ್ರೆ ಹೊಸ ಯೋಜನೆಯಿಂದಾಗಿ ಎಲೆಕ್ಟ್ರಿಕ್ ವಾಹನ ಬೆಲೆ ಕಡಿಮೆಯಾಗಿ ಮಾರಾಟ ಪ್ರಮಾಣವು ಹೆಚ್ಚಲಿದ್ದು, ಸಬ್ಸಡಿ ಕೂಡಾ ದೊರೆಯಲಿದೆ. ಜೊತೆಗೆ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲೆ ಗ್ರಿನ್ ಸೆಸ್ ಹೆಚ್ಚಿಸಲಾಗಿದ್ದು, ಎಲೆಕ್ಟ್ರಿಕ್ ವಾಹನಗಳಿಗೂ ಇದು ಪೂರಕವಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ತಗ್ಗಿದ ಜಿಎಸ್‌ಟಿ- ಮುಂದಿನ ವಾರದಿಂದಲೇ ಹೊಸ ದರ ಅನ್ವಯ

ಇವಿ ಖರೀದಿ ಮೇಲೆ ತೆರಿಗೆ ವಿನಾಯ್ತಿ..!

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ತೆರಿಗೆ ವಿನಾಯ್ತಿ ಸಹ ನೀಡಿದ್ದು, ಬರೋಬ್ಬರಿ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಹಿಂದಿನ ಫೇಮ್ 2 ಯೋಜನೆ ಅಡಿಯಲ್ಲಿ ಘೋಷಣೆ ಮಾಡಲಾಗಿರುವ ಸಬ್ಸಡಿ ಯೋಜನೆಯನ್ನು ಸಹ ಮುಂದುವರಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ತಗ್ಗಿದ ಜಿಎಸ್‌ಟಿ- ಮುಂದಿನ ವಾರದಿಂದಲೇ ಹೊಸ ದರ ಅನ್ವಯ

ಈ ಹಿಂದೆ 2018ರಲ್ಲಿ ಘೋಷಣೆ ಮಾಡಲಾಗಿರುವ ಫೇಮ್ 2 ಯೋಜನೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮತ್ತು ಬೆಳವಣಿಗಾಗಿ ರೂ. 10 ಸಾವಿರ ಕೋಟಿ ಮೀಸಲು ಇರಿಸಲಾಗಿದ್ದು, 2018-19, 2019-20 ಮತ್ತು 2020-21ರ ಆರ್ಥಿಕ ವರ್ಷದ ಅವಧಿಗಾಗಿ ಈ ಮೀಸಲು ಹಣವನ್ನು ಖರ್ಚು ಮಾಡಲು ನಿರ್ಧರಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ತಗ್ಗಿದ ಜಿಎಸ್‌ಟಿ- ಮುಂದಿನ ವಾರದಿಂದಲೇ ಹೊಸ ದರ ಅನ್ವಯ

ಫೇಮ್ 2 ಯೋಜನೆ ಅಡಿ ಸಬ್ಸಡಿ ಸೇರಿದಂತೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣಕ್ಕಾಗಿ ಹೆಚ್ಚಿನ ಮಟ್ಟದಲ್ಲಿ ಹಣ ವಿನಿಯೋಗ ಮಾಡಲಾಗುತ್ತಿದ್ದು, ಇದೀಗ ಜಿಟಿಎಸ್ ತಗ್ಗಿಸಿರುವುದು ಇವಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಇದು ಮತ್ತಷ್ಟು ಸಹಕಾರಿಯಾಗಿಲಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ತಗ್ಗಿದ ಜಿಎಸ್‌ಟಿ- ಮುಂದಿನ ವಾರದಿಂದಲೇ ಹೊಸ ದರ ಅನ್ವಯ

ಈ ಮೂಲಕ 2030ರ ವೇಳೆಗೆ ಶೇ.100 ರಷ್ಟು ವಾಹನಗಳನ್ನು ರಸ್ತೆಗಿಳಿಸಬೇಕೆಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಹೊಸ ಬಜೆಟ್ ಪೂರಕವಾಗಿರಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಖರೀದಿ ಬಯಸುವ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Article Published On: Monday, July 22, 2019, 16:08 [IST]
English summary
Electric Vehicle GST To Be Reduced Soon — Government To Offer Other Tax Benefits As Well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+