ಹೋಂಡಾ ಅಮೇಜ್, ಜಾಝ್ ಮತ್ತು ಡಬ್ಲ್ಯುಆರ್-ವಿ ಎಕ್ಸ್‌ಕ್ಲೂಸಿವ್ ಎಡಿಷನ್ ಬಿಡುಗಡೆ
ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಅಮೇಜ್, ಜಾಝ್ ಮತ್ತು ಡಬ್ಲ್ಯುಆರ್-ವಿ ಎಕ್ಸ್‌ಕ್ಲೂಸಿವ್ ಎಡಿಷನ್‌ಗಳನ್ನು ಬಿಡುಗಡೆ ಮಾಡಿದ್ದು, ಸಾಮಾನ್ಯ ಮಾದರಿಗಳಿಂತ ಸ್ಪೆಷಲ್ ಎಡಿಷನ್ ಕಾರುಗಳು ರೂ. 12 ಸಾವಿರದಿಂದ ರೂ.19 ಸಾವಿರ ಹೆಚ್ಚುವರಿ ಬೆಲೆಗಳನ್ನು ಪಡೆದುಕೊಂಡಿರಲಿವೆ.

ಸ್ಪೆಷಲ್ ಎಡಿಷನ್ ಕಾರುಗಳಲ್ಲಿ ಎಕ್ಸ್‌ಕ್ಲೂಸಿವ್ ಬ್ಯಾಡ್ಜ್ ಮತ್ತು ಕಾರಿನ ಮುಂಭಾಗದಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಹೊರತುಪಡಿಸಿ ಇನ್ನುಳಿದಂತೆ ಹಳೆಯ ಮಾದರಿಯಲ್ಲೇ ಎಂಜಿನ್ ಮತ್ತು ವಿನ್ಯಾಸಗಳನ್ನು ಮುಂದುವರಿಸಲಾಗಿದ್ದು, ಗ್ರಾಹಕರ ಆಕರ್ಷಣೆಗಾಗಿ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಹೊಸದಾದ ಸೀಟ್ ಕವರ್‌ಗಳು ಮತ್ತು ಬಾಗಿಲುಗಳ ಅಡಿಯಲ್ಲಿ ಗೋಚರಿಸುವ ಕಾರಿನ ಹೆಸರು ವಿಶೇಷವಾಗಿದೆ.

ಇದರಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಅಮೇಜ್ ಮತ್ತು ಡಬ್ಲ್ಯುಆರ್-ವಿ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳಲ್ಲೂ ಖರೀದಿ ಲಭ್ಯವಿದ್ದು, ಅಮೇಜ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 7.8 ಲಕ್ಷದಿಂದ 8.9 ಲಕ್ಷ ಬೆಲೆ ಹೊಂದಿದ್ದಲ್ಲಿ ಡಬ್ಲ್ಯುಆರ್-ವಿ ಕಾರುಗಳು ಆರಂಭಿಕವಾಗಿ ರೂ.9.35 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.10.48 ಲಕ್ಷ ಬೆಲೆ ಹೊಂದಿದೆ.
ಹಾಗೆಯೇ ಜಾಝ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವುದಲ್ಲೇ ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.23 ಲಕ್ಷ ಬೆಲೆಯೊಂದಿಗೆ ಉತ್ತಮ ಬೇಡಿಕೆ ಹೊಂದಿದ್ದು, ಎಕ್ಸ್‌ಕ್ಲೂಸಿವ್ ಟ್ಯಾಗ್‌ನೊಂದಿಗೆ ಮತ್ತಷ್ಟು ಗ್ರಾಹಕರನ್ನು ಆಕರ್ಷಣೆ ಮಾಡಲಿದೆ.

ಮತ್ತೊಂದು ವಿಶೇಷ ಅಂದ್ರೆ ಸ್ಪೆಷಲ್ ಎಡಿಷನ್ ಕಾರುಗಳು ರೆಡಿಯೆಂಟ್ ರೆಡ್ ಮತ್ತು ಆರ್ಚಿಡ್ ವೈಟ್ ಎನ್ನುವ ಎರಡು ಬಣ್ಣಗಳಲ್ಲಿ ಮಾತ್ರವೇ ಖರೀದಿ ಮಾಡಬಹುದಾಗಿದ್ದು, ಇನ್ನುಳಿದಂತೆ ಸಾಮಾನ್ಯ ಕಾರುಗಳಲ್ಲಿ ವಿವಿಧ ಬಣ್ಣಗಳ ಆಯ್ಕೆ ಸೌಲಭ್ಯವಿರಲಿದೆ.
ಎಂಜಿನ್ ಸಾಮರ್ಥ್ಯ
ಹೋಂಡಾ ಸ್ಪೆಷಲ್ ಎಡಿಷನ್ ಕಾರುಗಳು ಪೆಟ್ರೋಲ್ ಆವೃತ್ತಿಯಲ್ಲಿ 1.2 ಲೀಟರ್ ಐ-ವಿಟೆಕ್ ಎಂಜಿನ್ ಹೊಂದಿದ್ದು, 90-ಬಿಎಚ್‌ಪಿ ಮತ್ತು 110-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು. ಹಾಗೆಯೇ 1.5-ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್‌ಗಳು 100-ಬಿಎಚ್‌ಪಿ ಮತ್ತು 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತವೆ.

ಇವುಗಳಲ್ಲಿ ಡೀಸೆಲ್ ಆವೃತ್ತಿಗಳು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಪೆಟ್ರೋಲ್ ಮಾದರಿಗಳಲ್ಲೂ ಸಹ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಿದೆ.


Click it and Unblock the Notifications