ಉತ್ಪಾದನಾ ಘಟಕಗಳನ್ನು ಪುನರ್‍‍ರಚಿಸಲಿದೆ ಹೋಂಡಾ

ಭಾರತದ ಆಟೋ ಮೊಬೈಲ್ ಉದ್ಯಮವು ಕಳೆದ ಕೆಲವು ತಿಂಗಳುಗಳಿಂದ ನಿಧಾನಗತಿಯ ಪ್ರಗತಿಯನ್ನು ಎದುರಿಸುತ್ತಿದೆ. ಆಟೋ ಮೊಬೈಲ್ ಉದ್ಯಮದಲ್ಲಿನ ಈ ನಿಧಾನಗತಿಯ ಪ್ರಗತಿಯ ಕಾರಣದಿಂದಾಗಿ ಹೋಂಡಾ ಕಾರ್ಸ್ ಇಂಡಿಯಾ ಭಾರತದಲ್ಲಿರುವ ತನ್ನ ಉತ್ಪಾದನಾ ಘಟಕಗಳನ್ನು ಪುನರ್‍‍ರಚಿಸುವ ಬಗ್ಗೆ ಯೋಚಿಸುತ್ತಿದೆ.

ಉತ್ಪಾದನಾ ಘಟಕಗಳನ್ನು ಪುನರ್‍‍ರಚಿಸಲಿದೆ ಹೋಂಡಾ

ಕಂಪನಿಯ ಯೋಜನೆಗಳ ಬಗ್ಗೆ ಅರಿವಿರುವ ಜನರು ಹೋಂಡಾ ತನ್ನ ಎರಡು ಉತ್ಪಾದನಾ ಸೌಲಭ್ಯಗಳಲ್ಲಿ ಒಂದನ್ನು ಮುಚ್ಚಲು ಯೋಜಿಸುತ್ತಿದೆ ಎಂದು ಹೇಳಿದ್ದಾರೆ. ಎಕನಾಮಿಕ್ ಟೈಮ್ಸ್ ಆಟೋ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಮಾರಾಟವು ಅರ್ಧದಷ್ಟು ಕಡಿಮೆಯಾಗಿದೆ.

ಉತ್ಪಾದನಾ ಘಟಕಗಳನ್ನು ಪುನರ್‍‍ರಚಿಸಲಿದೆ ಹೋಂಡಾ

ಹೋಂಡಾ ಕಾರ್ಸ್ ಇಂಡಿಯಾ ಗ್ರೇಟರ್ ನೋಯ್ಡಾದಲ್ಲಿರುವ ತನ್ನ ಘಟಕವನ್ನು ಮುಚ್ಚಲು, ಗುಜರಾತ್‌ನಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಮಾರಾಟ ಮಾಡಲು ಹಾಗೂ ಎಲ್ಲಾ ರೀತಿಯ ಪ್ಯಾಸೆಂಜರ್ ವಾಹನಗಳ ಉತ್ಪಾದನೆಯನ್ನು ರಾಜಸ್ಥಾನದ ಘಟಕಕ್ಕೆ ಸ್ಥಳಾಂತರಿಸಲು ಯೋಚಿಸುತ್ತಿದೆ.

ಉತ್ಪಾದನಾ ಘಟಕಗಳನ್ನು ಪುನರ್‍‍ರಚಿಸಲಿದೆ ಹೋಂಡಾ

ಗ್ರೇಟರ್ ನೋಯ್ಡಾದಲ್ಲಿರುವ ಘಟಕವು ಹೋಂಡಾ ಕಂಪನಿಯು ಭಾರತದಲ್ಲಿ ಸ್ಥಾಪಿಸಿದ ಮೊದಲ ಕಾರ್ಖಾನೆಯಾಗಿದೆ. ಈ ಎರಡೂ ಘಟಕಗಳಲ್ಲಿ ವರ್ಷಕ್ಕೆ 2.8 ಲಕ್ಷ ಕಾರುಗಳನ್ನು ಉತ್ಪಾದಿಸಲಾಗುತ್ತದೆ. ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ನೋಯ್ಡಾ ಘಟಕವನ್ನು ಸ್ಥಗಿತಗೊಳಿಸಲಾಗುತ್ತಿದೆ.

ಉತ್ಪಾದನಾ ಘಟಕಗಳನ್ನು ಪುನರ್‍‍ರಚಿಸಲಿದೆ ಹೋಂಡಾ

ಗ್ರೇಟರ್ ನೋಯ್ಡಾ ಘಟಕದ ಸುತ್ತಮುತ್ತಲಿರುವ ಪ್ರದೇಶವು ವಸತಿಗೃಹವಾಗಿ ಮಾರ್ಪಟ್ಟಿದ್ದು, ಉತ್ಪಾದನಾ ವೆಚ್ಚಗಳು ಹೆಚ್ಚಾಗಿವೆ. ಹೋಂಡಾ ಕಂಪನಿಯು ಈ ಘಟಕದಲ್ಲಿ 10 ವರ್ಷಗಳಿಂದ ಇರುವ ಕಾರಣಕ್ಕೆ ಇನ್ನು ಮುಂದೆ ತೆರಿಗೆ ಪ್ರಯೋಜನಗಳನ್ನು ಪಡೆಯುವುದಿಲ್ಲ. ಹೋಂಡಾ ಕಂಪನಿಯು ತನ್ನ ವಾಹನಗಳ ಉತ್ಪಾದನೆಯನ್ನು ರಾಜಸ್ಥಾನದ ಘಟಕಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ.

ಉತ್ಪಾದನಾ ಘಟಕಗಳನ್ನು ಪುನರ್‍‍ರಚಿಸಲಿದೆ ಹೋಂಡಾ

ಇದರ ಜೊತೆಗೆ ಮೂರನೇ ಘಟಕದ ಅವಶ್ಯಕತೆಯಿಲ್ಲದ ಕಾರಣ ಹೋಂಡಾ ಕಾರ್ಸ್ ಇಂಡಿಯಾ ಗುಜರಾತ್‌ನಲ್ಲಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಮಾರಾಟ ಮಾಡಲು ಕೂಡ ಯೋಜಿಸಿದೆ. ಗ್ರೇಟರ್ ನೋಯ್ಡಾದಲ್ಲಿರುವ ಘಟಕವನ್ನು ಸಂಶೋಧನೆ ಹಾಗೂ ಅಭಿವೃದ್ಧಿ ಸೌಲಭ್ಯ ಮತ್ತು ಸಣ್ಣ ಸಿಕೆಡಿ ಕಾರ್ಯಾಚರಣೆ ಕೇಂದ್ರವಾಗಿ ಪರಿವರ್ತಿಸಲು ಸಹ ಹೋಂಡಾ ಯೋಜಿಸುತ್ತಿದೆ.

ಉತ್ಪಾದನಾ ಘಟಕಗಳನ್ನು ಪುನರ್‍‍ರಚಿಸಲಿದೆ ಹೋಂಡಾ

ಉತ್ಪಾದನಾ ಯೋಜನೆಗಳ ಪುನರ್‍‍ರಚನೆಯನ್ನು ಒಳಗೊಂಡಿರುವ ಯೋಜನೆಯಾದ ಭಾರತೀಯ ಮಾರುಕಟ್ಟೆಯ ಮಧ್ಯಕಾಲೀನ ಯೋಜನೆಗಳನ್ನು ಪರಿಶೀಲಿಸಲು ಹೋಂಡಾದ ಏಷ್ಯಾ-ಓಷಿಯಾನಿಯಾ ಪ್ರದೇಶದ ಮುಖ್ಯಸ್ಥರಾದ ಮಸಾಯುಕಿ ಇಗರ್ಷಿ ನೇತೃತ್ವದ ಹಿರಿಯ ನಿರ್ವಹಣಾ ತಂಡವು ಈ ವಾರದ ಆರಂಭದಲ್ಲಿ ಥೈಲ್ಯಾಂಡ್‌ನಿಂದ ಭಾರತಕ್ಕೆ ಆಗಮಿಸಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಉತ್ಪಾದನಾ ಘಟಕಗಳನ್ನು ಪುನರ್‍‍ರಚಿಸಲಿದೆ ಹೋಂಡಾ

ಹೋಂಡಾ ಕಂಪನಿಯ ವಕ್ತಾರರು ಮಾತನಾಡಿ, ಮಾರಾಟವು ಅಪಾರ ನಷ್ಟವನ್ನು ಅನುಭವಿಸುತ್ತಿದ್ದರೂ, ಮಾರಾಟದ ಪರಿಸ್ಥಿತಿಗೆ ಸರಿಹೊಂದುವಂತೆ ಎರಡು ಘಟಕಗಳಲ್ಲಿರುವ ಉತ್ಪಾದನಾ ಪ್ರಮಾಣವನ್ನು ಉತ್ತಮಗೊಳಿಸಲಾಗುತ್ತಿದೆ. ಇದಕ್ಕೂ ಸ್ಥಾವರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಉತ್ಪಾದನಾ ಘಟಕಗಳನ್ನು ಪುನರ್‍‍ರಚಿಸಲಿದೆ ಹೋಂಡಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಈ ರೀತಿ ಮಾಡುವುದನ್ನು ಯಾರೂ ಊಹಿಸಿರಲಿಲ್ಲ. ಹೋಂಡಾ ಕಾರ್ಸ್ ಇಂಡಿಯಾ ದೇಶದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಹೋಂಡಾ ಕಂಪನಿಯು ಆಟೋ ಮೊಬೈಲ್ ಉದ್ಯಮವು ಎದುರಿಸುತ್ತಿರುವ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುವ ನಿರೀಕ್ಷೆಗಳಿವೆ. ಈ ಪರಿಸ್ಥಿತಿಯನ್ನು ಕೊರಿಯಾ ಮೂಲದ ಕಂಪನಿಗಳು ಸಮರ್ಥವಾಗಿ ನಿಭಾಯಿಸುತ್ತಿವೆ.

Article Published On: Friday, October 25, 2019, 16:15 [IST]
English summary
Honda Cars India Planning To Restructure Manufacturing Operations: Selling Land In Gujarat - Read in Kannada
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+