ಹೊಸ ವಾಹನ ಮಾರಾಟದಲ್ಲಿ ಭಾರೀ ನಷ್ಟ- ಶೇ.48ರಷ್ಟು ಕುಸಿತ ಕಂಡ ಹೋಂಡಾ ಕಾರ್ಸ್

ಹೊಸ ವಾಹನಗಳ ಮಾರಾಟ ಪ್ರಮಾಣವು ಭಾರೀ ಕುಸಿತಕ್ಕೆ ಕಾರಣವಾಗಿದ್ದು, ಕಳೆದ ಎರಡು ತಿಂಗಳಿನಿಂದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ. ಅದರಲ್ಲೂ ಹೋಂಡಾ ಕಾರ್ಸ್ ಮಾರಾಟವು ವರ್ಷದಲ್ಲೇ ಅತಿ ಕಡಿಮೆ ಮಾರಾಟ ಪ್ರಮಾಣವನ್ನು ದಾಖಲಿಸಿದ್ದು, ಕಳೆದ ವರ್ಷದ ಜುಲೈ ಅವಧಿಗೂ ಮತ್ತು ಪ್ರಸಕ್ತ ವರ್ಷದ ಜುಲೈ ಅವಧಿಗೂ ಶೇ.48.67ರಷ್ಟು ಕುಸಿತಕ್ಕೆ ಕಾರಣವಾಗಿದೆ.

ಹೊಸ ವಾಹನ ಮಾರಾಟದಲ್ಲಿ ಭಾರೀ ನಷ್ಟ- ಶೇ.48ರಷ್ಟು ಕುಸಿತ ಕಂಡ ಹೋಂಡಾ ಕಾರ್ಸ್

2018ರ ಜುಲೈ ಅವಧಿಯಲ್ಲಿ ಒಟ್ಟು 19,970 ಕಾರುಗಳನ್ನು ಮಾರಾಟ ಮಾಡಿದ್ದ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು 2019ರ ಜುಲೈ ಅವಧಿಯಲ್ಲಿ ಕೇವಲ 10,250 ಕಾರುಗಳನ್ನು ಮಾತ್ರವೇ ಮಾರಾಟ ಮಾಡಲವು ಶಕ್ತವಾಗಿದ್ದು, ಬರೋಬ್ಬರಿ ಶೇ.48.67 ರಷ್ಟು ಕುಸಿತ ಕಂಡಿದೆ. ಹೋಂಡಾ ಮಾತ್ರವಲ್ಲದೇ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ವಾಹನ ಮಾರಾಟದಲ್ಲಿ ಕುಸಿತ ಕಂಡಿದ್ದು, ಸ್ಟಾಕ್ ಪ್ರಮಾಣವು ಹೊರೆಯಾಗಿ ಪರಿಣಮಿಸಿದೆ.

ಹೊಸ ವಾಹನ ಮಾರಾಟದಲ್ಲಿ ಭಾರೀ ನಷ್ಟ- ಶೇ.48ರಷ್ಟು ಕುಸಿತ ಕಂಡ ಹೋಂಡಾ ಕಾರ್ಸ್

ಹೋಂಡಾ ಸಂಸ್ಥೆಯು ಸದ್ಯ ಬ್ರಿಯೊ, ಅಮೇಜ್, ಜಾಝ್, ಸಿಟಿ, ಬಿಆರ್-ವಿ, ಡಬ್ಲ್ಯುಆರ್-ವಿ, ಸಿವಿಕ್, ಸಿಆರ್-ವಿ ಮತ್ತು ಅಕಾರ್ಡ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಅಮೇಜ್ ಮತ್ತು ಜಾಝ್ ಕಾರುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾರು ಮಾದರಿಗಳು ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ.

ಹೊಸ ವಾಹನ ಮಾರಾಟದಲ್ಲಿ ಭಾರೀ ನಷ್ಟ- ಶೇ.48ರಷ್ಟು ಕುಸಿತ ಕಂಡ ಹೋಂಡಾ ಕಾರ್ಸ್

ಇನ್ನು ಕಳೆದ 18 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯ ಆಟೋ ಉದ್ಯಮ ಭಾರೀ ಹಿನ್ನಡೆ ಅನುಭವಿಸಿದ್ದು, ಬಹುತೇಕ ಆಟೋ ಉದ್ಯಮ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿವೆ. 2019ರ ಆರಂಭದಿಂದ ಹೊಸ ವಾಹನಗಳ ಮಾರಾಟದಲ್ಲಿ ಗರಿಷ್ಠ ಮಟ್ಟದ ಇಳಿಕೆ ದಾಖಲಾಗುತ್ತಿದ್ದು, ಇದುವರೆಗೂ ಆಟೋ ಉದ್ಯಮವು ಚೇತರಿಕೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಟೋ ಉದ್ಯಮವನ್ನೇ ನಂಬಿಕೊಂಡಿದ್ದ ಬೀಡಿಭಾಗಗಳ ತಯಾರಿಕಾ ಸಂಸ್ಥೆಗಳು ಕದ ಮುಚ್ಚುವ ಪರಿಸ್ಥಿತಿ ಎದುರಾಗಿದೆ.

ಹೊಸ ವಾಹನ ಮಾರಾಟದಲ್ಲಿ ಭಾರೀ ನಷ್ಟ- ಶೇ.48ರಷ್ಟು ಕುಸಿತ ಕಂಡ ಹೋಂಡಾ ಕಾರ್ಸ್

ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಸದ್ಯ ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಹರಸಾಹಸ ಪಡುತ್ತಿದ್ದು, ಹೊಸ ಉತ್ಪಾದನಾ ಪ್ರಕ್ರಿಯೆಯು ಕೂಡಾ ಕುಂಟುತ್ತಾ ಸಾಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಹೋಂಡಾ ಕಾರ್ಸ್, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹ್ಯುಂಡೈ, ಮಹೀಂದ್ರಾ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಯನ್ನು ತಾತ್ಕಲಿಕವಾಗಿ ಬಂದ್ ಮಾಡಿವೆ.

ಹೊಸ ವಾಹನ ಮಾರಾಟದಲ್ಲಿ ಭಾರೀ ನಷ್ಟ- ಶೇ.48ರಷ್ಟು ಕುಸಿತ ಕಂಡ ಹೋಂಡಾ ಕಾರ್ಸ್

2019ರ ಅವಧಿಯಲ್ಲಿ ಭಾರತೀಯ ಆಟೋ ಉತ್ಪಾದನಾ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿದ್ದು, ಹೊಸ ವಾಹನ ಮಾರಾಟದಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ನಷ್ಟ ಅನುಭವಿಸಿವೆ. ಅದರಲ್ಲೂ ಕಳೆದ ಏಪ್ರಿಲ್‌ನಿಂದ ಜುಲೈ ಅವಧಿಯಲ್ಲಿ ಹೊಸ ವಾಹನಗಳ ಮಾರಾಟವು ಪ್ರಮಾಣವು ಕಳೆದ 18 ವರ್ಷಗಳಲ್ಲೇ ಮೊದಲ ಬಾರಿಗೆ ತೀವ್ರ ಕುಸಿತ ಕಂಡಿವೆ.

ಹೊಸ ವಾಹನ ಮಾರಾಟದಲ್ಲಿ ಭಾರೀ ನಷ್ಟ- ಶೇ.48ರಷ್ಟು ಕುಸಿತ ಕಂಡ ಹೋಂಡಾ ಕಾರ್ಸ್

ಇದರಿಂದ ಮಾರಾಟವಾಗದೇ ಉಳಿದ ಸ್ಟಾಕ್ ಇದೀಗ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಿದ್ದು, ಬಹುತೇಕ ಆಟೋ ಸಂಸ್ಥೆಗಳು ತಮ್ಮ ಹೊಸ ವಾಹನಗಳ ಉತ್ಪಾದನೆಯನ್ನ ತಾತ್ಕಾಲಿಕವಾಗಿ ಬಂದ್ ಮಾಡಿ ಸ್ಟಾಕ್ ಕರಗಿಸಲು ಪ್ರಯತ್ನದಲ್ಲಿವೆ.

ಹೊಸ ವಾಹನ ಮಾರಾಟದಲ್ಲಿ ಭಾರೀ ನಷ್ಟ- ಶೇ.48ರಷ್ಟು ಕುಸಿತ ಕಂಡ ಹೋಂಡಾ ಕಾರ್ಸ್

ಮಾಹಿತಿಗಳ ಪ್ರಕಾರ, ಶೇ. 20.5 ರಷ್ಟು ಹೊಸ ಪ್ಯಾಸೆಂಜರ್ ವಾಹನಗಳ ಮಾರಾಟ ಪ್ರಮಾಣವು ಕುಸಿತ ಕಂಡಿದ್ದು, 2001ರಿಂದ ಇದು ಮೊದಲ ಬಾರಿಗೆ ಗರಿಷ್ಠ ಪ್ರಮಾಣದ ಮಾರಾಟ ಕುಸಿತ ದಾಖಲಾಗಿದೆ. ಹೀಗಾಗಿ ಸ್ಟಾಕ್ ಪ್ರಕ್ರಿಯೆಗೆ ಸದ್ಯಕ್ಕೆ ಬ್ರೇಕ್ ಹಾಕಲಾಗಿದ್ದು, ಬೀಡಿಭಾಗಗಳನ್ನು ಪೂರೈಕೆ ಮಾಡುವ ಸಾವಿರಾರು ಸಂಸ್ಥೆಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ.

ಹೊಸ ವಾಹನ ಮಾರಾಟದಲ್ಲಿ ಭಾರೀ ನಷ್ಟ- ಶೇ.48ರಷ್ಟು ಕುಸಿತ ಕಂಡ ಹೋಂಡಾ ಕಾರ್ಸ್

ಜೊತೆಗೆ ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ಕಾರುಗಳು ಮತ್ತು 15 ಸಾವಿರ ಕೋಟಿ ಮೌಲ್ಯದ ಹೊಸ ಬೈಕ್‌ಗಳ ಸ್ಟಾಕ್ ಪ್ರಮಾಣವು ಮಾರಾಟವಾಗದೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದ್ದು, ಸ್ಟಾಕ್ ಪ್ರಮಾಣವನ್ನು ತೆರೆವುಗೊಳಿಸಲು ಭಾರೀ ಪ್ರಮಾಣದ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

ಹೊಸ ವಾಹನ ಮಾರಾಟದಲ್ಲಿ ಭಾರೀ ನಷ್ಟ- ಶೇ.48ರಷ್ಟು ಕುಸಿತ ಕಂಡ ಹೋಂಡಾ ಕಾರ್ಸ್

ಇದರ ಮಧ್ಯೆ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಜಿಎಸ್‌ಟಿ ಪ್ರಮಾಣವನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಿ ಅನುಕೂಲಕರ ಯೋಜನೆಗಳನ್ನು ಘೋಷಣೆ ಮಾಡಿದ್ದು, ಈ ಹಿನ್ನೆಲೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲಿನ ಸೆಸ್ ಪ್ರಮಾಣವನ್ನು ಹೆಚ್ಚಳದೊಂದಿಗೆ ನೋಂದಣಿ ಶುಲ್ಕವನ್ನು ದುಬಾರಿ ಮಾಡಿರುವುದು ಕೂಡಾ ಸಾಂಪ್ರದಾಯಿಕ ವಾಹನಗಳ ಬೇಡಿಕೆಯು ಕುಸಿತಕ್ಕೆ ಕಾರಣವಾಗಿದೆ.

ಹೊಸ ವಾಹನ ಮಾರಾಟದಲ್ಲಿ ಭಾರೀ ನಷ್ಟ- ಶೇ.48ರಷ್ಟು ಕುಸಿತ ಕಂಡ ಹೋಂಡಾ ಕಾರ್ಸ್

ಈ ಹಿನ್ನಲೆ ಸದ್ಯಕ್ಕೆ ಹೊಸ ಕಾರು ಮತ್ತು ಬೈಕ್‌ಗಳ ಉತ್ಪಾದನೆಯನ್ನು ತಾತ್ಕಲಿಕವಾಗಿ ಬಂದ್ ಮಾಡಲು ನಿರ್ಧರಿಸಿರುವ ಆಟೋ ಉತ್ಪಾದನಾ ಸಂಸ್ಥೆಗಳು ಈ ಹಿಂದಿನಂತೆಯೇ ಕಠಿಣ ಕ್ರಮ ಕೈಗೊಂಡಿದ್ದು, ಮಾರುಕಟ್ಟೆಯ ಚೇತರಿಕೆ ನಂತರವಷ್ಟೇ ಮತ್ತೆ ಉತ್ಪಾದನೆಯನ್ನು ಶುರು ಮಾಡಲಿವೆ.

Article Published On: Saturday, August 3, 2019, 17:20 [IST]
English summary
Honda Records Sharp Drop In July 2019 Car Sales — 48.67% Drop Compared To July 2018.
Read more on honda ಹೋಂಡಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+