ಹೋಂಡಾ ಹೈ ಎಂಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಆಟೋ ಉದ್ಯಮದಲ್ಲಿ ಆದ ತೀವ್ರ ಹಿನ್ನಡೆಯಿಂದಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ನಷ್ಟದಲ್ಲಿದ್ದು, ಸ್ಟಾಕ್ ಪ್ರಮಾಣವು ಮತ್ತಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಹೊಸ ವಾಹನಗಳ ಮಾರಾಟದಲ್ಲಿ ಹೋಂಡಾ ಕಾರ್ಸ್ ಇಂಡಿಯಾ ಸಹ ಮುಗ್ಗರಿಸಿದ್ದು, ಗ್ರಾಹಕರನ್ನು ಸೆಳೆಯುವ ಸಂಬಂಧ ವಿವಿಧ ಕಾರುಗಳ ಮೇಲೆ ಗರಿಷ್ಠ ಪ್ರಮಾಣದ ಡಿಸ್ಕೌಂಟ್‌ಗಳನ್ನು ನೀಡಲಾಗುತ್ತಿದೆ.

ಹೋಂಡಾ ಹೈ ಎಂಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಲೋಕಸಭಾ ಚುನಾವಣೆ ಪ್ರಕ್ರಿಯೆ ಮತ್ತು ಇಂಧನ ಬೆಲೆಗಳಲ್ಲಿ ಆದ ಭಾರೀ ಬದಲಾವಣೆಗಳಿಂದಾಗಿ ಕಳೆದ ಐದಾರು ತಿಂಗಳ ಅವಧಿಯಲ್ಲಿ ಹೊಸ ಕಾರು ಮಾರಾಟ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದ್ದು, ಇದೀಗ ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ಆಟೋ ಉದ್ಯಮವನ್ನು ಮತ್ತೆ ಸುಧಾರಿಸಿಕೊಳ್ಳುವತ್ತ ಹೆಜ್ಜೆಯಿಡುತ್ತಿದೆ. ಇದರಿಂದ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ಕಾರು ಖರೀದಿದಾರರನ್ನು ಸೆಳೆಯಲು ಭಾರೀ ಪ್ರಮಾಣದ ಡಿಸ್ಕೌಂಟ್‌ಗಳನ್ನು ನೀಡುತ್ತಿವೆ.

ಹೋಂಡಾ ಹೈ ಎಂಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹೋಂಡಾ ಸಹ ತನ್ನ ಜನಪ್ರಿಯ ಪ್ರೀಮಿಯಂ ಕಾರು ಆವೃತ್ತಿಗಳಾದ ಸಿಆರ್-ವಿ, ಸಿವಿಕ್, ಬಿಆರ್-ಬಿ, ಸಿಟಿ ಸೆಡಾನ್, ಜಾಝ್, ಡಬ್ಲ್ಯುಆರ್-ವಿ ಮತ್ತು ಅಮೇಜ್ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಕಾರು ಖರೀದಿದಾರರಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಹೋಂಡಾ ಹೈ ಎಂಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಸಿಆರ್-ವಿ ಎಸ್‌ಯುವಿ(ರೂ. 2.55 ಲಕ್ಷ)

ಹೋಂಡಾ ಸಂಸ್ಥೆಯ ಐಷಾರಾಮಿ ಕಾರು ಆವೃತ್ತಿಯಾದ ಸಿಆರ್-ವಿ ಕಾರಿನ ಮೇಲೆ ಗರಿಷ್ಠ ರೂ.2.55 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, 7-ಸೀಟರ್‌ನೊಂದಿಗೆ 2-0-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.28.33 ಲಕ್ಷ ಮತ್ತು ಟಾಪ್ ಮಾದರಿಗೆ ರೂ. 32.83 ಲಕ್ಷ ಬೆಲೆ ಹೊಂದಿದ್ದು, ಪ್ರತಿ ವೆರಿಯೆಂಟ್ ಮೇಲೂ ರೂ.2.55 ಲಕ್ಷ ಡಿಸ್ಕೌಂಟ್ ಲಭ್ಯವಿದೆ.

ಹೋಂಡಾ ಹೈ ಎಂಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಬಿಆರ್‌-ವಿ ಎಂಪಿವಿ(ರೂ. 1.15 ಲಕ್ಷ)

7 ಸೀಟರ್ ಮಲ್ಟಿ ಪರ್ಪಸ್ ವೆಹಿಕಲ್ ಮಾದರಿಯಾಗಿರುವ ಬಿಆರ್‌-ವಿ ಖರೀದಿ ಮೇಲೆ ಹೋಂಡಾ ಸಂಸ್ಥೆಯು ರೂ.1.15 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಬಿಆರ್‌-ವಿ ಖರೀದಿಗೆ ಲಭ್ಯವಿದೆ. ರೂ. 1.15 ಲಕ್ಷ ಡಿಸ್ಕೌಂಟ್ ಅಲ್ಲದೇ ಆಯ್ದ ಡೀಲರ್ಸ್‌ಗಳಲ್ಲಿ ಬಿಆರ್‌-ವಿ ಖರೀದಿ ಮೇಲೆ ರೂ.36 ಸಾವಿರ ಮೌಲ್ಯ ಆಕ್ಸೆರಿಸ್‌ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಹೋಂಡಾ ಹೈ ಎಂಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಸಿಟಿ ಸೆಡಾನ್(ರೂ.67 ಸಾವಿರ)

ಸಿ ಸೆಗ್ಮೆಂಟ್‌ನಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಸಿಟಿ ಸೆಡಾನ್ ಮಾದರಿಯ ಮೇಲೆ ಹೋಂಡಾ ಸಂಸ್ಥೆಯು ರೂ.67 ಸಾವಿರ ಡಿಸ್ಕೌಂಟ್ ಘೋಷಿಸಲಾಗಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಿಟಿ ಕಾರು ಹೊಸ ಸುರಕ್ಷಾ ನೀತಿ ಅನುಸಾರವಾಗಿ ಇದೀಗ ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಹೋಂಡಾ ಹೈ ಎಂಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್(ರೂ.55 ಸಾವಿರ)

ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಜಾಝ್ ಕಾರಿನ ಖರೀದಿ ಮೇಲೆ ಹೋಂಡಾ ಸಂಸ್ಥೆಯು ರೂ.55 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದ್ದು, 1.5-ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಜಾಝ್ ಕಾರು ಖರೀದಿಗೆ ಇದು ಸುವರ್ಣಾವಕಾಶ.

ಹೋಂಡಾ ಹೈ ಎಂಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ(ರೂ.50 ಸಾವಿರ)

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ ಮೇಲೆ ಹೋಂಡಾ ಸಂಸ್ಥೆಯು ರೂ.50 ಸಾವಿರ ಡಿಸ್ಕೌಂಟ್ ನೀಡುತ್ತಿದ್ದು, ಜಾಝ್ ಮಾದರಿಯಲ್ಲೇ ಎಂಜಿನ್ ಆಯ್ಕೆ ಹೊಂದಿರುವ ಡಬ್ಲ್ಯುಆರ್-ವಿ ಕಾರು ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಉತ್ತಮ ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಕಾರು ಮಾದರಿಯಾಗಿದೆ.

ಹೋಂಡಾ ಹೈ ಎಂಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಅಮೇಜ್ ಕಂಪ್ಯಾಕ್ಟ್ ಸೆಡಾನ್(ರೂ.47 ಸಾವಿರ)

ಕಂಪ್ಯಾಕ್ಟ್ ಸೆಡಾನ್ ಕಾರುಗಳಲ್ಲಿ ಮಾರುತಿ ಸುಜುಕಿ ಡಿಜೈರ್ ಆವೃತ್ತಿಗೆ ತೀವ್ರ ಪೈಪೋಟಿ ನೀಡುತ್ತಿರುವ ಅಮೇಜ್ ಕಾರಿನ ಮೇಲೆ ಹೋಂಡಾ ಸಂಸ್ಥೆಯು ರೂ. 47 ಸಾವಿರ ಘೋಷಣೆ ಮಾಡಿದ್ದು, 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಅಮೇಜ್ ಕಾರು ಗ್ರಾಹಕರ ಬೇಡಿಕೆಯೆಂತೆ ಬರೋಬ್ಬರಿ 20 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಹೋಂಡಾ ಹೈ ಎಂಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಸಿವಿಕ್ ಸೆಡಾನ್(ರೂ.30 ಸಾವಿರ)

ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಸಿವಿಕ್ ಐಷಾರಾಮಿ ಸೆಡಾನ್ ಮೇಲೆ ಹೋಂಡಾ ಸಂಸ್ಥೆಯು ರೂ.30 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದ್ದು, 1.6-ಲೀಟರ್ ಡೀಸೆಲ್ ಮತ್ತು 1.8-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

Article Published On: Monday, July 8, 2019, 19:13 [IST]
English summary
Honda Cars Discounts in July 2019. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+